भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

quarrel

ನಾಮವಾಚಕ

ಪದಗುಚ್ಛ

  • ವ್ಯಾಜ್ಯ; ವಿವಾದ; ವ್ಯಕ್ತಿ, ಅವನ ಕ್ರಿಯೆಗಳು, ಮೊದಲಾದವುಗಳ ವಿರುದ್ಧ ಮಾಡುವ ಆಪಾದನೆಗೆ ಕಾರಣವಾಗುವ ಸಂದರ್ಭ, ವಿಷಯ: have no quarrel against (or with) him ಅವನ ಜತೆ ನನಗೇನೂ ಜಗಳವಿಲ್ಲ.
  • (ಪರಸ್ಪರ) ಜಗಳ; ಕಲಹ; ವ್ಯಾಜ್ಯ; ಕದನ; ಕಚ್ಚಾಟ.
  • ಸ್ನೇಹ ಯಾ ಬಾಂಧವ್ಯದ ವಿಚ್ಛೇದ.

quarrel

ಅಕರ್ಮಕ ಕ್ರಿಯಾಪದ

  • ದೂರು; ಆಕ್ಷೇಪಿಸು; ತಪ್ಪು – ಕಂಡುಹಿಡಿ, ಹೊರಿಸು: I never quarrel with Providence ದೈವವನ್ನು ನಾನೆಂದಿಗೂ ದೂರುವುದಿಲ್ಲ.
  • (ಯಾವುದೇ ಕಾರಣದಿಂದ, ಯಾವುದೇ ವಸ್ತುವಿಗಾಗಿ) ಜಗಳವಾಡು; ಕಾದಾಡು; ಕಚ್ಚಾಡು; ವ್ಯಾಜ್ಯವಾಡು.
  • ಸ್ನೇಹ, ಬಾಂಧವ್ಯ ತೊರೆ; ಮನಸ್ತಾಪ ತಂದುಕೊ; ವೈರ ಕಟ್ಟಿಕೊ.

quarrel

ನಾಮವಾಚಕ

(ಚರಿತ್ರೆ) ಅಡ್ಡಬಿಲ್ಲಂಬು; ಅಡ್ಡಬಿಲ್ಲಿನಿಂದ ಪ್ರಯೋಗಿಸುವ, ಮೋಟೂ ಭಾರವೂ ಆದ, ಚೌಕತುದಿಯ ಬಾಣ.

quarreller

ನಾಮವಾಚಕ

ಜಗಳಗಂಟ(ಟಿ); ಜಗಳ ಕಾಯುವವ(ಳು); ಜಗಳಕೋರ(ರಿ).

quarrelsome

ಗುಣವಾಚಕ

ಕಲಹಪ್ರಿಯ; ಜಗಳ ಕಾಯುವ ಸ್ವಭಾವದ; ಜಗಳ\-ಗಂಟಿಯಾದ.

quarrelsomely

ಕ್ರಿಯಾವಿಶೇಷಣ

ಕಲಹಪ್ರಿಯನ ರೀತಿಯಲ್ಲಿ; ಜಗಳಗಂಟಿಯಂತೆ; ಜಗಳಗಂಟಿಯಾಗಿ.

quarrelsomeness

ನಾಮವಾಚಕ

ಕಲಹಪ್ರಿಯತೆ; ಜಗಳಗಂಟಿತನ.

quarrian

ನಾಮವಾಚಕ

= cockatiel.

quarrion

ನಾಮವಾಚಕ

quarrian ಎಂಬ ಪದದ ರೂಪಾಂತರ.

