भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

quotation

ನಾಮವಾಚಕ

  • (ಗ್ರಂಥ ಮೊದಲಾದವುಗಳಿಂದ) ಉದ್ಧರಿಸುವುದು; ಎತ್ತಿ ಹೇಳುವುದು.
  • ಉದ್ಧರಣ; ಉದ್ಧೃತ ಭಾಗ; ಉಲ್ಲೇಖನ; ಯಥೋಕ್ತ; ಎತ್ತಿ ಬರೆದದ್ದು.
  • (ಸಂಗೀತ) ಒಂದು ಸಂಗೀತ ಕೃತಿಯಿಂದ ಇನ್ನೊಂದಕ್ಕೆ ತೆಗೆದುಕೊಂಡ ಕಿರುಭಾಗ ಯಾ ರಾಗ.
  • ಬಂಡವಾಳ ವಿನಿಮಯ (ಸ್ಟಾಕ್‍ ಎಕ್ಸ್‍ಚೇಂಜ್‍) ಸ್ಟಾಕುಗಳ (ಬಂಡವಾಳ ಪತ್ರಗಳ) ಯಾ ಸರಕುಗಳ ಹಾಲಿ ಬೆಲೆ, ಸದ್ಯದ ಮೌಲ್ಯ.
  • ಕಂಟ್ರಾಕ್ಟುದಾರನ ಅಂದಾಜು ವೆಚ್ಚ.

quotation mark

ನಾಮವಾಚಕ

ಉದ್ಧರಣ ಚಿಹ್ನೆ; ಗ್ರಂಥಭಾಗವು ಉದ್ಧರಣವೆಂದು ತೋರಿಸಲು ಅದರ ಮೊದಲಲ್ಲಿ ಮತ್ತು ಕೊನೆಯಲ್ಲಿ ಹಾಕುವ ಚಿಹ್ನೆ(“ ”), (‘ ’).

quote

ಸಕರ್ಮಕ ಕ್ರಿಯಾಪದ

  • (ಒಂದು ಅಭಿಪ್ರಾಯ ಸಮರ್ಥನೆಗಾಗಿ, ಒಬ್ಬ ಗ್ರಂಥಕಾರನ, ಒಂದು ಗ್ರಂಥದ) ಆಧಾರ ಕೊಡು; ಉದಾಹರಣೆ ಕೊಡು.
  • (ಒಬ್ಬನಿಂದ, ಒಂದು ಗ್ರಂಥದಿಂದ) ಹೇಳಿಕೆಯನ್ನು – ಉಲ್ಲೇಖಿಸು, ಉದ್ಧರಿಸು, ಓದು, ಬರೆ, ಎತ್ತಿ ಬರೆ, ಪುನರಾವರ್ತಿಸು: don’t quote me ನನ್ನ ಮಾತನ್ನು ಉದ್ಧರಿಸಬೇಡ; ನಾನು ಹೇಳಿದೆನೆಂದು ಹೇಳಬೇಡ.
  • (ಅನೇಕ ವೇಳೆ ಕರ್ಮರಹಿತವಾಗಿ):
    1. (ಒಂದು ಗ್ರಂಥಭಾಗವನ್ನು ಸಾಮಾನ್ಯವಾಗಿ ಅದು ಉದ್ಧೃತವೆನ್ನುವುದನ್ನು ಸೂಚಿಸಿ) ಉದ್ಧರಿಸು ಯಾ ಉಲ್ಲೇಖಿಸು; ಎತ್ತಿ ಹೇಳು ಯಾ ಎತ್ತಿ ಬರೆ.
    2. (ಗ್ರಂಥ, ಗ್ರಂಥಕರ್ತ, ಮೊದಲಾದವರಿಂದ) ಉದ್ಧರಿಸು; ಉಲ್ಲೇಖಿಸು.
  • (ಒಬ್ಬ ಗ್ರಂಥಕರ್ತ ಮೊದಲಾದವರನ್ನು ) ಆಧಾರವಾಗಿ, ಸಾಕ್ಷಿಯಾಗಿ – ಉದ್ಧರಿಸು, ಉಲ್ಲೇಖಿಸು.
  • (ಪದಗಳನ್ನು, ಮಾತುಗಳನ್ನು) ಉದ್ಧರಣ ಚಿಹ್ನೆಗಳೊಳಗೆ ಸೇರಿಸು.
  • (ಸರಕು, ಬಾಜಿ, ಮೊದಲಾದವುಗಳ) ಬೆಲೆಯನ್ನು ಹೇಳು, ನಮೂದಿಸು: quoted 200 to 1 ಒಂದಕ್ಕೆ ಇನ್ನೂರು ಬಾಜಿಯೆಂದು ಹೇಳಿದನು.
  • (ಸ್ಟಾಕ್‍ ಎಕ್ಸ್‍ಚೇಂಜ್‍) ಒಂದರ ಬೆಲೆಯನ್ನು ನಿಯತವಾಗಿ ಪಟ್ಟಿಯಲ್ಲಿ ನಮೂದಿಸು.
  • ( ಭಾವಸೂಚಕ ಅವ್ಯಯವಾಗಿ) (ಉಕ್ತಲೇಖನ, ಗಟ್ಟಿಯಾಗಿ ಓದುವಾಗ, ಮೊದಲಾದ ಕಡೆ) ಉದ್ಧರಣ ಚಿಹ್ನೆಗಳು ಆರಂಭವಾಗುತ್ತವೆಂಬುದನ್ನು ಸೂಚಿಸು, ಹೇಳು: he said, quote ‘I shall stay’.

