भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

pyruvic acid

ನಾಮವಾಚಕ

ಪೈರೂವಿಕ್‍ ಆಮ್ಲ; ಕಾರ್ಬೊಹೈಡ್ರೇಟುಗಳ ಉಪಾಪಚಯದಲ್ಲಿ ಮಧ್ಯಂತರ ಉತ್ಪನ್ನವಾಗಿ ಕಾಣಿಸಿಕೊಳ್ಳುವ ಮೂರು ಕಾರ್ಬನ್‍ ಪರಮಾಣುಗಳಿರುವ ಕೀಟೊ ಆಮ್ಲ, ${\rm C}_3{\rm H}_4{\rm O}_3$.

Pythagoras’ theorem

ನಾಮವಾಚಕ

ಪೈತ್ಯಾಗರಸ್‍ ಪ್ರಮೇಯ; ಲಂಬಕೋನ ತ್ರಿಭುಜದ ವಿಕರ್ಣದ ಮೇಲಿನ ಚದರದ ವಿಸ್ತೀರ್ಣವು ಉಳಿದೆರಡು ಭುಜಗಳ ಮೇಲಿನ ಚದರಗಳ ಮೊತ್ತಕ್ಕೆ ಸಮ ಎಂಬ ಜ್ಯಾಮಿತೀಯ ಪ್ರಮೇಯ.

Pythagorean

ನಾಮವಾಚಕ

ಪೈತ್ಯಾಗರಸ್‍ ಪಂಥದವನು; ಕ್ರಿಸ್ತಪೂರ್ವ 6ನೆಯ ಶತಮಾನದಲ್ಲಿ ಸ್ವಾಮೋಸ್‍ ದ್ವೀಪದಲ್ಲಿದ್ದ, ದೇಹಾಂತರಣ ಹಾಗೂ ಪುನರ್ಜನ್ಮ ಸಿದ್ಧಾಂತವನ್ನು ಪ್ರತಿಪಾದಿಸಿದನೆಂದು ಹೇಳಲಾದ, ಪೈತ್ಯಾಗರಸ್‍ ಎಂಬ ಗಣಿತ ವಿಜ್ಞಾನಿ ಮತ್ತು ದಾರ್ಶನಿಕನ ಅನುಯಾಯಿ.

Pythagorean

ಗುಣವಾಚಕ

  • ಗ್ರೀಕ್‍ ತತ್ತ್ವಜ್ಞಾನಿ ಪೈತ್ಯಾಗರಸ್‍ನ ಯಾ ಅವನಿಗೆ ಸಂಬಂಧಿಸಿದ.
  • ಪೈತ್ಯಾಗರಸನ ತತ್ತ್ವಕ್ಕೆ, ಮುಖ್ಯವಾಗಿ ಅವನ ಪುನರ್ಜನ್ಮ ಸಿದ್ಧಾಂತಕ್ಕೆ, ಸಂಬಂಧಿಸಿದ.

Pythian

ಗುಣವಾಚಕ

(ಗ್ರೀಕ್‍ ಪುರಾಣ)

  • ಡೆಲಿ ನಗರದ.
  • ಡೆಲಿಯ ದೇವಾಲಯದ ಅಪೋಲೋ ದೇವತೆಯ ಆವೇಶದಿಂದ ಭವಿಷ್ಯ ನುಡಿಯುತ್ತಿದ್ದ ಆ ದೇವತೆಯ ಆರ್ಚಕಿಯ ಯಾ ಆಕೆಯ ಭವಿಷ್ಯ ವಾಣಿಯ.

Pythian

ನಾಮವಾಚಕ

(the ಜೊತೆಗೆ)

  • ಡೆಲಿ ದೇವಾಲಯದ ಅಪೋಲೋ ದೇವತೆ.
  • ಡೆಲಿಯ ಅಪೋಲೋ ದೇವತೆಯ ಅರ್ಚಕಿ.

python

ನಾಮವಾಚಕ

  • (ಗ್ರೀಕ್‍ ಪುರಾಣ) ಡೆಲಿ ನಗರದ ಬಳಿ ಅಪೋಲೋ ದೇವತೆಯಿಂದ ಹತವಾದ ಭಾರಿ ಸರ್ಪ ಯಾ ಪೆಡಂಭೂತ.
  • (ತನ್ನ ತುತ್ತಾದ ಪ್ರಾಣಿಯನ್ನು ನುಚ್ಚುನುರಿ ಮಾಡಿ ಅರಗಿಸಿಕೊಳ್ಳುವ) ಹೆಬ್ಬಾವು; ಅಜಗರ.

python

ನಾಮವಾಚಕ

  • (ಗುರುತು ತಿಳಿದಿರುವ, ಪರಿಚಿತವಾದ) ಭೂತ, ಪ್ರೇತ ಯಾ ದೆವ್ವ.
  • (ಪರಿಚಿತವಾದ) ದೆವ್ವ ಹಿಡಿತ ವ್ಯಕ್ತಿ; ಪಿಶಾಚಗ್ರಸ್ತ ವ್ಯಕ್ತಿ; ಮುಖ್ಯವಾಗಿ ಪ್ರೇತ ಮೊದಲಾದವುಗಳ ಆವೇಶದಿಂದ ಭವಿಷ್ಯ ನುಡಿಯುವ ವ್ಯಕ್ತಿ.

