भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

obelisk

ನಾಮವಾಚಕ

ಪದಗುಚ್ಛ

ಆಬಲಿಸ್ಕ್‍: double obelisk ಜೋಡಿ ಕಠಾರಿಯ ಗುರುತು ($\neq$)

  • ಚೌಕ ಸೂಜಿ(ಯಂಥ) ಕಂಬ; ಸ್ಮಾರಕವಾಗಿ ಯಾ ಯುಗ ಪ್ರವರ್ತಕ ಘಟನೆ ಮೊದಲಾದವುಗಳ ನೆನೆಪಿಗಾಗಿ ಸ್ಥಾಪಿಸುವ, ಸಾಮಾನ್ಯವಾಗಿ ಕಂಬದ ಕಾಂಡವು ಚೌಕಾಕಾರವಾಗಿ ಯಾ ಆಯತಾಕಾರವಾಗಿ ಯಾ ಚತುರಸ್ರವಾಗಿ ಇದ್ದು, ತುದಿಗೆ ಹೋಗುತ್ತ ಮೊನೆಯಾಗುವ ಪಿರಮಿಡ್‍ ಆಕೃತಿಯ ತುದಿಯುಳ್ಳ, ಸಾಮಾನ್ಯವಾಗಿ ಒಂದೇ ಕಲ್ಲಿನ, ನಿಲುಗಂಬ. Figure: obelisk(a)
  • ಆಬಲಿಸ್ಕ್‍ ಆಕಾರದ ಬೆಟ್ಟ, ಮರ, ಮೊದಲಾದವು
  • = obelus.

obelize

ಸಕರ್ಮಕ ಕ್ರಿಯಾಪದ

(ಪ್ರಕ್ಷಿಪ್ತವೆಂದೋ ಪ್ರಮಾಣಾರ್ಹವಲ್ಲವೆಂದೋ ಸೂಚಿಸಲು) ಕಠಾರಿ ಚಿಹ್ನೆ ಹಾಕು; ಕಠಾರಿ ಚಿಹ್ನೆಯಿಂದ ಗುರುತು ಮಾಡು.

obelus

ನಾಮವಾಚಕ

ಕಠಾರಿ ಚಿಹ್ನೆ, ಗುರುತು:

  • ಒದಗಿಸಿರುವ ಟಿಪ್ಪಣಿ ಮೊದಲಾದವುಗಳ ಕಡೆ ಗಮನ ಸೆಳೆಯಲು ಮುದ್ರಿತ ಗ್ರಂಥಗಳಲ್ಲಿ ಬಳಸುವ ಕಠಾರಿಯ ಗುರುತು $(dakiSxNagger)$.
  • ಆಬಲಸ್‍ ಚಿಹ್ನೆ; ಪ್ರಚಿನ ಹಸ್ತಪ್ರತಿಗಳಲ್ಲಿ ಒಂದು ಪದ ಯಾ ಗ್ರಂಥಭಾಗವು ಪ್ರಕ್ಷಿಪ್ತವೆಂದೋ ಪ್ರಮಾಣಾರ್ಹವಲ್ಲವೆಂದೋ ಸೂಚಿಸಲು ಬಳಸುತ್ತಿದ್ದ ಚಿಹ್ನೆ $(-, \div)$.

obese

ಗುಣವಾಚಕ

ಬೊಜ್ಜು ಮೈಯ; ಸ್ಥೂಲ ಕಾಯವುಳ್ಳ.

obeseness

ನಾಮವಾಚಕ

= obesity.

obesity

ನಾಮವಾಚಕ

ಸ್ಥೂಲಕಾಯತೆ; ಬೊಜ್ಜು ಮೈ (ಹೊಂದಿರುವಿಕೆ).

obey

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಹೇಳಿದಂತೆ ಮಾಡು; ಅಪ್ಪಣೆ ಪಾಲಿಸು; ಆಜ್ಞೆಯಾದಂತೆ ಮಾಡು.

  • ಹೇಳಿದಂತೆ ಕೇಳು; ಅಪ್ಪಣೆ ನಡೆಸು; ಆಜ್ಞೆ ಪಾಲಿಸು: you will obey me ನೀನು ನನ್ನ ಆಜ್ಞೆ ಪಾಲಿಸಬೇಕು.
  • (ಆಜ್ಞೆಯನ್ನು) ಪಾಲಿಸು; ನೆರವೇರಿಸು: obey orders ಆಜ್ಞೆ ಪಾಲಿಸು.
  • (ಶಕ್ತಿ, ಪ್ರವೃತ್ತಿ ಯಾ ಅಂತರಂಗ) ಪ್ರೇರಿಸಿದಂತೆ ನಡೆ.

obeyer

ನಾಮವಾಚಕ

ಆಜ್ಞಾಪಾಲಕ; ಆಜ್ಞಾಧಾರಕ; ಯಾರದೇ ಆಜ್ಞೆಯನ್ನು ಪಾಲಿಸುವವ.

