भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

oxy-

ಸಮಾಸ ಪೂರ್ವಪದ

  • ಮೊನಚಾದ; ಚೂಪಾದ: oxycarpous.
  • ತೀಕ್ಷ್ಣವಾದ: oxyopia.
  • ಆಕ್ಸಿಜನ್‍ ಉಳ್ಳ; ಹೆಚ್ಚು ಆಕ್ಸಿಜನ್‍ ಉಳ್ಳ: oxychloride.
  • ಆಕ್ಸಿಜನ್‍ ಮತ್ತು: oxyhydrogen.

oxy-acetylene blowpipe

ನಾಮವಾಚಕ

ಆಕ್ಸಿಅಸೆಟಿಲೀನ್‍ ಊದುಗೊಳವೆ; ಅಧಿಕ ತಾಪದ ಜ್ವಾಲೆಯನ್ನುಂಟುಮಾಡಲು, ಆಕ್ಸಿಜನ್‍ ಮತ್ತು ಅಸೆಟಿಲೀನ್‍ಗಳ ಮಿಶ್ರಣವನ್ನು ಕೊಳವೆಯ ಮೂತಿಯಿಂದ ಹೊರಸೂಸುವ ಏರ್ಪಾಟುಳ್ಳ ಊದುಗೊಳವೆ.

oxy-acetylene flame

ನಾಮವಾಚಕ

ಆಕ್ಸಿಅಸೆಟಿಲೀನ್‍ ಜ್ವಾಲೆ; ಆಕ್ಸಿಜನ್‍ ಮತ್ತು ಅಸೆಟಿಲೀನ್‍ಗಳ ಸೂಕ್ತ ಮಿಶ್ರಣವನ್ನು ಉರಿಸಿ ಪಡೆಯುವ, ಅಧಿಕ ತಾಪದ ಜ್ವಾಲೆ.

oxy-acetylene welding

ನಾಮವಾಚಕ

ಆಕ್ಸಿ ಅಸೆಟಿಲೀನ್‍ ಬೆಸುಗೆ; ಆಕ್ಸಿ ಅಸೆಟಿಲೀನ್‍ ಜ್ವಾಲೆಯಿಂದ ಬೆಸೆಯುವುದು.

oxyacetylene

ಗುಣವಾಚಕ

ಆಕ್ಸಿ ಅಸೆಟಿಲೀನ್‍; ಆಕ್ಸಿಜನ್‍ ಮತ್ತು ಅಸೆಟಿಲೀನ್‍ಗಳ ಮಿಶ್ರಣದ, ಅದಕ್ಕೆ ಸಂಬಂಧಿಸಿದ, ಅದನ್ನು ಬಳಸುವ.

oxyacid

ನಾಮವಾಚಕ

(ರಸಾಯನವಿಜ್ಞಾನ) ಆಕ್ಸಿ ಆಮ್ಲ; ಸಾಮಾನ್ಯವಾಗಿ ಅಲೋಹ ಧಾತುವೊಂದರ ಜತೆಗೆ ಆಕ್ಸಿಜನ್‍ ಮತ್ತು ಹೈಡ್ರೊಜನ್‍ ಸೇರಿ ಉತ್ಪತ್ತಿ ಮಾಡುವ ಆಮ್ಲ, ಉದಾಹರಣೆಗೆ ಸಲೂರಿಕ್‍ ಆಮ್ಲ.

oxycarpous

ಗುಣವಾಚಕ

ಸೂಜಿಹಣ್ಣಿನ; ಸೂಚೀಫಲೀ; ಚೂಪಾದ ಹಣ್ಣುಳ್ಳ.

oxychloride

ನಾಮವಾಚಕ

(ರಸಾಯನವಿಜ್ಞಾನ) ಆಕ್ಸಿಕ್ಲೋರೈಡು; ಯಾವುದೇ ರ್ಯಾಡಿಕಲ್‍ ಯಾ ಧಾತುವಿನೊಡನೆ ಆಕ್ಸಿಜನ್‍ ಮತ್ತು ಕ್ಲೋರೀನ್‍ ಗಳೆರಡೂ ಸೇರಿ ಉತ್ಪತ್ತಿ ಮಾಡುವ ಸಂಯುಕ್ತ, ಉದಾಹರಣೆಗೆ ಕಾರ್ಬನ್‍ಆಕ್ಸಿಕ್ಲೋರೈಡ್‍.

oxygen

ನಾಮವಾಚಕ

(ರಸಾಯನವಿಜ್ಞಾನ) ಆಕ್ಸಿಜನ್‍; ಆಮ್ಲಜನಕ; ಪರಮಾಣು ಸಂಖ್ಯೆ 8, ಪರಮಾಣು ತೂಕ 16 ಉಳ್ಳ, ಸಾಮಾನ್ಯ ಪರಿಸ್ಥಿತಿಯಲ್ಲಿ ಬಣ್ಣ, ವಾಸನೆ, ರುಚಿ ಯಾವುದೂ ಇಲ್ಲದ, ಅದ್ರಾವ್ಯ ಅನಿಲವಾಗಿರುವ, ವಾಯುಮಂಡಲದಲ್ಲಿ ಶೇಕಡ 20ರಷ್ಟು ಪ್ರಮಾಣದಲ್ಲಿರುವ ರಾಸಾಯನಿಕ ಧಾತು.

