English-Kannada Nighantu (University of Mysore)
University of Mysore
oblation
ನಾಮವಾಚಕ
- (ದೇವರಿಗೆ ಸಮರ್ಪಿಸಿದ) ನೈವೇದ್ಯ; ಬಲಿ; ಆಹುತಿ.
- ಬ್ರೆಡ್ ಮತ್ತು ವೈನ್ ನೈವೇದ್ಯ (ಸಮರ್ಪಣೆ); ಪ್ರಭುಬೋಜನ ಸಂಸ್ಕಾರದಲ್ಲಿ ದೇವರಿಗೆ ಬ್ರೆಡ್ ಮತ್ತು ವೈನುಗಳನ್ನು ಸಮರ್ಪಿಸುವುದು.
- (ಕ್ರೈಸ್ತ) ಪ್ರಭುಬೋಜನ ಸಂಸ್ಕಾರ.
- (ಧರ್ಮಕಾರ್ಯಗಳಿಗಾಗಿ ನೀಡಿದ) ದಾನ; ದತ್ತಿ; ಉಂಬಳಿ.
oblational
ಗುಣವಾಚಕ
- (ದೇವರಿಗೆ ಅರ್ಪಿಸಿದ) ನೈವೇದ್ಯದ; ಬಲಿಯ; ಆಹುತಿಯ.
- (ಕ್ರೈಸ್ತ) ಪ್ರಭುಬೋಜನ ಸಂಸ್ಕಾರದಲ್ಲಿ ಅರ್ಪಿಸಿದ ಬ್ರೆಡ್ಡು ಮತ್ತು ವೈನಿನ.
- (ಕ್ರೈಸ್ತ) ಪ್ರಭುಭೋಜನ ಸಂಸ್ಕಾರದ.
- (ಧರ್ಮಕಾರ್ಯಗಳಿಗಾಗಿ ನೀಡಿದ) ದಾನದ; ದತ್ತಿಯ.
oblatory
ಗುಣವಾಚಕ
= oblational.
obligate
ಸಕರ್ಮಕ ಕ್ರಿಯಾಪದ
- (ಸಾಮಾನ್ಯವಾಗಿ ಕರ್ಮಣಿಪ್ರಯೋಗದಲ್ಲಿ) (ವ್ಯಕ್ತಿಯನ್ನು ಕಾನೂನಿನ ಪ್ರಕಾರ ಯಾ ನೈತಿಕವಾಗಿ ಒಂದು ಕಾರ್ಯಮಾಡಲು) ಕಟ್ಟಿ ಹಾಕು; ಬದ್ಧನನ್ನಾಗಿ ಮಾಡು; ಬಾಧ್ಯನನ್ನಾಗಿಸು; ಕಟ್ಟುಬೀಳಿಸು.
- (ಅಮೆರಿಕನ್ ಪ್ರಯೋಗ) (ಅಸ್ತಿಪಾಸ್ತಿಗಳನ್ನು) ಜಾಮೀನಿಗಾಗಿ–ಒತ್ತೆಯಿಡು, ಆಧಾರವಿಡು.
obligate
ಗುಣವಾಚಕ
(ಜೀವವಿಜ್ಞಾನ) ನಿರ್ಬಂಧಕ; (ಜೀವಿಯ ಲಕ್ಷಣದ ವಿಷಯದಲ್ಲಿ) ಜೀವದಿಂದಿರಲು ಅಗತ್ಯವಾದ.
obligation
ನಾಮವಾಚಕ
ಪದಗುಚ್ಛ
- (ಕಾಯಿದೆ, ಅನುಶಾಸನ, ಕರ್ತವ್ಯ, ಕರಾರು, ಮೊದಲಾದವುಗಳ) ಕಟ್ಟುಪಾಡು; ನಿರ್ಬಂಧ; ಬಂಧಕ ಶಕ್ತಿ.
- (ಒಬ್ಬನ) ಅವಶ್ಯ, ಅನಿವಾರ್ಯ–ಕರ್ತವ್ಯ; ಹೊತ್ತ–ಹೊಣೆ, ಜವಾಬ್ದಾರಿ, ಭಾರ, ಹೊರೆ.
