भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

painful

ಗುಣವಾಚಕ

  • (ದೇಹದ ಯಾ ಮನಸ್ಸಿನ)
    1. ನೋವಿನ; ಯಾತನೆಯ; ವೇದನೆಯ.
    2. ಸಂಕಟಕರ; ಯಾತನಾಮಯ; ನೋವನ್ನುಂಟುಮಾಡುವ.
  • (ಮುಖ್ಯವಾಗಿ ದೇಹದ ಭಾಗದ ವಿಷಯದಲ್ಲಿ) ನೋವನ್ನನುಭವಿಸುತ್ತಿರುವ.
  • ಕಷ್ಟಕರ; ತೊಂದರೆ ಕೊಡುವ; ಕಷ್ಟದಾಯಕ: a painful climb ಹತ್ತುವುದು ಕಷ್ಟಕರವಾದದ್ದು.
  • ಕಿರಿಕಿರಿಗೊಳಿಸುವ.

painfully

ಕ್ರಿಯಾವಿಶೇಷಣ

  • ನೋವಿನಿಂದ; ಯಾತನೆಯಿಂದ; ಬಾಧೆಪಡುತ್ತಾ.
  • ಕಿರಿಕಿರಿ ಗೊಳಿಸುತ್ತಾ.

painfulness

ನಾಮವಾಚಕ

ನೋವಿನ ಸ್ಥಿತಿ; ನೋಯುತ್ತಿರುವ ಯಾ ನೋವುಂಟುಮಾಡುವ ಸ್ಥಿತಿ.

painkiller

ನಾಮವಾಚಕ

ನೋವಳಿಕ; ನೋವು ಶಾಮಕ; ನೋವುಗಳೆಕ; ವೇದನಹಾರಿ; ವೇದನ ಶಾಮಕ; ನೋವನ್ನು ಕಡಮೆ ಮಾಡುವ ಔಷಧ.

painkilling

ಗುಣವಾಚಕ

ನೋವಳಿಕ; ನೋವುಶಾಮಕ; ನೋವುಗಳೆಕ; ನೋವನ್ನು ತಗ್ಗಿಸುವ, ಕಡಮೆ ಮಾಡುವ.

painless

ಗುಣವಾಚಕ

  • ನೋವಿಲ್ಲದ; ಯಾತನೆ ಇಲ್ಲದ; ನೋವು ರಹಿತ.
  • ನೋವುಂಟು ಮಾಡದ.

painlessly

ಕ್ರಿಯಾವಿಶೇಷಣ

ನೋಯದೆ ಯಾ ನೋಯಿಸದೆ; ನೋವಿಲ್ಲದೆ ಯಾ ನೋವುಂಟುಮಾಡದೆ.

painlessness

ನಾಮವಾಚಕ

ನೋವಿಲ್ಲದಿರುವಿಕೆ; ಯಾತನಾರಾಹಿತ್ಯ.

painstaking

ಗುಣವಾಚಕ

(ಕೆಲಸ ಮಾಡುವುದರಲ್ಲಿ) ಎಚ್ಚರಿಕೆ ವಹಿಸುವ; ಜಾಗರೂಕ; ಶ್ರಮ ತೆಗೆದುಕೊಳ್ಳುವ; ಶ್ರದ್ಧೆಯುಳ್ಳ.

painstakingly

ಕ್ರಿಯಾವಿಶೇಷಣ

(ಕೆಲಸ ಕಾರ್ಯಗಳಲ್ಲಿ) ಶ್ರಮ ತೆಗೆದುಕೊಂಡು; ಎಚ್ಚರಿಕೆವಹಿಸಿ; ಶ್ರದ್ಧೆಯಿಂದ.

painstakingness

ನಾಮವಾಚಕ

(ಕೆಲಸ ಕಾರ್ಯಗಳಲ್ಲಿ) ಎಚ್ಚರಿಕೆ; ಶ್ರದ್ಧೆ; ಶ್ರಮವಹಿಸುವಿಕೆ.

