भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

rural district

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಚರಿತ್ರೆ) ಗ್ರಾಮೀಣ ಜಿಲ್ಲೆ; ಚುನಾಯಿತ ಮಂಡಳಿಯ ಆಳ್ವಿಕೆಗೆ ಒಳಪಟ್ಟ, ಹಳ್ಳಿಗಾಡಿನ ತಾಲ್ಲೂಕುಗಳ ಸಮುದಾಯ.

ruralise

ಕ್ರಿಯಾಪದ

= ruralize.

ruralism

ನಾಮವಾಚಕ

  • ಗ್ರಾಮ್ಯತೆ; ಗ್ರಾಮ್ಯ ಗುಣ; ಹಳ್ಳಿಯ ಲಕ್ಷಣ.
  • ಹಳ್ಳಿ ಬದುಕು; ಗ್ರಾಮ ಜೀವನ.
  • ಗ್ರಾಮ್ಯ ಪದ; ಹಳ್ಳಿಯ ಪದ, ಭಾಷೆ.

ruralist

ನಾಮವಾಚಕ

  • ಹಳ್ಳಿಗಾಡಿನವ; ಗ್ರಾಮೀಣ.
  • ಗ್ರಾಮಾಸಕ್ತ; ಹಳ್ಳಿಯೊಲವಿನವ; ಪಟ್ಟಣ ಬಿಟ್ಟು ಹಳ್ಳಿಗಾಡಿನ ಜೀವನ ಬಯಸುವವನು.

rurality

ನಾಮವಾಚಕ

  • ಗ್ರಾಮೀಣತೆ; ಹಳ್ಳಿಯ ಸ್ವಭಾವ; ಹಳ್ಳಿಗಾಡಿನ ಸ್ವರೂಪ.
  • ಹಳ್ಳಿಗಾಡಿನ – ಲಕ್ಷಣ, ವಿಷಯ ಯಾ ಶ್ಯ.

ruralization

ನಾಮವಾಚಕ

  • ಹಳ್ಳಿಗಾಡಗಿರುವುದು; ಗ್ರಾಮೀಕರಣ.
  • ಹಳ್ಳಿಗಾಡಿನಲ್ಲಿ ನೆಲಸುವುದು.

ruralize

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಹಳ್ಳಿಯಾಗಿಸು; ಹಳ್ಳಿಗಾಡಾಗಿ ಮಾಡು. ಹಳ್ಳಿಗಾಡಿನಲ್ಲಿ ಕಾಲ ಕಳೆ; ಹಳ್ಳಿಗಾಡಿನಲ್ಲಿ ನೆಲಸು; ಗ್ರಾಮಜೀವನ ನಡಸು.

rurally

ಕ್ರಿಯಾವಿಶೇಷಣ

ಹಳ್ಳಿಯ ರೀತಿಯಲ್ಲಿ; ಹಳ್ಳಿಗಾಡಿನಂತೆ; ಗ್ರಾಮೀಣವಾಗಿ.

Ruritania

ನಾಮವಾಚಕ

  • ಮಧ್ಯ ಯೂರೋಪಿನ ಕಾಲ್ಪನಿಕ ರಾಜ್ಯ.
  • ಆಧುನಿಕ ಪರಿಸರದಲ್ಲಿ ಆಸ್ಥಾನದ ಪ್ರಣಯ ಸಾಹಸಗಳನ್ನು ತೋರಿಸುವ (ಕಾದಂಬರಿಕಾರನ ಮತ್ತು ನಾಟಕಕಾರನ) ಘಟನಾಸ್ಥಳ; ರಮ್ಯ ಕಲ್ಪನಾರಾಜ್ಯ.

Ruritanian

ಗುಣವಾಚಕ

ರಮ್ಯಸಾಹಸಗಳ ಕಲ್ಪನಾರಾಜ್ಯದ ಯಾ ಆ ಕಲ್ಪನಾರಾಜ್ಯದ ಲಕ್ಷಣಗಳುಳ್ಳ.

