English-Kannada Nighantu (University of Mysore)
University of Mysore
oxidizability
ನಾಮವಾಚಕ
ಉತ್ಕರ್ಷಣೀಯತೆ; ಉತ್ಕರ್ಷಿತವಾಗುವ ಪ್ರವೃತ್ತಿ ಹೊಂದಿರುವಿಕೆ.
oxidizable
ಗುಣವಾಚಕ
ಆಕ್ಸಿಡೀಕರಿಸಬಲ್ಲ; ಉತ್ಕರ್ಷಣೀಯ; ಉತ್ಕರ್ಷಣ ಹೊಂದುವ ಪ್ರವೃತ್ತಿಯುಳ್ಳ.
oxidization
ನಾಮವಾಚಕ
= oxidation.
oxidize
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ಆಕ್ಸಿಡೀಕರಿಸು: ಉತ್ಕರ್ಷಿತವಾಗು; ಉತ್ಕರ್ಷಣ ಹೊಂದು.
- (ರಸಾಯನವಿಜ್ಞಾನ) ಉತ್ಕರ್ಷಿಸು; (ಯಾವುದೇ ಧಾತು ಯಾ ಸಂಯುಕ್ತಕ್ಕೆ) ಆಕ್ಸಿಜನ್ ಸೇರಿಸು, (ಅದರಿಂದ) ಹೈಡ್ರೊಜನ್ ತೆಗೆದುಹಾಕು, (ಅದರಲ್ಲಿ) ವಿದ್ಯುದೃಣ ಭಾಗಗಳ ಪ್ರಮಾಣವನ್ನು ಹೆಚ್ಚಿಸು ಯಾ (ಒಂದು ಪರಮಾಣು ಯಾ ಅಯಾನಿನಿಂದ) ಇಲೆಕ್ಟ್ರಾನುಗಳನ್ನು ತೆಗೆ.
- ಕಿಲುಬು ಬರಿಸು ಯಾ ತುಕ್ಕು ಹಿಡಿಸು; ಲೋಹದ ಮೇಲ್ಮೈಯಲ್ಲಿ ಅದರ ಸಂಯುಕ್ತದ ಪದರವನ್ನು ಉತ್ಪತ್ತಿಮಾಡು.
oxidized silver
ನಾಮವಾಚಕ
ಆಕ್ಸಿಡೀಕೃತ ಬೆಳ್ಳಿ; ಗಾಢವಾದ ಸಿಲ್ವರ್ ಸಲೆ ಡ್ ಲೇಪ ಬಳಿದ ಬೆಳ್ಳಿಗೆ ಜನಪ್ರಿಯ ಹೆಸರು.
oxidizer
ನಾಮವಾಚಕ
= oxidizing agent.
oxidizing agent
ನಾಮವಾಚಕ
ಆಕ್ಸಿಡೀಕಾರಕ; ಉತ್ಕರ್ಷಣಕಾರಿ; ಉತ್ಕರ್ಷಿಸಬಲ್ಲ ರಾಸಾಯನಿಕ.
oxidoreductase
ನಾಮವಾಚಕ
(ಜೀವರಸಾಯನ ವಿಜ್ಞಾನ) ಆಕ್ಸಿಡೋರಿಡಕ್ಟೇಸ್; ಉತ್ಕರ್ಷಣ ಆಪಕರ್ಷಣ ಕ್ರಿಯೆಯನ್ನು ನಡೆಸುವ ಎಂಜೈಮು.
oxidoreduction
ನಾಮವಾಚಕ
(ರಸಾಯನವಿಜ್ಞಾನ) = oxidation-reduction.
oximate
ಸಕರ್ಮಕ ಕ್ರಿಯಾಪದ
(ರಸಾಯನವಿಜ್ಞಾನ) ಆಕ್ಸಿಮೀಕರಿಸು; (ಆಲ್ಡಿಹೈಡ್ ಯಾ ಕೀಟೋನನ್ನು) ಆಕ್ಸಿಮ್ ಆಗಿ ಪರಿವರ್ತಿಸು.
