भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

pademelon

ನಾಮವಾಚಕ

ತಿಲೋಗಲೆ ಕುಲದ, (ಆಸ್ಟ್ರೇಲಿಯದ ಕಡಲತೀರದ ಕುರುಚಲು ಪ್ರದೇಶದಲ್ಲಿ ವಾಸಿಸುವ) ಸಣ್ಣ ಜಾತಿಯ ಕ್ಯಾಂಗರೂ.

Padishah

ನಾಮವಾಚಕ

ಬಾದಷಹ:

  • ಪರ್ಷಿಯಾದ ದೊರೆಯ ಬಿರುದು.
  • (ಚರಿತ್ರೆ) (ಹಿಂದೆ ಯೂರೋಪಿನಲ್ಲಿ) ತುರ್ಕಿ ಸುಲ್ತಾನನ ಬಿರುದು.
  • (Padishah) (ಅಮೆರಿಕನ್‍ ಪ್ರಯೋಗ, ಆಡುಮಾತು) ಪ್ರಮುಖ ಯಾ ಪ್ರಭಾವಿ ವ್ಯಕ್ತಿ.

padlock

ನಾಮವಾಚಕ

ಪದಗುಚ್ಛ

ಜೋಲುಬೀಗ; ಚಿಲಕಕ್ಕೆ ತಗುಲಿಸುವ, ಕೆಳಕ್ಕೆ ನೇತಾಡುವ ಹೊರ ಬೀಗ. padlock law ಬೀಗಮುದ್ರೆ ಕಾನೂನು; (ಒಂದು ಆವರಣ, ಕಟ್ಟಡ, ಮೊದಲಾದವನ್ನು) ಮುಚ್ಚಿ ಬೀಗಮುದ್ರೆ ಹಾಕುವ ಅಧಿಕಾರ ನೀಡುವ ಕಾನೂನು.

padlock

ಸಕರ್ಮಕ ಕ್ರಿಯಾಪದ

  • ಜೋಲು ಬೀಗ ಜಡಿ, ಹಾಕು.
  • (ಕಟ್ಟಡ ಮೊದಲಾದವಕ್ಕೆ) ಬೀಗಮುದ್ರೆ ಹಾಕು.

padouk

ನಾಮವಾಚಕ

ಪಡೂಕ್‍:

  • ಮಹಾಗನಿ ದಾರುವಿನಂಥ ನಾಟ ಕೊಡುವ, ಮುಖ್ಯವಾಗಿ ಟೆರಕಾರ್ಪಸ್‍ ಇಂಡಿಕಸ್‍ ಕುಲಕ್ಕೆ ಸೇರಿದ, ಬರ್ಮಾ ದೇಶದ ಒಂದು ಮರ.
  • ಆ ಮರದ ದಾರು, ನಾಟ.

padre

ನಾಮವಾಚಕ

(ಆಡುಮಾತು) (ಸೈನ್ಯ ಮೊದಲಾದವುಗಳಲ್ಲಿನ) ಪಾದ್ರಿ.

padrone

ನಾಮವಾಚಕ

  • (ಮೆಡಿಟರೇನಿಯನ್‍ ಸಮುದ್ರದಲ್ಲಿ ಸಂಚರಿಸುವ) ವ್ಯಾಪಾರ ನೌಕೆಯ ಮುಖ್ಯಸ್ಥ, ಯಜಮಾನ, ಒಡೆಯ, ಧಣಿ.
  • (ಇಟಲಿಯಲ್ಲಿ ಬೀದಿಯ ಸಂಗೀತಗಾರರು, ಭಿಕ್ಷುಕ ಮಕ್ಕಳು, ಮೊದಲಾದವರಿಗೆ) ಉದ್ಯೋಗ ಒದಗಿಸುವ – ಧಣಿ, ಯಜಮಾನ.
  • (ಇಟಲಿಯಲ್ಲಿ) ತಂಗುದಾಣದ – ಮಾಲೀಕ, ಒಡೆಯ.

padsaw

ನಾಮವಾಚಕ

ವಕ್ರಾಕೃತಿಗಳನ್ನು ಕತ್ತರಿಸಲು ಬಳಸುವ, ಒಂದು ಬಗೆಯ ಚಿಕ್ಕ ಗರಗಸ, ಕೈಗರಗಸ.

