भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

rummager

ನಾಮವಾಚಕ

ಶೋಧಕ; ಶೋಧಿಸಿ, ಹುಡುಕಿ, ಕೆದಕಿ, ಬೆದಕಿ – ತೆಗೆಯುವವನು.

rummer

ನಾಮವಾಚಕ

ದೊಡ್ಡ ಗಾಜು ಲೋಟ, ಬಟ್ಟಲು (ಮುಖ್ಯವಾಗಿ ಮದ್ಯದ ಬಟ್ಟಲು).

rummily

ಕ್ರಿಯಾವಿಶೇಷಣ

= rumly.

rumminess

ನಾಮವಾಚಕ

= rumness.

rummy

ನಾಮವಾಚಕ

ರಮ್ಮಿ ಇಸ್ಪೀಟ್‍ ಆಟ; ಎರಡು ಕಟ್ಟು (ಪ್ಯಾಕು) ಇಸ್ಪೀಟೆಲೆಗಳಿಂದ ಕೂಡಿದ್ದು, ಎಲೆಗಳನ್ನು ಸೆಟ್ಟುಗಳಾಗಿ, ಅನುಕ್ರಮವಾಗಿ ಜೋಡಿಸಿ ಆಡುವ ಒಂದು ಬಗೆಯ ಇಸ್ಪೀಟ್‍ ಆಟ.

rummy

ಗುಣವಾಚಕ

(ಬ್ರಿಟಿಷ್‍ ಪ್ರಯೋಗ) (ಆಡುಮಾತು) = 2rum.

rumness

ನಾಮವಾಚಕ

(ಅಶಿಷ್ಟ) ವಿಲಕ್ಷಣತೆ; ವಕ್ರತೆ; ವೈಚಿತ್ರ್ಯ.

rumor

ನಾಮವಾಚಕ

(ಅಮೆರಿಕನ್‍ ಪ್ರಯೋಗ) = 1rumour.

rumor

ಸಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ) = 2rumour.

rumour

ನಾಮವಾಚಕ

 • ಬೀದಿಮಾತು; ಬೀದಿಸುದ್ದಿ; ಗುಲ್ಲು; ವದಂತಿ; ಜನವಾರ್ತೆ; ಸಂಶಯಗ್ರಸ್ತವಾದ – ಹೇಳಿಕೆ ಯಾ ಸುದ್ದಿ: a rumour of war ಯುದ್ಧದ ವದಂತಿ.
 • ಗಾಳಿ – ಸಮಾಚಾರ, ವರ್ತಮಾನ; ಚಾಲ್ತಿಯಲ್ಲಿರುವ, ಗಾಳಿಯಲ್ಲಿರುವ, ಆದರೆ ಖಚಿತಪಡಿಸದ ಸುದ್ದಿ, ಹೇಳಿಕೆ, ವರ್ತಮಾನ: heard a rumour that you are leaving ನೀನು ಹೊರಡುತ್ತಿದ್ದೀಯೆ ಎಂಬ ಗಾಳಿವರ್ತಮಾನ ಕೇಳಿದೆ.

rumour

ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ಕರ್ಮಣಿಪ್ರಯೋಗ) ಸುದ್ದಿಹರಡು; ವದಂತಿ ಇರು: it is rumoured that the king is dead ದೊರೆ ಸತ್ತಿದ್ದಾನೆಂದು ಸುದ್ದಿ ಹರಡಿದೆ.

rump

ನಾಮವಾಚಕ

ಪದಗುಚ್ಛ

the Rump (ಚರಿತ್ರೆ) ಇಂಗ್ಲೆಂಡಿನ ದೀರ್ಘಾವಧಿಯ ಪಾರ್ಲಿಮೆಂಟಿನ ಪುನಸ್ಥಾಪನೆಯ (1659) ಅನಂತರದ ಯಾ ಕರ್ನಲ್‍ ಪ್ರೈಡ್‍ ನಡೆಸಿದ ಪಾರ್ಲಿಮೆಂಟಿನ ಶುದ್ಧೀಕರಣದಿಂದ ಅದು ಮೊದಲ ಬಾರಿಗೆ ವಿಸರ್ಜನೆಗೊಳ್ಳುವ ಕಾಲದವರೆಗೂ (1648-1653) ಇದ್ದ ಪಾರ್ಲಿಮೆಂಟಿನ ಶೇಷಭಾಗ.

