भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

quantitative

ಗುಣವಾಚಕ

  • ಪರಿಮಾಣಾತ್ಮಕ; ಪರಿಮಾಣ ಸ್ವರೂಪದ; ಪರಿಮಾಣಕ್ಕೆ ಸಂಬಂಧಿಸಿದ; ಅಳತೆಯಾಗಿ ಯಾ ಸಂಖ್ಯೆಯಾಗಿ ನಿರೂಪಿಸಿದ ಯಾ ನಿರೂಪಿಸಬಹುದಾದ.
  • (ಛಂದಸ್ಸು) ಮಾತ್ರಾತ್ಮಕ; ಮಾತ್ರೆಗಳನ್ನವಲಂಬಿಸಿದ; ಮಾತ್ರೆಗಳಿಗೆ ಸಂಬಂಧಿಸಿದ: quantitative scansion ಮಾತ್ರಾಗಣನ; ಮಾತ್ರೆಗಳನ್ನು ನಿರ್ದೇಶಿಸಿ ಪ್ರಸ್ತಾರ ಹಾಕುವುದು. quantitative verse ಮಾತ್ರಾತ್ಮಕ ಛಂದಸ್ಸು.

quantitative analysis

ನಾಮವಾಚಕ

(ರಸಾಯನವಿಜ್ಞಾನ) ಪರಿಮಾಣಾತ್ಮಕ ವಿಶ್ಲೇಷಣೆ; ಒಂದು ಸಂಯುಕ್ತದಲ್ಲಿ ಯಾ ಮಿಶ್ರಣದಲ್ಲಿ ವಿವಿಧ ಘಟಕಗಳ ಪರಿಮಾಣಗಳನ್ನು ನಿರ್ಣಯಿಸಲು ನಡೆಸುವ ವಿಶ್ಲೇಷಣೆ.

quantitatively

ಕ್ರಿಯಾವಿಶೇಷಣ

  • ಪರಿಮಾಣಾತ್ಮಕವಾಗಿ; ಅಳತೆಯಾಗಿ ಯಾ ಸಂಖ್ಯೆಯಾಗಿ.
  • (ಛಂದಸ್ಸು) ಮಾತ್ರಾತ್ಮಕವಾಗಿ.

quantitive

ಗುಣವಾಚಕ

= quantitative.

quantitively

ಕ್ರಿಯಾವಿಶೇಷಣ

= quantitatively.

