भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

Pacific Time

ನಾಮವಾಚಕ

ಪೆಸಿಹಿಕ್‍ ಕಾಲ(ಮಾನ); ಕೆನಡಾ ಮತ್ತು ಅಮೆರಿಕದ ಪೆಸಿಹಿಕ್‍ ಪ್ರದೇಶದಲ್ಲಿ ಬಳಸುವ ಪ್ರಮಾಣಕ ಕಾಲ(ಮಾನ).

pacifically

ಕ್ರಿಯಾವಿಶೇಷಣ

 • ಶಾಂತಿಕರವಾಗಿ.
 • ಶಾಂತಿಯಿಂದ; ಶಾಂತರೀತಿಯಲ್ಲಿ.
 • (ಪ್ರ)ಶಾಂತವಾಗಿ.

pacification

ನಾಮವಾಚಕ

 • ಉಪಶಮನ; ಶಾಂತಗೊಳಿಸುವುದು; ಸಮಾಧಾನಗೊಳಿಸುವಿಕೆ; ಸಾಂತ್ವನ.
 • ಶಾಂತಿ ಸಂಧಾನ; ಶಾಂತಿಯ ಒಪ್ಪಂದ.

pacificatory

ಗುಣವಾಚಕ

 • ಶಾಂತಿಕರವಾದ; ಶಾಂತಿಕಾರಿ.
 • ಶಾಂತಿಸ್ಥಾಪಕ; ಶಾಂತಿಸೂಚಕ.

pacifier

ನಾಮವಾಚಕ

 • ಶಾಮಕ; ಉಪಶಾಮಕ; ಉಪಶಮನಕಾರಕ; ಶಮನಕಾರಿ; ಉಪಶಮನ ಮಾಡುವ ವ್ಯಕ್ತಿ ಯಾ ವಸ್ತು.
 • (ಅಮೆರಿಕನ್‍ ಪ್ರಯೋಗ) ಚೀಪಲು ಮಕ್ಕಳ ಬಾಯಲ್ಲಿ ಇಡುವ, ರಬ್ಬರು ಮೊದಲಾದವುಗಳಿಂದ ಮಾಡಿದ, ಮೊಲೆತೊಟ್ಟಿನಾಕಾರದ ವಸ್ತು; ರಬ್ಬರ್‍ ಯಾ ಪ್ಲಾಸ್ಟಿಕ್‍ – ಚೂಚುಕ. Figure: pacifier-2

pacifism

ನಾಮವಾಚಕ

ಶಾಂತಿ ಧೋರಣೆ; ಶಾಂತಿ ವಾದ; ಯುದ್ಧಗಳಿಲ್ಲದಂತೆ ಮಾಡುವುದು ಅಪೇಕ್ಷಣೀಯ, ಸಾಧ್ಯ ಎಂಬ ವಾದ.

pacifist

ನಾಮವಾಚಕ

ಶಾಂತಿವಾದಿ; ಶಾಂತಿಪ್ರಿಯ.

pacifist

ಗುಣವಾಚಕ

ಶಾಂತಿವಾದದ ಯಾ ಅದಕ್ಕೆ ಸಂಬಂಧಿಸಿದ; ಯುದ್ಧಗಳಿಲ್ಲದಂತೆ ಮಾಡುವುದು ಅಪೇಕ್ಷಣೀಯ, ಸಾಧ್ಯ ಎಂಬ ವಾದದ ಯಾ ಅದಕ್ಕೆ ಸಂಬಂಧಿಸಿದ.

pacify

ಸಕರ್ಮಕ ಕ್ರಿಯಾಪದ

 • (ಮನುಷ್ಯ, ಕೋಪ, ಉದ್ರೇಕ, ಮೊದಲಾದವನ್ನು) ಸಮಾಧಾನ ಮಾಡು; ಸಾಂತ್ವನಗೊಳಿಸು; ಶಾಂತಗೊಳಿಸು; ಉಪಶಮನಮಾಡು.
 • (ದೇಶ ಮೊದಲಾದವನ್ನು) ಸಮಾಧಾನ ಸ್ಥಿತಿಗೆ, ಶಾಂತ ಪರಿಸ್ಥಿತಿಗೆ – ತರು.

