English-Kannada Nighantu (University of Mysore)
University of Mysore
oafishness
ನಾಮವಾಚಕ
ದಡ್ಡತನ; ಮುಟ್ಠಾಳತನ.
oak
ನಾಮವಾಚಕ
ಪದಗುಚ್ಛ
- ಓಕ್ ಮರ ಯಾ ಪೊದೆ; ಕ್ವೆರ್ಕಸ್ ಕುಲಕ್ಕೆ ಸೇರಿದ, ಹಾಲೆಗಳಂಥ ಎಲೆಗಳುಳ್ಳ, ಹಣ್ಣು ಬಿಡುವ ಒಂದು ಮರ ಯಾ ಪೊದೆ.
- ಓಕ್ (ಮರದ) ದಾರು; ಮುಖ್ಯವಾಗಿ ಪೀಠೋಪಕರಣ ಮತ್ತು ಕಟ್ಟಡಗಳಲ್ಲಿ ಬಳಸುವ ಗಟ್ಟಿಯಾದ, ಬೆಲೆಬಾಳುವ ಈ ಮರದ ದಾರು.
- (ಬ್ರಿಟಿಷ್ ಪ್ರಯೋಗ) (ವಿಶ್ವವಿದ್ಯಾನಿಲಯಗಳ ಕಾಲೇಜುಕೊಠಡಿಗಳ) ಹೊರಬಾಗಿಲು: sport one’s oak ಭೇಟಿಗಾರರನ್ನು ನಿಷೇಧಿಸಲು ಹೊರಬಾಗಿಲು ಹಾಕು, ಮುಚ್ಚು.
- (the Oaks) (ಏಕವಚನವಾಗಿ ಬಳಕೆ) ಓಕ್ (ಪಂದ್ಯ); ಇಂಗ್ಲೆಂಡಿನ ಎಪ್ಸಮ್ ನಗರದಲ್ಲಿ ನಡೆಯುವ ಮೂರು ವರ್ಷ ವಯಸ್ಸಿನ ಹೆಣ್ಣುಕುದುರೆ ಮರಿಗಳ ಜೂಜು.
- ಓಕ್ (ಮರದ) ಎಲೆಗಳು: oak is still worn on 29th May ಮೇ 29ರಂದು ಈಗಲೂ ಓಕ್ ಎಲೆಗಳನ್ನು ಧರಿಸಲಾಗುತ್ತದೆ.
- ಓಕ್ ಬಣ್ಣ; ಓಕ್ ಮರದ ಎಳೆಯೆಲೆಗಳ ಬಣ್ಣ.
oak
ಗುಣವಾಚಕ
ಓಕಿನ; ಓಕ್ ಮರದ; ಓಕ್ ಮರದಿಂದ ಮಾಡಿದ, ತಯಾರಿಸಿದ: oak table ಓಕ್ (ಮರದ) ಮೇಜು.
oak-apple
ನಾಮವಾಚಕ
ಪದಗುಚ್ಛ
ಓಕ್ ಸೇಬು; ಓಕ್ ಮರಗಳಲ್ಲಿ ಕೆಲವು ಬಗೆಯ ಕಣಜದ ಹುಳುಗಳ ಮರಿಗಳಿಂದ ಉಂಟಾಗುವ, ಸೇಬಿನಂಥ ಗಂಟು. oak-apple day ಮೇ 29ನೆಯ ದಿನಾಂಕ; 1660ರಲ್ಲಿ ಇಂಗ್ಲೆಂಡಿನಲ್ಲಿ ರಾಜಪ್ರಭುತ್ವವು ಪುನಃ ಸ್ಥಾಪಿತವಾದಾಗ ಎರಡನೆಯ ಚಾರ್ಲ್ಸ್ ದೊರೆತನಕ್ಕೆ ಬಂದ ದಿನ (ಅಂದು ಇಂಗ್ಲೆಂಡಿನ ಹಳ್ಳಿಗರು ರಾಯಲ್ ಓಕ್ನ ಸ್ಮಾರಕವಾಗಿ ಓಕ್ ಸೇಬನ್ನು ಅಲಂಕಾರವಾಗಿ ಧರಿಸುತ್ತಾರೆ).
oak-fern
ನಾಮವಾಚಕ
ಓಕ್ ಜರಿ (ಗಿಡ); ಆಲ್ಪ್ಸ್ ಪರ್ವತ ಪ್ರದೇಶದಲ್ಲಿ ಬೆಳೆಯುವ ಪಾಲಿ ಪೋಡಿಯೇಸೀ ವಂಶದ ಒಂದು ಜರೀಗಿಡ.
oak-gall
ನಾಮವಾಚಕ
= oak-apple.
oak-tree
ನಾಮವಾಚಕ
ಓಕ್ ಮರ, ವೃಕ್ಷ.
oak-wood
ನಾಮವಾಚಕ
- ಓಕ್ (ಮರಗಳ) ಕಾಡು, ವನ.
