भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

running knot

ನಾಮವಾಚಕ

ಸರಿಕುಣಿಕೆಯ ಗಂಟು; ಕುಣಿಕೆಯನ್ನು ಕುಗ್ಗಿಸುತ್ತ ಯಾ ಹಿಗ್ಗಿಸುತ್ತ ಹಗ್ಗದಲ್ಲಿ ಸರಿದಾಡುವ ಗಂಟು.

running light

ನಾಮವಾಚಕ

  • = navigation light.
  • ವಾಹನ ಚಲಿಸುತ್ತಿರುವಾಗ ಉರಿಯುತ್ತಿರುವ ದೀಪಗಳಲ್ಲೊಂದು.

running mate

ನಾಮವಾಚಕ

(ಅಮೆರಿಕನ್‍ ಪ್ರಯೋಗ)

  • ಉಪಾಭ್ಯರ್ಥಿ; ಚುನಾವಣೆಯಲ್ಲಿ ಕೆಳಗಿನ ಯಾ ಎರಡನೆಯ ಸ್ಥಾನಕ್ಕೆ ನಿಲ್ಲುವ ಅಭ್ಯರ್ಥಿ.
  • ಜೊತೆ ಕುದುರೆ; ಪಂದ್ಯದಲ್ಲಿ ಗೆಲ್ಲಬೇಕೆಂದಿರುವ ಕುದುರೆಗೆ ಓಡುವ ವೇಗ ನಿರ್ಧರಿಸಲು ಸಹಾಯಕ್ಕಾಗಿ ಅದರ ಜೊತೆಯಲ್ಲಿ ಓಡಲು ಆರಿಸಲಾಗುವ ಅದೇ ಲಾಯದ ಬೇರೆ ಕುದುರೆ.

running powers

ನಾಮವಾಚಕ

(ಬೇರೆಯವರ ರೈಲು ಮಾರ್ಗದಲ್ಲಿ) ರೈಲು ಓಡಿಸುವ ಅಧಿಕಾರ; ರೈಲು ಓಡಾಟದ ಹಕ್ಕು.

running repairs

ನಾಮವಾಚಕ

ಸಣ್ಣ ರಿಪೇರಿ, ದುರಸ್ತು; ಯಂತ್ರದ ಸಣ ರಿಪೇರಿ ಮತ್ತು ಬದಲಿ ವಸ್ತುಗಳನ್ನು ಹಾಕುವ ಕೆಲಸಗಳು.

running rope

ನಾಮವಾಚಕ

(ರಾಟೆ ಮೊದಲಾದವುಗಳ ಮೇಲೆ) ಸರಾಗವಾಗಿ ಚಲಿಸಬಲ್ಲ ಹಗ್ಗ.

running sore

ನಾಮವಾಚಕ

ಕೀವು ತುಂಬಿದ ಹುಣ್ಣು.

running stitch

ನಾಮವಾಚಕ

ಸಾಲು ಹೊಲಿಗೆ:

  • ನಿರಿ, ಪದರ ಮೊದಲಾದವನ್ನು ಕಟ್ಟಲು ಉದ್ದಕ್ಕೆ ಹಾಕುವ ಸಣ್ಣ ಹೊಲಿಗೆಗಳ ಸಾಲು.
  • ಇಂಥ ಹೊಲಿಗೆಗಳಲ್ಲೊಂದು.

running water

ನಾಮವಾಚಕ

(ಹೊಳೆಯಲ್ಲಿ ಯಾ ನಲ್ಲಿ ಮೊದಲಾದವುಗಳಿಂದ) ಹರಿಯುವ ನೀರು.

running-board

ನಾಮವಾಚಕ

ಮೆಟ್ಟು ಹಲಗೆ; ಮೋಟಾರು ಗಾಡಿ ಮೊದಲಾದವುಗಳ ಎರಡು ಪಕ್ಕಗಳಲ್ಲೂ ಉದ್ದಕ್ಕೆ ಇರುವ, ಕಾಲೂರುವ ಹಲಗೆ.

runny

ಗುಣವಾಚಕ

( ತರರೂಪ runnier, ತಮರೂಪ runniest).

  • ಹರಿಯುವ (ಸ್ವಭಾವದ); ಹರಿಯುವಂಥ.
  • ಅತಿಯಾಗಿ ಹರಿಯುವ, ಸ್ರವಿಸುವ.

runt

ನಾಮವಾಚಕ

  • (ಮುಖ್ಯವಾಗಿ ಸ್ಕಾಟ್ಲೆಂಡ್‍ ಮೇಲ್ನಾಡಿನ ಯಾ ವೇಲಿ\ಹ ೧೪೪ ನ) ಗಿಡ್ಡ ದನ; ಸಣ್ಣ ತಳಿಯ ಎತ್ತು ಯಾ ಹಸು.
  • ದೊಡ್ಡ ತಳಿಯ ಸಾಕು ಪಾರಿವಾಳ.
  • ಸಣ್ಣ ಹಂದಿ; ಗಿಡ್ಡ ಹಂದಿ.
  • ಸಣಕಲ; ಬಡಕಲ; ಸಣ್ಣ ಮೈಕಟ್ಟಿನ ಯಾ ಬಡಕಲು ವ್ಯಕ್ತಿ.

