भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

objective idealism

ನಾಮವಾಚಕ

ವಸ್ತುನಿಷ್ಟ ಭಾವನಾವಾದ; ವಸ್ತುಭೂತ, ವಾಸ್ತವಿಕ–ಭಾವನಾವಾದ; ಪಾರಮಾರ್ಥಿಕ ದೃಷ್ಟಿಯಿಂದ ಎಂದರೆ ಅಂತಿಮ ವಿಶ್ಲೇಷಣೆಯಲ್ಲಿ ನಿಸರ್ಗವು ಭಾವನಾರೂಪದ್ದಾದರೂ ವ್ಯವಹಾರದಲ್ಲಿ ಅದು ಜ್ಞಾತೃವಿಗೆ ಅಧೀನವಾಗಿರದೆ ಸ್ವತಂತ್ರ ಅಸ್ತಿತ್ವವುಳ್ಳದ್ದೆಂದು ಪ್ರತಿಪಾದಿಸುವ ಸಿದ್ಧಾಂತ; ನಿಸರ್ಗವೆಂಬುದು ಇಂದ್ರಿಯಗೋಚರವಾದ ಮನೋವ್ಯಾಪಾರ ಹಾಗೂ ತದ್ವಿರುದ್ಧವಾಗಿ, ಇಂದ್ರಿಯಗೋಚರವಾದ ಮನೋವ್ಯಾಪಾರವೇ ನಿಸರ್ಗ ಎಂದು ಪ್ರತಿಪಾದಿಸುವ ಎಹ್‍. ಡಬ್ಲ್ಯೂ. ಜೆ. ವಾನ್‍ ಷೆಲಿಂಗ್‍ ಎಂಬ ಜರ್ಮನ್‍ ತತ್ತ್ವ ಶಾಸ್ತ್ರಜ್ಞನ ಸಿದ್ಧಾಂತ.

objectively

ಕ್ರಿಯಾವಿಶೇಷಣ

ವಸ್ತುನಿಷ್ಠವಾಗಿ; ವೈಯಕ್ತಿಕವಾಗಿರದೆ; ವ್ಯಕ್ತಿಯ ಇಷ್ಟಾನಿಷ್ಟಗಳಿಗೆ ಒಳಪಡದೆ.

objectiveness

ನಾಮವಾಚಕ

ವಸ್ತುನಿಷ್ಠತೆ; ವಸ್ತುನಿಷ್ಠವಾಗಿರುವಿಕೆ.

objectivise

ಸಕರ್ಮಕ ಕ್ರಿಯಾಪದ

= objectivize.

