भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

rungless

ಗುಣವಾಚಕ

 • (ಏಣಿಯ ವಿಷಯದಲ್ಲಿ) ಮೆಟ್ಟಲಿಲ್ಲದ; ಹಂತವಿಲ್ಲದ.
 • (ಕುರ್ಚಿ ಮೊದಲಾದವುಗಳಲ್ಲಿ) ಅಡ್ಡಪಟ್ಟಿಯಿಲ್ಲದ; ಅಡ್ಡಕಂಬಿಯಿಲ್ಲದ; ಅರೆಯಿಲ್ಲದ.

runic

ಗುಣವಾಚಕ

 • ‘ರೂನ್‍’ ಅಕ್ಷರಗಳುಳ್ಳ.
 • ರೂನ್‍ ಅಕ್ಷರಗಳಲ್ಲಿ ಕೆತ್ತಿದ ಯಾ ಬರೆದ.
 • ರೂನ್‍ ಅಕ್ಷರದಂಥ ಗುರುತುಗಳನ್ನು ಮಾಡಿರುವ.

runlet

ನಾಮವಾಚಕ

ಸಣ್ಣಹೊಳೆ; ತೊರೆ.

runnable

ಗುಣವಾಚಕ

ಬೇಟೆಗೆ ತಕ್ಕ; ಬೇಟೆಮಾಡಲು ಯೋಗ್ಯವಾದ: runnable stag ಬೇಟೆಗೆ ತಕ್ಕ ಕಡವೆ (ಸಾರಂಗ).

runnel

ನಾಮವಾಚಕ

 • ಹಳ್ಳ; ತೊರೆ.
 • ಮೋರಿ; ಚರಂಡಿ.

runner

ನಾಮವಾಚಕ

ಪದಗುಚ್ಛ

do a runner (ಅಶಿಷ್ಟ) ಕಂಬಿ ಕೀಳು; ಬೇಗ ಓಡಿ ಹೋಗು; ಕಾಲಿಗೆ ಬುದ್ಧಿಹೇಳು.