quarry

ನಾಮವಾಚಕ

  • (ಹಾಸು ಬಂಡೆಯಿಂದ ಕಲ್ಲನ್ನೆಬ್ಬಿಸಿ ತೆಗೆಯುವಲ್ಲಿ ಉಂಟಾದ) ತೋಡುಕುಳಿ; ಕಲ್ಲುಗುಣಿ.
  • ಕಲ್ಲುಗಣಿ; ಬಂಡೆನೆಲೆ; ಶಿಲಾಶಯ; ಶಿಲಾಪಾತ್ರ; ಕಲ್ಪಣಿ; ಕಲ್ಲನ್ನು ಅಗೆದು ತೆಗೆಯಬಹುದಾದ ಸ್ಥಳ.
  • (ರೂಪಕವಾಗಿ) ಸುದ್ದಿ, ಸಮಾಚಾರ, ಮಾಹಿತಿ, ಮೊದಲಾದವುಗಳ – ಮೂಲ, ಆಕರ.

quarry

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಪ್ರಯಾಸದಿಂದ (ದಾಖಲೆಗಳು ಮೊದಲಾದವನ್ನು) ಹುಡುಕು.

  • (ಕಲ್ಲುಗಣಿಯಿಂದ) ಕಲ್ಲು ತೆಗೆ, ಅಗೆ; ಕಲ್ಲೆಬ್ಬಿಸು.
  • (ಗ್ರಂಥ ಮೊದಲಾದವುಗಳಿಂದ, ವಾಸ್ತವಾಂಶಗಳು ಮೊದಲಾದವನ್ನು) ಪ್ರಯಾಸಪಟ್ಟು ಸಂಗ್ರಹಿಸು.

quarry

ನಾಮವಾಚಕ

  • (ಮಾಂಸಾಹಾರಿಯಾದ ಪಕ್ಷಿ, ಬೇಟೆನಾಯಿ, ಬೇಟೆಗಾರ, ಮೊದಲಾದವರು ಬೆನ್ನಟ್ಟುವ) ಬೇಟೆ; ಶಿಕಾರಿ.
  • (ರೂಪಕವಾಗಿ) ಬೇಟೆ; ಒಬ್ಬನು ಅರಸುವ, ಹಿಡಿಯಲು ಬೆನ್ನಟ್ಟುವ ವ್ಯಕ್ತಿ ಯಾ ವಸ್ತು.

quarry

ನಾಮವಾಚಕ

ಪದಗುಚ್ಛ

quarry tile = 4quarry\((2)\).

  • (ಜಾಲರಿ ಕಿಟಕಿಗಳಿಗೆ ಬಳಸುವ) ವಜ್ರಾತಿಯ ಗಾಜು.
  • ಹಾಸು ಬಿಲ್ಲೆ; ನೆಲಕ್ಕೆ ಹಾಸುವ ಹೊಳಪಿಲ್ಲದ ಬಿಲ್ಲೆ.

quarryman

ನಾಮವಾಚಕ

ಕಲ್ಲುಗಣಿ ಕಾರ್ಮಿಕ; ಕಲ್ಲುಗಣಿಯಲ್ಲಿ ಕೆಲಸ ಮಾಡುವವ.

quart

ನಾಮವಾಚಕ

ಪದಗುಚ್ಛ

a quart into a pint pot

  • ಕ್ವಾರ್ಟ್‍:
    1. ಕಾಲು ಗ್ಯಾಲನ್‍ ಯಾ ಎರಡು ಪೈಂಟಿನ ಅಳತೆ.
    2. ಕಾಲು ಗ್ಯಾಲನ್ನು ಹಿಡಿಯುವ ಪಾತ್ರೆ, ಸೀಸೆ, ಮೊದಲಾದವು.
    3. (ಅಮೆರಿಕನ್‍ ಪ್ರಯೋಗ) ಬುಷಲ್‍ನ $\frac { 1} { 32}$ ಭಾಗ (1.1 ಲೀಟರು).
  • (ಕಾರ್ಟ್‍ ಎಂದು ಉಚ್ಚಾರಣೆ) (ಕತ್ತಿವರಿಸೆಯಲ್ಲಿ) ಏಟು ತಪ್ಪಿಸಿಕೊಳ್ಳುವ ಎಂಟು ಸ್ಥಾನಗಳಲ್ಲಿ ನಾಲ್ಕನೆಯದು.