pack

ನಾಮವಾಚಕ

 • (ಹೊತ್ತುಕೊಂಡು ಹೋಗಲು ಅನುಕೂಲಿಸುವಂತೆ ಸುತ್ತಿದ ಯಾ ಒಟ್ಟಿಗೆ ಕಟ್ಟಿದ ವಸ್ತುಗಳ) ಕಟ್ಟು; ಹೇರು; ಕಂತೆ; ಪಿಂಡಿ.
 • = $^1$backpack.
 • ಪಿಂಡಿ; ಕಟ್ಟು; ಪ್ಯಾಕು; ಬಳಕೆಗೆಂದು ಯಾ ಒಟ್ಟಿಗೆ ಬಿಸಾಡಲು, ಕಟ್ಟಿದ ವಸ್ತುಗಳ ತಂಡ.
 • (ಸಾಮಾನ್ಯವಾಗಿ ಹೀನಾರ್ಥಕ ಪ್ರಯೋಗ) (ಒಂದೇ ತರಹದ ವಸ್ತುಗಳ ಯಾ ವ್ಯಕ್ತಿಗಳ) ತಂಡ; ಗುಂಪು; ಸಮೂಹ; ಒಟ್ಟಿಲು; ಕಂತೆ: pack of fools ಮೂರ್ಖರ ತಂಡ. a pack of lies ಸುಳ್ಳಿನ ಕಂತೆ. a pack of thieves ಮೂರ್ಖರ ಗುಂಪು.
 • (ಬ್ರಿಟಿಷ್‍ ಪ್ರಯೋಗ) ಇಸ್ಪೀಟು ಪ್ಯಾಕು; ಇಸ್ಪೀಟ್‍ ಎಲೆಗಳ ಕಟ್ಟು.
  1. (ಮುಖ್ಯವಾಗಿ ನರಿ ಬೇಟೆಗಾಗಿ ಒಟ್ಟಾಗಿಟ್ಟಿರುವ) ಬೇಟೆ ನಾಯಿಗಳ ತಂಡ.
  2. (ಸ್ವಾಭಾವಿಕವಾಗಿ ಒಟ್ಟಿಗಿರುವ) ಮೃಗಗಳ (ಮುಖ್ಯವಾಗಿ ಒಟ್ಟಿಗೆ ಬೇಟೆಯಾಡುತ್ತಿರುವ ತೋಳಗಳ) ಹಿಂಡು.
  3. ಹಕ್ಕಿಗಳ ಗುಂಪು, ತಂಡ.
 • ಪ್ಯಾಕ್‍; ಬಾಲ ಚಮೂಗಳ ಯಾ ಗರ್ಲ್‍ ಗೈಡುಗಳ ವ್ಯವಸ್ಥಿತ ತಂಡ.
 • (ರಗ್ಬಿ ಕಾಲ್ಚೆಂಡಾಟ) ಒಂದು ಪಕ್ಷದ ಮುಂಭಾಗದ ಯಾ ಮುಂಚೂಣಿಯ ಆಟಗಾರರು.
  1. ಚರ್ಮಕ್ಕೆ ಹಚ್ಚುವ ಮುಲಾಮು ಯಾ ಸೌಂದರ್ಯವರ್ಧಕ.
  2. ಗಾಯ ಮೊದಲಾದವುಗಳಿಗೆ ಅಂಟಿಸುವ, ಕಟ್ಟುವ, ತಣ್ಣನೆಯ ಯಾ ಬಿಸಿಯಾದ ಮೆತ್ತೆ.