paduasoy

ನಾಮವಾಚಕ

ಪ್ಯಾಡ್ಯುಅಸಾಯ್‍ ರೇಷ್ಮೆ ಬಟ್ಟೆ; (ಹದಿನೆಂಟನೆಯ ಶತಮಾನದಲ್ಲಿ ಜನರು ಬಹಳವಾಗಿ ಧರಿಸುತ್ತಿದ್ದ) ಹುರಿನೂಲಿನ ರೇಷ್ಮೆ ಬಟ್ಟೆ.

paean

ನಾಮವಾಚಕ

  • ಪ್ರಶಂಸಾಗೀತೆ; ಸ್ತೋತ್ರಗೀತೆ.
  • ಜಯಗಾನ; ವಿಜಯಗೀತೆ.
  • (ಹಿಂದೆ) ಗ್ರೀಕರು ತಮ್ಮ ಕಷ್ಟ ವಿಮೋಚನೆಯ ಯಾ ವಿಜಯದ ಕಾಲದಲ್ಲಿ ಅಪಾಲೋ ದೇವತೆಗೆ ಮಾಡುತ್ತಿದ್ದ ಸ್ತೋತ್ರ ಯಾ ಸ್ತುತಿ.

paed-

ಸಮಾಸ ಪೂರ್ವಪದ

= paedo-.

paederast

ನಾಮವಾಚಕ

ಕುಂಡೆಹಡಕ; ಬಾಲಕರೊಡನೆ ಗುದಮೈಥುನ ಮಾಡುವವ.

paederasty

ನಾಮವಾಚಕ

ಕುಂಡೆಹಡಕತನ; ಗುದಮೈಥುನ; ಪುರುಷಮೈಥುನ; ಬಾಲಮೈಥುನ; ಬಾಲಕರೊಡನೆ ನಡೆಸುವ ಸಲಿಂಗರತಿ.

paediatric

ಗುಣವಾಚಕ

  • ಶಿಶುವೈದ್ಯನ; ಮಕ್ಕಳ ತಜ್ಞನ.
  • ಶಿಶುವೈದ್ಯಕ್ಕೆ ಸಂಬಂಧಿಸಿದ.

paediatrician

ನಾಮವಾಚಕ

ಮಕ್ಕಳವೈದ್ಯ; ಮಕ್ಕಳತಜ್ಞ; ಶಿಶುವೈದ್ಯ; ಶಿಶುವೈದ್ಯತಜ್ಞ; ಶಿಶುವೈದ್ಯಶಾಸ್ತ್ರವನ್ನು ವಿಶೇಷವಾಗಿ ಅಭ್ಯಾಸ ಮಾಡಿರುವ ವೈದ್ಯ.

paediatrics

ನಾಮವಾಚಕ

(ಬಹುವಚನ) (ಏಕವಚನವಾಗಿ ಬಳಕೆ). ಮಕ್ಕಳ ವೈದ್ಯಶಾಸ್ತ್ರ; ಶಿಶು ವೈದ್ಯಶಾಸ್ತ್ರ; ಶಿಶುಗಳಿಗೆ ಬರುವ ವ್ಯಾಧಿಗಳನ್ನು ಕುರಿತ ವೈದ್ಯಕೀಯ ಶಾಸ್ತ್ರದ ಒಂದು ಶಾಖೆ.

paediatrist

ನಾಮವಾಚಕ

= paediatrician.

paedo-

ಸಮಾಸ ಪೂರ್ವಪದ

ಮಗುವಿನ, ಶಿಶುವಿಗೆ ಸಂಬಂಧಿಸಿದ ಎಂಬರ್ಥದ ಸಮಾಸ ಪೂರ್ವಪದ: paedobaptism.

paedo-baptism

ನಾಮವಾಚಕ

ಶಿಶುಜ್ಞಾನಸ್ನಾನ; ಶಿಶುಗಳಿಗೆ ಜ್ಞಾನಸ್ನಾನ ಮಾಡಿಸುವುದು.

paedo-baptist

ನಾಮವಾಚಕ

ಶಿಶುಜ್ಞಾನಸ್ನಾನ ಮಾಡಿಸುವವನು ಯಾ ಅದರಲ್ಲಿ ನಂಬಿಕೆಯುಳ್ಳವನು.

Search Dictionaries

Loading Results

Follow Us :   
  Download Bharatavani App
  Bharatavani Windows App