quartan

ಗುಣವಾಚಕ

(ಜ್ವರ ಮೊದಲಾದವುಗಳ ವಿಷಯದಲ್ಲಿ) ಪ್ರತಿ ನಾಲ್ಕನೆಯ ದಿನ ಮರುಕಳಿಸುವ; ನಾಲ್ಕುದಿನಗಳ ಸರತಿಯ.

quarte

ನಾಮವಾಚಕ

= quart\((2)\).

quarter

ನಾಮವಾಚಕ

  • ಕಾಲು (ಪಾಲು, ಭಾಗ); ಪಾದ; ಚತುರ್ಥಾಂಶ; ನಾಲ್ಕನೆಯ ಒಂದು ಭಾಗ; ಯಾವುದೇ ವಸ್ತುವು ವಿಭಾಗವಾಗಿರುವ ಯಾ ಅದನ್ನು ವಿಭಾಗಿಸಬಹುದಾದ ನಾಲ್ಕು ಸಮಭಾಗಗಳಲ್ಲೊಂದು: divide the apple into quarters ಸೇಬಿನ ಹಣ್ಣನ್ನು ನಾಲ್ಕು ಪಾಲುಗಳಾಗಿ ವಿಭಾಗಿಸು. second quarter of the century ಈ ಶತಮಾನದ ದ್ವಿತೀಯ ಪಾದ. quarter of an hour ಕಾಲು ಗಂಟೆ; 15 ನಿಮಿಷಗಳ ಅವಧಿ.
  • (ಅಮೆರಿಕನ್‍ ಪ್ರಯೋಗ ಮತ್ತು ಕೆನಡಾ)
    1. ಕಾಲು ಡಾಲರ್‍; 25 ಸೆಂಟು.
    2. 25 ಸೆಂಟಿನ ನಾಣ್ಯ.
  • ಪ್ರಾಣಿಯ ಯಾ ಪಕ್ಷಿಯ ಮೃತದೇಹವನ್ನು ಕಡಿದಾಗ ಬರುವ, ಪ್ರತಿಭಾಗದಲ್ಲೂ ಒಂದು ಕಾಲು ಅಥವಾ ಒಂದು ರೆಕ್ಕೆ ಇರುವಂಥ ನಾಲ್ಕು ಭಾಗಗಳಲ್ಲೊಂದು; ಕಾಲುದೇಹ.
  • (ಚರಿತ್ರೆ) (ಬಹುವಚನದಲ್ಲಿ) ಕಾಲೊಡಲು; ಕಾಲುದೇಹ; ರಾಜದ್ರೋಹಿಯ ಯಾ ದೇಶದ್ರೋಹಿಯ ತಲೆ ಕಡಿದ ಮೇಲೆ ಅವನ ಮೈಯನ್ನು ಒಂದು ಕಾಲು ಅಥವಾ ಒಂದು ಕೈ ಸೇರಿದಂತೆ ತುಂಡರಿಸಿದ ನಾಲ್ಕು ಭಾಗಗಳಲ್ಲೊಂದು.
  • (ಸಾಮಾನ್ಯವಾಗಿ ಬಹುವಚನದಲ್ಲಿ) (ಬದುಕಿರುವ ಪ್ರಾಣಿಯ ಯಾ ಮನುಷ್ಯನ) ರೊಂಡಿ; ಸೊಂಟದ ಹಿಂಬದಿ.
  • ಹಡಗಿನ ಹಿಂಬದಿ; ಹಡಗಿನ ಪಾರ್ಶ್ವದಲ್ಲಿ ಪ್ರಧಾನ ಸರಪಣಿಗಳಿಗೆ ಹಿಂದಿರುವ ಭಾಗ.
