भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

pad

ನಾಮವಾಚಕ

ಪದಗುಚ್ಛ

(ಪ್ರಾಚೀನ ಪ್ರಯೋಗ ಅಶಿಷ್ಟ)

  • ಮೆಲುನಡಗೆಯ ಶಬ್ದ; ಮೆಲ್ಲಗೆ ನಡೆಯುವಾಗ ಆಗುವ ಸಪ್ಪಳ, ಶಬ್ದ.
  • (ಪ್ರಾಚೀನ ಪ್ರಯೋಗ ಮತ್ತು ಅಶಿಷ್ಟ) ರಸ್ತೆ; ದಾರಿ; ಪಥ.
  • (ಪ್ರಾಚೀನ ಪ್ರಯೋಗ) ನಿಧಾನ ನಡಗೆಯ ಕುದುರೆ.

pad

ನಾಮವಾಚಕ

ಅಳತೆ ಕುಕ್ಕೆ; ಅಳೆಯುವ ಬುಟ್ಟಿ; ಹಣ್ಣು ಮೊದಲಾದವನ್ನು ಅಳತೆ ಮಾಡಲು ಬಳಸುವ ಕುಕ್ಕೆ, ಬುಟ್ಟಿ.

padding

ನಾಮವಾಚಕ

  • ಮೆತ್ತೆಯೊದಗಿಸುವುದು; ಮೆತ್ತೆ ತುಂಬುವುದು.
  • ಮೆತ್ತೆ; ಒತ್ತಿಗೆ; (ಖಾಲಿಸ್ಥಳ ಮೊದಲಾದವನ್ನು) ತುಂಬಲು ಬಳಸುವ ಮೆತ್ತೆಯಂಥ ಪದಾರ್ಥ.
  • ಪೂರಣ; ತುಂಬಣೆ; ಭರತಿ; (ಪುಸ್ತಕ, ವಾಕ್ಯ, ಮೊದಲಾದವನ್ನು) ವ್ಯರ್ಥವಾಗಿ ಉಬ್ಬಿಸುವುದು, ಅನಾವಶ್ಯಕ ಪದಗಳಿಂದ, ವಿಷಯಗಳಿಂದ – ತುಂಬಿಸುವುದು, ಭರ್ತಿಮಾಡುವುದು.
  • (ಮಾಸಪತ್ರಿಕೆಗಳಲ್ಲಿ ಕೇವಲ ಪುಟಗಳನ್ನು ಭರ್ತಿ ಮಾಡಲು ಬಳಸುವ) ತುಂಬಣೆ ಲೇಖನಗಳು; ಭರತಿ ಬರವಣಿಗೆ; ಪೂರಣ ಬರೆಹ.

paddle

ನಾಮವಾಚಕ

ಪದಗುಚ್ಛ

double paddle ಇಬ್ಬದಿ ಹುಟ್ಟು; ಎರಡು ತುದಿಗಳಲ್ಲೂ ಅಲಗುಗಳಿರುವ ಹುಟ್ಟು.

  • ಹುಟ್ಟು; ತೊಳೆ; ತಿರುಗಣೆ ಇಲ್ಲದೆಯೇ ದೋಣಿ ನಡೆಸಬಹುದಾದ, ಅಗಲ ಅಲಗಿನ ಮೋಟು ಹುಟ್ಟು.
  • ಮೋಟು ಎಲೆಗುದ್ದಲಿ; ಉದ್ದ ಹಿಡಿಯೂ, ಚಪ್ಪಟೆ ಅಲಗೂ ಉಳ್ಳ, ಸನಿಕೆಯಂಥ ಒಂದು ಸಣ್ಣ ಉಪಕರಣ.
  • (ಪ್ರಾಣಿವಿಜ್ಞಾನ) ಈಜು ರೆಕ್ಕೆ.
  • ಹುಟ್ಟು ಗಾಲಿಯ ಯಾ ಹಿಟ್ಟು ಗಿರಣಿ ಚಕ್ರದ ಸುತ್ತ ಅಳವಡಿಸಿರುವ ಹಲಗೆಗಳಲ್ಲೊಂದು.
  • ಹುಟ್ಟು ಹಾಕುವುದು ಯಾ ಹುಟ್ಟುಹಾಕಿದ ಒಂದು ಪಟ್ಟು, ವರಿಸೆ, ಕಾಲ.
  • (ಕೆದಕುವುದು, ಕುಲುಕುವುದು, ಬಡಿಯುವುದು, ಮೊದಲಾದ ಕೆಲಸಗಳಿಗೆ ಬಳಸುವ) ಹುಟ್ಟಿನಾಕಾರದ ಸಲಕರಣೆ.

paddle

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಪದಗುಚ್ಛ

paddle one’s own canoe ಸ್ವಾವಲಂಬಿಯಾಗಿರು; ತನ್ನ ಕಾಲ ಮೇಲೆ ನಿಲ್ಲು.