obfuscate

ಸಕರ್ಮಕ ಕ್ರಿಯಾಪದ

  • (ವಿವೇಚನೆ, ವಿಷಯ, ಮನಸ್ಸು, ಮೊದಲಾದವನ್ನು) ಮಂಕಾಗಿಸು; ಮಂಕು ಮಾಡು; (ಮನಸ್ಸು ಮೊದಲಾದವಕ್ಕೆ) ಮಬ್ಬು ಕವಿಸು, ಮಂಕು ಹಿಡಿಸು.
  • ತಬ್ಬಿಬ್ಬಾಗಿಸು; ಬೆರಗುಗೊಳಿಸು; ದಿಕ್ಕೆಡಿಸು; ದಿಕ್ಕು ತೋರದಂತೆ ಮಾಡು.
  • ಅರ್ಥ ಮಾಡಿಕೊಳ್ಳಲು ಯಾ ಅರ್ಥ ವಿವರಿಸಲು ಕಠಿನವಾಗುವಂತೆ–ಜಟಿಲಗೊಳಿಸು, ಗೋಜಾಲಾಗಿಸು, ಸಂದಿಗ್ದವಾಗಿಸು.

obfuscation

ನಾಮವಾಚಕ

  • (ಮನಸ್ಸು ಮೊದಲಾದವನ್ನು) ಮಂಕುಗೊಳಿಸುವುದು; (ಮನಸ್ಸು ಮೊದಲಾದವಕ್ಕೆ) ಮಬ್ಬುಗವಿಸುವುದು.
  • ತಬ್ಬಿಬ್ಬು; ಬೆರಗು; ದಿಕ್ಕುಗೇಡು ; ದಿಕ್ಕು ತೋರದಂಥ ಸ್ಥಿತಿ.
  • (ಅರ್ಥಮಾಡಿಕೊಳ್ಳಲು ಯಾ ಅರ್ಥ ವಿವರಿಸಲು ಕಠಿನವಾಗುವಂತೆ ಯಾವುದನ್ನೇ) ಜಟಿಲಗೊಳಿಸುವಿಕೆ.

obfuscatory

ಗುಣವಾಚಕ

  • (ಮನಸ್ಸು ಮೊದಲಾದವನ್ನು) ಮಂಕಾಗಿಸುವ.
  • ದಿಕ್ಕುತೋರದಂತೆ ಮಾಡುವ.
  • (ಅರ್ಥ ಮಾಡಿಕೊಳ್ಳಲು ಕಷ್ಟವಾಗುವಂತೆ) ಜಟಿಲಗೊಳಿಸುವ.

obi

ನಾಮವಾಚಕ

obeah ಪದದ ರೂಪಾಂತರ.

obi

ನಾಮವಾಚಕ

ಸೊಂಟಪಟ್ಟಿ ಕಟಿಬಂಧ; ಜಪಾನಿ ಹೆಂಗಸರು, ಮಕ್ಕಳು ಕಿಮೋನೋದೊಂದಿಗೆ ತೊಡುವ, ಅಗಲವೂ ಉಜ್ಜ್ವಲವೂ ಆದ ನಡುಕಟ್ಟು.

obit

ನಾಮವಾಚಕ

  • (ಚರಿತ್ರೆ) (ಮುಖ್ಯವಾಗಿ ಒಂದು ಸಂಸ್ಥೆಯಲ್ಲಿ ಸ್ಥಾಪಕನ ಯಾ ದಾತನ ಮರಣದ ವಾರ್ಷಿಕ ದಿನ ನಡೆಸುವ) ಸ್ಮಾರಕ ಪ್ರಾರ್ಥನೆ ಯಾ ಪೂಜೆ.
  • ಆ ವ್ಯಕ್ತಿಯ ಸತ್ತ ದಿನಾಂಕ ಯಾ ಅದರ ದಾಖಲೆ.
  • (ಆಡುಮಾತು) = obituary.

obiter dictum

ನಾಮವಾಚಕ

  • (ನ್ಯಾಯಾಧಿಪತಿಯು ಯಾವುದೇ ವಿಷಯವನ್ನು ಚರ್ಚಿಸುತ್ತಿರುವಾಗ ಯಾ ಯಾವುದೇ ತೀರ್ಪು ಕೊಡುತ್ತಿರುವಾಗ ಕೊಡುವ, ಆ ವಿಷಯಕ್ಕೆ ಯಾ ತೀರ್ಪಿಗೆ ಅತ್ಯಾವಶ್ಯಕವಲ್ಲದ ಮತ್ತು ಆ ಕಾರಣದಿಂದಲೇ ಯಾವ ಪಕ್ಷವನ್ನು ಬದ್ಧಗೊಳಿಸಲಾರದ) ಪ್ರಾಸಂಗಿಕ ಅಭಿಪ್ರಾಯ.
  • (ಸಾಮಾನ್ಯವಾಗಿ) (ಯಾವುದೇ) ಪ್ರಾಸಂಗಿಕೋಕ್ತಿ; ಪ್ರಾಸಂಗಿಕ ಮಾತು.

obituarial

ಗುಣವಾಚಕ

ನಿಧನ ವಾರ್ತೆಯ; ಮೃತವಾರ್ತೆಗೆ ಸಂಬಂಧಿಸಿದ.