pythoness

ನಾಮವಾಚಕ

  • (ಅಪೋಲೋ ದೇವತೆಯ ಆವೇಶದಿಂದ ಭವಿಷ್ಯ ನುಡಿಯುವ ಶಕ್ತಿ ಇದೆಯೆಂದು ನಂಬಲಾಗಿದ್ದ) ಅಪೋಲೋ ದೇವತೆಯ ಅರ್ಚಕಿ.
  • ಭವಿಷ್ಯಗಾತಿ; ಭವಿಷ್ಯ ನುಡಿಯುವ ಶಕ್ತಿಯಿದೆಯೆಂದು ನಂಬಲಾದ ಯಾವುದೇ ಹೆಂಗಸು; ಕಣಿಗಾರ್ತಿ.

pythonic

ಗುಣವಾಚಕ

  • ಹೆಬ್ಬಾವಿನ ಯಾ ಹೆಬ್ಬಾವಿನಂಥ.
  • ಪೆಡಂಭೂತದಷ್ಟು ಗಾತ್ರದ; ಅಗಾಧಗಾತ್ರದ.

pythonic

ಗುಣವಾಚಕ

ಅಪೋಲೋ ದೇವತೆಯ ಅರ್ಚಕಿಯ ಯಾ ಆಕೆಗೆ ಸಂಬಂಧಿಸಿದ.

pyuria

ನಾಮವಾಚಕ

(ವೈದ್ಯಶಾಸ್ತ್ರ) ಕೀವು ಮೂತ್ರ; ಕೀವುಚ್ಚೆ; ಮೂತ್ರದಲ್ಲಿ ಕೀವು ಇರುವುದು.

pyx

ನಾಮವಾಚಕ

  • (ಚರ್ಚು) ಪ್ರಭುಭೋಜನ ಸಂಸ್ಕಾರದಲ್ಲಿ ಪವಿತ್ರವಾದ ಬ್ರೆಡ್ಡನ್ನು ಇಡುವ ಪಾತ್ರೆ.
  • (ಬ್ರಿಟಿಷ್‍ ಪ್ರಯೋಗ) ನಾಣ್ಯಸಂಪುಟ; (ಬ್ರಿಟನ್ನಿನ ಸರ್ಕಾರೀ ಟಂಕಸಾಲೆಯಾದ ರಾಯಲ್‍ ಮಿಂಟ್‍ನಲ್ಲಿ ತಯಾರಿಸಿದ ಬೆಳ್ಳಿಯ ಹಾಗೂ ಚಿನ್ನದ ನಾಣ್ಯಗಳನ್ನು ಪರೀಕ್ಷಿಸಲು ಪ್ರತಿ ವರ್ಷವೂ ಬರುವ ಗೋಲ್ಡ್‍ಸ್ಮಿತ್‍ ಕಂಪನಿ ಎಂಬ ಅಕ್ಕಸಾಲಿಗರ ಸಂಸ್ಥೆಯಿಂದ ರಚಿತವಾದ ನ್ಯಾಯದರ್ಶಿಗಳ ಮಂಡಲಿಯ ಮುಂದೆ ತೋರಿಸುವ ಸಲುವಾಗಿ) ರಾಯಲ್‍ ಮಿಂಟ್‍ನಲ್ಲಿ ಬೆಳ್ಳಿಯ ಮತ್ತು ಚಿನ್ನದ ನಾಣ್ಯಗಳ ಮಾದರಿಗಳನ್ನು ಇಡುವ ಪೆಟ್ಟಿಗೆ.

pyx

ಸಕರ್ಮಕ ಕ್ರಿಯಾಪದ

(ಬ್ರಿಟಿಷ್‍ ಪ್ರಯೋಗ)

  • ನಾಣ್ಯಸಂಪುಟದಲ್ಲಿ (ನಾಣ್ಯಗಳನ್ನು) ಕಾಪಿಡು.
  • ಮಾದರಿ ನಾಣ್ಯಗಳನ್ನು ತೂಗಿನೋಡಿ ಅವುಗಳ ಗುಣಮಟ್ಟವನ್ನು ಪರೀಕ್ಷಿಸು.

pyxidium

ನಾಮವಾಚಕ

(ಸಸ್ಯವಿಜ್ಞಾನ) ಪಿಕ್ಸಿಡಿಯಮ್‍; ಪೆಟ್ಟಿಗೆಯ ಮುಚ್ಚಳದಂತೆ ಮೇಲ್ಭಾಗ ಎದ್ದು ಬರುವಂಥ ಬೀಜಕೋಶ.

pyxis

ನಾಮವಾಚಕ

  • ಸಣ್ಣ ಪೆಟ್ಟಿಗೆ, ಸಂಪುಟ.
  • = pyxidium.

pzazz

ನಾಮವಾಚಕ

pizazz ಎಂಬ ಪದದ ರೂಪಾಂತರ.

Search Dictionaries

Loading Results

Follow Us :   
  Download Bharatavani App
  Bharatavani Windows App