- ಓಕ್–ದಾರು, ಮೋಪು, ನಾಟ.
oaken
ಗುಣವಾಚಕ
= 2oak.
oaklet
ನಾಮವಾಚಕ
ಸಣ್ಣ ಓಕ್ ಮರ.
oakling
ನಾಮವಾಚಕ
ಓಕ್ ಸಸಿ.
oakum
ನಾಮವಾಚಕ
ಪದಗುಚ್ಛ
ಸೆಣಬಿನ ನಾರು, ಎಳೆ; ಹಳೆಯ (ಸೆಣಬಿನ) ಹಗ್ಗವನ್ನು ಹುರಿ ಬಿಚ್ಚಿ ತೆಗೆದ, (ಮುಖ್ಯವಾಗಿ ಹಡಗಿನಲ್ಲಿರುವ ಸಂದುಗಳನ್ನು ಮುಚ್ಚಲು ಬಳಸುವ) ಬಿಡಿ ಎಳೆ, ನಾರು. pick oakum ಸೆಣಬಿನ ಹಗ್ಗದ ಎಳೆ ಬಿಚ್ಚು, ನಾರು ಬಿಡಿಸು (ಮುಖ್ಯವಾಗಿ ಹಿಂದೆ ಕೈದಿಗಳಿಗೂ, ನಿರ್ಗತಿಕರಿಗೂ ವಿಧಿಸುತ್ತಿದ್ದ ಕೆಲಸ).
OAP
ಸಂಕ್ಷಿಪ್ತ
(ಬ್ರಿಟಿಷ್ ಪ್ರಯೋಗ) old-age pensioner.
oar
ನಾಮವಾಚಕ
ಪದಗುಚ್ಛ
- (ದೋಣಿ ನಡೆಸುವ) ಹುಟ್ಟು; ತೊಳೆ; ಜಲ್ಲು; ಜಲ್ಲೆ.
- ಅಂಬಿಗ; ಹುಟ್ಟುಗಾರ; ಹುಟ್ಟುಹಾಕುವವನು; ತೊಳೆ ಒಚ್ಚುವವನು; ಜಲ್ಲು ಹಾಕುವವನು.
- (ರೂಪಕವಾಗಿ)
- ರೆಕ್ಕೆ.
- ಈಜು ರೆಕ್ಕೆ.
- (ಈಜುವಾಗ ಬೀಸುವ) ತೋಳು ಇತ್ಯಾದಿ.
oar
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ಪದಗುಚ್ಛ
(ಹುಟ್ಟು ಹಾಕಿ, ಜಲ್ಲು ಒಚ್ಚಿ) ದೋಣಿ ನಡೆಸು. ಹುಟ್ಟುಹಾಕು; ತೊಳೆ ಒಚ್ಚು; ಜಲ್ಲು ಹಾಕು (ಕಾವ್ಯಪ್ರಯೋಗ).
- oar air (ಹುಟ್ಟುಹೊಡೆದಂತೆ) ಗಾಳಿಯನ್ನು ಸೀಳಿಕೊಂಡು ಹೋಗು.
- oar one’s arms(or hand) (ಹುಟ್ಟು ಹಾಕುವಂತೆ) ತೋಳುಗಳನ್ನು ಯಾ ಕೈಗಳನ್ನು ಬೀಸಿಕೊಂಡು ಹೋಗು.
- oar one’s way (ಹುಟ್ಟು ಹಾಕಿದಂತೆ, ಕೈಬೀಸಿ) ದಾರಿ ಮಾಡಿಕೊಂಡು ಹೋಗು.
- oar water
- ಹುಟ್ಟುಹಾಕಿ ನೀರನ್ನು ಸೀಳಿಕೊಂಡು ಹೋಗು.
- ಹುಟ್ಟುಹಾಕುವಂತೆ (ಕೈಕಾಲು ಹೊಡೆಯುವುದರಿಂದ ಯಾ ಬೀಸುವುದರಿಂದ) ನೀರನ್ನು ಸೀಳಿಕೊಂಡು ಹೋಗು.
oarage
ನಾಮವಾಚಕ
(ಕಾವ್ಯಪ್ರಯೋಗ)
- ಹುಟ್ಟಿನಿಂದ, ತೊಳೆಯಿಂದ ಆಗುವ ಕೆಲಸ; ಹುಟ್ಟು ಯಾ ತೊಳೆ ಮಾಡುವ ಕೆಲಸ.
- ಹುಟ್ಟುಹಾಕುವುದು; ತೊಳೆ ಒಚ್ಚುವುದು; ಜಲ್ಲೆ–ಹಾಕುವುದು, ಬೀಸುವುದು.
- ಕೈಕಾಲುಗಳನ್ನು ಹುಟ್ಟಿನಂತೆ ಹೊಡೆಯುವುದು, ಬೀಸುವುದು.
- ದೋಣಿ ನಡೆಸುವ ಸಾಧನ ಸಲಕರಣೆಗಳು.
- ಹುಟ್ಟುಗಳಂಥಹ ಸಾಧನ ಸಲಕರಣೆಗಳು.
oared
ಗುಣವಾಚಕ
- ಹುಟ್ಟುಗಳಿಂದ ಸಜ್ಜಿತವಾದ.
- (ಸಂಯುಕ್ತಪದಗಳಲ್ಲಿ) ಹುಟ್ಟುಗಳ; ಹುಟ್ಟುಗಳುಳ್ಳ: four-oared ನಾಲ್ಕು ಹುಟ್ಟುಗಳ.
oarfish
ನಾಮವಾಚಕ
= ribbonfish.
oarless
ಗುಣವಾಚಕ
ಹುಟ್ಟುಗಳಿಲ್ಲದ; ಜಲ್ಲುಗಳಿಲ್ಲದ; ತೊಳೆಗಳಿಲ್ಲದ.
oarlock
ನಾಮವಾಚಕ
(ಅಮೆರಿಕನ್ ಪ್ರಯೋಗ)= rowlock.