 • (ಪ್ರಾಣಿಯ, ಹಕ್ಕಿಯ) ಹಿಂಭಾಗ; ಕುಂಡೆ; ಅಂಡು; ಪಿರ್ರೆ; ಪೃಷ್ಠ; ಬಾಲ ಹುಟ್ಟುವ ಭಾಗ.
 • (ಶಾಸನಸಭೆ ಮೊದಲಾದವುಗಳ) ಅಲ್ಪಸಂಖ್ಯೆಯ ಕೊನೆಯುಳಿಕೆ ಸದಸ್ಯರು; ಕಡೆಗೆ ಉಳಿದ ಅಲ್ಪಸ್ವಲ್ಪ ಜನ ಯಾ ನಿಷ್ಟ ಭಾಗ; ಶೇಷಭಾಗ; ಅವಶೇಷ.

rump steak

ನಾಮವಾಚಕ

ದನದ ರೊಂಡಿಯ ಮಾಂಸದ ತುಂಡು.

rumple

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

(ಬಟ್ಟೆ, ಎಲೆ, ಉಡುಪು, ಕೂದಲು ಮೊದಲಾದವನ್ನು) ಸುಕ್ಕು ಮಾಡು; ಮಡಿಕೆ ಬೀಳಿಸು; ಕೆದರು; ಮುದುರು; ನಲುಗಿಸು. (ಬಟ್ಟೆ, ಎಲೆ, ಉಡುಪು ಮೊದಲಾದವು) ಸುಕ್ಕಾಗು; ಮುದುರು; ಕೆದರು; ನಲುಗು.

rumpless

ಗುಣವಾಚಕ

(ಪ್ರಾಣಿಯ, ಹಕ್ಕಿಯ ವಿಷಯದಲ್ಲಿ) ಬಾಲವಿಲ್ಲದ.

rumply

ಗುಣವಾಚಕ

(ಬಟ್ಟೆ, ಉಡುಪು ಮೊದಲಾದವು) ಸುಕ್ಕುಸುಕ್ಕಾಗಿರುವ; ನಲುಗಿರುವ.

rumpus

ನಾಮವಾಚಕ

(ಆಡುಮಾತು) ರಂಪ; ಗದ್ದಲ; ಗಲಭೆ; ಕೋಲಾಹಲ; ದೊಂಬಿ.

rumpus room

ನಾಮವಾಚಕ

(ಅಮೆರಿಕನ್‍ ಪ್ರಯೋಗ) ರಂಪದ ರೂಮು; ಗಲಾಟೆ ಕೋಣೆ; ಆಟದ ಕೊಠಡಿ; ಆಟ ಆಡಲು ಮನೆಯ ತಳ ಅಂತಸ್ತಿನಲ್ಲಿರುವ ಕೊಠಡಿ.

rumpy

ನಾಮವಾಚಕ

ಬಾಲವಿಲ್ಲದ ಒಂದು ಜಾತಿಯ ಬೆಕ್ಕು.

