भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

pyrophotography

ನಾಮವಾಚಕ

ಉಷ್ಣಛಾಯಾಚಿತ್ರೀಕರಣ; ಉಷ್ಣ ಮತ್ತು ಛಾಯಾ ಚಿತ್ರೀಕರಣಗಳೆರಡನ್ನೂ ಉಪಯೋಗಿಸಿ ಚಿತ್ರವನ್ನು ಮೂಡಿಸುವ ವಿಧಾನ.

pyrosis

ನಾಮವಾಚಕ

(ವೈದ್ಯಶಾಸ್ತ್ರ) = heart-burn.

pyrotechnic

ಗುಣವಾಚಕ

  • ಬಾಣ ಬಿರುಸಿನ ಯಾ ಬಾಣಬಿರುಸಿನಂಥ: pyrotechnic display ಬಾಣಬಿರುಸಿನ ಪ್ರದರ್ಶನ.
  • (ರೂಪಕವಾಗಿ) (ಬುದ್ಧಿಚಾತುರ್ಯ ಮೊದಲಾದವುಗಳ ವಿಷಯದಲ್ಲಿ) ಉಜ್ಜ್ವಲ; ಬೆರಗುಗೊಳಿಸುವ; ಭಾವೋದ್ವೇಗಪೂರ್ಣ.

pyrotechnical

ಗುಣವಾಚಕ

= pyrotechnic\((1)\).

pyrotechnically

ಕ್ರಿಯಾವಿಶೇಷಣ

ಬಾಣ ಬಿರುಸಿನಂತೆ.

pyrotechnics

ನಾಮವಾಚಕ

(ಬಹುವಚನ)

  • ಬಾಣಬಿರುಸು ತಯಾರಿಸುವ ಕಲೆ.
  • ಬಾಣ ಬಿರುಸಿನ ಪ್ರದರ್ಶನ.
  • (ರೂಪಕವಾಗಿ) ಬುದ್ಧಿ ಚಾತುರ್ಯದ ಪ್ರದರ್ಶನ.

pyrotechnist

ನಾಮವಾಚಕ

ಬಾಣ ಬಿರುಸುಗಾರ; ಬಾಣಬಿರುಸು ತಯಾರಿಸುವವನು ಯಾ ಬಾಣಬಿರುಸನ್ನು ಪ್ರದರ್ಶಿಸುವವನು.

pyrotechny

ನಾಮವಾಚಕ

= pyrotechnics(1 & 2).

pyroxene

ನಾಮವಾಚಕ

ಪೈರಾಕ್ಸೀನ್‍; ಕ್ಯಾಲ್ಸಿಯಮ್‍, ಮೆಗ್ನೀಸಿಯಮ್‍ ಮತ್ತು ಕಬ್ಬಿಣದ ಸಿಲಿಕೇಟುಗಳನ್ನೊಳಗೊಂಡ ಒಂದು ಖನಿಜ.

pyroxylin

ನಾಮವಾಚಕ

(ರಸಾಯನವಿಜ್ಞಾನ) ಪೈರಾಕ್ಸಿಲಿನ್‍; ಸೆಲ್ಯುಲೋಸನ್ನು ನೈಟ್ರಿಕ್‍ ಆಮ್ಲದಿಂದ ಎಸ್ಟರೀಕರಿಸಿ ತಯಾರಿಸಿದ, ಸಾಮಾನ್ಯವಾಗಿ ಶೇಕಡ $12.5$ಕ್ಕಿಂತ ಕಡಮೆ ನೈಟ್ರೋಜನ್‍ ಉಳ್ಳ, ಸೆಲ್ಯುಲೋಸ್‍ ನೈಟ್ರೇಟು.

pyrrhic

ಗುಣವಾಚಕ

  • (ಪುರಾತನ ಗ್ರೀಕರ ಸಮರನೃತ್ಯವಾದ) ಪಿರಿಕ್‍ ನೃತ್ಯದ ಯಾ ಅದರ ಅಂಗವಾದ.
  • (ಛಂದಸ್ಸು) ಪಿರಿಕ್‍; ಎರಡು ಲಘುಗಳು ಯಾ ಆಘಾತರಹಿತ ಮಾತ್ರೆಗಳುಳ್ಳ ಗಣದ.

pyrrhic

ನಾಮವಾಚಕ

  • (ಪುರಾತನ ಗ್ರೀಕರ ಸಮರನೃತ್ಯವಾದ) ಪಿರಿಕ್‍ ನೃತ್ಯ.
  • (ಛಂದಸ್ಸು) ಪಿರಿಕ್‍ ಪಾದ.