obituarist

ನಾಮವಾಚಕ

ನಿಧನವಾರ್ತಾಕಾರ; ಸಾವು ಸುದ್ದಿಗಾರ; ಮೃತಿಪ್ರಕಟಣೆ ಬರೆಯುವವನು.

obituary

ನಾಮವಾಚಕ

  • (ಮುಖ್ಯವಾಗಿ ವೃತ್ತಪತ್ರಿಕೆಗಳಲ್ಲಿ) ಪ್ರಕಟವಾಗುವ ನಿಧನವಾರ್ತೆ, ಮೃತಿಪ್ರಕಟಣೆ; ಸಾವಿನ, ಸಾವುಗಳ–ಸುದ್ದಿ.
  • ಮೃತ ವೃತ್ತಾಂತ; ಮೃತ ವ್ಯಕ್ತಿಯ ಸಂಕ್ಷಿಪ್ತ ಜೀವನ ಚರಿತ್ರೆ.

obituary

ಗುಣವಾಚಕ

  • ನಿಧನವಾರ್ತೆಯ; ಸಾವಿನ ಸುದ್ದಿಯನ್ನು ದಾಖಲಿಸುವ.
  • ಮೃತನ ಮರಣವನ್ನು ಕುರಿತ; ಸತ್ತವನ ಸಾವಿಗೆ ಸಂಬಂಧಿಸಿದ.

object

ನಾಮವಾಚಕ

ಪದಗುಚ್ಛ

  • (ಕಣ್ಣಿಗೆ ಕಾಣಿಸುವ ಯಾ ಇಂದ್ರಿಯಗೋಚರವಾದ) ಭೌತಿಕ–ವಸ್ತು, ಪದಾರ್ಥ.
  • (ಯಾವುದೇ ಕ್ರಿಯೆಗೆ ಯಾ ಭಾವಕ್ಕೆ ವಿಷಯವಾದ, ಪಾತ್ರವಾದ) ವ್ಯಕ್ತಿ ಯಾ ವಸ್ತು: the object of attention ಗಮನಕ್ಕೆ ಗುರಿಯಾದ ವ್ಯಕ್ತಿ ಯಾ ವಸ್ತು. the object of our study ನಮ್ಮ ಅಧ್ಯಯನದ ವಿಷಯ, ವಸ್ತು. he is a proper object of (or for) charity ದಾನಕ್ಕೆ ಅವನು ಸತ್ಪಾತ್ರ; ಅವನು ದಾನ ಪಡೆಯಲು ಸರಿಯಾದ, ಅರ್ಹನಾದ ವ್ಯಕ್ತಿ.
  • ಗುರಿ; ಉದ್ದೇಶ; ಲಕ್ಷ್ಯ; ಗುರಿಯಿಟ್ಟ ವಸ್ತು.
  • (ವ್ಯಾಕರಣ) ಕರ್ಮ(ಪದ); ಸಕರ್ಮಕ ಕ್ರಿಯಾಪದದಿಂದ ಇಲ್ಲವೆ ಉಪಸರ್ಗದಿಂದ ನಿಯಂತ್ರಿತವಾಗುವ ನಾಮಪದ ಇಲ್ಲವೆ ಅದಕ್ಕೆ ಸಮಾನವಾದ ಭಾಗ.
  • (ತತ್ತ್ವಶಾಸ್ತ್ರ) ಜ್ಞೇಯ ವಸ್ತು; ಜ್ಞಾತೃವಿನ ಜ್ಞಾನಕ್ಕೆ ವಿಷಯವಾದ ವಸ್ತು; ಜ್ಞಾತೃವಿಗೆ ಯಾ ಮನಸ್ಸಿಗೆ ಬಾಹ್ಯವಾದ, ಭಿನ್ನವಾದ–ವಿಷಯ, ವಸ್ತು. ಪದಾರ್ಥ.
  • (ಹೀನಾರ್ಥಕ ಪ್ರಯೋಗ) ಬಡಪಾಯಿ; ಮುಖ್ಯವಾಗಿ ಕನಿಕರ ಹುಟ್ಟಿಸುವ ಯಾ ಹಾಸ್ಯಾಸ್ಪದವಾದ ಸ್ವರೂಪವುಳ್ಳ ವ್ಯಕ್ತಿ ಯಾ ವಸ್ತು.
  • (ಕಂಪ್ಯೂಟರ್‍) ಮಾಹಿತಿಯ ಒಂದು ತಂಡ ಮತ್ತು ಅದರ ನಿರ್ವಹಣೆಯ ವಿವರಣೆ.
  • ದೃಶ್ಯವಸ್ತು; ವೀಕ್ಷಣ ಸಾಧನಗಳಿಂದ ಯಾ ಉಪಕರಣಗಳಿಂದ ನೋಡಿದ ಯಾ ಚಿತ್ರಿಸಿ ತೋರಿಸಿದ ವಸ್ತು.

Search Dictionaries

Loading Results

Follow Us :   
  Download Bharatavani App
  Bharatavani Windows App