  • (ವಂಶಲಾಂಛನ ವಿದ್ಯೆ) (ಮೇಲ್ಮೈಯನ್ನು ನಾಲ್ಕಾಗಿ ವಿಭಾಗಿಸಿದ) ಗುರಾಣಿಯ ಚತುರ್ಥ ಭಾಗ (dexter chief, sinister chief, dexter base, sinister base ಎಂಬವು ಈ ನಾಲ್ಕು ಭಾಗಗಳ ಹೆಸರುಗಳು).
  • (ವಂಶಲಾಂಛನ ವಿದ್ಯೆ) ಗುರಾಣಿಯ ಪ್ರಧಾನ ಚತುರ್ಥಾಂಶದಲ್ಲಿ (ಎಂದರೆ ನಡುವಣ ಚತುರ್ಥಾಂಶದಲ್ಲಿ) ಕೆತ್ತಿರುವ ಲಾಂಛನ.
  • (ಬ್ರಿಟಿಷ್‍ ಪ್ರಯೋಗ) (ಧಾನ್ಯದ ವಿಷಯದಲ್ಲಿ) 8 ಬುಷೆಲ್‍ಗಳ ಅಳತೆ.
  • (ಬ್ರಿಟಿಷ್‍ ಪ್ರಯೋಗ) ಕ್ವಾರ್ಟರ್‍; ಹಂಡ್ರೆಡ್‍ವೇಟ್‍ ತೂಕದ ಕಾಲುಭಾಗ; 28 ಪೌಂಡು ತೂಕ (ಯಾ ಅಮೆರಿಕನ್‍ ಪ್ರಯೋಗ 25 ಪೌಂಡು).
  • ಕಾಲು ಮಾರು (ಉದ್ದ ಯಾ ಆಳ).
  • ವರ್ಷದ – ಕಾಲು ಭಾಗ, ಪಾದ; ತ್ರಿಮಾಸ; ಮಾಸತ್ರಯ.
  • ತ್ರೈಮಾಸಿಕ; ಮೂರುತಿಂಗಳ ಕೊನೆಯಲ್ಲಿ ಯಾರಿಗೇ ಆಗಲಿ ಕೊಡುವ ವೇತನ, ಜೀವನಾಂಶ, ಮೊದಲಾದವು.
  • ಟರ್ಮು; ಶಾಲಾ ವರ್ಷದ (ಅಮೆರಿಕನ್‍ ಪ್ರಯೋಗದಲ್ಲಿ ವಿಶ್ವವಿದ್ಯಾನಿಲಯದ ಶೈಕ್ಷಣಿಕ ವರ್ಷದ) ಒಂದು ಭಾಗ.
    1. ವಾರ; ಚಾಂದ್ರಮಾನ ಮಾಸದ ಕಾಲುಭಾಗ.
    2. ಚಾಂದ್ರಮಾನ ತಿಂಗಳಿನ ಪ್ರಥಮ ದ್ವಿತೀಯ ಪಾದಗಳಿಗೆ (first quarter) ಯಾ ತೀಯ ಚತುರ್ಥ ಪಾದಗಳಿಗೆ (last quarter) ನಡುವೆ ಚಂದ್ರನಿರುವ ಸ್ಥಾನ.
  • ಕಾಲು ಗಂಟೆ; ಗಡಿಯಾರದಲ್ಲಿ ಯಾವುದೇ ಗಂಟೆಗೆ ಮುಂಚೆ ಯಾ ತರುವಾಯ 15 ನಿಮಿಷಗಳು: quarter to six ಆರಕ್ಕೆ ಕಾಲು ಗಂಟೆ ಇದೆ. quarter past six ಆರೂಕಾಲು ಗಂಟೆ; ಆರು ಹೊಡೆದು ಕಾಲು ಗಂಟೆ ಆಗಿದೆ.
  • (ಬ್ರಿಟಿಷ್‍ ಪ್ರಯೋಗ) ಪಾದ; ಕಾಲುಭಾಗ; ತೆರಿಗೆ ಮೊದಲಾದವನ್ನು ವಿಧಿಸುವಲ್ಲಿ 25 ಪೌಂಡಿಗೆ ಸಮವೆಂದು ಭಾವಿಸಲಾದ ಆಸ್ತಿಯ ಯಾ ಆದಾಯದ ಭಾಗ.
