भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

rabbinically

ಕ್ರಿಯಾವಿಶೇಷಣ

  • ರ್ಯಾಬೈಗಳಿಗೆ ಯಾ ಅವರ ಗ್ರಂಥಗಳಿಗೆ ಸಂಬಂಧಿಸಿದಂತೆ.
  • ಅತಿಸೂಕ್ಷ್ಮ ತರ್ಕ ಯಾ ವಿಶ್ಲೇಷಣೆಯಿಂದ ಕೂಡಿ.

rabbinism

ನಾಮವಾಚಕ

  • ಪ್ರಧಾನ ರ್ಯಾಬೈಗಳ ಉಪದೇಶ ಮತ್ತು ಸಂಪ್ರದಾಯ.
  • ಪ್ರಧಾನ ರ್ಯಾಬೈಗಳ ಪರಿಭಾಷೆ.

rabbinist

ನಾಮವಾಚಕ

ರ್ಯಾಬೈ ಪಂಥದವನು.

rabbit

ನಾಮವಾಚಕ

  • ಕುಂದಿಲಿ; ತನ್ನ ಸಹಜ ಪರಿಸರದಲ್ಲಿ ಕಂದು ಬೂದು ಬಣ್ಣದ, ಸಾಕಿದ ಜಾತಿಗಳಲ್ಲಿ ಕಪ್ಪು, ಬಿಳುಪು ಯಾ ಮಿಶ್ರವರ್ಣದ, ಮೊಲದ ಕುಲಕ್ಕೆ ಸೇರಿದ, ಒಂದು ಬಿಲವಾಸಿಯಾದ ದಂಶಕ.
  • (ಅಮೆರಿಕನ್‍ ಪ್ರಯೋಗ) ಮೊಲ.
  • ಕುಂದಿಲಿಯ ತುಪ್ಪುಳು, ಮೃದುರೋಮ.
  • (ಬ್ರಿಟಿಷ್‍ ಪ್ರಯೋಗ) (ಆಡುಮಾತು) ಯಾವುದೇ ಆಟದಲ್ಲಿ (ಮುಖ್ಯವಾಗಿ ಕ್ರಿಕೆಟ್‍, ಗಾಲ್ಫ್‍ ಯಾ ಲಾನ್‍ಟೆನಿಸ್‍ನಲ್ಲಿ) ಕಳಪೆ ಆಟಗಾರ.

rabbit

ಅಕರ್ಮಕ ಕ್ರಿಯಾಪದ

  • ಕುಂದಿಲಿ ಬೇಟೆ ಮಾಡು.
  • (ಬ್ರಿಟಿಷ್‍ ಪ್ರಯೋಗ) (ಆಡುಮಾತು) ಅತಿಯಾಗಿ ಹರಟೆಕೊಚ್ಚು; ಅಸಂಬದ್ಧವಾಗಿ ಮಾತಾಡು: rabbiting on about his holiday ತನ್ನ ರಜದ ಬಗ್ಗೆ ಹರಟೆ ಹೊಡೆಯುತ್ತ.

rabbit punch

ನಾಮವಾಚಕ

ಕೈಯ ತುದಿಯಿಂದ ಹೆಕ್ಕತ್ತಿನ ಮೇಲೆ ಹೊಡೆದ ಕೊಚ್ಚೇಟು.

rabbit-hutch

ನಾಮವಾಚಕ

ಕುಂದಿಲಿಗೂಡು; ಕುಂದಿಲಿಗಳನ್ನು ಕೂಡುವ ಪೆಟ್ಟಿಗೆಯಂಥ ಗೂಡು.

rabbit-warren

ನಾಮವಾಚಕ

ಕುಂದಿಲಿಗಳನ್ನು ಬೆಳೆಸುವ ಆವರಣ.

rabbity

ಗುಣವಾಚಕ

ಕುಂದಿಲಿಯ ಯಾ ಕುಂದಿಲಿಯಂಥ.

rabble

ನಾಮವಾಚಕ

ಪದಗುಚ್ಛ

the rabble

  • ದೊಂಬಿ; (ಯದ್ವಾತದ್ವಾ ಸೇರಿರುವ) ಜನಜಂಗುಳಿ.
  • ಕೀಳುಮಂದಿ; ಕ್ಷುದ್ರಸಮೂಹ.
  • ಜನತೆಯಲ್ಲಿ ಕೀಳುದರ್ಜೆಯವರು.

rabble

ನಾಮವಾಚಕ

(ಕಾದು ಕರಗಿದ ಲೋಹ ಮೊದಲಾದವನ್ನು ಕಲಕಲು ಬಳಸುವ) ಬಾಗುತುದಿಯ ಕಬ್ಬಿಣದ ಸರಳು; ಕೊಕ್ಕೆಸಲಾಕಿ.