quote

ನಾಮವಾಚಕ

(ಆಡುಮಾತು)

  • ಉದ್ಧರಣ; ಉಲ್ಲೇಖ; ಉದ್ಧೃತ ಭಾಗ.
  • ನಮೂದಿಸಿದ ಬೆಲೆ.
  • (ಸಾಮಾನ್ಯವಾಗಿ ಬಹುವಚನದಲ್ಲಿ ) ಉದ್ಧರಣ ಚಿಹ್ನೆಗಳು.

quoth

ಸಕರ್ಮಕ ಕ್ರಿಯಾಪದ

(ಉತ್ತಮ ಮತ್ತು ಪ್ರಥಮ ಪುರುಷದಲ್ಲಿ ಮಾತ್ರ ಪ್ರಯೋಗ) (ಪ್ರಾಚೀನ ಪ್ರಯೋಗ) (ಉದ್ಧೃತ ಪದಗಳ ಮಧ್ಯೆ, ತರುವಾಯ ಯಾ ಮೊದಲಿನಲ್ಲಿ) ಹೇಳಿದೆನು, ಹೇಳಿದನು, ಹೇಳಿದಳು.

quotidian

ಗುಣವಾಚಕ

  • ಅನುದಿನದ; ದಿನದಿನದ; ಪ್ರತಿದಿನದ; (ದಿನ)ನಿತ್ಯದ.
  • ಸರ್ವಸಾಮಾನ್ಯವಾದ; ಅಲ್ಪ; ಕ್ಷುಲ್ಲಕ; ಗಣನೆಗೆ ಬಾರದ: quotidian drabness ಸರ್ವಸಾಮಾನ್ಯವಾದ ಮಂಕು.

quotidian

ನಾಮವಾಚಕ

ದಿನಂಪ್ರತಿಯ ಜ್ವರ; ಪ್ರತಿನಿತ್ಯ ಬರುವ ಒಂದು ಬಗೆಯ ಜ್ವರ.

quotidian fever

ನಾಮವಾಚಕ

= 2quotidian.

quotient

ನಾಮವಾಚಕ

ಭಾಗಲಬ್ಧ; ಒಂದು ಮೊತ್ತವನ್ನು ಮತ್ತೊಂದರಿಂದ ಭಾಗಿಸಿದರೆ ಬರುವ ಫಲ, ಲಬ್ಧ.

Qur’an

ನಾಮವಾಚಕ

= Koran.

qwerty

ಗುಣವಾಚಕ

ಆಂಗ್ಲ ಭಾಷೆಯ ಬೆರಳಚ್ಚು ಯಂತ್ರಗಳು, ಕಂಪ್ಯೂಟರುಗಳು, ಮೊದಲಾದವುಗಳಲ್ಲಿರುವಂತೆ q, w, e, r, t ಮತ್ತು y ಅಕ್ಷರಗಳು ಮೊದಲ ಸಾಲಿನಲ್ಲಿ ಇರುವಂಥ ಕೀಲಿಕೈ ಮಣೆಯನ್ನು ಸೂಚಿಸುವ.

qy.

ಸಂಕ್ಷಿಪ್ತ

query.

Search Dictionaries

Loading Results

Follow Us :   
  Download Bharatavani App
  Bharatavani Windows App