English-Kannada Nighantu (University of Mysore)
University of Mysore
O
ನಾಮವಾಚಕ
(o ಎಂದೂ ಪ್ರಯೋಗ) (ಬಹುವಚನ Os ಯಾ O’s)
- ಇಂಗ್ಲಿಷ್ ವರ್ಣಮಾಲೆಯ ಹದಿನೈದನೆಯ ಅಕ್ಷರ.
- (o) (ದೂರವಾಣಿ ಸಂಖ್ಯೆ ಮೊದಲಾದ ಸಂಖ್ಯಾಶ್ರೇಣಿಯಲ್ಲಿ, ಮುಖ್ಯವಾಗಿ ಮಾತನಾಡುವಾಗ) ಸೊನ್ನೆ; ಶೂನ್ಯ.
- O ವರ್ಗದ ರಕ್ತ; ABO ವ್ಯವಸ್ಥೆಯ ಮಾನವರಕ್ತದ ಗುಂಪುಗಳಲ್ಲೊಂದು.
- ‘o’ ಆಕಾರದ ಗುರುತು.
- ವರ್ತುಲ; ವೃತ್ತ; ಮುಖ್ಯವಾಗಿ ಗುಂಡಾದ ಆಕಾರ.
O
ಸಂಕ್ಷಿಪ್ತ
(O. ಎಂದೂ ಪ್ರಯೋಗ) Old.
O
ಸಂಕೇತ
(ರಸಾಯನವಿಜ್ಞಾನ) ಆಕ್ಸಿಜನ್ ಧಾತು.
O
ಭಾವಸೂಚಕ ಅವ್ಯಯ
- 1oh ಎಂಬ ಪದದ ರೂಪಾಂತರ.
- (ಸಂಬೋಧನೆಯ ಹಿಂದೆ ಅಲ್ಪವಿರಾಮ ಚಿಹ್ನೆಯಿಂದ ಪ್ರತ್ಯೇಕಿಸದಾಗ o ರೂಪ, ಪ್ರತ್ಯೇಕಿಸಿದಾಗ oh ರೂಪ) ಓ! ಓಹೋ! ಅಯ್ಯೋ! ಅಬ್ಬ! O dear me! ಅಯ್ಯೋ ನನ್ನ ಪಾಡೇ, ಗೋಳೇ! O for a breathing-space! ಓ, ಉಸಿರಾಡಲು ಅವಕಾಶ ಸಿಕ್ಕಿದರೆ! Oh, what a lie ಅಬ್ಬ, ಎಂಥ ಸುಳ್ಳು! Oh, is that so? ಓಹೋ! ಹಾಗೋ? O God! ಅಯ್ಯೋ ದೇವರೆ!
-
- (O yes!) ಓ, ಆಗಲಿ! ಓಹೋ ಆಗಲಿ!
- = oyes.
O level
ನಾಮವಾಚಕ
(ಬ್ರಿಟಿಷ್ ಪ್ರಯೋಗ) (ಚರಿತ್ರೆ) ಸಾಮಾನ್ಯ ಮಟ್ಟ (ordinary levelನ ಸಂಕ್ಷಿಪ್ತ).
O’
ಪೂರ್ವಪ್ರತ್ಯಯ
ಐರಿಷ್ ಕುಟುಂಬನಾಮಗಳ ಹಿಂದೆ ಸೇರಿಸುವ ಪೂರ್ವಪ್ರತ್ಯಯ: O’ Connor.
O’
ಉಪಸರ್ಗ
ಕೆಲವು ಪದಗುಚ್ಛಗಳಲ್ಲಿ of, on ಗಳ ಸಂಕ್ಷಿಪ್ತ: o’clock, will-o’-the-wisp, cup o’ tea.
o’clock
ಕ್ರಿಯಾವಿಶೇಷಣ
(ಗಂಟೆಯನ್ನು ಹೇಳುವಾಗ) ಗಡಿಯಾರದಂತೆ; ಗಡಿಯಾರದಲ್ಲಿ; ಗಡಿಯಾರದ ಪ್ರಕಾರ: 6 o’clock (ಗಡಿಯಾರ ದಲ್ಲಿ) 6 ಗಂಟೆ.
o’er
ಕ್ರಿಯಾವಿಶೇಷಣ
(ಕಾವ್ಯಪ್ರಯೋಗ) = 1over.
o’er
ಉಪಸರ್ಗ
(ಕಾವ್ಯಪ್ರಯೋಗ) = 2over.
o-ring
ನಾಮವಾಚಕ
$\bigcirc$–ಬಳೆ; $\bigcirc$–ಆಕಾರದ, ವೃತ್ತಾಕಾರದ ಅಡ್ಡಕೊಯ್ತವುಳ್ಳ ಗ್ಯಾಸ್ಕೆಟ್ಟು.
O. & M.
ಸಂಕ್ಷಿಪ್ತ
organization and methods.
o.d.
ಸಂಕ್ಷಿಪ್ತ
outer diameter.
o.h.c
ಸಂಕ್ಷಿಪ್ತ
overhead camshaft.
o.h.v
ಸಂಕ್ಷಿಪ್ತ
overhead valve.
o.n.o
ಸಂಕ್ಷಿಪ್ತ
(ಬ್ರಿಟಿಷ್ ಪ್ರಯೋಗ) or near offer.
o.p.
ಸಂಕ್ಷಿಪ್ತ
- out of print.
- over proof.
oaf
ನಾಮವಾಚಕ
- ದಡ್ಡ (ವ್ಯಕ್ತಿ); ಹೆಡ್ಡ.
- ಕುರೂಪಿಯಾದ ಧಾಂಡಿಗ.
oafish
ಗುಣವಾಚಕ
ದಡ್ಡತನದ.
oafishly
ಕ್ರಿಯಾವಿಶೇಷಣ
ದಡ್ಡತನದಿಂದ.