rabble-rouser

ನಾಮವಾಚಕ

ದೊಂಬಿ ಪ್ರೇರಕ, ಪ್ರಚೋದಕ; ರಾಜಕೀಯ ಯಾ ಸಾಮಾಜಿಕ ಬದಲಾವಣೆಗಾಗಿ ಜನತೆಯನ್ನು, ಜನರ ಗುಂಪನ್ನು ಪ್ರಚೋದಿಸುವವ, ಚಿತಾಯಿಸುವವ.

rabble-rousing

ಗುಣವಾಚಕ

ಜನಜಂಗುಳಿಯ ಭಾವನೆಗಳನ್ನು ಕೆರಳಿಸುವ, ಪ್ರಚೋದಿಸುವ.

rabble-rousing

ನಾಮವಾಚಕ

ದೊಂಬಿ ಪ್ರಚೋದನೆ; ಜನಜಂಗುಳಿಯ ಭಾವನೆಗಳನ್ನು ಕೆರಳಿಸುವುದು.

rabblement

ನಾಮವಾಚಕ

(ಈಗ ವಿರಳ ಪ್ರಯೋಗ)

  • ದೊಂಬಿ.
  • ದೊಂಬಿಯ ಗಲಭೆ, ರಾದ್ಧಾಂತ, ಗದ್ದಲ.

Rabelaisian

ಗುಣವಾಚಕ

  • ರ್ಯಾಬೆಲೆ ಎಂಬ ಹ್ರೆಂಚ್‍ ವಿನೋದ ಸಾಹಿತಿಯ.
  • ರ್ಯಾಬೆಲೆಯಂಥ.
  • (ಉಕ್ಕಿಹರಿಯುವ ಕಲ್ಪನೆ, ನಿರರ್ಗಳ ಭಾಷೆ, ಅಶ್ಲೀಲ ಹಾಸ್ಯ ಹಾಗೂ ಒರಟು ವಿಡಂಬನೆಗಳನ್ನೇ ವೈಶಿಷ್ಟ್ಯವಾಗಿ ಉಳ್ಳ) ರ್ಯಾಬೆಲೆಯ ಬರಹಗಳಂಥ.

Rabelaisian

ನಾಮವಾಚಕ

ರ್ಯಾಬೆಲೆಯ ಕೃತಿಗಳ ವ್ಯಾಸಂಗಿ ಯಾ ರ್ಯಾಬೆಲೆಯ ಅಭಿಮಾನಿ.

rabid

ಗುಣವಾಚಕ

  • ಕ್ರೋಧೋನ್ಮತ್ತ; ಉಗ್ರ ಕೋಪದ: rabid hate ಕ್ರೋಧೋನ್ಮತ್ತ ದ್ವೇಷ.
  • ಮೂರ್ಖಾವೇಶದ; ಬುದ್ಧಿಶೂನ್ಯ; ವಿವೇಕರಹಿತ; ದುಡುಕಿನ; ಪೂರ್ವಾಪರಜ್ಞಾನವಿಲ್ಲದ: rabid isolationist ವಿವೇಕರಹಿತ ಪ್ರತ್ಯೇಕತಾವಾದಿ.
  • (ಮುಖ್ಯವಾಗಿ ನಾಯಿಯ ವಿಷಯದಲ್ಲಿ).
    1. ಹುಚ್ಚುತಗುಲಿದ; ನಾಯಿಹುಚ್ಚಿನ.
    2. ಹುಚ್ಚು ಹಿಡಿದ.
  • ನಾಯಿಹುಚ್ಚಿಗೆ ಸಂಬಂಧಿಸಿದ; ನಾಯಿ ಹುಚ್ಚಿನ.

rabidity

ನಾಮವಾಚಕ

  • ಕ್ರೋಧೋನ್ಮತ್ತತೆ.
  • ಮೂರ್ಖಾವೇಶತೆ; ವಿವೇಕಶೂನ್ಯತೆ; ದುಡುಕುತನ.
  • ನಾಯಿಹುಚ್ಚು ಯಾ ಆ ಹುಚ್ಚು ತಗುಲಿದ ಸ್ಥಿತಿ.
  • ಹುಚ್ಚು ಹಿಡಿದಿರುವಿಕೆ.

rabidly

ಕ್ರಿಯಾವಿಶೇಷಣ

  • ಕ್ರೋಧೋನ್ಮತ್ತನಾಗಿ.
  • ಮೂರ್ಖಾವೇಶದಿಂದ; ವಿವೇಕ ರಹಿತನಾಗಿ; ದುಡುಕಿನಿಂದ.
  • ನಾಯಿಹುಚ್ಚು ಹಿಡಿದು.
  • ಹುಚ್ಚುಹಿಡಿದಂತೆ.

Search Dictionaries

Loading Results

Follow Us :   
  Download Bharatavani App
  Bharatavani Windows App