  • (ಹುಟ್ಟು ಹಾಕಿ) ದೋಣಿ ನಡಸು.
  • ನಯವಾಗಿ, ಮೆಲ್ಲಗೆ ದೋಣಿ ನಡಸು.
  • (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) (ಆಡುಮಾತು) ಅಂಗೈಯಿಂದ ತಿಕದ ಮೇಲೆ ಹೊಡೆ, ಚಚ್ಚು.

paddle

ಅಕರ್ಮಕ ಕ್ರಿಯಾಪದ

  • ಆಳವಿಲ್ಲದ ನೀರಿನಲ್ಲಿ ಬರಿಗಾಲಲ್ಲಿ ನಡೆದಾಡು.
  • ಆಳವಿಲ್ಲದ ನೀರಿನಲ್ಲಿ ಕೈಗಳನ್ನು ಯಾ ಕಾಲುಗಳನ್ನು ಆಡಿಸು.

paddle

ನಾಮವಾಚಕ

(ದೋಣಿಯ ವಿಷಯದಲ್ಲಿ) ಹುಟ್ಟು, ತೊಳೆ – ಹಾಕುವುದು.

paddle-boat

ನಾಮವಾಚಕ

ಹುಟ್ಟು, ತೊಳೆ – ದೋಣಿ; ಹುಟ್ಟುಗಾಲಿಯಿಂದ ನಡೆಸಬಹುದಾದ ದೋಣಿ.

paddle-box

ನಾಮವಾಚಕ

ಹುಟ್ಟು ಮುಚ್ಚಿಗೆ; ಹುಟ್ಟುಗಾಲಿಯ ಮೇಲ್ಭಾಗಕ್ಕೆ ಹೊದಿಸಿದ ಮುಚ್ಚಳ, ಮುಚ್ಚಿಗೆ.

paddle-steamer

ನಾಮವಾಚಕ

ಹುಟ್ಟುಗಾಲಿ ಸ್ಟೀಮರು; ಹುಟ್ಟುಗಾಲಿಯಿಂದ ನಡೆಸುವ ಸ್ಟೀಮರು, ಆವಿಹಡಗು.

paddle-wheel

ನಾಮವಾಚಕ

ಹುಟ್ಟುಗಾಲಿ; ನೀರನ್ನು ಹಿಂದಕ್ಕೆ ತಳ್ಳುವಂತೆ ಅಂಚಿನ ಸುತ್ತ ಹಲಗೆಗಳನ್ನು ಅಳವಡಿಸಿರುವ, ಹಡಗು ನಡೆಸುವ ಗಾಲಿ, ಚಕ್ರ.

paddler

ನಾಮವಾಚಕ

ಆಳವಿಲ್ಲದ ನೀರಿನಲ್ಲಿ ನಡೆಯುವವನು, ಕೈ ಯಾ ಕಾಲುಗಳನ್ನು ಆಡಿಸುವವನು.

paddler

ನಾಮವಾಚಕ

  • ಹುಟ್ಟುಹಾಕಿ ದೋಣಿ ನಡೆಸುವವ.
  • = paddle-steamer.

paddock

ನಾಮವಾಚಕ

  • (ಬೇಲಿಯುಳ್ಳ) ಕುದುರೆಮಾಳ; ಕುದುರೆ ಸಾಕುವ ಕ್ಷೇತ್ರದ ಭಾಗವಾಗಿ ಯಾ ಲಾಯಕ್ಕೆ ಸೇರಿದಂತಿರುವ, ಬೇಲಿಹಾಕಿದ ಸಣ್ಣ ಹುಲ್ಲುಗಾವಲು.
  • (ಕುದುರೆ ಪಂದ್ಯ ಯಾ ಮೋಟಾರು ಪಂದ್ಯಗಳ ಮೈದಾನದ ಬಳಿ, ಪಂದ್ಯಕ್ಕೆ ಮೊದಲು ಕಾರುಗಳನ್ನು ಯಾ ಕುದುರೆಗಳನ್ನು ತಂದು ಸೇರಿಸುವ) ಬೇಲಿ ಹಾಕಿದ ಹುಲ್ಲಿನ ಆವರಣ.
  • (ಆಸ್ಟ್ರೇಲಿಯ ಮತ್ತು ನ್ಯೂಸಿಲಂಡ್‍) ಜಮೀನು; ಹೊಲ.

paddock

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಪ್ರಾಚೀನ ಪ್ರಯೋಗ ಯಾ ಪ್ರಾಂತೀಯ ಪ್ರಯೋಗ) ಕಪ್ಪೆ; ದೊಡ್ಡ ನೆಲಗಪ್ಪೆ.

Paddy

ನಾಮವಾಚಕ

(ಆಡುಮಾತು) (ಕೆಲವೊಮ್ಮೆ ಅವಮಾನಕರವಾಗಿ) ಐರ್ಲೆಂಡಿನವನು (ಐರ್ಲೆಂಡಿನವನ ಅಡ್ಡ ಹೆಸರು).

paddy

ನಾಮವಾಚಕ

  • ಬತ್ತದ ಗದ್ದೆ.
  • ಬತ್ತ; ನೆಲ್ಲು.

paddy

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಆಡುಮಾತು) ಸಿಟ್ಟು; ರೇಗು; ಕೆರಳು; ಕೋಪೋದ್ರೇಕ; ರೋಷಾವೇಶ.

paddy-field

ನಾಮವಾಚಕ

= 1paddy\(1)\).

paddywhack

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಆಡುಮಾತು) = 2paddy.

Search Dictionaries

Loading Results

Follow Us :   
  Download Bharatavani App
  Bharatavani Windows App