quantity

ನಾಮವಾಚಕ

ಪದಗುಚ್ಛ

  • ಪರಿಮಾಣ:
    1. ಯಾವುದೇ ಬಗೆಯ ಅಳತೆಯಿಂದ ನಿರ್ಣಯಿಸಬಹುದಾದ (ವಸ್ತುಗಳ) ಲಕ್ಷಣ.
    2. ಗಾತ್ರ, ವಿಸ್ತಾರ, ತೂಕ, ಮೊತ್ತ, ಸಂಖ್ಯೆ – ಈ ಲಕ್ಷಣಗಳನ್ನು ಪಡೆದಿರುವಿಕೆ: mathematics is the science of pure quantity ಗಣಿತವು ಶುದ್ಧಾಂಗವಾಗಿ ಪರಿಮಾಣವನ್ನು ಕುರಿತು ವಿಜ್ಞಾನ.
  • ಮೊತ್ತ; ಪ್ರಮಾಣ; ಪರಿಮಾಣ: quantity of the current depends on the size of the plates ವಿದ್ಯುತ್ಪ್ರವಾಹದ ಮೊತ್ತವು ತಗಡುಗಳ ಗಾತ್ರವನ್ನು ಅವಲಂಬಿಸುತ್ತದೆ.
  • (ಯಾವುದೇ ವಸ್ತುವಿನ ಯಾ ವಸ್ತುಗಳ) ನಿಗದಿಯಾದ ಯಾ ಗಣನೀಯವಾದ ಭಾಗ ಮೊತ್ತ ಯಾ ಸಂಖ್ಯೆ; ಪರಿಮಾಣ: the quantity of heat in the animal body ಪ್ರಾಣಿ ದೇಹದ ಶಾಖದ ಪರಿಮಾಣ. a quantity of baskets ಬುಟ್ಟಿಗಳ ಸಂಖ್ಯೆ; ಕೆಲವು ಬುಟ್ಟಿಗಳು.
  • (ಬಹುವಚನದಲ್ಲಿ) ಅಧಿಕ ಪ್ರಮಾಣಗಳು ಯಾ ಸಂಖ್ಯೆಗಳು; ವೆಗ್ಗಳ; ಹೇರಳ; ಸಮೃದ್ಧಿ: it is found in quantities on the shore ಅದು ತೀರ ಪ್ರದೇಶದಲ್ಲಿ ಹೇರಳವಾಗಿ ದೊರೆಯುತ್ತದೆ.
  • (ಛಂದಸ್ಸು) ಮಾತ್ರೆ; ಸ್ವರಾಕ್ಷರಗಳ ಹ್ರಸ್ವತೆ ಯಾ ದೀರ್ಘತೆ; ಸ್ವರಗಳನ್ನು ಉಚ್ಚರಿಸುವಲ್ಲಿ ಹಿಡಿಯುವ ಕಾಲ ಪ್ರಮಾಣ.
  • (ತರ್ಕಶಾಸ್ತ್ರ) ವ್ಯಾಪ್ತಿ; ವಿನಿಯೋಗ; ತಾರ್ಕಿಕ ವಾಕ್ಯದಲ್ಲಿ ‘ಎಲ್ಲ’, ‘ಕೆಲವು’ ಯಾ ‘ಹಲವು’ ಎಂಬ ಕರ್ತೃವಿಶೇಷಣಗಳಿಂದ ತಿಳಿದುಬರುವ, ವಿಧೇಯ ಪದದ ಅರ್ಥವು ಕರ್ತೃವಿನ ಜಾತಿಗೆ ಪೂರ್ಣವಾಗಿ ಅನ್ವಯಿಸುತ್ತದೆಯೇ ಇಲ್ಲವೇ, ಅದರ ಅಂಶಮಾತ್ರಕ್ಕೆ ಅನ್ವಯಿಸುತ್ತದೆಯೇ ಎಂಬುದನ್ನು ತಿಳಿಸುವ ಲಕ್ಷಣ.
  • (ಗಣಿತ)
    1. ಪರಿಮಾಣ; ಗಾತ್ರ, ತೂಕ, ಸಂಖ್ಯೆ, ಮೊದಲಾದ ಅಳೆಯಬಹುದಾದ ಲಕ್ಷಣವುಳ್ಳದ್ದು.
    2. ಅಂಥ ಪರಿಮಾಣವನ್ನು ಸೂಚಿಸುವ ಸಂಕೇತ ಯಾ ಸಂಖ್ಯೆ.

quantity mark

ನಾಮವಾಚಕ

(ಛಂದಸ್ಸು) ಮಾತ್ರಾ ಸಂಕೇತ; ಸ್ವರಾಕ್ಷರಗಳ ಹ್ರಸ್ವತೆ ಯಾ ದೀರ್ಘತೆಯನ್ನು ತೋರಿಸಲು ಹಾಕುವ ಗುರುತು.

quantity surveyor

ನಾಮವಾಚಕ

ಜರೀಬುಗಾರ; ಕಟ್ಟಡ ಸಮೀಕ್ಷಕ; ಕಟ್ಟಡವನ್ನು ಅಳೆದು ಅದರ ಖರ್ಚು ವೆಚ್ಚ, ಬೆಲೆ, ಮೊದಲಾದವನ್ನು ಲೆಕ್ಕ ಹಾಕುವವ.

