भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

run

ನಾಮವಾಚಕ

ಪದಗುಚ್ಛ

  1. ಓಟ; ಧಾವನ; ಓಡುವುದು.
  2. ದೌಡು; ಪಲಾಯನ.
  3. ಓಟದ ದೂರ, ಕಾಲ.
 • ನಿರ್ದಿಷ್ಟ ಕಾಲದಲ್ಲಿ (ಸಾಮಾನ್ಯವಾಗಿ 24 ಗಂಟೆಗಳಲ್ಲಿ) ಹಡಗು ಪ್ರಯಾಣ ಮಾಡಿದ ದೂರ.
 • (ಕ್ರಿಕೆಟ್‍) ಓಟ; ರನ್ನು; ಧಾವನಾಂಕ;
  1. ದಾಂಡುಗಾರರು (ಎರಡೂ ಕಡೆಗಳ ವಿಕೆಟ್ಟುಗಳ ನಡುವೆ) ಓಡುವ ಓಟ.
  2. ಹೀಗೆ ಯಾ ಇತರ ರೀತಿಯಲ್ಲಿ ಪಡೆದ ಗೆಲ್ಲಂಕ.
  3. (ಬೇಸ್‍ಬಾಲ್‍) ದಾಂಡುಗಾರನು ಚೆಂಡು ಹೊಡೆದು ಓಡಿ ಪಡೆದ ಅಂಕ.
 • ವೇಗದ ಚಲನೆ, ಗತಿ.
 • ನಿಯತವಾದ ಮಾರ್ಗ.
 • ಧಾಟಿ; ಓಟ; ಗತಿ; ವಿಧಾನ; ರೀತಿ; ಫಕ್ಕಿ; ಮರ್ಮ: cannot get the run of the metre ಛಂದಸ್ಸಿನ ಓಟವೇ ತಿಳಿಯುವುದಿಲ್ಲ, ಸಿಕ್ಕುವುದಿಲ್ಲ.
 • ಥಟ್ಟನೆಯ ಬೀಳು, ಇಳಿತ: come down with a run (ಕಟ್ಟಡ, ಮನುಷ್ಯ, ವಾಯುಭಾರ ಮಾಪಕದಲ್ಲಿಯ ಪಾದರಸ, ಬೆಲೆ ಮೊದಲಾದವು) ಸರ್ರನೆ ಬಿದ್ದು ಹೋಗು; ಥಟ್ಟನೆ ಇಳಿದುಬಿಡು.
 • (ಸಂಗೀತ) ಚುರುಕಾಗಿ ವಾದನಮಾಡಿದ ಯಾ ಹಾಡಿದ ಸ್ವರಶ್ರೇಣಿ.
 • ಸಂತತ ಸರಣಿ; ಪರಂಪರೆ; ಶ್ರೇಣಿ; ಅವಧಿ: a long run of power ದೀರ್ಘಾವಧಿಯ ಅಧಿಕಾರ.
 • ಉದ್ದ; ಲಾಂಬಿ: a 500 ft. run of pipe 500 ಅಡಿ ಉದ್ದದ ಕೊಳಾಯಿ.
 • ಸಾಮಾನ್ಯ ವರ್ಗ; ಸಾಧಾರಣ, ಸಾದಾ – ತರಗತಿ, ಮಾದರಿ: the common run of men ಸಾಮಾನ್ಯ ಜನ.
 • (ಸರಕಿನ, ಸಾಮಾನುಗಳ)ವರ್ಗ; ದರ್ಜೆ; ಬಗೆ; ರೀತಿ; ತೆರ; ತರಗತಿ: a superior run of blouses ಉತ್ತಮ ಬಗೆಯ ರವಿಕೆಗಳು.