paint

ನಾಮವಾಚಕ

    1. (ಮೇಲ್ಮೈಗೆ ಬಣ್ಣ ಕೊಡಲು ಬಳಿಯುವ, ದ್ರವರೂಪದಲ್ಲಿರುವ) ಬಣ್ಣ; ವರ್ಣ.
    2. (ಹೀಗೆ ಬಳಿದ ಮೇಲೆ) ಒಣಗಿ ಗಟ್ಟಿಯಾದ ಬಣ್ಣ: the paint peeled off ಬಣ್ಣ ಹೆಕ್ಕಳಿಕೆಯಾಗಿ ಉದುರಿತು.
  • (ಹಾಸ್ಯ ಪ್ರಯೋಗ ಯಾ ಪ್ರಾಚೀನ ಪ್ರಯೋಗ) (ಮುಖ ಮೊದಲಾದವಕ್ಕೆ ಹಚ್ಚಿಕೊಳ್ಳುವ) ಪ್ರಸಾಧನ ಬಣ್ಣ; ವರ್ಣಲೇಪ; (ಮುಖ್ಯವಾಗಿ ಕೆನ್ನೆ, ತುಟಿ, ಮೊದಲಾದವುಗಳಿಗೆ) ಹಚ್ಚಿಕೊಳ್ಳುವ ಕುಸುಂಬೇ ಬಣ್ಣ, ಯಾ ಉಗುರಿಗೆ ಬಳಿಯುವ ವಾರ್ನಿಷ್‍.

paint

ಸಕರ್ಮಕ ಕ್ರಿಯಾಪದ

ಪದಗುಚ್ಛ

    1. (ಗೋಡೆ, ವಸ್ತು, ಮೊದಲಾದವುಗಳ ಮೇಲೆ) ಬಣ್ಣ – ಸವರು, ಹಚ್ಚು, ಹಾಕು, ಲೇಪಿಸು.
    2. (ಗೊತ್ತಾದ) ಬಣ್ಣ ಬಳಿ: paint the door green ಬಾಗಿಲಿಗೆ ಹಸುರು ಬಣ್ಣ ಬಳಿ.
  • (ವಸ್ತು, ದೃಶ್ಯ, ಮೊದಲಾದವನ್ನು) ಬಣ್ಣದಲ್ಲಿ ಚಿತ್ರಿಸು, ರೂಪಿಸು, ರಚಿಸು; ವರ್ಣಚಿತ್ರ ಬರೆ.
  • (ರೂಪಕವಾಗಿ) (ಯಾವುದಾದರೂ ಸಂದರ್ಭ ಮೊದಲಾದವನ್ನು ವರ್ಣಚಿತ್ರದಂತೆ) ಶಬ್ದಗಳಿಂದ ಚಿತ್ರಿಸು, ವರ್ಣಿಸು, ಬಣ್ಣಿಸು: not so black as he is painted ಬಣ್ಣಿಸಿದಷ್ಟೇನೂ ಅವನು ಕೆಟ್ಟವನಲ್ಲ. painted a gloomy picture of the future ಭವಿಷ್ಯದ ನಿರಾಶಾಜನಕ ಚಿತ್ರವನ್ನು ಬಣ್ಣಿಸಿದ.
  • (ಹಾಸ್ಯ ಪ್ರಯೋಗ ಯಾ ಪ್ರಾಚೀನ ಪ್ರಯೋಗ)
    1. (ಮುಖ, ಚರ್ಮ, ಮೊದಲಾದವುಗಳಿಗೆ) ಪ್ರಸಾಧನ ಸಾಮಗ್ರಿ, ಬಣ್ಣ – ಹಚ್ಚು, ಲೇಪಿಸು ಯಾ ಹಚ್ಚಿಕೊ, ಲೇಪಿಸಿಕೊ.
    2. (ದ್ರವವನ್ನು ಚರ್ಮ ಮೊದಲಾದವುಗಳಿಗೆ) ಲೇಪಿಸು, ಹಚ್ಚು.
  • (ಗೋಡೆ ಮೊದಲಾದವನ್ನು) ವರ್ಣಚಿತ್ರಗಳಿಂದ ಅಲಂಕರಿಸು.