quantization

ನಾಮವಾಚಕ

ಕ್ವಾಂಟೀಕರಣ:

  • (ಶಕ್ತಿಯ ವಿಷಯದಲ್ಲಿ) ಕ್ವಾಂಟಂಗಳಾಗಿ ಹೊರಬರುವಿಕೆ.
  • (ಯಾವುದೇ ಅಧ್ಯಯನದಲ್ಲಿ) ಕ್ವಾಂಟಂ ಮೆಕ್ಯಾನಿಕ್ಸನ್ನು ಅನ್ವಯಿಸುವಿಕೆ.

quantize

ಅಕರ್ಮಕ ಕ್ರಿಯಾಪದ

ಸಕರ್ಮಕ ಕ್ರಿಯಾಪದ

ಕ್ವಾಂಟೀಕರಿಸು; (ಶಕ್ತಿಯ ವಿಷಯದಲ್ಲಿ) ಕ್ವಾಂಟಂಗಳಾಗಿ ಹೊರಬರು. ಕ್ವಾಂಟೀಕರಿಸು; (ಯಾವುದೇ ಅಧ್ಯಯನದಲ್ಲಿ) ಕ್ವಾಂಟಂ ಮೆಕ್ಯಾನಿಕ್ಸನ್ನು ಅನ್ವಯಿಸು.

quantum

ನಾಮವಾಚಕ

  • ಮೊತ್ತ; ಪರಿಮಾಣ; ರಾಶಿ.
  • ಪಾಲು; ಭಾಗ.
  • ಅಗತ್ಯವಾದ ಯಾ ಅಪೇಕ್ಷಿತವಾದ ಯಾ ದತ್ತವಾದ—ಪರಿಮಾಣ; ಬೇಕಾದ, ಬಯಸಿದ ಯಾ ಪಾಲಿಗೆ ಬಂದ ಮೊತ್ತ.
  • (ಭೌತವಿಜ್ಞಾನ) ಕ್ವಾಂಟಮ್‍:
    1. ವಿಕಿರಣ ರೂಪದ ಶಕ್ತಿಯು ಆ ವಿಕಿರಣದ ಆವರ್ತನಕ್ಕೆ ಅನುಲೋಮವಾಗಿರುವ ನಿಶ್ಚಿತ ಭಾಗ.
    2. ಬೇರಾವುದೇ ಭೌತಪರಿಮಾಣದ ಅಂಥದೇ ನಿಶ್ಚಿತ ಭಾಗ.

quantum jump

ನಾಮವಾಚಕ

  • ಹಠಾತ್‍ ದ್ಧಿ ಯಾ ಹಠಾತ್‍ ಪ್ರಗತಿ; ಧಿಡೀರ್‍ ಹೆಚ್ಚಳ ಯಾ ಮುನ್ನಡೆ; ಇದ್ದಕ್ಕಿದ್ದಂತೆ ಭಾರಿ ಪ್ರಮಾಣದಲ್ಲಿ ಆದ ಹೆಚ್ಚಳ ಯಾ ಮುನ್ನಡೆ.
  • (ಭೌತವಿಜ್ಞಾನ) ಕ್ವಾಂಟಂ ಪ್ಲುತಿ; ಕ್ವಾಂಟಂ ನೆಗೆತ; ಪರಮಾಣು ಯಾ ಅಣು ಒಂದು ಕ್ವಾಂಟಂ ಸ್ಥಿತಿಯಿಂದ ಇನ್ನೊಂದಕ್ಕೆ ಥಟಕ್ಕನೆ ಹಾರುವುದು.

quantum leap

ನಾಮವಾಚಕ

= quantum jump.

quantum mechanics

ನಾಮವಾಚಕ

= quantum theory.