 • = pack ice.
 • ಶೇಖರಣೆ; ಜಮಾವಣೆ; ಒಂದು ಋತು, ಗೊತ್ತಾದ ಕಾಲ, ಮೊದಲಾದವುಗಳಲ್ಲಿ ಶೇಖರಿಸಿ ಕಟ್ಟಿಟ್ಟ ಮೀನು, ಹಣ್ಣು, ಮೊದಲಾದವುಗಳ ಮೊತ್ತ: last year’s salmon pack ಹೋದ ವರ್ಷದ ಸ್ಯಾಮನ್‍ ಮೀನಿನ ಶೇಖರಣೆ.
 • (ವೈದ್ಯಶಾಸ್ತ್ರ)
  1. (ದೇಹದ ಯಾವುದೇ ಭಾಗದ ಶಾಖ ಕಡಮೆ ಮಾಡಲು ಯಾ ಹೆಚ್ಚಿಸಲು ಅದರ ಸುತ್ತ ಮಂಜುಗಡ್ಡೆಯನ್ನುಳ್ಳ ಯಾ ಬಿಸಿ ನೀರು ಮೊದಲಾದವುಗಳಲ್ಲಿ ಅದ್ದಿದ) ಪಟ್ಟಿ, ಹಾಳೆ, ಮೊದಲಾದವುಗಳನ್ನು ಸುತ್ತುವುದು.
  2. ಹಾಗೆ ಸುತ್ತಿದ, ಕಟ್ಟಿದ – ಪಟ್ಟಿ, ಹಾಳೆ, ಮೊದಲಾದವು.
 • ಪಿಂಡಿ; ಕಂಟಲೆ; ಮೂಟೆ; ಭಾಂಗಿ; ಪುಡಿಕೆ; (ಮುಖ್ಯವಾಗಿ) ತಿರುಗು ವ್ಯಾಪಾರಿಯ ಯಾ ಸೈನಿಕನ ಮೂಟೆ.
 • ಪ್ಯಾಕ್‍; ಪಿಂಡಿ; ಹಲವು ಸರಕುಗಳ ಒಂದು ಅಳತೆ.
 • ವ್ಯವಸ್ಥೆಗೊಳಿಸಿದ U – pack ದೋಣಿಗಳ ತಂಡ.
 • ನೀರ್ಗಲ್ಲು ಪ್ರದೇಶ; ಸಮುದ್ರದಲ್ಲಿ ದೊಡ್ಡ ನೀರ್ಗಲ್ಲಿನ ಖಂಡಗಳು ತೇಲುತ್ತಿರುವ ವಿಶಾಲ ಭಾಗ.
 • (ವಾಣಿಜ್ಯ) ಪ್ಯಾಕಿಂಗ್‍; ಮಾರುಕಟ್ಟೆಗೆ ಕಳುಹಿಸಲು ಸಾಮಾನುಗಳನ್ನು ಪ್ಯಾಕ್‍ ಮಾಡುವ, ಪಿಂಡಿಕಟ್ಟುವ ರೀತಿ: vacuum pack ನಿರ್ವಾತ ಪ್ಯಾಕಿಂಗ್‍ ವಿಧಾನ; ವಾಯುಶೂನ್ಯ ಸ್ಥಿತಿಯಲ್ಲಿ ಪಿಂಡಿಕಟ್ಟುವ ವಿಧಾನ.