 • (ಮುಖ್ಯವಾಗಿ ಪಂದ್ಯದಲ್ಲಿ) ಓಡುವವನು; ಓಡುಗ; ಓಟಗಾರ.
 • ಜೂಜಿನ ಕುದುರೆ.
 • (ಕ್ರಿಕೆಟ್‍) ರನ್ನರು; ಮುಖ್ಯವಾಗಿ ಗಾಯಗೊಂಡ ದಾಂಡುಗಾರನ ಬದಲು ಓಡುವವನು.
 • (ಕಾಲ್ಚೆಂಡಾಟ) ಆಟದಲ್ಲಿರುವ ಚೆಂಡನ್ನು ಹೊಂದಿರುವ ಆಟಗಾರ.
 • (ಹಾರದೆ) ಓಡುವ ಹಕ್ಕಿ; ನಡಗೆ ಹಕ್ಕಿ.
 • (ಜನಪ್ರಿಯವಾದ) ಬೇಗ ಬೇಗ ಮಾರಾಟವಾಗುವ – ಸರಕು.
 • ಓಡಾಳು; ಓಲೆಕಾರ; ಹರಿಕಾರ; ದೂತ; ಬೇಹುಗಾರ; ಹಣ ವಸೂಲಿಗಾರ.
 • (ಬ್ಯಾಂಕು ಮೊದಲಾದವುಗಳ) ದಳ್ಳಾಳಿ; ನಿಯೋಗಿ; ಗಿರಾಕಿ ಒದಗಿಸುವವನು.
 • (ಚರಿತ್ರೆ) ಪೊಲೀಸು ಅಧಿಕಾರಿ.
 • ಕಳ್ಳಸಾಗಣೆಗಾರ; ಸುಂಕಗಳ್ಳ.
 • = blockade-runner.
 • ಬೀಸುವ ಕಲ್ಲಿನ ಸುತ್ತುಗಲ್ಲು, ತಿರುಗುವ ಕಲ್ಲು.
 • (ನೌಕಾಯಾನ) ಓಡು ಹಗ್ಗ; ಹಾಯಿ ಹಗ್ಗ; ಒಂದು ಕೊನೆಯಲ್ಲಿ ಕೊಕ್ಕೆಹಾಕಿರುವ, ಒಂದೇ ಕಪ್ಪಿಯಲ್ಲಿ ಹಾದುಹೋಗಿರುವ ಹಗ್ಗ.
 • ಬೇರು ಕೊಂಬೆ; ಅಂಟುಕೊಂಬೆ; ಹಬ್ಬು ತಾಳು; ಹಬ್ಬುಕಾಂಡ; ಕೆಲವು ಸಸ್ಯಗಳ ಪ್ರಧಾನ ಕಾಂಡದಿಂದ ಹೊರಟು ನೆಲವೂರಿ ಬೇರುಬಿಡುವ, ಉಪಕಾಂಡ.
 • ಸುರುಳುಬಳ್ಳಿ ಸಸ್ಯ.
 • (ಬ್ರಿಟಿಷ್‍ ಪ್ರಯೋಗ) (ಅವರೆ ಜಾತಿಯ) ಹಲವು ಬಗೆಯ ಹಬ್ಬು ಗಿಡ, ಮುಖ್ಯವಾಗಿ ಕಡುಗೆಂಪು ಹೂವಿನ ಅವರೆ ಜಾತಿಯ ಬಳ್ಳಿ.
 • (ಕೋಲು, ಪಟ್ಟಿ ಮೊದಲಾದವುಗಳ ಮೇಲೆ) ಸರಿದಾಡುವ ಉಂಗುರ, ಬಳೆ ಮೊದಲಾದವು.
 • ಜಾರು(ಮರ)ತುಂಡು; ಜಾರುಬಂಡಿ ಮೊದಲಾದವು ಜಾರುವುದಕ್ಕೆ ಅಳವಡಿಸಿದ ಮರ ಮೊದಲಾದವುಗಳ ಉದ್ದ ತುಂಡು(ಗಳಲ್ಲೊಂದು).
 • ಜಾರುಗಾಡಿ; ಜಾರುತೋಡು; ಜಾರುದಂಡ; ವಸ್ತು ಸರಿದಾಡಲು ಅನುಕೂಲಿಸುವ ಗಾಡಿ, ತೋಡು, ದಂಡ ಮೊದಲಾದವು.
 • ಜಾರುರುಳೆ; ಭಾರ ವಸ್ತುಗಳನ್ನು ಸಾಗಿಸಲು ಉಪಯೋಗಿಸುವ ಉರುಳೆ; ಜಾರುಗೊರಡು.
 • ಕಿರಿಯಗಲದ ಉದ್ದನೆ ಬಟ್ಟೆ; ಮೇಜು ಮೊದಲಾದವುಗಳ ಮೇಲೆ ಹಾಕುವ ಉದ್ದವಾದ ಕಡಮೆಯಗಲದ ಅಲಂಕಾರದ ಬಟ್ಟೆ.

runner bean

ನಾಮವಾಚಕ

= runner\((16)\).

runner-up

ನಾಮವಾಚಕ

ರನರಪ್‍; ಉಪಾಂತ ವಿಜಯಿ; ಎರಡನೆಯ ಸ್ಥಾನವನ್ನು ಗಳಿಸುವ ಸ್ಪರ್ಧಿ ಯಾ ತಂಡ.

running

ನಾಮವಾಚಕ

ಪದಗುಚ್ಛ

 • ಓಟ; ಪಂದ್ಯ ಮೊದಲಾದವುಗಳಲ್ಲಿ ಓಡುವುದು.
 • ಓಡುವ ಶಕ್ತಿ, ಸಾಮರ್ಥ್ಯ: still had a lot of running left in him ಇನ್ನೂ ಓಡುವ ಶಕ್ತಿ ಅವನಲ್ಲಿ ಬಹಳ ಉಳಿದಿತ್ತು.
 • ಪಂದ್ಯ ಮುಂದುವರಿಯುವ ರೀತಿ.
 • ಓಟದ ಪಥದ ಸ್ಥಿತಿ; ಯಾವುದರ ಮೇಲೆ ಓಡಬೇಕಾಗಿದೆಯೋ ಅದರ ಮೇಲ್ಮೈ ಸ್ಥಿತಿ.
 • ಹರಿಯುವ ದ್ರವದ ಪ್ರವಾಹ ಪರಿಮಾಣ.
 • ಕಾರ್ಯನಿಯಂತ್ರಣ; ಕೆಲಸದ ಉಸ್ತುವಾರಿ, ನಿರ್ವಹಣೆ.

running

ಗುಣವಾಚಕ

ಪದಗುಚ್ಛ

take a running jump (ಮುಖ್ಯವಾಗಿ ಭಾವಸೂಚಕ ಅವ್ಯಯವಾಗಿ ಪ್ರಯೋಗ) (ಅಶಿಷ್ಟ) ತೊಲಗಿಹೋಗು.

