भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

paedo-genesis

ನಾಮವಾಚಕ

ಶಿಶು ಸಂತಾನ; ಅಪ್ರಾಪ್ತ ವಯಸ್ಸಿನ ಪ್ರಾಣಿಗಳಿಗೆ ಯಾ ಲಾರ್ವ ಹಂತದ ಕೀಟಗಳಿಗೆ ಆಗುವ ಸಂತಾನ.

paedophile

ನಾಮವಾಚಕ

ಶಿಶುಕಾಮಿ; ಶಿಶುಗಳ ಬಗ್ಗೆ ಲೈಂಗಿಕ ಆಸಕ್ತಿ, ಕಾಮನೆ ಉಳ್ಳವ.

paedophilia

ನಾಮವಾಚಕ

ಶಿಶುಕಾಮ; ಶಿಶುಗಳ ಬಗ್ಗೆ ಲೈಂಗಿಕ ಕಾಮನೆ (ಇರುವಿಕೆ).

paella

ನಾಮವಾಚಕ

ಪೈಲ; ದೊಡ್ಡ, ಆಳವಿಲ್ಲದ ಪಾತ್ರೆಯಲ್ಲಿ ಬೇಯಿಸಿದ, ಅಕ್ಕಿ, ಕೇಸರಿ, ಕೋಳಿಮಾಂಸ, ಮೊದಲಾದವುಗಳಿಂದ ತಯಾರಿಸಿದ ಒಂದು ಭಕ್ಷ್ಯ, ಆಹಾರ.

paeon

ನಾಮವಾಚಕ

(ಕ್ಲಾಸಿಕಲ್‍ ಛಂದಸ್ಸು) ಪಿಯಾನಿಕ್‍ ಗಣ; ಒಂದು ದೀರ್ಘ ಮತ್ತು ಮೂರು ಹ್ರಸ್ವ ಮಾತ್ರೆಗಳುಳ್ಳ, ನಾಲ್ಕು ಮಾತ್ರೆಗಳ ಒಂದು ಗಣ.

paeonic

ಗುಣವಾಚಕ

ಪಿಯಾನಿಕ್‍ ಛಂದೋಗಣದ.

paeony

ನಾಮವಾಚಕ

peony ಪದದ ರೂಪಾಂತರ.

pagan

ನಾಮವಾಚಕ

  • ಪೇಗನ್‍ ಯಾ ಹೀದನ್‍; (ಕ್ರೈಸ್ತಮತದವರಿಂದ) ಜ್ಞಾನೋದಯವಾಗದವನೆಂದೂ ಬೈಬಲಿನಲ್ಲಿ ಹೇಳಿರುವ ದೇವರನ್ನು ನಂಬದವನೆಂದೂ ಪರಿಗಣಿತನಾದವನು.
  • ಅಜ್ಞಾನಿ; ನಿಜವಾದ ದೇವರನ್ನು ಅರಿಯದ ಯಾ ಆರಾಧಿಸದ ಜನಾಂಗದವನು.
  • ಅಧಾರ್ಮಿಕ; ಧರ್ಮಬಾಹಿರ.
  • ನಿಸರ್ಗಾರಾಧಕ; ನಿಸರ್ಗ ಶಕ್ತಿಗಳಲ್ಲಿ ದೇವತ್ವ ಕಾಣುವವನು.
  • ಅನಾಗರಿಕ; ಅಸಂಸ್ಕೃತ.

pagan

ಗುಣವಾಚಕ

  • ಪೇಗನ್‍; ಪೇಗನರಿಗೆ ಸಂಬಂಧಿಸಿದ ಯಾ ಅವರೊಂದಿಗೆ ವ್ಯವಹರಿಸುವ.
  • ಅಧಾರ್ಮಿಕ; ನಾಸ್ತಿಕ; ಮತಧರ್ಮ ವಿರೋಧಿಸುವ.
  • ನಿಜವಾದ ದೇವರ ಜ್ಞಾನೋದಯವಾಗದ ಯಾ ಬೈಬಲಿನ ದೇವರನ್ನು ನಂಬದ; ನಿಜವಾದ ದೇವರನ್ನು ಆರಾಧಿಸದ.
  • ನಿಸರ್ಗಾರಾಧಕ; ಪ್ರಕೃತಿಪೂಜಕ; ನಿಸರ್ಗಾರಾಧನೆಯ; ಪ್ರಕೃತಿಶಕ್ತಿಗಳನ್ನು ದೇವರೆಂದು ಪೂಜಿಸುವ.

