भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

quadrilateral

ನಾಮವಾಚಕ

ಚತುರ್ಭುಜ; ಚತುಷ್ಕೋನ; ನಾಲ್ಕು ಭುಜಗಳ ಆತಿ.

quadrille

ನಾಮವಾಚಕ

  • (ವಿವಿಧ ಲಯಗಳಲ್ಲಿ ಹಾಡಿದ ಯಾ ವಾದನ ಮಾಡಿದ, ಪಂಚ ಸ್ವರಗಳ ಸ್ವರಜತಿಯ ಲಯಕ್ಕೆ ಅನುಗುಣವಾಗಿ ನಾಲ್ಕು ಜೋಡಿಗಳಾಗಿ ಚೌಕಾಕಾರವಾಗಿ ನರ್ತಿಸುವ) ಚೌಕ – ತ್ಯ, ಕುಣಿತ.
  • ಈ ಚೌಕತ್ಯದ ಸಂಗೀತ.

quadrille

ನಾಮವಾಚಕ

ಕ್ವಾಡ್ರಿಲ್‍; ನಾಲ್ವರಾಟ; 18ನೆ ಶತಮಾನದಲ್ಲಿ ವರಿಷ್ಠ ವರ್ಗದ ನಾಲ್ವರು ಆಟಗಾರರರು ನಲವತ್ತು ಎಲೆಗಳಿಂದ ಆಡುತ್ತಿದ್ದ ಒಂದು ಬಗೆಯ ಇಸ್ಪೀಟಾಟ.

quadrillion

ನಾಮವಾಚಕ

(ಬಹುವಚನ ಆದೇ ಯಾ quadrillions). ಕ್ವಾಡ್ರಿಲಿಯನ್‍; $10^{ 15}$ ಯಾ $10^{ 24}$.

quadrinomial

ನಾಮವಾಚಕ

(ಗಣಿತ) ಚತುಷ್ಪದಿ; ನಾಲ್ಕು ಬೀಜಗಣಿತೀಯ ಪದಗಳಿರುವ ಗಣಿತೋಕ್ತಿ.

quadrinomial

ಗುಣವಾಚಕ

(ಗಣಿತ) ಚತುಷ್ಪದೀಯ; ಚತುಷ್ಪದಿಗೆ ಸಂಬಂಧಿಸಿದ.

quadripartite

ಗುಣವಾಚಕ

  • ಚತುರ್ಭಾಗೀಯ; ನಾಲ್ಕು ಭಾಗಗಳುಳ್ಳ.
  • ಚತುಷ್ಕ; ನಾಲ್ವರನ್ನು ಯಾ ನಾಲ್ಕು ಪಕ್ಷ ಮೊದಲಾದವುಗಳನ್ನು ಒಳಗೊಂಡ; ನಾಲ್ವರು ಯಾ ನಾಲ್ಕು ಪಕ್ಷಗಳು ಹಂಚಿಕೊಂಡ.

quadriplegia

ನಾಮವಾಚಕ

(ವೈದ್ಯಶಾಸ್ತ್ರ) ನಾಲ್ಕು ಅಂಗಗಳ ಲಕ್ವ; ಕೈಕಾಲುಗಳ ನಾರಿ; ಪಾದಪಾಣಿ ಲಕ್ವ.

quadriplegic

ಗುಣವಾಚಕ

(ವೈದ್ಯಶಾಸ್ತ್ರ) ಕೈಕಾಲುಗಳ ನಾರಿಯ ಯಾ ಅದಕ್ಕೆ ಸಂಬಂಧಿಸಿದ; ಪಾದಪಾಣಿ ಲಕ್ವದ ಯಾ ಅದಕ್ಕೆ ಸಂಬಂಧಿಸಿದ.

quadriplegic

ನಾಮವಾಚಕ

(ವೈದ್ಯಶಾಸ್ತ್ರ) ಕೈಕಾಲುಗಳ ನಾರಿ ತಗಲಿದವ; ನಾಲ್ಕು ಅಂಗಗಳಿಗೆ, ಪಾದಪಾಣಿಗಳಿಗೆ ಲಕ್ವ ಹೊಡೆದವ.

quadrivalent

ಗುಣವಾಚಕ

(ರಸಾಯನವಿಜ್ಞಾನ) ಚತುರ್ವೇಲೆನ್ಸೀಯ; ನಾಲ್ಕು ವೇಲೆನ್ಸಿಯ.

quadrivium

ನಾಮವಾಚಕ

(ಚರಿತ್ರೆ) ಮಧ್ಯಯುಗದಲ್ಲಿ ಯೂರೋಪಿನ ವಿಶ್ವವಿದ್ಯಾನಿಲಯಗಳಲ್ಲಿ ಕಲಿಸುತ್ತಿದ್ದ ಅಂಕಗಣಿತ, ಜ್ಯಾಮಿತಿ, ಖಗೋಳ ವಿಜ್ಞಾನ ಮತ್ತು ಸಂಗೀತ – ಈ ನಾಲ್ಕನ್ನೂ ಒಳಗೊಂಡ ಪಠ್ಯಚತುಷ್ಕ; ನಾಲ್ಕು ಪಠ್ಯ ವಿಷಯಗಳು.

