भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

object

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಪದಗುಚ್ಛ

ಆಕ್ಷೇಪಿಸು; ಅಡ್ಡಿತೆಗೆ; ಅಸಮ್ಮತಿ–ತೋರು, ಸೂಚಿಸು; ಆಕ್ಷೇಪವೆತ್ತು: I object to being treated like this ನನ್ನ ವಿಷಯದಲ್ಲಿ ಹೀಗೆ ನಡೆದುಕೊಳ್ಳುತ್ತಿರುವುದನ್ನು, ನನಗೆ ತೋರಿಸುತ್ತಿರುವ ಈ ವರ್ತನೆಯನ್ನು ನಾನು ಆಕ್ಷೇಪಿಸುತ್ತೇನೆ. objecting aganist government policies ಸರ್ಕಾರಿ ನೀತಿಗಳ ಬಗ್ಗೆ ಆಕ್ಷೇಪಿಸುತ್ತಾ, ಆಕ್ಷೇಪವೆತ್ತುತ್ತಾ. I object (ಬ್ರಿಟನ್ನಿನ ಹೌಸ್‍ ಆಹ್‍ ಕಾಮನ್ಸ್‍ನಲ್ಲಿ ಮಂಡಿಸಿದ ಮಸೂದೆಯನ್ನು ಚರ್ಚಿಸಗೊಡದೆ ಬದಿಗೊತ್ತುವಂತೆ ಮಾಡಲು ಆ ಸಭೆಯ ಸದಸ್ಯನು ಬಳಸುವ ಮಾತು) ನಾನು (ಇದನ್ನು) ಆಕ್ಷೇಪಿಸುತ್ತೇನೆ, ವಿರೋಧಿಸುತ್ತೇನೆ.

  • (ಒಂದರ ವಿಷಯದಲ್ಲಿ ಲಕ್ಷಣ, ವಾಸ್ತವಾಂಶ, ಮೊದಲಾದವನ್ನು) ಆಕ್ಷೇಪವಾಗಿ ಮುಂದಿಡು, ಒಡ್ಡು: objected that they were kept waiting ತಮ್ಮನ್ನು ಕಾಯಿಸಿದರೆಂದು ಆಕ್ಷೇಪಿಸಿದ.
  • ಆಕ್ಷೇಪಿಸು; (ಒಂದು ವಿಷಯಕ್ಕೆ ಒಂದು ಗುಣ ಯಾ ವಾಸ್ತವಾಂಶ) ವಿರುದ್ಧವಾಗಿದೆಯೆಂದು ಯಾ ಹಾನಿಕರವಾಗಿದೆಯೆಂದು ಆಪಾದಿಸು, ಎತ್ತಿಹೇಳು.

object language

ನಾಮವಾಚಕ

  • ಇನ್ನೊಂದು ಭಾಷೆಯ ಮೂಲಕ ವಿವರಿಸಲಾಗುವ ಭಾಷೆ.
  • (ಕಂಪ್ಯೂಟರ್‍) ‘ಕಂಪೈಲರ್‍’ ಯಾ ‘ಅಸೆಂಬ್ಲರ್‍’ ಮೂಲಕ ‘ಪ್ರೋಗ್ರಾಂ’ ಅನ್ನು ಅನುವಾದಿಸುವ ಭಾಷೆ.

object lens

ನಾಮವಾಚಕ

(ದೃಗ್‍ವಿಜ್ಞಾನ) = object-glass.

object-ball

ನಾಮವಾಚಕ

(ಬಿಲಿಯರ್ಡ್ಸ್‍ ಆಟದಲ್ಲಿ) ಗುರಿ ಚೆಂಡು; ಆಟಗಾರನು ತನ್ನ ಚೆಂಡಿನಿಂದ ಹೊಡೆಯಲು ಗುರಿಯಿಡುವ ಚೆಂಡು.

object-finder

ನಾಮವಾಚಕ

ದೃಗ್ವಸ್ತು ನಿರ್ದೇಶಕ; ಚಲಫಲಕದ ಸ್ಥಾನವನ್ನು ನಿರ್ದೇಶಿಸುವ ಸಲಕರಣೆ.

object-glass

ನಾಮವಾಚಕ

(ದೃಗ್‍ವಿಜ್ಞಾನ) ವಸ್ತುಕ; ದೂರದರ್ಶಕ , ಸೂಕ್ಷ್ಮದರ್ಶಕ, ಕ್ಯಾಮರ, ಮಾಯಾದೀಪ, ಮೊದಲಾದ ಉಪಕರಣಗಳಲ್ಲಿ ನೋಡಬೇಕಾಗಿರುವ ವಸ್ತುವಿಗೆ ಸಮೀಪವಿರುವ ಲೆನ್ಸ್‍, ಮಸೂರ ಯಾ ಲೆನ್ಸ್‍ಗಳ ಜೋಡಣೆ.