pack

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಪದಗುಚ್ಛ

  1. ಬಟ್ಟೆ ಮೊದಲಾದವನ್ನು (ಚೀಲ, ಪೆಟ್ಟಿಗೆ, ಮೊದಲಾದವುಗಳೊಳಕ್ಕೆ) ಸೇರಿಸು, ತುಂಬು.
  2. (ಮುಖ್ಯವಾಗಿ ಪ್ರಯಾಣ ಮಾಡಲು) (ಸಾಮಾನು ಮೊದಲಾದವನ್ನು) ಚೀಲ ಯಾ ಸೂಟ್‍ಕೇಸ್‍ನಲ್ಲಿ ತುಂಬು, ಇಡು.
 • ಅಡಕು; ಅಡಚು; ಒತ್ತೊತ್ತಾಗಿ ಇಡು: as neat and close as nature packs her blossoms ನಿಸರ್ಗವು ಗೊಂಚಲಿನಲ್ಲಿ ಹೂಗಳನ್ನು ಅಚ್ಚುಕಟ್ಟಾಗಿ, ಒತ್ತೊತ್ತಾಗಿ ಅಡಕುವಂತೆ. packed a lot into a few hours ಕೆಲವೇ ಗಂಟೆಗಳನ್ನು ಬಹಳ ಕಾರ್ಯಕ್ರಮಗಳಿಂದ ತುಂಬಿದ. passengers packed like sardines ಸಾರ್ಡೀನ್‍ ಮೀನುಗಳಂತೆ ಅಡಕಿದ ಪ್ರಯಾಣಿಕರು.
 • (ಸಭಾಂಗಣ, ರಂಗಮಂದಿರ, ಮೊದಲಾದವನ್ನು) ಶ್ರೋತೃಗಳಿಂದ ಯಾ ಪ್ರೇಕ್ಷಕರಿಂದ – ಗಿಡಿ; ಕಿಕ್ಕಿರಿಯುವಂತೆ ತುಂಬು: hall packed to capacity ಸಂಪೂರ್ಣವಾಗಿ – ಇಡಿಕಿರಿದ, ಕಿಕ್ಕಿರಿದು ತುಂಬಿಹೋದ ಸಭಾಮಂದಿರ. the restaurant was packed ರೆಸ್ಟೊರಾಂಟು ಕಿಕ್ಕಿರಿದು ತುಂಬಿತ್ತು.
 • (ಕರ್ಮಣಿಪ್ರಯೋಗದಲ್ಲಿ) ತುಂಬಿರು; ವ್ಯಾಪಕವಾಗಿ ಹೊಂದಿರು, ಒಳಗೊಂಡಿರು: the book is packed with information ಪುಸ್ತಕವು ಮಾಹಿತಿಗಳಿಂದ ತುಂಬಿದೆ.
 • (ಪದಾರ್ಥ ಮೊದಲಾದವನ್ನು) ಸುತ್ತಲೂ ಬಿಗಿಯಾಗಿ ಕಟ್ಟಿನಿಂದ, ಪಟ್ಟಿಯಿಂದ, ಆವರಣದಿಂದ, ಹೊದಿಕೆಯಿಂದ – ಕಟ್ಟು, ಮುಚ್ಚು, ಹೊದಿಸು: pack the trees so that they may grow well ಮರಗಳು ಚೆನ್ನಾಗಿ ಬೆಳೆಯುವಂತೆ (ಬೇರು ಮೊದಲಾದವನ್ನು ಮುಚ್ಚಿ) ಅವುಗಳಿಗೆ ಪಟ್ಟಿ ಹಾಕಿ ಬಿಗಿ.
 • (ಆಡುಮಾತು)
  1. (ಬಂದೂಕು ಮೊದಲಾದವನ್ನು) ಕೊಂಡೊಯ್ಯು; ಹೊತ್ತುಕೊಂಡು ಹೋಗು.
  2. ಕುಶಲವಾಗಿ ಯಾ ಬಲವಾಗಿ (ಡಿಕ್ಕಿ, ಗುದ್ದು) ಕೊಡುವ ಶಕ್ತಿಯಿರು.
 • (ಮಾಂಸ, ಹಣ್ಣು, ಮೊದಲಾದವನ್ನು ಹೆಚ್ಚು ಕಾಲ ಕೆಡದಂತಿಡಲು) ಸಂಸ್ಕರಿಸಿಡು; ತಕ್ಕಂತೆ ಸಂಸ್ಕರಿಸಿ ಡಬ್ಬ ಮೊದಲಾದವುಗಳಲ್ಲಿ ತುಂಬಿಡು.
 • (ಬೇಟೆ ನಾಯಿಗಳನ್ನು ಯಾ ರಗ್ಬಿ ಕಾಲ್ಚೆಂಡಾಟದ ಮುಂಚೂಣಿಯವರನ್ನು) ಗುಂಪಾಗಿಸು; ತಂಡಗೂಡಿಸು.
 • (ಇಸ್ಪೀಟು ಎಲೆಗಳನ್ನು) ಕಟ್ಟುಗೂಡಿಸು.
 • (ವೈದ್ಯಶಾಸ್ತ್ರ) (ಅಂಗ ಮೊದಲಾದವಕ್ಕೆ ಒದ್ದೆ ಬಟ್ಟೆ ಮೊದಲಾದವನ್ನು) ಸುತ್ತು; ಕಟ್ಟು; ಪಟ್ಟಿ ಹಾಕು; ಹೊದೆಸು.
 • (ಮುಷ್ಟಿಕಾಳಗ ಅಶಿಷ್ಟ) (ಬಲವಾದ, ಸರಿಯಾದ ಹೊಡೆತ) ಕೊಡು; ಹಾಕು; ಮುಷ್ಟಿಯಿಂದ ಗುದ್ದು: he packs a better punch than his rival ತನ್ನ ಎದುರಾಳಿಗಿಂತ ಅವನು ಹೆಚ್ಚು ಬಲವಾದ ಗುದ್ದು ಕೊಡಬಲ್ಲ.
 • (ಸ್ಥಳ, ಪಾತ್ರೆ, ಮೊದಲಾದವಕ್ಕೆ) ಬಲವಾಗಿ – ಗಿಡಿ, ತುರುಕು, ಒತ್ತಿ ತುಂಬು: pack a trunk ಪೆಟ್ಟಿಗೆಯೊಳಕ್ಕೆ ತುರುಕಿ ತುಂಬು.
 • (ಪ್ರಾಣಿಯ ಮೇಲೆ) ಹೊರೆ ಹೇರು.