  1. (ಒಟ್ಟಿಗೆ ಹುಟ್ಟಿದ ಯಾ ಬೆಳೆಸಿದ) ಪ್ರಾಣಿಗಳ ಮಂದೆ, ಹಿಂಡು.
  2. ಚಲಿಸುತ್ತಿರುವ ಮೀನುಗಳ ತಂಡ.
 • (ಕೆಲವು ಪ್ರಾಣಿಗಳು ಹೋಗುವ) ಮಾಮೂಲಿ – ಜಾಡು, ಹಾದಿ.
 • (ಕೋಳಿ ಮೊದಲಾದವುಗಳ) ಆವರಣ; ಸುತ್ತುಗಟ್ಟಿನ ಪ್ರದೇಶ.
 • ಮೇವಿನ ಬಯಲು; ಮೇವುಗಾವಲು; ಹುಲ್ಲುಗಾವಲು: sheep run ಕುರಿಗಾವಲು.
 • (ನೀರು ಹರಿಯುವುದಕ್ಕಾಗಿ ಇರುವ) ಕೊಳವಿ; ದೋಣಿ.
 • (ಹಿಂಭಾಗಕ್ಕೆ ಕಿರಿದಾಗುತ್ತಾ ಹೋಗುವ) ಹಡಗಿನ ತಳಭಾಗ.
 • ಉಪಯೋಗ ಸ್ವಾತಂತ್ರ್ಯ; ಬಳಸುವ ಸ್ವಾತಂತ್ರ್ಯ; ಉಪಯೋಗಿಸುವ ಅಧಿಕಾರ: allowed him the run of their books ಅವರ ಪುಸ್ತಕಗಳನ್ನು ಉಪಯೋಗಿಸುವ ಸ್ವಾತಂತ್ರ್ಯವನ್ನು ಅವನಿಗೆ ಕೊಡಲಾಯಿತು.
  1. (ವಿಮಾನದ ವಿಷಯದಲ್ಲಿ) ಸಿಡಿಗುಂಡುಗಳನ್ನು ಹಾಕುವ ಮುಂಚೆ ಯಾ ಹಾಕುತ್ತಿರುವಾಗಿನ ನೇರವಾದ, ಮಟ್ಟವಾದ ಹಾಗೂ ಒಂದೇ ವೇಗದ ಹಾರಾಟ.
  2. (ಮುಖ್ಯವಾಗಿ ವಿಮಾನದ) ಒಂದು ಹಾರಾಟ.
 • ಕಿರು ಪ್ರವಾಸ (ಮುಖ್ಯವಾಗಿ ಸಂತೋಷಕ್ಕಾಗಿ ಮಾಡಿದ್ದು).
 • (ಸರಕು, ಹಣ ಮೊದಲಾದವುಗಳಿಗಾಗಿ) ತುಂಬ ಬೇಡಿಕೆ: a run on the dollar ಡಾಲರಿಗೆ ತುಂಬ ಬೇಡಿಕೆ.
 • (ಬ್ಯಾಂಕಿನ) ಹಣ ವಾಪಸಾತಿಗೆ ಹಠಾತ್‍ ಬೇಡಿಕೆ; ತಮ್ಮ ಗಿರಾಕಿಗಳು ಇದ್ದಕ್ಕಿದ್ದಂತೆ ತಮ್ಮ ಹಣ ಹಿಂದಿರುಗಿಸುವಂತೆ ಕೇಳುವುದು.
 • ಒಂದು ಸೂಳಿನ ಉತ್ಪಾದನೆ; ಒಂದು ಸಲದ ಉತ್ಪಾದನೆಯಲ್ಲಿ ದೊರೆತ ಪ್ರಮಾಣ: a print run ಮುದ್ರಣದ ಸಂಖ್ಯೆ.
 • (ಕಾಲುಚೀಲ ಮೊದಲಾದವುಗಳಲ್ಲಿ) ಹೆಣಿಗೆ ಹಾಕುವಲ್ಲಿ ಏಣಿಯಂಥ ಖಾಲಿ ಜಾಗ.
 • (ಅಮೆರಿಕನ್‍ ಪ್ರಯೋಗ) ಸಣ್ಣ ತೊರೆ ಯಾ ಹಳ.