pagandom

ನಾಮವಾಚಕ

ಪೇಗನ್‍ ಲೋಕ, ಸಮಾಜ, ರಾಜ್ಯ; ಬೈಬಲಿನ ದೇವರನ್ನು ನಂಬದವರ ಯಾ ನಿಸರ್ಗಾರಾಧಕರ ಸಮಾಜ.

paganise

ಕ್ರಿಯಾಪದ

= paganize.

paganish

ಗುಣವಾಚಕ

ಪೇಗನೀಯ; ಪೇಗನ್‍ ಸಮಾಜ, ಲೋಕ, ಧರ್ಮ, ಮೊದಲಾದವಕ್ಕೆ ಸಂಬಂಧಿಸಿದ.

paganism

ನಾಮವಾಚಕ

ಪೇಗನಿಸಂ; ಪೇಗನ್‍ ತತ್ತ್ವ ಯಾ ಆಚಾರ; ಪೇಗನರ ನಂಬಿಕೆಗಳು ಮತ್ತು ಆಚಾರ ವಿಚಾರಗಳು.

paganize

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಪೇಗನೀಕರಿಸು; ಪೇಗನ್‍ ತತ್ತ್ವಕ್ಕೆ ಯಾ ಆಚಾರಕ್ಕೆ ಅಳವಡಿಸು, ತಿರುಗಿಸು. ಪೇಗನಾಗು; ಪೇಗನ್‍ ತತ್ತ್ವವನ್ನು ಯಾ ಅದರ ಆಚಾರವನ್ನು ಅನುಸರಿಸು.

page

ನಾಮವಾಚಕ

  • ಪುಟ:
    1. ಪುಸ್ತಕ, ನಿಯತಕಾಲಿಕೆ, ಮೊದಲಾದವುಗಳ ಹಾಳೆ.
    2. ಈ ಹಾಳೆಯ ಒಂದು ಮುಖ.
    3. ಈ ಹಾಳೆಯಲ್ಲಿ ಮುದ್ರಿಸಿರುವ ವಿಷಯ.
    1. (ರೂಪಕವಾಗಿ) (ಚರಿತ್ರೆ ಮೊದಲಾದವುಗಳಲ್ಲಿ ಒಂದು ಪುಟ ತುಂಬಲು ಅರ್ಹವಾದ) ಘಟನೆ; ಉಪಾಖ್ಯಾನ: one of the brightest pages in his life ಅವನ ಜೀವನದ ಅತ್ಯಂತ ಉಜ್ವಲ ಘಟನೆಗಳಲ್ಲೊಂದು.
    2. ದಾಖಲು; ಸಾಕ್ಷ್ಯ; ಪುರಾವೆ: the pages of history ಚರಿತ್ರೆಯ ಸಾಕ್ಷ್ಯಗಳು.

page

ಸಕರ್ಮಕ ಕ್ರಿಯಾಪದ

  • (ಪುಸ್ತಕ ಮೊದಲಾದವಕ್ಕೆ) ಅನುಕ್ರಮವಾಗಿ ಪುಟಸಂಖ್ಯೆ ಹಾಕು.
  • (ಆತುರವಾಗಿ ಪುಸ್ತಕ ಮೊದಲಾದವುಗಳ) ಪುಟ – ತಿರುಗಿಸು, ಮಗುಚಿಹಾಕು: paged the book without interest ನಿರಾಸಕ್ತಿಯಿಂದ ಪುಸ್ತಕದ ಪುಟ ತಿರುಗಿಸಿದ.

page

ನಾಮವಾಚಕ

  • ದ್ವಾರಪಾಲ(ಕ); ದೌವಾರಿ(ಕ); ಬಾಗಿಲು ಕಾಯುವುದು, ಸಮಾಚಾರ ಒಯ್ಯುವುದು, ಮೊದಲಾದ ಕೆಲಸಮಾಡುವ (ಸಾಮಾನ್ಯವಾಗಿ ಪೋಷಾಕು ಧರಿಸಿದ) ಸೇವಕ, ದೂತ.
  • (ಹಿರಿಯ ಪದವಿಯಲ್ಲಿರುವವನು, ವಧು, ಮೊದಲಾದವರ) ಬಾಲ ಸೇವಕ; ಖಾಸಾ ಪರಿಚಾರಕ.
  • (ಚರಿತ್ರೆ) ಪೇಜ್‍; ‘ನೈಟ್‍’ ಪದವಿಯಲ್ಲಿರುವವನ ಸೇವೆಯಲ್ಲಿದ್ದು, ತಾನು ‘ನೈಟ್‍’ ಆಗಲು ಅವನಿಂದ ಶಿಕ್ಷಣ ಪಡೆಯುತ್ತಿರುವವನು.