quadroon

ನಾಮವಾಚಕ

ಕ್ವಾಡ್ರೂನ್‍; ಶ್ವೇತವರ್ಣೀಯ ಹಾಗೂ ಮಿಶ್ರವರ್ಣೀಯ ದಂಪತಿಗಳಿಗೆ ಹುಟ್ಟಿದವನು; ನಾಲ್ಕನೆಯ ಒಂದು ಪಾಲು ನೀಗ್ರೋ ರಕ್ತ ಉಳ್ಳವನು.

quadrophonic

ಗುಣವಾಚಕ

quadraphonic ಎಂಬ ಪದದ ರೂಪಾಂತರ.

quadrumanous

ಗುಣವಾಚಕ

ಚತುರ್ಹಸ್ತ; ನಾಲ್ಕು ಕೈಯುಳ್ಳ; ಪ್ರೈಮೇಟ್‍ ಗಣದಲ್ಲಿ ಮನುಷ್ಯನನ್ನುಳಿದು ಇತರ ಎಲ್ಲ ಪ್ರಾಣಿಗಳಲ್ಲಿ ಇರುವಂತೆ ಕೈರಚನೆಯನ್ನು ಹೋಲುವ ಪಾದಗಳಿರುವ, ನಾಲ್ಕು ಪಾದಗಳಲ್ಲಿಯೂ ಇತರ ನಾಲ್ಕು ಬೆರಳುಗಳಿಗೆ ಎದುರಾಗಿ ಇರುವ ಹೆಬ್ಬೆರಳುಗಳಿರುವ.

quadruped

ನಾಮವಾಚಕ

ಚತುಷ್ಪಾದಿ; ನಾಲ್ಕು ಕಾಲಿನ (ಮುಖ್ಯವಾಗಿ ಸಸ್ತನಿ ವರ್ಗದ) ಪ್ರಾಣಿ.

quadruped

ಗುಣವಾಚಕ

ಚತುಷ್ಪಾದಿ; ನಾಲ್ಕು ಕಾಲಿನ.

quadrupedal

ಗುಣವಾಚಕ

ಚತುಷ್ಪಾದಿಯ; ನಾಲ್ಕು ಕಾಲಿನ.

quadruple

ಗುಣವಾಚಕ

  • ಚತುಃಪಕ್ಷ; ಚತುರ್ಭಾಗ; ಚತುರಂಶೀ; ನಾಲ್ಕು ಪಕ್ಷಗಳು, ಭಾಗಗಳು ಯಾ ಅಂಶಗಳನ್ನು ಒಳಗೊಂಡ: quadruple alliance ಚತುಃಪಕ್ಷ ಸಂಬಂಧ.
  • (ಸಂಗೀತ) ಚತುಷ್ಕಾಲ: quadruple time (or rhythm) ಚತುಷ್ಕಾಲದ ಆವರ್ತ; ನಾಲ್ಕು ತಾಳಗಳು ಬೀಳುವಷ್ಟು ಪ್ರಮಾಣದ ಲಯ.
  • ನಾಲ್ಮಡಿ; ನಾಲ್ವಡಿ; ಚತುರ್ಗುಣ; ನಾಲ್ಕು ಪಟ್ಟಿನ; ಪ್ರಮಾಣದಲ್ಲಿ ಯಾ ಸಂಖ್ಯೆಯಲ್ಲಿ ಒಂದರ ನಾಲ್ಕರಷ್ಟಕ್ಕೆ ಸಮನಾದ.
  • ಪ್ರಮಾಣದಲ್ಲಿ ಯಾ ಸಂಖ್ಯೆಯಲ್ಲಿ ಒಂದರ ನಾಲ್ಕರಷ್ಟು ಮಿಗಿಲಾದ, ಉತ್ತಮವಾದ; ಚತುರ್ಗುಣಾ\-ಧಿಕ: has a light and heat quadruple of (or to that of) the earth ಭೂಮಿಯ ಬೆಳಕು ಮತ್ತು ಶಾಖಕ್ಕೆ ನಾಲ್ಕರಷ್ಟು ಮಿಗಿಲಾದ ಬೆಳಕು ಮತ್ತು ಶಾಖಗಳನ್ನು ಹೊಂದಿದೆ.

quadruple

ನಾಮವಾಚಕ

(ಒಂದು ಮೊತ್ತದ ಯಾ ಸಂಖ್ಯೆಯ) ನಾಲ್ಕು ಪಟ್ಟು; ಚತುರ್ಗುಣ; ನಾಲ್ಕರಷ್ಟು ಮೊತ್ತ ಯಾ ಸಂಖ್ಯೆ: the quadruple of (ಒಂದರ) ನಾಲ್ಕರಷ್ಟು; ಚತುರ್ಗುಣ.

Search Dictionaries

Loading Results

Follow Us :   
  Download Bharatavani App
  Bharatavani Windows App