run-around

ನಾಮವಾಚಕ

ಪದಗುಚ್ಛ

ಮೋಸ; ವಂಚನೆ; ತಪ್ಪುದಾರಿಗೆಳೆಯುವ ಯಾ ತೊಂದರೆಯುಂಟುಮಾಡಬಹುದಾದ ನಡತೆ. give a person the run-around ಮೋಸಮಾಡು; ವಂಚನೆಮಾಡು.

run-down

ನಾಮವಾಚಕ

 • ಸಂಖ್ಯೆಯಲ್ಲಿ ಇಳಿಕೆ, ಇಳಿತ, ಹ್ರಾಸ, ಇಳಿಸುವುದು.
 • ವಿವರವಾದ ವಿಶ್ಲೇಷಣೆ.

run-down

ಗುಣವಾಚಕ

 • (ಅನುಕೂಲ ಯಾ ಉಚ್ಛ್ರಾಯ ಸ್ಥಿತಿಯಲ್ಲಿದ್ದು ನಂತರ) ಕ್ಷೀಣಿಸುವ; ಅವನತಿಗೆ, ಹೀನಸ್ಥಿತಿಗೆ – ಇಳಿದಿರುವ.
 • (ವಿಪರೀತ ಕೆಲಸ ಮೊದಲಾದವುಗಳಿಂದ) ಶಕ್ತಿಗುಂದಿರುವ; ಸೊರಗಿ ಹೋಗಿರುವ.

run-in

ನಾಮವಾಚಕ

 • (ಘಟನೆ, ವಿಷಯ ಮೊದಲಾದವುಗಳಿಗೆ) ಪೀಠಿಕೆ; ಪ್ರಾರಂಭ.
 • (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಕಲಹ; ಜಗಳ; ವಾಗ್ವಾದ.

run-of-the-mill

ಗುಣವಾಚಕ

ಮಾಮೂಲಿ; ಸಾಧಾರಣವಾದ; ಸಾಮಾನ್ಯ ದರ್ಜೆಯ; ಪ್ರಸಿದ್ಧವಲ್ಲದ.

run-off

ನಾಮವಾಚಕ

 • (ಪಂದ್ಯ ಸರಿಸಮವಾಗಿರುವಾಗ ಹೆಚ್ಚಿನದಾಗಿ ಆಡುವ) ಅಧಿಕಪಂದ್ಯ; ನಿರ್ಣಾಯಕ ಪಂದ್ಯ.
 • ಹೆಚ್ಚುವರಿ ನೀರು; ಮಳೆ ಬಿದ್ದ ನಂತರ ನದಿಗಳು, ತೊರೆಗಳಿಂದ ಹರಿದುಹೋದ, ಹೆಚ್ಚುವರಿ ನೀರಿನ ಪ್ರಮಾಣ.
 • (ನ್ಯೂಸಿಲೆಂಡ್‍) ಎಳೆಯ ಪ್ರಾಣಿಗಳನ್ನು ಸಾಕಿರುವ ಪ್ರತ್ಯೇಕವಾದ ಪ್ರದೇಶ.

run-out

ನಾಮವಾಚಕ

ರನ್‍ಔಟ್‍; ಬ್ಯಾಟುಗಾರನು ಬೋಲ್‍ ಮಾಡಿದ ಚೆಂಡನ್ನು ಹೊಡೆದು ಓಡುವಾಗ ಕ್ರೀಸ್‍ ತಲುಪದೆ ಆಟ ಕಳೆದುಕೊಳ್ಳುವುದು, ಔಟಾಗುವುದು.