objectivism

ನಾಮವಾಚಕ

  • ವಸ್ತುನಿಷ್ಠತೆ; ಜ್ಞೇಯಕ್ಕೆ , ಎಂದರೆ ಬಾಹ್ಯ ವಸ್ತು ಯಾ ವಿಷಗಳಿಗೆ, (ಜ್ಞಾತೃವಿಗಿಂತ) ಹೆಚ್ಚು ಪ್ರಾಮುಖ್ಯ ಕೊಡುವ ಪ್ರವೃತ್ತಿ.
  • ಜ್ಞೇಯಪ್ರಾಧಾನ್ಯ ವಾದ; ಜ್ಞಾತೃಭಿನ್ನವಾದ ವಸ್ತುವನ್ನು ಅರಿಯುವುದು ಆದ್ಯವೂ ಪ್ರಧಾನವೂ ಆದದ್ದು ಎಂದು ಪ್ರತಿಪಾದಿಸುವ ಸಿದ್ಧಾಂತ.
  • ಜ್ಞಾನ ವಾಸ್ತವಿಕವಾದ; ಮಾನವನ ಜ್ಞಾನಕ್ಕೆ ವಸ್ತುರೂಪೀಯ ಆಧಾರವಿದೆ ಎಂದು ಪ್ರತಿಪಾದಿಸುವ ಸಿದ್ಧಾಂತ.
  • ವಸ್ತುನಿಷ್ಠತಾವಾದ; ಪ್ರಮಾಣಗಳ ಮೂಲಕ ನಿರೂಪಿಸಲು ಸಾಧ್ಯವಾಗದ ಆಧಾರಗಳನ್ನೆಲ್ಲ ವರ್ಜಿಸಿ ಕೇವಲ ವಸ್ತುನಿಷ್ಠ ವಿಶ್ಲೇಷಣೆಯನ್ನು ಎತ್ತಿ ಹಿಡಿದಿರುವ ಸಿದ್ಧಾಂತ.
  • ವಾಸ್ತವಿಕತಾವಾದ; ಕೆಲವು ವಿಷಯಗಳು, ಮುಖ್ಯವಾಗಿ ನೈತಿಕ ತತ್ತ್ವಗಳು, ಅವುಗಳನ್ನು ಕುರಿತ ಮಾನವ ಜ್ಞಾನಕ್ಕಿಂತ ಸ್ವತಂತ್ರವಾದ ಅಸ್ತಿತ್ವವನ್ನು ಹೊಂದಿರುತ್ತವೆ ಎಂದು ಪ್ರತಿಪಾದಿಸುವ ಸಿದ್ಧಾಂತ.
  • ವಾಸ್ತವಿಕತಾವಾದ; ವಿಷಯಗಳನ್ನು ವಸ್ತುಭೂತವಾಗಿರುವಂತೆ ಯಾ ವಾಸ್ತವಿಕವಾಗಿ ಅವು ಇರುವಂತೆ ನಿರೂಪಿಸುವ ಕಲೆ ಯಾ ಸಾಹಿತ್ಯವನ್ನು ಎತ್ತಿಹಿಡಿಯುವ ಸಿದ್ಧಾಂತ ಯಾ ಅದರ ಅನುಷ್ಠಾನ.

objectivist

ನಾಮವಾಚಕ

ವಾಸ್ತವಿಕತಾವಾದಿ; ವಾಸ್ತವಿಕತಾ ಸಿದ್ಧಾಂತದ ಅನುಯಾಯಿ ಯಾ ಆ ಸಿದ್ಧಾಂತವನ್ನು ಪ್ರತಿಪಾದಿಸುವವನು.

objectivistic

ಗುಣವಾಚಕ

ವಾಸ್ತವಿಕತಾ ವಾದದ, ಸಿದ್ಧಾಂತದ ಯಾ ಅದಕ್ಕೆ ಸಂಬಂಧಿಸಿದ.

objectivity

ನಾಮವಾಚಕ

  • ವಾಸ್ತವಿಕತೆ; ಬಾಹ್ಯ ಸತ್ಯತೆ; (ಮನಸ್ಸಿನ ಹೊರಗೆ) ವಸ್ತು ರೂಪದಲ್ಲಿರುವುದು; ಇಂದ್ರಿಯಗೋಚರ ವಸ್ತುವಾಗಿರುವುದು.
  • ವಸ್ತುನಿಷ್ಠತೆ.

objectivization

ನಾಮವಾಚಕ

= objectification.

objectivize

ಸಕರ್ಮಕ ಕ್ರಿಯಾಪದ

= objectify.

objectless

ಗುಣವಾಚಕ

  • ವಸ್ತುರಹಿತ; ನಿರ್ವಸ್ತುಕ; ವಸ್ತುಶೂನ್ಯವಾದ; ಯಾವ ವಸ್ತುವೂ ಇಲ್ಲದ.
  • ಉದ್ದೇಶರಹಿತ; ನಿರುದ್ದೇಶವಾದ; ಯಾವ ಗುರಿಯೂ, ಉದ್ದೇಶವೂ ಇಲ್ಲದ.

objector

ನಾಮವಾಚಕ

ಆಕ್ಷೇಪಿ; ಆಕ್ಷೇಪಕ; ಅಡ್ಡಿಗಾರ; ಆಕ್ಷೇಪ ಮಾಡುವವನು.