run

ಕ್ರಿಯಾಪದ

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಪದಗುಚ್ಛ

 • (ನಿರ್ದಿಷ್ಟ ದ್ರವದಿಂದ) ತುಂಬಿ ಹರಿ: rivers are said to run blood after an engagement ಯುದ್ಧವೊಂದರ ತರುವಾಯ ನದಿಗಳು ರಕ್ತದಿಂದ ಹರಿಯುತ್ತವೆ ಎಂದು ಹೇಳಲಾಗಿದೆ.
 • (ನೀರು ಮೊದಲಾದವನ್ನು) ಹರಿಸು; ಹರಿಯುವಂತೆ ಮಾಡು; ಸುರಿಸು; ಸೂಸು; ಸ್ರವಿಸು (ರೂಪಕವಾಗಿ ಸಹ): fountains run wine ಕಾರಂಜಿಗಳು ಮದ್ಯವನ್ನು ಉಕ್ಕಿಹರಿಸುತ್ತವೆ.
 • (ಸ್ನಾನದ ತೊಟ್ಟಿಗೆ) ನೀರು ತುಂಬು.
 • ಮಾರ್ಗ ಹಿಡಿ: run a scent ಬೇಟೆಯಲ್ಲಿ ವಾಸನೆ ಹಿಡಿದು ಹೋಗು.
 • ಅನುಸರಿಸು: things must run their course ಘಟನೆಗಳು ತಮ್ಮ ಹಾದಿಯನ್ನು, ಸಂದರ್ಭಗಳು ತಮ್ಮ ಮಾರ್ಗವನ್ನು ಅನುಸರಿಸಲೇಬೇಕು.
 • (ಒಂದರೊಳಕ್ಕೆ) ಹೊಗಿಸು; ತೂರಿಸು; ನಾಟಿಸು.
 • (ಕ್ರಿಕೆಟ್‍) (ಬ್ಯಾಟುಗಾರನ ವಿಷಯದಲ್ಲಿ) ರನ್‍ ಗಳಿಸಲು ಒಂದು ವಿಕೆಟ್ಟಿನಿಂದ ಇನ್ನೊಂದಕ್ಕೆ ಓಡು.
 • (ಪಂದ್ಯವನ್ನು, ದೂರವನ್ನು) ಓಡು: run a race ಓಟದ ಪಂದ್ಯದಲ್ಲಿ ಓಡು.
 • ಅಲೆ; ಸುತ್ತು: run the streets ಬೀದಿಗಳಲ್ಲಿ ಅಲೆ; ಬೀದಿಪೋರನಾಗು; ಬಿಕಾರಿಯಾಗಿ ಅಲೆ.
 • ಈಡಾಗು; ಒಳಗಾಗು: run risks ಅಪಾಯಗಳಿಗೆ ಈಡಾಗು.
 • ನಡಸು; ನಿರ್ವಹಿಸು: the Derby was run in a snow-storm ಡಾರ್ಬಿ ಕುದುರೆ ಜೂಜು ಹಿಮಪಾತದಲ್ಲಿ ನಡೆಯಿತು.
 • (ಬಟ್ಟೆಗೆ) ದಾಟು ಹೊಲಿಗೆ ಹಾಕು.
 • ಬೆನ್ನಟ್ಟು; ಬೇಟೆಯಾಡು: run the fox five miles ನರಿಯನ್ನು ಐದು ಮೈಲಿ ದೂರ ಅಟ್ಟಿಸಿಕೊಂಡು ಹೋಗು.
 • (ಯಂತ್ರ, ವಾಹನ ಮೊದಲಾದವನ್ನು) ಓಡಿಸು; ನಡೆಸು; ಚಾಲನೆಗೊಳಿಸು; ಓಡುವಂತೆ ಮಾಡು.
 • (ದನ ಮೊದಲಾದವನ್ನು) ಮೇಯಲು ಬಿಡು, ಆಟ್ಟು, ಹೊಡೆ: run cattle ದನಕರುಗಳನ್ನು ಮೇಯುವುದಕ್ಕೆ ಹೊಡೆ.
 • (ಹಣ ಸಲ್ಲಿಸುವ ಮುಂಚೆ ಲೆಕ್ಕವನ್ನು) ಏರಲು ಬಿಡು; ಇನ್ನೂ ಹೆಚ್ಚಾಗಲು, ಇನ್ನೂ ಬೆಳೆಯಲು – ಬಿಡು.
 • (ಲೇಖನ ಮೊದಲಾದವನ್ನು) ತ್ತಪತ್ರಿಕೆ ಯಾ ನಿಯತಕಾಲಿಕದಲ್ಲಿ ಪ್ರಕಟಿಸು.
 • (ವ್ಯಕ್ತಿಯನ್ನು) ಚುನಾವಣೆಗೆ ನಿಲ್ಲಿಸು, ಸೂಚಿಸು ಯಾ ಬೆಂಬಲಿಸು.
 • (ವ್ಯಾಪಾರ, ಉದ್ಯಮ ಮೊದಲಾದವನ್ನು) ನಿರ್ವಹಿಸು; ನಡೆಸು; ನಿರ್ದೇಶಿಸು.
 • (ವಾಹನವನ್ನು) ಸ್ವಂತವಾಗಿ ಇಟ್ಟುಕೊಂಡು ನಿಯತವಾಗಿ ಬಳಸು, ಓಡಿಸು.
 • ಒಂದು ನಿರ್ದಿಷ್ಟ ರೀತಿಯಲ್ಲಿ ಓಡಿಸು, ನಡೆಸು, ಚಲಿಸುವಂತೆ ಮಾಡು: ran the car into a tree ಕಾರನ್ನು ಮರಕ್ಕೆ ಡಿಕ್ಕಿ ಹೊಡೆಸಿದ.
 • (ಕಣ್ಣನ್ನು) ಸ್ಥೂಲವಾಗಿ – ಓಡಿಸು, ಆಡಿಸು: ran my eye down the page ಪುಟದ ಮೇಲೆ ಸ್ಥೂಲವಾಗಿ ಕಣ್ಣಾಡಿಸಿದೆ.
 • ಪಂದ್ಯಕ್ಕೆ (ಕುದುರೆ ಮೊದಲಾದವನ್ನು) ಇಳಿಸು, ಭಾಗಿಯಾಗಿಸು, ಸ್ಪರ್ಧಿಯನ್ನಾಗಿಸು.
 • (ಬಂದೂಕು ಮೊದಲಾದವನ್ನು) ಕಳ್ಳಸಾಗಣೆ ಮಾಡು; ಕಾನೂನುಬಾಹಿರವಾಗಿ, ಕಳ್ಳತನದಲ್ಲಿ (ದೇಶ ಮೊದಲಾದವುಗಳ ಒಳಕ್ಕೆ) ನುಗ್ಗಿಸು.
 • ವಾಹನದಲ್ಲಿ (ವ್ಯಕ್ತಿಯನ್ನು) ಕರೆದುಕೊಂಡು ಹೋಗು: run a person to the shop ವ್ಯಕ್ತಿಯನ್ನು ಅಂಗಡಿಗೆ ವಾಹನದಲ್ಲಿ ಕೂರಿಸಿಕೊಂಡು, ಕರೆದುಕೊಂಡು ಹೋಗು.
 • (ವಹಿಸಿದ ಕೆಲಸ) ಮಾಡು; ಮಾಡಿ ಮುಗಿಸು; ನಿರ್ವಹಿಸು.

Search Dictionaries

Loading Results

Follow Us :   
  Download Bharatavani App
  Bharatavani Windows App