run-through

ನಾಮವಾಚಕ

 • (ನಾಟಕ, ರೇಡಿಯೋ ಯಾ ಟೆಲಿವಿಷನ್‍ ಕಾರ್ಯಕ್ರಮ ಮೊದಲಾದವುಗಳ) (ಸಾಮಾನ್ಯವಾಗಿ ಶೀಘ್ರವಾದ) ಪೂರ್ವ ಪ್ರದರ್ಶನ ಯಾ ಪೂರ್ವಾಭ್ಯಾಸ.
 • (ವಿಷಯಗಳ) ಸ್ಥೂಲ ಸಮೀಕ್ಷೆ; ಸಾರಾಂಶ; ಸಂಕ್ಷಿಪ್ತ ವರದಿ.

run-up

ನಾಮವಾಚಕ

 • ಪೂರ್ವಾವಧಿ; ಪೂರ್ವಕಾಲ; ಒಂದು ಮುಖ್ಯವಾದ ಘಟನೆಗೆ ಮುಂಚಿನ ಕಾಲಾವಧಿ.
 • (ಗಾಲ್‍) ಬದ್ದನ್ನು ಸಮೀಪಿಸುವಂತೆ ಹೊಡೆದ ತಗ್ಗಿನ ಹೊಡೆತ.

runabout

ನಾಮವಾಚಕ

ಹಗುರ ಮೋಟಾರು ಬಂಡಿ ಯಾ ವಿಮಾನ.

runaway

ನಾಮವಾಚಕ

 • ತಲೆತಪ್ಪಿಸಿಕೊಂಡು ಓಡುವವ; ಪಲಾಯನ ಮಾಡುವವ.
 • ಹತೋಟಿ ತಪ್ಪಿದ ಪ್ರಾಣಿ ಯಾ ವಾಹನ.
 • (ವಿಶೇಷಣವಾಗಿ)
  1. ಹಿಡಿತ ತಪ್ಪಿದ; ಹತೋಟಿ ಮೀರಿದ: runaway inflation ಹತೋಟಿ ಮೀರಿದ ಹಣದುಬ್ಬರ.
  2. ಓಡಿಹೋದ ನಂತರ ಮಾಡಿದ: a runaway wedding ಪಲಾಯನ ಪರಿಣಯ; ಫೇರಿ ಮದುವೆ; ಓಡಿಹೋಗಿ ಮಾಡಿಕೊಂಡ ವಿವಾಹ.

runcible spoon

ನಾಮವಾಚಕ

(ಊಟದ ಪ್ರಾರಂಭದಲ್ಲಿ ರುಚಿಗಾಗಿ ಬಡಿಸುವ ಭಕ್ಷ್ಯವನ್ನು ತಿನ್ನಲು ಉಪಯೋಗಿಸುವ) ಒಂದು ಬಗೆಯ ಮುಳ್ಳು ಚಮಚ; ಎರಡು ಅಗಲವಾದ ಮೊನಚು ಭಾಗಗಳು, ಒಂದು ಬಾಗಿದ ಹರಿತವಾದ ಭಾಗವೂ ಇರುವ ಮುಳ್ಳು ಚಮಚ.

runcinate

ಗುಣವಾಚಕ

(ಸಸ್ಯವಿಜ್ಞಾನ) (ಎಲೆಯ ವಿಷಯದಲ್ಲಿ) ಗರಗಸದಂಚಿನ; ಕ್ರಕಚದಂಚಿನ; ಎಲೆಯ ಹಾಲೆಗಳು ಹಿಂದಕ್ಕೆ ಬಾಗಿರುವ.

