English-Kannada Nighantu (University of Mysore)
University of Mysore
oxyhydrogen blowpipe
ನಾಮವಾಚಕ
ಆಕ್ಸಿಹೈಡ್ರೊಜನ್ ಊದುಗೊಳವೆ; ಅಧಿಕ ತಾಪದ ಜ್ವಾಲೆಯನ್ನು ಉತ್ಪತ್ತಿ ಮಾಡುವುದಕ್ಕಾಗಿ ಆಕ್ಸಿಜನ್ ಮತ್ತು ಹೈಡ್ರೊಜನ್ಗಳ ಮಿಶ್ರಣವನ್ನು ಕೊಳವೆಯ ಮೂತಿಯಿಂದ ಹೊರಸೂಸುವ ಏರ್ಪಾಟುಳ್ಳ ಊದುಗೊಳವೆ.
oxyhydrogen flame
ನಾಮವಾಚಕ
ಆಕ್ಸಿಹೈಡ್ರೊಜನ್ ಜ್ವಾಲೆ; ಆಕ್ಸಿಜನ್ ಮತ್ತು ಹೈಡ್ರೊಜನ್ಗಳ ಸೂಕ್ತಮಿಶ್ರಣವನ್ನು ಉರಿಸಿ ಪಡೆಯುವ, ಅಧಿಕ ತಾಪದ ಜ್ವಾಲೆ.
oxymel
ನಾಮವಾಚಕ
ಆಕ್ಸಿಮೆಲ್; ಶ್ಲೇಷ್ಮಹಾರಿಯಾಗಿ ಬಳಸುವ ಜೇನು ಮತ್ತು ಸಾರರಿಕ್ತ ಅಸೆಟಿಕ್ ಆಮ್ಲಗಳ ಮಿಶ್ರಣ.
oxymoron
ನಾಮವಾಚಕ
ವಿರೋಧಾಭಾಸ; ತೋರ್ಕೆಗೆ ಪರಸ್ಪರ ವಿರುದ್ಧವೆನಿಸುವಂತೆ ಪದಗಳನ್ನು ಜೋಡಿಸಿ, ಪದಗಳಿಗೆ ಅರ್ಥ ಸ್ವಾರಸ್ಯ ಕೊಡುವ ಅಲಂಕಾರ: faith unfaithful ನಿಷ್ಠಾರಹಿತ ನಿಷ್ಠೆ. Epicurean pessimist ಸುಖಲೋಲ ನಿರಾಶಾವಾದಿ.
oxypetalous
ಗುಣವಾಚಕ
ಸೂಚೀದಳಿ; ಸೂಜಿದಳಗಳುಳ್ಳ; ಮೊನಚಾದ ದಳಗಳಿರುವ.
oxysulphide
ನಾಮವಾಚಕ
(ರಸಾಯನವಿಜ್ಞಾನ) ಆಕ್ಸಿಸಲೆ ಡ್; ಯಾವುದೇ ಧಾತುವಿನೊಂದಿಗೆ ಆಕ್ಸಿಜನ್ ಮತ್ತು ಗಂಧಕ ಸೇರಿಸಿ ಉಂಟು ಮಾಡುವ ಸಂಯುಕ್ತ.
oxytocin
ನಾಮವಾಚಕ
ಆಕ್ಸಿಟೋಸಿನ್:
- (ಜೀವರಸಾಯನ ವಿಜ್ಞಾನ) ಗರ್ಭಕೋಶಗಳ ಸ್ನಾಯುಗಳ ಸಂಕೋಚನವನ್ನು ಪ್ರಚೋದಿಸುವ, ಸ್ತನದಿಂದ ಹಾಲು ಸುರಿಸುವ ಪಿಟ್ಯೂಟರಿ ಗ್ರಂಥಿಯ ಹಿಂದಿನ ಹಾಲೆಯಲ್ಲಿ ಉತ್ಪತ್ತಿಯಾಗುವ ಪಾಲಿಪೆಪ್ಟೈಡ್ ರೂಪದ ಹಾರ್ಮೋನು.
- ಹೆರಿಗೆಯಾಗುವಂತೆ ಪ್ರಚೋದಿಸುವುದು ಮೊದಲಾದವುಗಳಲ್ಲಿ ಬಳಸುವ, ಇಂಥದೇ ಕೃತಕ ಹಾರ್ಮೋನು.
oxytone
ಗುಣವಾಚಕ
(ಗ್ರೀಕ್ ವ್ಯಾಕರಣ) ಅಂತ್ಯಸ್ವರಘಾತದ; ಅಂತ್ಯಸ್ವರದ ಮೇಲೆ ಹೆಚ್ಚು ಸ್ವರಭಾರ ಹಾಕಿದ.