- (ಬರೆದುಕೊಟ್ಟ) ಕರಾರು; ಮುಚ್ಚಳಿಕೆ: ಮುಖ್ಯವಾಗಿ ತಪ್ಪಿದರೆ ಶಿಕ್ಷೆಗೊಳಪಡಿಸಬಹುದಾದ, ಮಾಡಲೇಬೇಕೆಂದು ನಿರ್ಬಂಧಿಸಬಹುದಾದ ಕರಾರು, ಒಪ್ಪಂದ.
- ಉಪಕಾರ; ಪ್ರಯೋಜನ: repay an obligation ಪಡೆದ ಉಪಕಾರ ತೀರಿಸು; ಉಪಕಾರ ಮಾಡಿದ್ದಕ್ಕೆ ಪ್ರತ್ಯುಪಕಾರ ಮಾಡು.
- (ಇನ್ನೊಬ್ಬರಿಂದಾಗಿರುವ ಸೇವೆಯ ಯಾ ಉಪಕಾರದ) ಋಣ; ಕೃಜ್ಞತೆಯ ಭಾರ: be under an obligation (ಒಬ್ಬರಿಂದಾಗಿರುವ ಸೇವೆಯ ಯಾ ಉಪಕಾರದ) ಋಣ ಹೊತ್ತಿರು; ಹಂಗಿಗೆ ಒಳಪಟ್ಟಿರು.
obligational
ಗುಣವಾಚಕ
- ಕರಾರಿನ ಯಾ ಅದಕ್ಕೆ ಸಂಬಂಧಿಸಿದ.
- ಕರ್ತವ್ಯದ; ಕರ್ತವ್ಯಭಾರದ; ಕರ್ತವ್ಯಕ್ಕೆ ಕಟ್ಟುಬಿದ್ದ.
obligatorily
ಕ್ರಿಯಾವಿಶೇಷಣ
- (ಕಾನೂನಿನ ಮೇರೆಗೆ ಯಾ ನೈತಿಕವಾಗಿ) ಕಟ್ಟುಬೀಳಿಸಿರುವಂತೆ; ಅನಿವಾರ್ಯ ಕರ್ತವ್ಯವಾಗಿರುವಂತೆ.
- ಕರ್ತವ್ಯಕ್ಕೆ ಕಟ್ಟುಬಿದ್ದಂತೆ, ಸಿಲುಕಿದಂತೆ.
obligatory
ಗುಣವಾಚಕ
- (ಕಾನೂನಿನ ಮೇರೆಗೆ ಯಾ ನೈತಿಕವಾಗಿ) ಕಟ್ಟುಬಿದ್ದ ಕಟ್ಟುಬೀಳಿಸಿರುವ; ಕಟ್ಟಿಗೆ ಸಿಲುಕಿದ; ಕಟ್ಟಿ ಹಾಕಿರುವ; ಬಂಧಕವಾದ; ಮಾಡಲೇಬೇಕಾದ; ನಿರ್ಬಂಧವಾದ; (ಅನುಜ್ಞಾತ್ಮಕವಲ್ಲದೆ) ಅನಿವಾರ್ಯ ಕರ್ತವ್ಯವಾದ.
- (ಕೃತಜ್ಞತಾ) ಋಣ ರೂಪದ; ಉಪಕಾರಭಾರದ.
oblige
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ಪದಗುಚ್ಛ
(ಆಡುಮಾತು) (ಹಾಡು ಮೊದಲಾದವುಗಳಿಂದ, ನಿರ್ದಿಷ್ಟ ನೆರವಿನಿಂದ, ಮನರಂಜನೆಯಿಂದ) ಸಹಾಯ ಮಾಡು: Divya obliged with a song ದಿವ್ಯಾಳು ಒಂದು ಹಾಡು ಹಾಡಿ ಸಹಾಯ ಮಾಡಿದಳು. much obliged ವಂದನೆಗಳು; ಕೃತಜ್ಞನಾಗಿದ್ದೇನೆ.
- (ಹೇಳಿದಂತೆ ಮಾಡಲು) ಬಲಾತ್ಕರಿಸು; ನಿರ್ಭಂಧಪಡಿಸು; ಒತ್ತಾಯಪಡಿಸು.
- ಕಟ್ಟುಬೀಳಿಸುವಂತಿರು; ಕಟ್ಟಿಹಾಕುವಂತಿರು; ನಿರ್ಬಂಧಕವಾಗಿರು.