oximation
ನಾಮವಾಚಕ
(ರಸಾಯನವಿಜ್ಞಾನ) ಆಕ್ಸಿಮೀಕರಣ; (ಆಲ್ಡಿಹೈಡ್ ಯಾ ಕೀಟೋನನ್ನು) ಆಕ್ಸಿಮ್ ಆಗಿ ಪರಿವರ್ತಿಸುವುದು.
oxime
ನಾಮವಾಚಕ
(ರಸಾಯನವಿಜ್ಞಾನ) ಆಕ್ಸೀಮ್; ಆಲ್ಡಿಹೈಡ್ ಯಾ ಕೀಟೋನಿನೊಂದಿಗೆ ಹೈಡ್ರಾಕ್ಸಿಲ್ ಅಮೀನ್ ವರ್ತಿಸಿದಾಗ ಬಿತ್ತರಿಸುವ, ಆಲ್ಡಿಹೈಡ್ ಮತ್ತು ಕೀಟೋನುಗಳನ್ನು ಗುರುತಿಸಲು ನೆರವಾಗುವ ಸಂಯುಕ್ತ.
oxlip
ನಾಮವಾಚಕ
ವಸಂತಕುಸುಮ; ಪ್ರಿಮ್ಯೂಲ ಕುಲದ ಹೂ, ಹೂಗಿಡ.
Oxon
ಸಂಕ್ಷಿಪ್ತ
- Oxfordshire.
- of Oxford University or the diocese of Oxford.
Oxonian
ಗುಣವಾಚಕ
- ಆಕ್ಸ್ಹರ್ಡಿನ.
- ಆಕ್ಸ್ಹರ್ಡ್ ವಿಶ್ವವಿದ್ಯಾನಿಲಯದ.
Oxonian
ನಾಮವಾಚಕ
- ಆಕ್ಸ್ಹರ್ಡಿನ ನಿವಾಸಿ, ಪ್ರಜೆ.
- ಆಕ್ಸ್ಹರ್ಡ್ ವಿಶ್ವವಿದ್ಯಾನಿಲಯದ ಸದಸ್ಯ.
oxtail
ನಾಮವಾಚಕ
(ಅನೇಕ ವೇಳೆ ಮಾಂಸದ ಸಾರು ಮಾಡಲು ಬಳಸುವ) ಎತ್ತಿನ ಬಾಲ.
oxter
ನಾಮವಾಚಕ
(ಸ್ಕಾಟ್ಲೆಂಡ್ ಮತ್ತು ಉತ್ತರ ಇಂಗ್ಲೆಂಡ್) ಕಂಕುಳು.
oxter
ಸಕರ್ಮಕ ಕ್ರಿಯಾಪದ
(ಸ್ಕಾಟ್ಲೆಂಡ್ ಮತ್ತು ಉತ್ತರ ಇಂಗ್ಲೆಂಡ್)
- ತೋಳು ಕೊಟ್ಟು ಯಾ ತೋಳು ಹಿಡಿದು ಆಸರೆ ನೀಡು, ಒದಗಿಸು.
- ಕಂಕುಳಲ್ಲಿಡು.
- ಅಪ್ಪಿಕೊ; ಆಲಂಗಿಸು.
oxtongue
ನಾಮವಾಚಕ
- (ಮುಖ್ಯವಾಗಿ ಆಹಾರಕ್ಕಾಗಿ ಬೇಯಿಸಿದ) ಎತ್ತಿನ ನಾಲಗೆ.
- ಉಜ್ಜ್ವಲ ಹಳದಿ ಬಣ್ಣದ ಹೂಗಳನ್ನು ಬಿಡುವ, ಪಿಕ್ರಿಸ್ ಕುಲದ ಯಾವುದೇ ಸಂಯುಕ್ತ ಸಸ್ಯ.