    1. ದಿಗ್ಭಾಗ; ದಿಕ್ಕು.
    2. ಆ ದಿಕ್ಕಿನಲ್ಲಿರುವ – ಪ್ರದೇಶ, ಎಡೆ: the wind blows from all quarters at once ಗಾಳಿಯು ಏಕಕಾಲದಲ್ಲಿ ಎಲ್ಲ ದಿಕ್ಕುಗಳಿಂದಲೂ ಬೀಸುತ್ತಿದೆ. flocked in from all quarters ಎಲ್ಲೆಡೆಗಳಿಂದಲೂ ಗುಂಪುಗುಂಪಾಗಿ ಬಂದು ನೆರೆದರು.
  • ಸರಬರಾಜಿನ, ನೆರವಿನ – ಮೂಲ, ದಿಕ್ಕು, ಕ್ಷೇತ್ರ: no help to be looked for from that quarter ಆ ಮೂಲದಿಂದ ಯಾವ ನೆರವನ್ನೂ ನಿರೀಕ್ಷಿಸಲಾಗದು.
  • (ಮುಖ್ಯವಾಗಿ ಒಂದು ವಿಶೇಷ ವರ್ಗದವರಿಗೆ ಮೀಸಲಾದ ಯಾ ಅಂಥ ವರ್ಗವು ವಾಸಿಸುವ) ನಗರಭಾಗ; ಕೇರಿ: the Jewish quarter ಯೆಹೂದ್ಯ ಕೇರಿ. residential quarter ಜನಗಳ ನಿವಾಸ ಭಾಗ.
  • (ಬಹುವಚನದಲ್ಲಿ)
    1. ಬೀಡು; ವಸತಿ; ನಿವಾಸ.
    2. (ಮುಖ್ಯವಾಗಿ ಸೈನ್ಯಗಳ) ಬೀಡು; ಬಿಡದಿ; ಬಿಡಾರ; ನೆಲೆ; ಶಿಬಿರ; ಪಾಳೆಯ; ಠಾಣೆ: winter quarters (ಮುಖ್ಯವಾಗಿ ಸೈನ್ಯದ) ಚಳಿಗಾಲದ ಪಾಳೆಯ.
  • (ಸಮರದಲ್ಲಿ ಶರಣಾಗತನಾದ ಶತ್ರುವಿಗೆ ಕೊಟ್ಟ ಯಾ ಶರಣಾಗತನಾಗಲೊಪ್ಪುವ ಶತ್ರುವಿಗೆ ಕೊಡುವುದಾಗಿ ಹೇಳುವ) ಪ್ರಾಣದಾನ; ಅಭಯ (ಪ್ರದಾನ): ask for quarter ಪ್ರಾಣದಾನ ಕೇಳಿಕೊ. cry quarter ಅಭಯ ನೀಡಿ ಎಂದು ಬೇಡಿಕೊ.
  • ಕಾಲು ಮೈಲಿಯ ಓಟದ ಪಂದ್ಯ ಯಾ ಓಟದ ಪಂದ್ಯದಲ್ಲಿ ಕಾಲು ಭಾಗದ ದೂರ: won the quarter ಕಾಲು ಮೈಲಿಯ ಓಟದ ಪಂದ್ಯವನ್ನು ಗೆದ್ದಿದ್ದಾನೆ.
  • (ಅಮೆರಿಕನ್‍ ಮತ್ತು ಆಸ್ಟ್ರೇಲಿಯನ್‍ ಕಾಲ್ಚೆಂಡಾಟ) ಕ್ವಾರ್ಟರು; ಪಂದ್ಯದ ನಾಲ್ಕು ಸಮನಾದ ಕಾಲಾವಧಿಗಳಲ್ಲಿ ಒಂದು.