paint shop

ನಾಮವಾಚಕ

  • ಬಣ್ಣದಂಗಡಿ; ಬಣ್ಣಗಳನ್ನು ಮಾರುವ ಅಂಗಡಿ.
  • ಬಣ್ಣದ ವಿಭಾಗ; ವಸ್ತುಗಳಿಗೆ, ಮುಖ್ಯವಾಗಿ ತುಂತುರಿಸಿ, ಬಣ್ಣ ಹಾಕುವ ಕಾರ್ಖಾನೆಯ ಬಣ್ಣದ ವಿಭಾಗ.

paint-stick

ನಾಮವಾಚಕ

ಬಣ್ಣದ ಕಡ್ಡಿ; ವರ್ಣಶಲಾಕೆ; ಕ್ರೇಯಾನ್‍ನಂತೆ ಬಳಸುವ, ನೀರಿನಲ್ಲಿ ಕರಗುವ, ಬಣ್ಣದ ಕಡ್ಡಿ.

paintable

ಗುಣವಾಚಕ

  • ಬಣ್ಣ ಬಳಿಯಬಹುದಾದ, ಲೇಪಿಸಬಹುದಾದ.
  • ಬಣ್ಣದಿಂದ ಚಿತ್ರಿಸಬಹುದಾದ.

paintbox

ನಾಮವಾಚಕ

ಬಣ್ಣದ ಪೆಟ್ಟಿಗೆ, ಡಬ್ಬ; ವರ್ಣಸಂಪುಟ; ಚಿತ್ರಗಳಿಗೆ ಬಣ್ಣಬಳಿಯಲು ಬಳಸುವ ಗಟ್ಟಿ (ನಿರಾರ್ದ್ರ) ಪೇಂಟ್‍ ಇರುವ ಡಬ್ಬ.

paintbrush

ನಾಮವಾಚಕ

  • ಬಣ್ಣದ ಕುಂಚ, ಕೂರ್ಚ, ಬ್ರಷ್ಷು; ಗೋಡೆ ಮೊದಲಾದವುಗಳಿಗೆ ಬಣ್ಣ ಹಚ್ಚುವ, ಬಣ್ಣಕಾರನ ಬ್ರಷ್ಷು. Figure: Paintbrushes
  • ವರ್ಣಕುಂಚ; ವರ್ಣಚಿತ್ರಕಾರನ ಕುಂಚ.

painted lady

ನಾಮವಾಚಕ

ಬಣ್ಣದ ಚಿಟ್ಟೆ; ಸಿಂತಿಯ ಕಾರ್ಡ್ಯುಯಿ ಕುಲಕ್ಕೆ ಸೇರಿದ, ಕಪ್ಪು ಮತ್ತು ಬಿಳಿ ಚುಕ್ಕೆಗಳಿರುವ ಕಿತ್ತಳೆಕೆಂಪು ಬಣ್ಣದ ಚಿಟ್ಟೆ.

painter

ನಾಮವಾಚಕ

  • (ವರ್ಣ)ಚಿತ್ರಕಾರ; (ಚಿತ್ರ) ಕಲಾವಿದ ಯಾ ಅಲಂಕಾರಕ.
  • ಬಣ್ಣಗಾರ; ವರ್ಣಕಾರ; ವರ್ಣಲೇಪಕ; ಬಣ್ಣದವ; ಪೇಂಟರು; ಮರದ ಸಾಮಾನು ಮೊದಲಾದವುಗಳಿಗೆ ಬಣ್ಣಹಾಕುವವನು.

Search Dictionaries

Loading Results

Follow Us :   
  Download Bharatavani App
  Bharatavani Windows App