- (ಉಪಕಾರ, ಸಹಾಯ ಮಾಡಿ) ಋಣಿಯನ್ನಾಗಿಸು; (ಉಪಕಾರದ) ಹೊರೆ ಹೊರಿಸು.
- ಸಂತೋಷಪಡಿಸು; ತೃಪ್ತಿಪಡಿಸು; ಉಪಕಾರಮಾಡು; ಅನುಗ್ರಹಿಸು; ಉಪಕರಿಸು: oblige me by leaving (ಹೋಗು ಎನ್ನುವುದಕ್ಕೆ ಸೌಮ್ಯೋಕ್ತಿಯಾಗಿ) ಹೋಗುವ (ಮೂಲಕ) ಉಪಕಾರ ಮಾಡು.
- (ಅನೇಕ ವೇಳೆ ಅಕರ್ಮಕವಾಗಿ ಪ್ರಯೋಗ) ಸಹಾಯ, ಉಪಕಾರ–ಮಾಡು: will you oblige ನನಗೆ ಸಹಾಯ ಮಾಡುತ್ತೀಯಾ?
- (ಕರ್ಮಣಿ ಪ್ರಯೋಗದಲ್ಲಿ) ಋಣಿಯಾಗು; ಕೃತಜ್ಞನಾಗಿರು: am obliged to you for your help ನಿನ್ನ ಸಹಾಯಕ್ಕಾಗಿ ಋಣಿಯಾಗಿದ್ದೇನೆ.
- (ಪ್ರಾಚೀನ ಪ್ರಯೋಗ ಯಾ ನ್ಯಾಯಶಾಸ್ತ್ರ) (ಆಣೆ, ಪ್ರಮಾಣ, ಕರಾರು, ಮೊದಲಾದವುಗಳಿಂದ ಒಬ್ಬನನ್ನು ಯಾ ಒಂದು ಕೆಲಸ ಮಾಡಲು) ಕಟ್ಟು ಬೀಳಿಸು; ನಿರ್ಬಂಧಕ್ಕೆ ಒಳಗಾಗಿಸು.
- (ಆಡುಮಾತು) ವಿನೋದ ಕೂಟಕ್ಕೆ (ಹಾಡು ಮೊದಲಾದ) ಕೊಡುಗೆ ಕೊಡು.
obligee
ನಾಮವಾಚಕ
- (ನ್ಯಾಯಶಾಸ್ತ್ರ) ಕರಾರುದಾರ; ಕರಾರು ಬರೆಸಿಕೊಂಡವನು ಯಾ ಕಾನೂನು ಮೇರೆಗೆ ತನಗೆ ಬದ್ಧನಾಗಿರುವ ವ್ಯಕ್ತಿಯನ್ನು ಪಡೆದಿರುವವನು.
- (ವಿರಳ ಪ್ರಯೋಗ) ಉಪಕೃತ; ಋಣಿ; ಉಪಕಾರ ಪಡೆದಿರುವವನು; ಹಂಗು ಹೊತ್ತವನು.
obliger
ನಾಮವಾಚಕ
- ಕರಾರುಗಾರ; ಕರಾರು ಹಾಕುವವನು, ವಿಧಿಸುವವನು.
- ಉಪಕಾರಿ; ಉಪಕಾರ ಮಾಡುವವನು; ಉಪಕಾರದ ಹೊರೆ ಹೊರಿಸುವವನು.
obliging
ಗುಣವಾಚಕ
ದಾಕ್ಷಿಣ್ಯಪರ; ಉಪಕಾರಶೀಲ; ಅನುಗ್ರಾಹಕ.
obligingly
ಕ್ರಿಯಾವಿಶೇಷಣ
ದಾಕ್ಷಿಣ್ಯಪರನಾಗಿ; ಉಪಕಾರಶೀಲನಾಗಿ; ಅನುಗ್ರಹ ಬುದ್ಧಿಯಿಂದ; ಅನುಗ್ರಹ ಪ್ರವೃತ್ತಿಯಿಂದ.
obligingness
ನಾಮವಾಚಕ
ದಾಕ್ಷಿಣ್ಯಪರತೆ; ಉಪಕಾರಶೀಲತೆ; ಅನುಗ್ರಹ–ಬುದ್ಧಿ, ಪ್ರವೃತ್ತಿ.