runty

ಗುಣವಾಚಕ

(ಅಮೆರಿಕನ್‍ ಪ್ರಯೋಗ ಮತ್ತು ಪ್ರಾಂತೀಯ ಪ್ರಯೋಗ)

  • ಕುಳ್ಳಾದ.
  • ಸಣಕಲಾದ.

runway

ನಾಮವಾಚಕ

  • (ಪ್ರಾಣಿಗಳು ನೀರು ಕುಡಿಯುವ ಕುಂಟೆಗೆ ಹೋಗುವ) ಕಾಲುದಾರಿ.
  • ದಿಮ್ಮಿಗಳನ್ನು ಸರಿಸಲು ಉಪಯೋಗಿಸುವ ಇಳುಕಲು.
  • ಓಡುದಾರಿ; ಓಡುಪಥ; ವಿಮಾನಗಳು ಇಳಿಯಲು ಹಾಗೂ ಹಾರಲು ವಿಶೇಷವಾಗಿ ಸಿದ್ಧಮಾಡಿದ, ವಿಮಾನ ನಿಲ್ದಾಣದ ಮೇಲ್ಮೈ.
  • (ಚಿತ್ರಮಂದಿರ, ಹ್ಯಾಷನ್‍ ಪ್ರದರ್ಶನ ಮೊದಲಾದವುಗಳಲ್ಲಿ) ಪೀಠಪಂಕ್ತಿಗಳ ನಡುವಣ – ಓಣಿ, ಹಾದಿ.

rupee

ನಾಮವಾಚಕ

ರೂಪಾಯಿ; ಇಂಡಿಯಾ, ಪಾಕಿಸ್ತಾನ, ಶ್ರೀಲಂಕ, ನೇಪಾಳ, ಮಾರಿಷಸ್‍ ಮೊದಲಾದ ದೇಶಗಳ ನಾಣ್ಯ ಚಲಾವಣೆಯ ಏಕಮಾನ.

rupiah

ನಾಮವಾಚಕ

ರುಪಿಯ; ಇಂಡೋನೀಸಿಯಾದ ನಾಣ್ಯ ಚಲಾವಣೆಯ ಏಕಮಾನ.

rupturable

ಗುಣವಾಚಕ

ಬಿರುಕು ಬಿಡಬಹುದಾದ; ಒಡೆಯಬಹುದಾದ; ಸೀಳಾಗಬಹುದಾದ; ಭಿದುರ.

rupture

ನಾಮವಾಚಕ

  • ಸ್ನೇಹ ಭಂಗ; ಹೊಂದಿಕೆ ಕೆಟ್ಟು ಅಗಲುವುದು; ಒಡಕು; ಛಿದ್ರ; ವೈಮನಸ್ಯ.
  • (ವೈದ್ಯಶಾಸ್ತ್ರ) ಹರ್ನಿಯಾ; ಅಂಡವಾಯು; ಅಂತ್ರದ್ಧಿ; ಯಾವುದಾದರೂ ಅಂಗಭಾಗ ತನ್ನ ಆವರಣ ಪೊರೆಯಲ್ಲಿಯ (ಮುಖ್ಯವಾಗಿ ಕಿಬ್ಬೊಟ್ಟೆಯಲ್ಲಿಯ) ಬಿರುಕಿನ ಮೂಲಕ ಹೊರಚಾಚಿಕೊಳ್ಳುವುದರಿಂದ ಆಗುವ ಊತ.
  • ಒಡೆತ; ಒಡಕು; ಬಿರಿತ; ಬಿರುಕು: the flood caused a rupture of the dam ಪ್ರವಾಹದಿಂದ ಸೇತುವೆಯ ಬಿರುಕುಂಟಾಯಿತು.

rupture

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

  • (ಜೀವಕಣ, ದ್ರವನಾಳ, ಪೊರೆ ಮೊದಲಾದವುಗಳ ವಿಷಯದಲ್ಲಿ) ಬಿರಿಸು; ಒಡೆ; ಹರಿ; ಛಿದ್ರಮಾಡು.
  • (ಸಂಬಂಧ, ಮದುವೆ ಮೊದಲಾದವನ್ನು) ಕಡಿದುಹಾಕು; ವಿಚ್ಛೇದಮಾಡು.
  • (ವೈದ್ಯಶಾಸ್ತ್ರ) ಅಂತ್ರದ್ಧಿಯಾಗು; ಅಂಡವಾಯು ಬಾಧಿಸು; ಹರ್ನಿಯಾ ಆಗು.

rural

ಗುಣವಾಚಕ

ಪದಗುಚ್ಛ

rural $^1$dean.

  • ಹಳ್ಳಿಯ; ಹಳ್ಳಿಗಾಡಿನ; ಗ್ರಾಮದ; ಗ್ರಾಮಕ; ಗ್ರಾಮೀಣ: rural constituency ಗ್ರಾಮೀಣ ಚುನಾವಣಾ ಕ್ಷೇತ್ರ. in rural seclusion ಹಳ್ಳಿಗಾಡಿನ ಏಕಾಂತದಲ್ಲಿ.
  • ಬೇಸಾಯದ; ಷಿಕ; ರೈತಾಪಿ.

Search Dictionaries

Loading Results

Follow Us :   
  Download Bharatavani App
  Bharatavani Windows App