 • (ನೀರು, ಹೊಳೆ ಮೊದಲಾದವು) ಹರಿಯುವ.
 • ಸುರಿಯುವ; ಸುರಿಸುವ.
 • (ಮರಳು ಯಾ ಭೂಮಿ) ಅಂಟಿಕೊಳ್ಳುವ ಗುಣವಿಲ್ಲದ; ಅಂಟಿಕೆಯಿಲ್ಲದ.
 • (ಹುಣ್ಣು ಮೊದಲಾದವು) ಕೀವು ಸೋರುವ.
 • (ಕಾಯಿಲೆ ಮೊದಲಾದವುಗಳ ವಿಷಯದಲ್ಲಿ) ದೇಹದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ವ್ಯಾಪಿಸುವ, ಹರಡುವ.
 • (ಹರಿಕಾರ ಮೊದಲಾದವರ ಕೆಲಸಕ್ಕೆ) ಓಡಲು ನೇಮಕಮಾಡಿದ.
 • (ಮುಖ್ಯವಾಗಿ ತ್ತಿ ಯಾ ವ್ಯವಹಾರದ ಮೇಲೆ) ಬೇಗ ಬೇಗ ಸುತ್ತಾಡುವ, ತಿರುಗಾಡುವ.
 • (ಸಸ್ಯ) ಬೇಗ ಹಬ್ಬುವ, ಹರಡುವ.
 • (ಛಂದಸ್ಸು, ಸಂಗೀತ ಮೊದಲಾದವು) ಸರಾಗವಾದ; ಸುಗಮವಾದ; ಲಲಿತವಾದ; ವೇಗವಾದ; ದ್ರುತ.
 • (ನೌಕಾಯಾನ) (ಯುದ್ಧಕಾಲದಲ್ಲಿ ಹಡಗು) ಬೆಂಗಾವಲಿನ ರಕ್ಷಣೆಯಿಲ್ಲದೆ ಸಂಚಾರಮಾಡುವ.
 • ವೇಗದ; ತ್ವರೆಯ; ಓಡಿ ಮಾಡುವ.
 • ವಿಸ್ತರಿಸಿಕೊಂಡು ಹೋಗುವ; ಎಡೆಬಿಡದೆ ಮುಂದುವರಿಯುವ.
 • (ಅಳತೆಗಳ ವಿಷಯದಲ್ಲಿ) ಏಕ ಪರಿಮಾಣಾತ್ಮಕ.
 • ಎಡೆಬಿಡದ; ಸಂತತ; ನಿರಂತರ; ಸತತವಾಗಿ ನಡೆದುಕೊಂಡು ಹೋಗುವ.
 • (ಲೆಕ್ಕ ಮೊದಲಾದವುಗಳ ವಿಷಯದಲ್ಲಿ) (ನಿರ್ದಿಷ್ಟ ಯಾ ಅನಿರ್ದಿಷ್ಟ ಕಾಲ) ನಡೆದುಕೊಂಡು ಹೋಗುವ ಅವಕಾಶವುಳ್ಳ.
 • (ಬಹುವಚನ ನಾಮಪದದ ನಂತರ ಪ್ರಯೋಗವಾದಾಗ) ಒಂದರ ಹಿಂದೊಂದು ಬರುವ; ಅನುಸರಿಸಿ ಬರುವ; ಅನುಕ್ರಮದ: happened three days running ಅನುಕ್ರಮವಾಗಿ ಮೂರು ದಿನಗಳು ನಡೆಯಿತು.
 • ನಡೆಯುತ್ತಿರುವ; ವರ್ತಮಾನ; ಚಾಲ್ತಿಯಲ್ಲಿರುವ; ಪ್ರಚಲಿತ; ಹಾಲಿ: the running month ನಡೆಯುತ್ತಿರುವ ತಿಂಗಳು.
 • (ಯಾಂತ್ರಿಕ ಸಾಧನಗಳಿಂದ ಯಾ ಒಂದು ಯಂತ್ರವಾಗಿ) ಸುಲಭವಾಗಿ ಯಾ ವೇಗವಾಗಿ ಓಡುವ, ಚಲಿಸುವ.
 • (ಹಗ್ಗ ಮೊದಲಾದವುಗಳ ವಿಷಯದಲ್ಲಿ) (ಮುಖ್ಯವಾಗಿ ಬಳೆ, ಕಪ್ಪಿ ಮೊದಲಾದವುಗಳಲ್ಲಿ ಹಾದುಹೋಗುವಂತೆ) ಎಳೆದಾಗ ಸರಿಯಬಲ್ಲ.
 • (ಕುಣಿಕೆ, ಗಂಟು ಮೊದಲಾದವುಗಳ ವಿಷಯದಲ್ಲಿ) (ಮುಖ್ಯವಾಗಿ ಯಾವುದನ್ನೇ ಬಿಗಿಯಾಗಿ ಹಿಡಿದುಕೊಳ್ಳುವಂತೆ ಸುಲಭವಾಗಿ ಸರಿಯಬಲ್ಲ.)