Ruritanian

ನಾಮವಾಚಕ

ರಮ್ಯಸಾಹಸಗಳ ಕಲ್ಪನಾರಾಜ್ಯವಿಹಾರಿ; ಅದ್ಭುತ ರಮ್ಯ ಸಾಹಸಗಳಿಂದ ಕೂಡಿದ ಕಲ್ಪನಾರಾಜ್ಯದಲ್ಲಿಯೇ ವಿಹರಿಸುವವನು.

rusa

ನಾಮವಾಚಕ

ಈಸ್ಟ್‍ ಇಂಡೀಸಿನ, ಸರ್ವಸ್‍ ಕುಲದ ದೊಡ್ಡ ಜಿಂಕೆ, ಮುಖ್ಯವಾಗಿ ಕಡವೆ, ಸಂಬರ.

ruse

ನಾಮವಾಚಕ

ತಂತ್ರ; ಹಂಚಿಕೆ; ಷಡ್ಯಂತ್ರ; ಕುಯುಕ್ತಿ; ಕಪಟ; ಸೋಗು; ಹೂಟ; ಮೋಸ; ಠಕ್ಕು; ಕಳ್ಳಾಟ.

rush

ನಾಮವಾಚಕ

    1. (ಜವುಗಿನಲ್ಲಿಯೂ ನೀರಿನ ಅಂಚುಗಳಲ್ಲಿಯೂ ಬೆಳೆಯುವ) ಜೊಂಡು.
    2. ಜೊಂಡು ಕಡ್ಡಿ.
    3. (ಸಮೂಹವಾಚಕವಾಗಿ) ಜೊಂಡು.
  • (ಪ್ರಾಚೀನ ಪ್ರಯೋಗ) ಕೆಲಸಕ್ಕೆ ಬಾರದ್ದು; ಬೆಲೆಯಿಲ್ಲದ್ದು; ಹುಲ್ಲುಕಡ್ಡಿ: not worth a rush ಒಂದು ಹುಲ್ಲುಕಡ್ಡಿಯ ಬೆಲೆಬಾಳುವುದಿಲ್ಲ; ಣಸಮಾನ; ಣಸಶ.

rush

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಪದಗುಚ್ಛ

    1. ಜೋರಾಗಿ, ಬಿರುಸಾಗಿ, ಅವಸರವಸರವಾಗಿ – ಒಯ್ಯು, ತಳ್ಳು, ದಬ್ಬು, ನೂಕು, ದೂಡು, ನುಗ್ಗಿಸು: rushed them into danger ಅವರನ್ನು ಅಪಾಯಕ್ಕೆ ದೂಡಿದನು.
    2. ಅವಸರವಾಗಿ – ಕೊಂಡೊಯ್ಯು, ಸಾಗಿಸು: was rushed to the hospital ಆಸ್ಪತ್ರೆಗೆ ಅವಸರವಸರವಾಗಿ ಒಯ್ಯಲಾಯಿತು.
  • (ಸೈನ್ಯ) ರಭಸದಿಂದ, ಹಠಾತ್ತನೆ – ಆಕ್ರಮಣ ಮಾಡು; ನುಗ್ಗಿ ಹಿಡಿದುಕೊ: they rushed the enemy trenches ಶತ್ರುವಿನ ಕಂದಕಗಳನ್ನು ಹಠಾತ್ತನೆ ಆಕ್ರಮಣ ಮಾಡಿ ಹಿಡಿದರು.
  • (ಚಿನ್ನದ ಗಣಿ ಪ್ರದೇಶ, ಸಭೆಯಲ್ಲಿ ವೇದಿಕೆ ಮೊದಲಾದವನ್ನು) ಮುತ್ತಿ ವಶಪಡಿಸಿಕೊ; ನುಗ್ಗಿ ಆಕ್ರಮಿಸಿಕೊ.
  • (ಅಡಚಣೆ, ಹೊಳೆ, ಬೇಲಿ ಮೊದಲಾದವನ್ನು) ನುಗ್ಗಿಕೊಂಡು ದಾಟು; ಭೇದಿಸಿಕೊಂಡು ನುಗ್ಗು.
  • (ಅಶಿಷ್ಟ) (ಗಿರಾಕಿಗೆ) ವಿಪರೀತ, ದುಬಾರಿ – ಬೆಲೆ ಹಾಕು.
  • ಅವಸರದಿಂದ ಮಾಡು ಯಾ ವ್ಯವಹರಿಸು: don’t rush your dinner ಅವಸರದಿಂದ ಊಟ ಮಾಡಬೇಡ. the bill was rushed through Parliament ಪಾರ್ಲಿಮೆಂಟಿನಲ್ಲಿ ಮಸೂದೆಯನ್ನು ಅವಸರದಿಂದ ಅಂಗೀಕರಿಸಲಾಯಿತು.
  • (ವ್ಯಕ್ತಿಯನ್ನು) ಅವಸರಿಸು; ಅವಸರಪಟ್ಟು ಮಾಡುವಂತೆ ಬಲಾತ್ಕರಿಸು.
  • (ಅಮೆರಿಕನ್‍ ಪ್ರಯೋಗ) ಒಂದು ವ್ಯವಹಾರ ಯಾ ಪ್ರಸ್ತಾವ ಕುದುರಿಸಲು (ವ್ಯಕ್ತಿಯನ್ನು) ಓಲೈಸು, ಮರ್ಜಿಹಿಡಿ; (ಅವನಿಗೆ) ವಿಶೇಷ ಗಮನಕೊಡು.