page

ಸಕರ್ಮಕ ಕ್ರಿಯಾಪದ

  • (ಹೋಟೆಲ್‍ಗಳು, ವಿಮಾನ ನಿಲ್ದಾಣಗಳು, ಮೊದಲಾದವುಗಳಲ್ಲಿ) (ಘೋಷಣೆ ಮಾಡಿ ಯಾ ದೂತನನ್ನು ಕಳುಹಿಸಿ) ಕರೆಸು; ಹೇಳಿ ಕಳುಹಿಸು; ಬರಹೇಳು; ಸೇವಕನ ಮೂಲಕ (ಬೇಕಾಗಿದ್ದವನ ಹೆಸರನ್ನು) ಕೂಗಿಸು ಯಾ (ಬೇಕಾದವನನ್ನು) ಕರೆಯಿಸು: asked the servant to page her brother ಅವಳ ತಮ್ಮನನ್ನು ಕೂಗಿ ಕರೆಯುವಂತೆ ಜವಾನನಿಗೆ ಹೇಳಿದ.
  • ಪೇಜರ್‍ ಮುಖಾಂತರ ಆಜ್ಞೆಮಾಡಿ ಕರೆಸು.
  • ಸೇವೆ ಮಾಡು; ಪರಿಚಾರಿಕೆ ನಡೆಸು; ಆಳಾಗಿ ಕೆಲಸ ಮಾಡು: chose a new boy to page him ಅವನ ಸೇವೆ ಮಾಡಲು ಒಬ್ಬ ಹೊಸ ಹುಡುಗನನ್ನು, ಆಳುಮಗನನ್ನು ಆರಿಸಿದ.

pageant

ನಾಮವಾಚಕ

  • ಉಜ್ಜ್ವಲ ದೃಶ್ಯ; ನೇತ್ರೋತ್ಸವ; ವೈಭವದ ಪ್ರದರ್ಶನ; ಮುಖ್ಯವಾಗಿ ಅಟ್ಟಹಾಸಕ್ಕಾಗಿ ಏರ್ಪಡಿಸಿದ ಆಡಂಬರದ ಪ್ರದರ್ಶನ: he saw through the silliness of the pageant ಆ ವೈಭವದ ಪ್ರದರ್ಶನದ ಕ್ಷುಲ್ಲಕತೆಯನ್ನು ಅವನು ಅರಿತುಕೊಂಡ.
  • ದೃಶ್ಯಾವಳಿ; ದೃಶ್ಯೋತ್ಸವ; (ಈಗ ಮುಖ್ಯವಾಗಿ) ಒಂದು ಸ್ಥಳದ ಐತಿಹ್ಯವನ್ನು ಪ್ರದರ್ಶಿಸುವ ವೈಭವದ ಮೆರವಣಿಗೆ ಯಾ ಬಯಲಾಟ.
  • ಸಾಂಕೇತಿಕ ದೃಶ್ಯ; ರೂಪಕ ಕಥಾದೃಶ್ಯ; (ರಂಗದ ಮೇಲಾಗಲಿ, ಚಲಿಸುವ ರಥದ ಮೇಲಾಗಲಿ ಪ್ರದರ್ಶಿಸಿದ) ಸ್ತಬ್ಧ – ದೃಶ್ಯ, ಚಿತ್ರ; ಮೂಕದೃಶ್ಯ.
  • (ರೂಪಕವಾಗಿ) ಆಡಂಬರ; ವೈಭವ; ಡಬ್ಬುಗಾರಿಕೆ; ಡೌಲು; ಡಂಭ.

pageantry

ನಾಮವಾಚಕ

  • ಆಡಂಬರದ ದೃಶ್ಯಾವಳಿ; ಬೆಡಗಿನ ಪ್ರದರ್ಶನ; ವೈಭವದ ಮೆರವಣಿಗೆ.
  • ಆಡಂಬರ; ಡಂಭಾಚಾರ; ಡೌಲು: was tired of the pomp and pageantry ಆ ವೈಭವ, ಡಂಭಾಚಾರಗಳಿಂದ ಬೇಸತ್ತು ಹೋಗಿದ್ದ.

Search Dictionaries

Loading Results

Follow Us :   
  Download Bharatavani App
  Bharatavani Windows App