obligor
ನಾಮವಾಚಕ
(ನ್ಯಾಯಶಾಸ್ತ್ರ) ಕರಾರುಗಾರ; ಕರಾರುಬದ್ಧ; ಒಬ್ಬನಿಗೆ ಕರಾರಿನಿಂದ, ಪತ್ರ ಬರೆದುಕೊಟ್ಟು ಯಾ ಇತರ ಕಾನೂನುಕ್ರಮದ ಪ್ರಕಾರ ಕಟ್ಟುಬಿದ್ದವನು.
oblique
ಗುಣವಾಚಕ
ಪದಗುಚ್ಛ
- ಓರೆಯಾದ; ಬಾಗಿದ; ಪ್ರವಣ:
- ಮೇಲಿನ ದಿಕ್ಕಿನಿಂದ ಯಾ ಸಮತಲದಿಂದ ಬಾಗಿದ .
- ನೇರವಾದ ಗೆರೆಯಿಂದ ಯಾ ಹಾದಿಯಿಂದ ಬೇರೆಯಾದ ದಿಕ್ಕು ಹಿಡಿದ.
- ಸುತ್ತು ಬಳಸಿನ; ಪರೋಕ್ಷ ವಿಧಾನದ; ಸುತ್ತಿಬಳಸಿ ಬರುವ; ನೇರವಾಗಿ ವಿಷಯಕ್ಕೆ ಹೋಗದ.
- (ಜ್ಯಾಮಿತಿ) ವಾಲಿದ; ಬಾಗಿದ; ಓರೆಯಾದ; ತಿರ್ಯಕ್:
- (ರೇಖೆ, ಸಮತಲ, ಮೊದಲಾದವುಗಳ ವಿಷಯದಲ್ಲಿ) ಸಮಕೋನದಲ್ಲಿಲ್ಲದ.
- (ಕೋನದ ವಿಷಯದಲ್ಲಿ) ಓರೆ(ಯಾದ); ಲಘು ಯಾ ವಿಶಾಲಕೋನದ.
- (ಶಂಕು, ಉರುಳೆ, ಮೊದಲಾದವುಗಳ ವಿಷಯದಲ್ಲಿ) ಆಧಾರತಲಕ್ಕೆ ಲಂಬವಾಗಿಲ್ಲದ ಅಕ್ಷವುಳ್ಳ.
- ವಾಲಿದ; ಬಾಗಿದ; ತಿರ್ಯಕ್:
- (ಅಂಗರಚನಾಶಾಸ್ತ್ರ) ದೇಹದ ಯಾ ಕೈಕಾಲುಗಳ ಅಕ್ಷಕ್ಕೆ ಸಮಾಂತರವಾಗಿಯಾಗಲಿ ಲಂಬವಾಗಿಯಾಗಲಿ ಇಲ್ಲದಿರುವ.
- (ಸಸ್ಯವಿಜ್ಞಾನ) (ಎಲೆಯ ವಿಷಯದಲ್ಲಿ) ಎರಡು ಪಕ್ಕಗಳೂ ಸಮವಾಗಿಲ್ಲದಿರುವ.
- (ವ್ಯಾಕರಣ) ಪ್ರಥಮಾ ಸಂಬೋಧನ ಭಿನ್ನ ವಿಭಕ್ತಿಯ; ಪ್ರಥಮಾ, ಸಂಬೋಧನ ವಿಭಕ್ತಿಗಳನ್ನು ಬಿಟ್ಟು ಉಳಿದ ವಿಭಕ್ತಿಗಳನ್ನು ಸೂಚಿಸುವ, ತೋರಿಸುವ.
oblique
ನಾಮವಾಚಕ
- ಓರೆಗೆರೆ $(/)$.
- ಓರೆ(ಯಾದ) ಸ್ನಾಯು.
oblique
ಅಕರ್ಮಕ ಕ್ರಿಯಾಪದ
(ಮುಖ್ಯವಾಗಿ ಸೈನ್ಯದ ವಿಷಯದಲ್ಲಿ) (ನೇರವಾದ ಹಾದಿ ಬಿಟ್ಟು) ಓರೆಯಾದ ಯಾ ಬಳಸು ಹಾದಿಯಲ್ಲಿ ಮುಂದುವರಿ, ಸಾಗು.