rush

ನಾಮವಾಚಕ

  • ನುಗ್ಗು(ವುದು); (ನೂಕು) ನುಗ್ಗಲು; ನುಗ್ಗಾಟ.
  • ಹೊಡೆತ; ಮೇಲೆ ಬೀಳುವುದು; ಆಕ್ರಮಣ; ದಾಳಿ.
  • ಚಟುವಟಿಕೆಯ ಭರಾಟೆ: a sudden rush of business ಇದ್ದಕ್ಕಿದ್ದಂತೆ ವ್ಯಾಪಾರದ ಭರಾಟೆ.
  • (ಚಲನಚಿತ್ರ) (ಬಹುವಚನದಲ್ಲಿ) (ಆಡುಮಾತು) (ಕಡಿತಕ್ಕೆ ಮುಂಚಿನ ಚಲನಚಿತ್ರದ) ಪ್ರಥಮ ಮುದ್ರಣ ಯಾ ಪೂರ್ವಪ್ರದರ್ಶನ.
  • (ಕಾಲ್ಚೆಂಡಾಟ)
    1. ಚೆಂಡಿಗಾಗಿ ಹಲವು ಆಟಗಾರರು ಹಾಕಿದ ಒಟ್ಟು ಮುತ್ತಿಗೆ, ನುಗ್ಗಾಟ.
    2. (ಅಮೆರಿಕನ್‍ ಪ್ರಯೋಗ) ಚೆಂಡನ್ನು ಎತ್ತಿಕೊಂಡು ಹೋಗುವುದು.
  • ನುಗ್ಗು ವಲಸೆ; (ಮುಖ್ಯವಾಗಿ ಹೊಸ ಚಿನ್ನದ ಗಣಿಗೆ) ಹೆಚ್ಚು ಸಂಖ್ಯೆಯಲ್ಲಿ ತಟ್ಟನೆ ಹೊರಡುವ ಜನರ ವಲಸೆ.
  • (ಯಾವುದಾದರೂ ಸರಕಿಗೆ) ವಿಪರೀತ ಗಿರಾಕಿ; ಭಾರಿ ಬೇಡಿಕೆ.
  • (ವಿಶೇಷಣವಾಗಿ) ಅವಸರದಲ್ಲಿ ಯಾ ವೇಗವಾಗಿ ಮಾಡಿದ: a rush job ಅವಸರದಲ್ಲಿ ಮಾಡಿದ ಕೆಲಸ.

rush candle

ನಾಮವಾಚಕ

ಜೊಂಡು ಮೋಂಬತ್ತಿ; ಜೊಂಡಿನ ಬೆಂಡನ್ನು ಕೊಬ್ಬಿನಲ್ಲಿ ಅದ್ದಿ ಮಾಡಿದ ಮೋಂಬತ್ತಿ.

rush hour

ನಾಮವಾಚಕ

ಭರಾಟೆ(ಸಂಚಾರದ) ಹೊತ್ತು; ಅತ್ಯಧಿಕ ಸಂಚಾರದ ಕಾಲ.

rush job

ನಾಮವಾಚಕ

ಭರಾಟೆ ಕೆಲಸ; ತ್ವರೆಯಾಗಿ ಮಾಡಿದ ಕೆಲಸ; ತರಾತುರಿ ಕೆಲಸ.

rush-bearing

ನಾಮವಾಚಕ

ಜೊಂಡು ಹಬ್ಬ; ಚರ್ಚಿನ ಗೋಡೆಗಳನ್ನೂ ನೆಲವನ್ನೂ ಅಲಂಕರಿಸುವುದಕ್ಕಾಗಿ ಜೊಂಡನ್ನೂ ಹಾರಗಳನ್ನೂ ತೆಗೆದುಕೊಂಡು ಹೋಗುವ, ಉತ್ತರ ಇಂಗ್ಲೆಂಡಿನ ಒಂದು ವಾರ್ಷಿಕ ಹಬ್ಬ.

Search Dictionaries

Loading Results

Follow Us :   
  Download Bharatavani App
  Bharatavani Windows App