oxytone
ನಾಮವಾಚಕ
(ಗ್ರೀಕ್ ವ್ಯಾಕರಣ) ಅಂತ್ಯಸ್ವರದ ಮೇಲೆ ಹೆಚ್ಚು ಸ್ವರಭಾರ ಹಾಕಿದ ಪದ.
oyer and terminer
ನಾಮವಾಚಕ
(ಚರಿತ್ರೆ) ಸಂಚಾರಿ ನ್ಯಾಯಾಧೀಶರಿಗೆ ವಿಚಾರಣೆ ನಡೆಸಲು ಕೊಟ್ಟ ನಿರೂಪ, ಆಜ್ಞಾಪತ್ರ.
oyes
ಭಾವಸೂಚಕ ಅವ್ಯಯ
= oyez.
oyez
ಭಾವಸೂಚಕ ಅವ್ಯಯ
ಸದ್ದು ! ಸದ್ದು ! ಸದ್ದು ಮಾಡಬೇಡಿ ! ಗಮನವಿಟ್ಟು ಕೇಳಿ ! (ಸಾರ್ವಜನಿಕರಿಗೆ ನ್ಯಾಯಸ್ಥಾನದ ಕೂಗಾಳು ಬಹಿರಂಗವಾಗಿ ಮೂರು ಬಾರಿ ಕೂಗಿ ಹೇಳುವ ಮಾತುಗಳು).
oyster
ನಾಮವಾಚಕ
- ಸಿಂಪಿ; ಮಳಿ; (ಸಾಮಾನ್ಯವಾಗಿ ಜೀವಸಹಿತ ತಿನ್ನುವ) ಇಚ್ಚಿಪ್ಪಿನ, ಇಕ್ಕವಾಟದ ಮೃದ್ವಂಗಿ ಪ್ರಾಣಿಜಾತಿ.
- ಕೋಳಿ ಸಿಂಪಿ; ಕೋಳಿಯ ಬೆನ್ನಿನಲ್ಲಿರುವ ಸಿಂಪಿಯಾಕಾರಾದ ಮಾಂಸದ ಭಾಗ.
- ಕಾಮ್ಯಸಂಪುಟ; ಕಾಮ್ಯ ಕರಂಡ; ತಾನು ಬಯಸುವ ಎಲ್ಲವನ್ನೂ ಒಳಗೊಂಡಿರುವುದೆಂದು ಭಾವಿಸಲಾಗಿರುವ ವಸ್ತು: the world is my oyster ಪ್ರಪಂಚವೇ ನನ್ನ ಕಾಮ್ಯಸಂಪುಟ.
- (ಅಶಿಷ್ಟ) ಮಿತಭಾಷಿ; ತುಟಿಬಿಚ್ಚದವನು; ಗುಮ್ಮನಗುಸುಕ.
- ನಸು ಬೂದು ಛಾಯೆಯ ಬಿಳಿಪು; ಬೂದುಬಿಳಿ ಬಣ್ಣ.
oyster-bank
ನಾಮವಾಚಕ
ಸಿಂಪಿದಂಡೆ; ಸಿಂಪಿ ತಳಿ ಬೆಳೆಯುವ ಯಾ ಬೆಳೆಸುವ ಸಮುದ್ರತಳದ ಭಾಗ.
oyster-bar
ನಾಮವಾಚಕ
ಸಿಂಪಿ ಹೋಟೆಲು; ಸಿಂಪಿಗಳನ್ನು ಊಟಕ್ಕೆ ಬಡಿಸುವ ತಿಂಡಿತೀರ್ಥದ ಅಂಗಡಿ.
oyster-bed
ನಾಮವಾಚಕ
ಸಿಂಪಿಪಾತಿ; ಸಿಂಪಿ ಬೆಳೆಸುವ ಸಮುದ್ರತಳದ ಭಾಗ.
oyster-catcher
ನಾಮವಾಚಕ
ಸಿಂಪಿ ಕೋಳಿ; ಸಿಂಪಿಗಳನ್ನು ಹಿಡಿದು ತಿನ್ನುವ, ಸಮುದ್ರ ತೀರದ ನೀರಿನಲ್ಲಿ ಅಲೆದಾಡುವ ಒಂದು ಪಕ್ಷಿ.
oyster-farm
ನಾಮವಾಚಕ
ಸಿಂಪಿ ಹಾರಂ; ಸಿಂಪಿ ಬೆಳೆಸುವ ಕಡಲ ತಳ.
oyster-knife
ನಾಮವಾಚಕ
ಸಿಂಪಿಚಾಕು; ಸಿಂಪಿಯನ್ನು ತೆರೆಯಲು ತಕ್ಕ ಆಕಾರವುಳ್ಳ ಚಾಕು, ಚೂರಿ.
oyster-plant
ನಾಮವಾಚಕ
= salsify.