oxygen mask

ನಾಮವಾಚಕ

ಆಕ್ಸಿಜನ್‍ ಮುಖವಾಡ; ಆಕ್ಸಿಜನ್‍ ತುಂಬಿದ ಸೀಸೆ, ಪೆಟ್ಟಿ, ಮೊದಲಾದವುಗಳಿಂದ ಆಕ್ಸಿಜನನ್ನು ಉಚ್ಛ್ವಾಸ ಮಾಡುವುದಕ್ಕಾಗಿ ಮುಖಕ್ಕೆ, ಮುಖ್ಯವಾಗಿ ಬಾಯಿ ಮತ್ತು ಮೂಗಿಗೆ, ಜೋಡಿಸುವ ಮುಖವಾಡ.

oxygen tent

ನಾಮವಾಚಕ

ಆಕ್ಸಿಜನ್‍ ಗುಡಾರ; ವಾಯುಮಂಡಲದಲ್ಲಿರುವುದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಆಕ್ಸಿಜನ್‍ ಆವಶ್ಯಕತೆ ಇರುವ ರೋಗಿಯ ಹಾಸಿಗೆಯ ಮೇಲೆ ಬೋರಲು ಹಾಕುವ, ಒಳಗಡೆ ಆಕ್ಸಿಜನ್‍ ಹರಿಸುವ ಏರ್ಪಾಟುಳ್ಳ, ಸಾಮಾನ್ಯವಾಗಿ ಪಾರದರ್ಶಕವಾದ, ಗುಡಾರದಂಥ ಸಾಧನ.

oxygenate

ಸಕರ್ಮಕ ಕ್ರಿಯಾಪದ

ಆಕ್ಸಿಜನೀಕರಿಸು:

  • ಆಕ್ಸಿಜನ್‍ ಪೂರಯಿಸು.
  • ಆಕ್ಸಿಜನ್‍ನೊಡನೆ ಸಂಯುಕ್ತವಾಗಿಸು.

oxygenation

ನಾಮವಾಚಕ

ಆಕ್ಸಿಜನೀಕರಣ:

  • ಆಕ್ಸಿಜನ್‍ ಪೂರಯಿಕೆ.
  • ಆಕ್ಸಿಜನ್ನಿನೊಡನೆ ಸಂಯುಕ್ತವಾಗಿಸುವಿಕೆ.

oxygenator

ನಾಮವಾಚಕ

ಆಕ್ಸಿಜನೀಕಾರಕ; ರಕ್ತಕ್ಕೆ ಆಕ್ಸಿಜನ್ನನ್ನು ಪೂರಯಿಸುವ ಸಾಧನ.

oxygenise

ಸಕರ್ಮಕ ಕ್ರಿಯಾಪದ

= oxygenize.

oxygenize

ಸಕರ್ಮಕ ಕ್ರಿಯಾಪದ

= oxygenate(a).

oxygenous

ಗುಣವಾಚಕ

ಆಕ್ಸಿಜನ್‍ಗೆ ಸಂಬಂಧಿಸಿದ, ಆಕ್ಸಿಜನ್‍ ಉಳ್ಳ ಯಾ ಆಕ್ಸಿಜನ್ನಿನಂಥ.

oxyhaemoglobin

ನಾಮವಾಚಕ

(ಜೀವರಸಾಯನ ವಿಜ್ಞಾನ) ಆಕ್ಸಿಹೀಮೊಗ್ೋಬಿನ್‍; ಶ್ವಾಸಕೋಶಗಳಲ್ಲಿ ಯಾ ಮೀನಿನ ಕಿವಿರುಗಳಲ್ಲಿ ರಕ್ತದ ಹೀಮೊಗ್ಲೋಬಿನ್‍ ವಾಯುವಿನ ಆಕ್ಸಿಜನ್ನಿನೊಂದಿಗೆ ಸೇರಿಕೊಂಡು ರೂಪುಗೊಳ್ಳುವ ಸಂಯುಕ್ತ.

oxyhalide

ನಾಮವಾಚಕ

(ರಸಾಯನವಿಜ್ಞಾನ) ಆಕ್ಸಿಹ್ಯಾಲೈಡ್‍; ಯಾವುದೇ ಧಾತುವಿನೊಂದಿಗೆ ಆಕ್ಸಿಜನ್‍ ಮತ್ತು ಯಾವುದಾದರೊಂದು ಹ್ಯಾಲೊಜನ್‍ ಸಂಯುಕ್ತವಾಗಿರುವ ಸಂಯುಕ್ತ.

oxyhydrogen

ಗುಣವಾಚಕ

ಆಕ್ಸಿಹೈಡ್ರೊಜನ್‍; ಆಕ್ಸಿಜನ್‍ ಮತ್ತು ಹೈಡ್ರೊಜನ್‍ಗಳ ಮಿಶ್ರಣದ, ಅದಕ್ಕೆ ಸಂಬಂಧಿಸಿದ, ಅದನ್ನು ಬಳಸುವ.

Search Dictionaries

Loading Results

Follow Us :   
  Download Bharatavani App
  Bharatavani Windows App