object-lesson

ನಾಮವಾಚಕ

  • ವಸ್ತು ಪಾಠ; ಪ್ರದರ್ಶನ ಪಾಠ; ವಸ್ತುವನ್ನು ಪ್ರತ್ಯಕ್ಷವಾಗಿ ಎದುರಿಗೆ ಇಟ್ಟುಕೊಂಡು ಅದರ ವಿಷಯ ಬೋಧಿಸುವುದು, ಪಾಠ ಹೇಳುವುದು.
  • (ರೂಪಕವಾಗಿ) (ಯಾವುದೇ ತತ್ತ್ವದ ವಿಷಯವಾಗಿ ಮನ ಮುಟ್ಟುವಂಥ) ಪ್ರತ್ಯಕ್ಷ–ನಿದರ್ಶನ, ದೃಷ್ಟಾಂತ.

object-plate

ನಾಮವಾಚಕ

ವಸ್ತು ಫಲಕ; ಸೂಕ್ಷ್ಮದರ್ಶಕದಲ್ಲಿ ವಸ್ತುವನ್ನು ಪರೀಕ್ಷಿಸಲು ಅದನ್ನಿಡುವ ಫಲಕ.

object-staff

ನಾಮವಾಚಕ

ಮಟ್ಟಗೋಲು; ಮೋಜಣಿದಾರನ ಮಟ್ಟ ನೋಡುವ ಸಲಕರಣೆ.

objectification

ನಾಮವಾಚಕ

  • ವಿಷಯೀಕರಣ; ಇಂದ್ರಿಯಕ್ಕೆ ವಿಷಯವಾಗಿಸುವುದು; ಇಂದ್ರಿಯಗೋಚರವಾಗಿಸುವುದು; ಇಂದ್ರಿಯಕ್ಕೆ ಗ್ರಾಹ್ಯವಾಗುವಂತೆ ಮಾಡುವುದು. ನಿರೂಪಿಸುವುದು.
  • ಮೂರ್ತೀಕರಣ; ಆಕಾರ ತಾಳುವಂತೆ ಮಾಡುವುದು.

objectify

ಸಕರ್ಮಕ ಕ್ರಿಯಾಪದ

  • ವಿಷಯೀಕರಿಸು; ಇಂದ್ರಿಯ ಗೋಚರವಾಗಿಸು; ಇಂದ್ರಿಯಕ್ಕೆ ವಿಷಯವಾಗಿ ತೋರಿಸು, ವಸ್ತುರೂಪದಲ್ಲಿ ತಿಳಿಸು, ವಿವರಿಸು.
  • ಮೂರ್ತೀಕರಿಸು; ಆಕಾರ ಪಡೆಯುವಂತೆ ಮಾಡು.

objection

ನಾಮವಾಚಕ

  • ಆಕ್ಷೇಪಣೆ; ಅಡ್ಡಿ; ತಕರಾರು; ವಿರುದ್ಧವಾದ ಯಾ ಅಸಮ್ಮತಿ ಸೂಚಕವಾದ–ಅಭಿವ್ಯಕ್ತಿ ಯಾ ಭಾವನೆ.
  • ಆಕ್ಷೇಪ(ಣೆ); ಆಕ್ಷೇಪಿಸುವುದು; ಅಡ್ಡಿಮಾಡುವುದು; ಆಕ್ಷೇಪಿಸುವ ಕ್ರಿಯೆ.
  • ವಿರುದ್ಧ ತರ್ಕ ಯಾ ಹೇಳಿಕೆ.
  • ಆಕ್ಷೇಪಿಸಿದ, ಆಕ್ಷೇಪಣೆಗೊಳಪಟ್ಟ–ವಿಷಯ.
  • ಅಸಮ್ಮತಿ; ಅಸಂತೋಷ ಸೂಚನೆ.

objectionable

ಗುಣವಾಚಕ

  • ಆಕ್ಷೇಪಣೀಯ; ಆಕ್ಷೇಪಾರ್ಹ; ಆಕ್ಷೇಪಿಸಲು ಅರ್ಹವಾದ; ಆಕ್ಷೇಪಕ್ಕೆ ಗುರಿಯಾಗುವ.
  • ಬೇಡದ; ಅನಪೇಕ್ಷಣೀಯ; ಅಹಿತವಾದ; ದೂಷ್ಯ; ಮನಸ್ಸಿಗೆ ಒಪ್ಪದ; ಸಂತೋಷದಾಯಕವಲ್ಲದ.

objectionableness

ನಾಮವಾಚಕ

ಆಕ್ಷೇಪಣೀಯತೆ; ಆಕ್ಷೇಪಾರ್ಹತೆ; ಆಕ್ಷೇಪಿಸಲು ಅರ್ಹವಾಗಿರುವಿಕೆ.

objectionably

ಕ್ರಿಯಾವಿಶೇಷಣ

ಆಕ್ಷೇಪಣೀಯವಾಗಿ; ಆಕ್ಷೇಪಾರ್ಹವಾಗಿ.

objectival

ಗುಣವಾಚಕ

(ಮುಖ್ಯವಾಗಿ ವ್ಯಾಕರಣ) ದ್ವಿತೀಯಾ ವಿಭಕ್ತಿಯ ಯಾ ಅದಕ್ಕೆ ಸಂಬಂಧಿಸಿದ.