rundale

ನಾಮವಾಚಕ

(ಮುಖ್ಯವಾಗಿ ಐರ್ಲೆಂಡಿನಲ್ಲಿ) ಜಮೀನಿನ ಕೂಡು ಹಿಡುವಳಿ, ಕೂಡು ಒಡೆತನ, ಸಹಸ್ವಾಮ್ಯ, ಸಹಾನುಭೋಗ; ಒಬ್ಬೊಬ್ಬರಿಗೂ ಹಲವು ತುಕಡಿಗಳಿದ್ದು, ಆ ತುಕಡಿಗಳು ಒಟ್ಟಿಗಿರದೆ ಮಿಕ್ಕವರ ತುಕಡಿಗಳ ಮಧ್ಯೆ ಮಧ್ಯೆ ಸೇರಿಕೊಂಡಿರುವ ಜಮೀನಿನ ಕೂಡು ಒಡೆತನ, ಹಿಡುವಳಿ.

rune

ನಾಮವಾಚಕ

 • ರೂನ್‍ ಅಕ್ಷರ, ಲಿಪಿ; (ರೋಮನ್‍ ಯಾ ಗ್ರೀಕ್‍ ಅಕ್ಷರಗಳನ್ನು ಕೊರೆಯುವುದಕ್ಕೆ, ಮಾರ್ಪಡಿಸಿಕೊಂಡು ರೂಪಿಸಿದ ಕ್ರಿಸ್ತಶಕ 2ನೆಯ ಶತಮಾನದಷ್ಟು ಹಿಂದಿನದಾದ) ಮುಖ್ಯವಾಗಿ ಸ್ಕ್ಯಾಂಡಿನೇವಿಯನರೂ ಆಂಗ್ಲೋಸ್ಯಾಕ್ಸನರೂ ಬಳಸುತ್ತಿದ್ದ, ಜರ್ಮ್ಯಾನಿಕ್‍ ವರ್ಣಮಾಲೆಯ ಅಕ್ಷರ.
 • (ರಹಸ್ಯ ಯಾ ಮಾಂತ್ರಿಕ ಪ್ರಭಾವ ಉಳ್ಳದ್ದೆಂದು ನಂಬುವ) ರೂನ್‍ ಅಕ್ಷರದಂಥ ಗುರುತು.
 • ಹಿನಿಷ್‍ (Finnish) ಗೀತೆ ಯಾ ಅದರ ಒಂದು ವಿಭಾಗ.

rune-staff

ನಾಮವಾಚಕ

ರೂನ್‍ದಂಡ; ರೂನ್‍ ಅಕ್ಷರದಂಥ ಗುರುತುಗಳುಳ್ಳ, ಮಾಂತ್ರಿಕನ ದಂಡ, ಕೋಲು.

rung

ನಾಮವಾಚಕ

 • ಏಣಿಯ ಮೆಟ್ಟಲು.
 • (ಕುರ್ಚಿ ಮೊದಲಾದವುಗಳಲ್ಲಿ ಬಲಪಡಿಸಲು ಒದಗಿಸಿದ) ಅಡ್ಡಪಟ್ಟಿ; ಅಡ್ಡಕಂಬಿ; ಅರೆ.
 • (ರೂಪಕವಾಗಿ) ಮೆಟ್ಟಿಲು; ಹಂತ; ಸ್ಥಾನ: topmost run of life’s ladder ಬಾಳಿನ ಏಣಿಯ ತುತ್ತತುದಿಯ ಮೆಟ್ಟಲು; ಜೀವನದ ಅತ್ಯುನ್ನತ ಹಂತ, ಸ್ಥಾನ.

rung

ಕ್ರಿಯಾಪದ

ring ಧಾತುವಿನ ಭೂತಕೃದಂತ ರೂಪ.

runged

ಗುಣವಾಚಕ

 • ಏಣಿಯ ಮೆಟ್ಟಲುಗಳನ್ನು ಅಳವಡಿಸಿದ.
 • ಅಡ್ಡಪಟ್ಟಿ, ಅಡ್ಡಕಂಬಿ ಯಾ ಅರೆಗಳನ್ನು ಜೋಡಿಸಿದ.

Search Dictionaries

Loading Results

Follow Us :   
  Download Bharatavani App
  Bharatavani Windows App