pyrrhic

ಗುಣವಾಚಕ

(ವಿಜಯದ ವಿಷಯದಲ್ಲಿ) (ಕ್ರಿಸ್ತಪೂರ್ವ 279ರಲ್ಲಿ ಆಸ್ಕ್ಯುಲಮ್‍ ರಣರಂಗದಲ್ಲಿ ಎಪಿರಸ್‍ ರಾಜ್ಯದ ಅರಸನಾದ ಪಿರಸ್‍ ಎಂಬುವನು ರೋಮನರ ಮೇಲೆ ಪಡೆದ ವಿಜಯದಂಥ) ಅಪಾರ ಕಷ್ಟನಷ್ಟಗಳನ್ನನುಭವಿಸಿ ಪಡೆದ, ಆದರೆ ವಿಜಯಿಗೆ ಪಟ್ಟ ಕಷ್ಟಕ್ಕೆ ತಕ್ಕ ಪ್ರಯೋಜನ ದೊರಕದ.

Pyrrhonian

ಗುಣವಾಚಕ

ಪಿರೋ ಎಂಬ ದಾರ್ಶನಿಕನ ಯಾ ಪಿರೋ ಸಿದ್ಧಾಂತದ.

Pyrrhonian

ನಾಮವಾಚಕ

= Pyrrhonist.

Pyrrhonic

ಗುಣವಾಚಕ

= 1Pyrrhonian.

Pyrrhonism

ನಾಮವಾಚಕ

  • (ಸುಮಾರು ಕ್ರಿಸ್ತಪೂರ್ವ 300ರಲ್ಲಿ ಎಲಿಸ್‍ ನಗರದಲ್ಲಿ ವಾಸಿಸುತ್ತಿದ್ದ ಪಿರೋ ಎಂಬ ದಾರ್ಶನಿಕನು ಪ್ರತಿಪಾದಿಸಿದ) ಪಿರೋಸಿದ್ಧಾಂತ; ನಿಷ್ಕೃಷ್ಟ ಜ್ಞಾನವು ಅಲಭ್ಯ, ಎಲ್ಲ ಬಗೆಯ ಪ್ರತ್ಯಕ್ಷಾನುಭವವೂ ಪ್ರಾಮಾಣ್ಯದ ದೃಷ್ಟಿಯಿಂದ ಸಂದೇಹಾಸ್ಪದವಾದದ್ದು, ಆದ್ದರಿಂದ ಪ್ರಾಜ್ಞನಾದವನಿಗೆ ಜೀವನದ ಬಾಹ್ಯಸ್ಥಿತಿಗತಿಗಳು ಅಮುಖ್ಯವಾದವು, ಈ ಕಾರಣದಿಂದ ವಿವೇಕಿಯಾದ ವ್ಯಕ್ತಿಯು ಸದಾ ಮನಸ್ಸಿನ ಪ್ರಶಾಂತತೆಯನ್ನು ಉಳಿಸಿಕೊಳ್ಳಬೇಕು ಎಂಬ ಸಿದ್ಧಾಂತ.
  • ಸಂದೇಹವಾದ; ತಾತ್ತ್ವಿಕ ಸಂದೇಹ.

Pyrrhonist

ನಾಮವಾಚಕ

ಪಿರೋ ಎಂಬ ದಾರ್ಶನಿಕನ ಅನುಯಾಯಿ; ಪಿರೋ ಪಂಥದವನು.

pyrus

ನಾಮವಾಚಕ

ಪೇರ್‍ ಮತ್ತು ಸೇಬುಗಳೂ ಸೇರಿದಂತೆ ಹಲವು ಬಗೆಯ ಪೊದೆಗಿಡಗಳನ್ನೂ ಒಳಗೊಂಡ, ಗುಲಾಬಿ ವರ್ಗಕ್ಕೆ ಸೇರಿದ, ಸಸ್ಯ ಯಾ ವೃಕ್ಷಜಾತಿ, ಮುಖ್ಯವಾಗಿ ಕಡುಗೆಂಪು ಹೂವು ಬಿಡುವ ಜಪಾನಿನ ಗಿಡ.

pyruvate

ನಾಮವಾಚಕ

(ರಸಾಯನವಿಜ್ಞಾನ) ಪೈರೂವೇಟ್‍; ಪೈರೂವಿಕ್‍ ಆಮ್ಲದ ಯಾವುದೇ ಲವಣ ಯಾ ಎಸ್ಟರು.

Search Dictionaries

Loading Results

Follow Us :   
  Download Bharatavani App
  Bharatavani Windows App