objective

ಗುಣವಾಚಕ

ಪದಗುಚ್ಛ

  • (ತತ್ತ್ವಶಾಸ್ತ್ರ) ವಾಸ್ತವ(ವಾದ); ಬಾಹ್ಯವಸ್ತುವಿನ; ಮನಸ್ಸಿಗೆ ಹೊರಗಿನ; (ಜ್ಞಾತೃವಿಗೆ ಸಂಬಂಧಿಸದೆ) ಜ್ಞೇಯಕ್ಕೆ ಮಾತ್ರ ಸಂಬಂಧಿಸಿದ.
  • (ವ್ಯಕ್ತಿ, ಲೇಖನ, ಚಿತ್ರ, ಚರ್ಚೆ, ಮೊದಲಾದವುಗಳ ವಿಷಯದಲ್ಲಿ)
    1. ಬಾಹ್ಯವಸ್ತುಗಳಿಗೆ ಸಂಬಂಧಿಸಿದ; ಮನಸ್ಸಿಗೆ ಹೊರಗಣ ವಸ್ತುಗಳನ್ನು ಕುರಿತ.
    2. ವಸ್ತುನಿಷ್ಠ; ವಾಸ್ತವಿಕ; ವಸ್ತುಭೂತ; ಇದ್ದಂತಿರುವ; ವಸ್ತುಸ್ಥಿತಿಯನ್ನು ನಿರೂಪಿಸುವ (ವೈಯಕ್ತಿಕ ಭಾವಗಳಿಂದ, ಅಭಿಪ್ರಾಯಗಳಿಂದ ಬಣ್ಣ ಕಟ್ಟದೆ) ವಾಸ್ತವವಾದ, ಇದ್ದಂತಿರುವ ಸಂಗತಿಗಳನ್ನು ತಿಳಿಸುವ.
  • (ವ್ಯಾಕರಣ)
    1. (ಪದದ ವಿಷಯದಲ್ಲಿ) ಕ್ರಿಯೆಗೆ ವಿಷಯವಾದ.
    2. (ಪದದ ವಿಷಯದಲ್ಲಿ) ಸಕರ್ಮಕ ಕ್ರಿಯಾಪದಕ್ಕೆ ಕರ್ಮಪದವಾದ ಯಾ ಉಪಸರ್ಗದಿಂದ ನಿಯಂತ್ರಿತವಾದ.
    3. (ವಿಭಕ್ತಿಯ ವಿಷಯದಲ್ಲಿ) ದ್ವಿತೀಯಾ.
  • ಉದ್ದಿಷ್ಟ; ಉದ್ದೇಶಿಸಿದ: objective point ಉದ್ದಿಷ್ಟ ವಿಷಯ.
  • (ವೈದ್ಯಶಾಸ್ತ್ರ) (ರೋಗ ಲಕ್ಷಣಗಳ ವಿಷಯದಲ್ಲಿ) ಬಾಹ್ಯಗೋಚರ; ರೋಗಿಯ ಅನುಭವಕ್ಕೆ ಮಾತ್ರವೇ ಒಳಪಟ್ಟಿರದೆ ಹೊರಗಿನವನಿಗೂ (ವೈದ್ಯ ಮೊದಲಾದ ವ್ಯಕ್ತಿಗೂ) ಗೋಚರವಾಗುವ.

objective

ನಾಮವಾಚಕ

  • ಗುರಿ; ಲಕ್ಷ್ಯ; ಉದ್ದೇಶ; ಉದ್ದಿಷ್ಟ ವಿಷಯ.
  • (ವ್ಯಾಕರಣ) = 1objective ?ಪಗು? \((೧)\).
  • = object-glass.

objective complement

ನಾಮವಾಚಕ

(ವ್ಯಾಕರಣ) ಪೂರಕ ಕರ್ಮಪದ; ಸಕರ್ಮಕವಾದರೂ ಅಪೂರ್ಣಾರ್ಥಕೊಡುವ ಕ್ರಿಯಾಪದಕ್ಕೆ ಪೂರಕವಾಗಿ ಬಳಸುವ

  • ನಾಮಪದ: they made him chairman ಎಂಬಲ್ಲಿ chairman.
  • ಗುಣವಾಚಕ: he made me glad ಎಂಬಲ್ಲಿ glad.

objective correlative

ನಾಮವಾಚಕ

(ಸಾಹಿತ್ಯ) ಭಾವ ಪ್ರತಿವಸ್ತು; ವಸ್ತು ಪ್ರತಿರೂಪ; ಓದುಗರಲ್ಲಿ ಕವಿಯ ಭಾವಕ್ಕೆ ಸದೃಶವಾದ ಭಾವವನ್ನು ಪ್ರಚೋದಿಸಲು ಆ ಭಾವವನ್ನು ಪ್ರತಿನಿಧಿಸುವ ಮೂರ್ತೀಕರಿಸುವ ಸನ್ನಿವೇಶದ ಯಾ ಘಟನಾವಳಿಯ ನಿರೂಪಣೆ, ವರ್ಣನೆ.

Search Dictionaries

Loading Results

Follow Us :   
  Download Bharatavani App
  Bharatavani Windows App