quarter

ಸಕರ್ಮಕ ಕ್ರಿಯಾಪದ

  • ನಾಲ್ಕಾಗಿಸು; ನಾಲ್ಕು ಮಾಡು; ಚತುರ್ಥೀಕರಿಸು; ನಾಲ್ಕು ಸಮಭಾಗಗಳನ್ನಾಗಿ ವಿಭಾಗಿಸು.
  • (ಚರಿತ್ರೆ) (ದೇಶ ಯಾ ರಾಜದ್ರೋಹಿಯ ತ ದೇಹವನ್ನು) ಕಾಲುಭಾಗಗಳನ್ನಾಗಿ ತುಂಡರಿಸು.
  • (ವಂಶಲಾಂಛನ ವಿದ್ಯೆ)
    1. ವಂಶಲಾಂಛನವನ್ನು ಗುರಾಣಿಯ ಚತುರ್ಥಾಂಶಗಳಲ್ಲಿ ಕೆತ್ತು.
    2. ತನ್ನ ಸಾಲಿನ ವಂಶಲಾಂಛನದೊಡನೆ ಬೇರೊಬ್ಬನ ವಂಶಲಾಂಛನವನ್ನೂ ಸೇರಿಸು.
    3. (ಗುರಾಣಿಯನ್ನು) ವಿಭಾಗಿಸು; ಉದ್ದ ಯಾ ಅಡ್ಡ ಗೆರೆಗಳಿಂದ ನಾಲ್ಕು ಯಾ ಹೆಚ್ಚಿನ ಮನೆಗಳನ್ನಾಗಿ ವಿಭಾಗಿಸು.
    4. ಪರ್ಯಾಯ ಮನೆಗಳಲ್ಲಿ, ಭಾಗಗಳಲ್ಲಿ ಇರಿಸು.
  • (ಮುಖ್ಯವಾಗಿ ಸೈನಿಕರನ್ನು)
    1. ಬಿಡದಿಗಳಲ್ಲಿ ಇಳಿಸು, ಇರಿಸು; ಬೀಡುಬಿಡಿಸು.
    2. ಯಾವುದೇ ಊರಿನ ನಿವಾಸಿಗಳ ಮನೆಗಳಲ್ಲಿ ಬಲವಂತದಿಂದ ಇರಿಸು, ಸ್ಥಾಪಿಸು.
    3. ನಿರ್ದಿಷ್ಟ ಸ್ಥಳದಲ್ಲಿ ಸ್ಥಾಪಿಸು ಯಾ ನೆಲೆಗೊಳಿಸು.
  • (ಬೇಟೆನಾಯಿಗಳ ವಿಷಯದಲ್ಲಿ, ಬೇಟೆಯನ್ನರಸುತ್ತ) ಎಲ್ಲೆಡೆ ಸುತ್ತಾಡು; ದಿಕ್ಕು ದಿಕ್ಕುಗಳನ್ನೆಲ್ಲ ಸಂಚರಿಸು; ದಶದಿಕ್ಕುಗಳನ್ನೂ ಸುತ್ತಾಡು.
  • (ಮರದ ದಿಮ್ಮಿಯನ್ನು) ನಾಲ್ಕು ಭಾಗಗಳಾಗಿ ತುಂಡರಿಸಿ, ಹಲಗೆ ಕೊಯ್ಯು, ಎಳೆರಚನೆ ಚೆನ್ನಾಗಿ ಎದ್ದುಕಾಣುವಂತೆ ಅದನ್ನು ಹಲಗೆಗಳಾಗಿ ಕತ್ತರಿಸು.

quarter day

ನಾಮವಾಚಕ

ತ್ರೈಮಾಸಿಕ ದಿನ; ಮೂರು ತಿಂಗಳ ಕೊನೆಯಲ್ಲಿ ವೇತನ, ಕಂತು, ಜೀವನಾಂಶ, ಮೊದಲಾದವನ್ನು ಸಲ್ಲಿಸಬೇಕಾದ ದಿನ, ಯಾ ಗೇಣಿಯು ಮೊದಲಾಗುವ ಯಾ ಮುಗಿಯುವ ದಿನ.

Search Dictionaries

Loading Results

Follow Us :   
  Download Bharatavani App
  Bharatavani Windows App