quantum theory

ನಾಮವಾಚಕ

(ಭೌತವಿಜ್ಞಾನ) ಕ್ವಾಂಟಂ ವಾದ; ಕ್ವಾಂಟಂ ಸಿದ್ಧಾಂತ; ಶಕ್ತಿ ವಿಸರಣವು ಪರಿಮಿತ ಸಂಖ್ಯೆಯ ಕ್ವಾಂಟಂಗಳೆಂಬ ತುಣುಕುಗಳಾಗಿರುವುದೆಂಬ ಮ್ಯಾಕ್ಸ್‍ ಪ್ಲಾಂಕ್‍ನ ಭಾವನೆಯ ಆಧಾರದ ಮೇಲೆ ನಿರ್ಮಿತವಾಗಿರುವ ಸಿದ್ಧಾಂತ.

quaquaversal

ಗುಣವಾಚಕ

(ಭೂವಿಜ್ಞಾನ) ಸರ್ವದಿಕ್ಕಿನ; ಎಲ್ಲ ದಿಕ್ಕುಗಳಿಗೂ ತಿರುಗಿರುವ; ಸರ್ವಾಭಿಮುಖ.

quarantine

ನಾಮವಾಚಕ

  • ಸಂಪರ್ಕ ತಡೆ; ಸಂಪರ್ಕ ನಿಷೇಧ; ಸೋಂಕು ರೋಗವನ್ನು ಹರಡಬಹುದಾದ ಪರಸ್ಥಳದಿಂದ ಬಂದ ಪ್ರಯಾಣಿಕರು ಯಾ ಪ್ರಾಣಿಗಳನ್ನು ಇತರರ ಸಂಪರ್ಕವಿಲ್ಲದಂತೆ ಬಲಾತ್ಕಾರ\-ವಾಗಿ ಬೇರ್ಪಡಿಸಿಡುವುದು.
  • (ಹೀಗೆ ಬೇರ್ಪಡಿಸಿಡುವ) ಸಂಪರ್ಕ ನಿಷೇಧಾವಧಿ.

quarantine

ಸಕರ್ಮಕ ಕ್ರಿಯಾಪದ

ಸಂಪರ್ಕ ತಡೆ, ನಿಷೇಧಿಸು; ಸಂಪರ್ಕನಿರೋಧ ಮಾಡು; ಸಂಪರ್ಕನಿರೋಧದಲ್ಲಿಡು; ಸೋಂಕುರೋಗವನ್ನು ಹರಡಬಹುದಾದ, ಪರಸ್ಥಳದಿಂದ ಬಂದ ಪ್ರಯಾಣಿಕರು, ಪ್ರಾಣಿಗಳನ್ನು ಇತರರ ಸಂಪರ್ಕವಿಲ್ಲದಂತೆ ಬಲಾತ್ಕಾರವಾಗಿ ಬೇರ್ಪಡಿಸಿಡು.

quark

ನಾಮವಾಚಕ

(ಭೌತವಿಜ್ಞಾನ) ಕ್ವಾರ್ಕ್‍; ಮೂಲಕಣಗಳೆಂದು ಪರಿಗಣಿಸಲಾಗಿದ್ದ ಪ್ರೋಟಾನ್‍, ನ್ಯೂಟ್ರಾನ್‍, ಮೊದಲಾದವುಗಳೆಲ್ಲವನ್ನೂ ರೂಪಿಸುವುವೆಂದೂ, ಭಿನ್ನಾಂಕ ವಿದ್ಯುದಾವೇಶ ಉಳ್ಳವೆಂದೂ ನಂಬಲಾಗಿರುವ ಪ್ರಕಾಲ್ಪನಿಕ ಕಣಗಳಲ್ಲೊಂದು.

quark

ನಾಮವಾಚಕ

ಕಡಮೆ ಕೊಬ್ಬಿನ (ಒಂದು ಬಗೆಯ) ಮೊಸರಿನ ಚೀಸು, ಗಿಣ್ಣು.

Search Dictionaries

Loading Results

Follow Us :   
  Download Bharatavani App
  Bharatavani Windows App