pack

ಸಕರ್ಮಕ ಕ್ರಿಯಾಪದ

ತನ್ನ ಪರವಾಗಿ ಯಾ ತನಗೆ ಅನುಕೂಲವಾಗಿ ತೀರ್ಮಾನ ಪಡೆಯಲಾಗುವಂತೆ

 • ನ್ಯಾಯದರ್ಶಿ ಮಂಡಲಿ ಮೊದಲಾದವನ್ನು ಆರಿಸು, ಅವುಗಳ ಸದಸ್ಯರನ್ನು ಆಯ್ಕೆ ಮಾಡು.
 • (ಪಕ್ಷ, ಸಭೆ, ಮೊದಲಾದವನ್ನು) ತನ್ನ ಪರವಾಗಿರುವ ಸದಸ್ಯರಿಂದ ತುಂಬು; ತನ್ನ ಬೆಂಬಲಿಗರಿಂದ ಭರ್ತಿ ಮಾಡು.

pack ice

ನಾಮವಾಚಕ

ಸಮುದ್ರದ ವಿಶಾಲ ಪ್ರದೇಶದಲ್ಲಿ ಒತ್ತಾಗಿ ಹರಡಿ ತೇಲುತ್ತಿರುವ ಮಂಜುಗಡ್ಡೆಯ ತುಂಡುಗಳು, ಹಿಮಖಂಡಗಳು.

pack-animal

ನಾಮವಾಚಕ

ಹೇರು ಪ್ರಾಣಿ; ಹೊರೆಗಳನ್ನು, ಕಟ್ಟುಗಳನ್ನು ಹೊರುವ ಪ್ರಾಣಿ.

pack-drill

ನಾಮವಾಚಕ

ಮೂಟೆ ಕವಾಯಿತು; ಸಾಮಾನು ಸರಂಜಾಮುಗಳನ್ನೆಲ್ಲಾ ಹೊತ್ತುಕೊಂಡು ಕ್ರಮಬದ್ಧವಾಗಿ ಹಿಂದಕ್ಕೆ ಮುಂದಕ್ಕೆ ನಡೆದಾಡುವ ಒಂದು ಬಗೆಯ ಮಿಲಿಟರಿ ಶಿಕ್ಷೆ.

pack-rat

ನಾಮವಾಚಕ

(ಅಮೆರಿಕನ್‍ ಪ್ರಯೋಗ) ಆಹಾರ ಸಾಮಗ್ರಿಗಳನ್ನು ಶೇಖರಿಸಿಟ್ಟುಕೊಳ್ಳುವ ಒಂದು ದೊಡ್ಡ ದಂಶಕ.

pack-saddle

ನಾಮವಾಚಕ

ಸಬರ; (ಹೊರೆ ಹೇರಲು ಅನುಕೂಲವಾದ) ಹಲ್ಲಣ, ಜೀನು.

packable

ಗುಣವಾಚಕ

ಪ್ಯಾಕ್‍ ಮಾಡಬಹುದಾದ; ತುಂಬಬಹುದಾದ; ಚೀಲ, ಮೂಟೆ, ಪಿಂಡಿ, ಮೊದಲಾದವುಗಳಾಗಿ ಕಟ್ಟಬಹುದಾದ.

package

ನಾಮವಾಚಕ

 • (ಸಾಮಾನುಗಳ) ಕಟ್ಟು; ಕಂತೆ; ಪಿಂಡಿ; ಮೂಟೆ; ಗಂಟು; ಭಾಂಗಿ.
 • ಸಾಮಾನು ತುಂಬುವ ಪೆಟ್ಟಿಗೆ, ಭಾಂಗಿ. ಮೊದಲಾದವು.
 • = package deal.
 • (ಕಂಪ್ಯೂಟರ್‍) ಪ್ಯಾಕೇಜ್‍; ಗಿರಾಕಿಯ ಆದೇಶಕ್ಕೆ ತಕ್ಕಂತೆ ಮಾಡಿರದೆ, ನಾನಾ ಉದ್ದೇಶಗಳಿಗಾಗಿ ಬಳಸಬಹುದಾದ ಮಿದುಸರಕು (software).
 • (ಆಡುಮಾತು) = package holiday.

package deal

ನಾಮವಾಚಕ

ಸಾರಾಸಗಟು ವ್ಯವಹಾರ; ಒಟ್ಟಾರೆ ವ್ಯವಹಾರ; ಅನುಕೂಲ ಮತ್ತು ಅನನುಕೂಲ ಅಂಶಗಳೆರಡೂ ಸೇರಿದಂತೆ ಒಟ್ಟಿನ ಮೇಲೆ ಒಪ್ಪಿಕೊಂಡ, ಒಟ್ಟಾರೆ ಸಮ್ಮತಿಸಿದ ಬಾಬತ್ತುಗಳು ಯಾ ಸಲಹೆಗಳು.

Search Dictionaries

Loading Results

Follow Us :   
  Download Bharatavani App
  Bharatavani Windows App