objet d’art

ನಾಮವಾಚಕ

  • ಚಿಕ್ಕ ಕಲಾ(ತ್ಮಕ) ವಸ್ತು; ಕಲಾಮೌಲ್ಯವುಳ್ಳ ಪುಟ್ಟ ವಸ್ತು.
  • ತೀರ ಕಡಮೆ ಬೆಲೆಯ ಕ್ಷುದ್ರಒಡವೆ.

objurgate

ಸಕರ್ಮಕ ಕ್ರಿಯಾಪದ

(ಸಾಹಿತ್ಯಕ) (ಬಿರುನುಡಿಯಲ್ಲಿ) ಖಂಡಿಸು; ದೂಷಿಸು; ಛೇಡಿಸು; ನಿಂದಿಸು; ಛೀಮಾರಿ ಹಾಕು.

objurgation

ನಾಮವಾಚಕ

(ಸಾಹಿತ್ಯಕ) (ಬಿರುನುಡಿಯಲ್ಲಿ) ಖಂಡಿಸುವುದು; ಖಂಡನೆ; ಕಟು–ನಿಂದೆ, ದೂಷಣೆ; ಛೀಮಾರಿ(ಹಾಕುವುದು).

objurgatory

ಗುಣವಾಚಕ

(ಸಾಹಿತ್ಯಕ) (ಬಿರುನುಡಿಯಲ್ಲಿ) ಖಂಡಿಸುವ; ದೂಷಿಸುವ; ಕಟುವಾಗಿ ನಿಂದಿಸುವ; ಛೀಮಾರಿ ಹಾಕುವ.

oblanceolate

ಗುಣವಾಚಕ

(ಸಸ್ಯವಿಜ್ಞಾನ) (ಮುಖ್ಯವಾಗಿ ಎಲೆಗಳ ವಿಷಯದಲ್ಲಿ) ಬುಡದಲ್ಲಿ ಹೆಚ್ಚು ಚೂಪಾಗಿರುವ; ಈಟಿಯು ತಲೆಯಾಕಾರದ; ಶೂಲಶಿರರೂಪದ.

oblate

ನಾಮವಾಚಕ

ದೀಕ್ಷಿತ; ದೀಕ್ಷಾಬದ್ಧ; ಧಾರ್ಮಿಕ ದೀಕ್ಷೆ ತೆಗೆದುಕೊಂಡ, ಧರ್ಮ ಪ್ರವರ್ತಕನಾಗಿರುವೆನೆಂಬ ವ್ರತ ಕೈಗೊಂಡ ವ್ಯಕ್ತಿ; ಧಾರ್ಮಿಕ ಜೀವನಕ್ಕೂ ಧರ್ಮ ಪ್ರವರ್ತನಕ್ಕೂ ತನ್ನನ್ನು ಅರ್ಪಿಸಿಕೊಂಡ ವ್ಯಕ್ತಿ.

oblate

ಗುಣವಾಚಕ

(ಜ್ಯಾಮಿತಿ) (ಗೋಳಾಭದ ವಿಷಯದಲ್ಲಿ) ಚಪ್ಪಟೆ ತುದಿಗಳ; ಧ್ರುವಗಳಲ್ಲಿ ಚಪ್ಪಟೆಯಾಗಿರುವ.

oblate spheroid

ನಾಮವಾಚಕ

(ಜ್ಯಾಮಿತಿ) ಚಪ್ಪಟೆ ಗೋಳಾಭ; ಕೆಳ ಮತ್ತು ಮೇಲು ತುದಿಗಳು ಸಮತಲವಾಗಿರುವ, ಚಪ್ಪಟೆಯಾಗಿರುವ ಗೋಲ; ದೀರ್ಘವೃತ್ತವನ್ನು ಅದರ ಲಘು ಅಕ್ಷದ ಸುತ್ತ ತಿರುಗಿಸಿದರೆ ಉತ್ಪತ್ತಿಯಾಗುವ ಘನಾಕೃತಿ.

Search Dictionaries

Loading Results

Follow Us :   
  Download Bharatavani App
  Bharatavani Windows App