running account

ನಾಮವಾಚಕ

= current account.

running bowsprit

ನಾಮವಾಚಕ

(ಪಟಗಳನ್ನು ಒಯ್ಯುವ ಅಗತ್ಯವಿಲ್ಲದಿದ್ದಾಗ) ಒಳಕ್ಕೆ ಎಳೆದುಕೊಳ್ಳಬಹುದಾದ ಹಡಗಿನ ಮೂಕಿಮರ; ಹಿಂದಕ್ಕೆ ಮುಂದಕ್ಕೆ ಸರಿಯುವ ಮೂಕಿಮರ; ಚಲ ಮೂಕಿ ಮರ.

running commentary

ನಾಮವಾಚಕ

ವೀಕ್ಷಕ ವಿವರಣೆ; ವೀಕ್ಷಕ ವರದಿ; ಯಾವುದೇ ಉತ್ಸವ, ಕ್ರೀಡೆ ಮೊದಲಾದವುಗಳನ್ನು ನೋಡುತ್ತ ಕೊಡುವ ವ್ಯಾಖ್ಯಾನ.

running fight

ನಾಮವಾಚಕ

ಬೆನ್ನಟ್ಟುವ ಕದನ; ಓಡಿಹೋಗುತ್ತಿರುವ ಎದುರು ಪಕ್ಷದವರನ್ನು ಅಟ್ಟಿಸಿಕೊಂಡು ಹೋಗಿ ಮಾಡುವ ಕದನ.

running fire

ನಾಮವಾಚಕ

ಸತತ ಗುಂಡು ಹೊಡೆತ; ಸೈನ್ಯಪಂಕ್ತಿ ಮೊದಲಾದವುಗಳಿಂದ ಎಡೆಬಿಡದೆ ಹಾರಿಸಿದ ಗುಂಡು ಹೊಡೆತ.

running gear

ನಾಮವಾಚಕ

ಚಲ ಗಿಯರು; ಯಂತ್ರವೊಂದರ ಚಲಿಸುವ ಯಾ ಓಡುವ ಭಾಗಗಳು, ಮುಖ್ಯವಾಗಿ ಚಕ್ರಗಳು.

running hand

ನಾಮವಾಚಕ

(ಲೆಕ್ಕಣಿಕ ಮೊದಲಾದವನ್ನು ಮೇಲೆತ್ತದೆ ಬರೆಯುವ) ಕೂಡುಬರವಣಿಗೆ; ಕೂಡಕ್ಷರ; ಮೋಡಿ ಅಕ್ಷರ, ಬರವಣಿಗೆ.

running head

ನಾಮವಾಚಕ

= running headline.

running headline

ನಾಮವಾಚಕ

ಪುಸ್ತಕ ಮೊದಲಾದವುಗಳ, ಸತತವಾಗಿ ಕೆಲವು ಪುಟಗಳ ಮೇಲ್ಭಾಗದಲ್ಲಿನ, ಪುನರಾವರ್ತವಾದ ಯಾ ಭಿನ್ನವಾದ ಪುಟದ ಶಿರೋನಾಮೆ, ತಲೆಬರಹ, ಶೀರ್ಷಿಕೆ.

running jump

ನಾಮವಾಚಕ

ಓಡಿಬಂದು ಹಾರುವ ನೆಗೆತ; ಓಟದ ನೆಗೆತ.

Search Dictionaries

Loading Results

Follow Us :   
  Download Bharatavani App
  Bharatavani Windows App