भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

rusher

ನಾಮವಾಚಕ

  • ನುಗ್ಗುವವ; ನೂಕುವವ.
  • (ಕಾಲ್ಚೆಂಡಾಟ) ಚೆಂಡಿಗಾಗಿ ಮುತ್ತಿಗೆಹಾಕುವ ಯಾ ನುಗ್ಗುವ ಆಟಗಾರ ಯಾ ಇದರಲ್ಲಿ ಕುಶಲನಾದವ.

rushingly

ಕ್ರಿಯಾವಿಶೇಷಣ

ವೇಗವಾಗಿ ಯಾ ಅವಸರವಸರವಾಗಿ.

rushlight

ನಾಮವಾಚಕ

  • ಜೊಂಡು ಮೋಂಬತ್ತಿ (ಬೆಳಕು).
  • (ಸಾಮಾನ್ಯವಾಗಿ ರೂಪಕವಾಗಿ) (ಬುದ್ಧಿ, ತಿಳಿವಳಿಕೆ ಮೊದಲಾದವುಗಳ) ಮಬ್ಬು ಮಿನುಗು; ಮಂದ ಪ್ರಕಾಶ.

rushlike

ಗುಣವಾಚಕ

ಜೊಂಡಿನಂಥ; ಜೊಂಡನ್ನು ಹೋಲುವ.

rushy

ಗುಣವಾಚಕ

  • ಜೊಂಡಿನಿಂದ ಮಾಡಿದ ಯಾ ಜೊಂಡನ್ನು ಹೋಲುವ.
  • ಜೊಂಡು ತುಂಬಿರುವ; ಹೇರಳವಾಗಿ ಜೊಂಡು ಬೆಳೆದಿರುವ.

rusk

ನಾಮವಾಚಕ

ರಸ್ಕು; ಗರುಗಾಗಿ ಮತ್ತೆ ಸುಟ್ಟ ಬ್ರೆಡ್ಡಿನ ಬಿಲ್ಲೆ ಯಾ ಚೂರು (ಸಾಮಾನ್ಯವಾಗಿ ಹಗುರ ಬಿಸ್ಕತ್ತು).

russet

ನಾಮವಾಚಕ

  • (ಚರಿತ್ರೆ) (ಮನೆಯಲ್ಲಿ ನೂತು ನೇಯ್ದ, ಕೆಂಗಂದು ಯಾ ಬೂದು ಬಣ್ಣದ, ರೈತರು ಧರಿಸುತ್ತಿದ್ದ) ಒರಟು ಬಟ್ಟೆ.
  • ಕೆಂಗಂದು ಬಣ್ಣ.
  • ಕೆಂಗಂದು ಸೇಬು; ಒರಟು ಸಿಪ್ಪೆಯ, ಕೆಂಗಂದು ಯಾ ಬೂದು ಬಣ್ಣದ ಒಂದು ಜಾತಿಯ ಸೇಬು.

russet

ಗುಣವಾಚಕ

  • ಕೆಂಗಂದು ಬಣ್ಣದ.
  • (ಪ್ರಾಚೀನ ಪ್ರಯೋಗ) ಗ್ರಾಮ್ಯ; ನಿರಾಡಂಬರ; ಸರಳ.

russety

ಗುಣವಾಚಕ

  • ಸ್ವಲ್ಪಮಟ್ಟಿಗೆ ಕೆಂಗಂದು ಬಣ್ಣವುಳ್ಳ.
  • (ಪ್ರಾಚೀನ ಪ್ರಯೋಗ) ಹಳ್ಳಿಗಾಡಿನ; ಸರಳ ಸ್ವಭಾವದ.

Russia

ನಾಮವಾಚಕ

  • ರಷ್ಯಾ(ದೇಶ).
  • ರಷ್ಯಾ ಚರ್ಮ; ಪುಸ್ತಕದ ರಟ್ಟುಕಟ್ಟುವುದರಲ್ಲಿ ಉಪಯೋಗಿಸುವ, ಬರ್ಚ್‍ಮರದ ತೊಗಟೆಯಿಂದ ತೆಗೆದ ಎಣ್ಣೆಯಿಂದ ಸಂಸ್ಕರಿಸಿದ, ತಾಳಿಕೆ ಬರುವ ಒಂದು ಬಗೆಯ ಚರ್ಮ.

Russia leather

ನಾಮವಾಚಕ

= Russia\((2)\).

Russian

ನಾಮವಾಚಕ

ಪದಗುಚ್ಛ

ರಷ್ಯನ್‍:

  • ರಷ್ಯಾ ದೇಶದವನು; ರಷ್ಯಾದೇಶದಲ್ಲಿ ಹುಟ್ಟಿದವನು ಯಾ ಅಲ್ಲಿಯ ನಿವಾಸಿ.
  • ರಷ್ಯಾದೇಶದ ಭಾಷೆ.

Russian

ಗುಣವಾಚಕ

  • ರಷ್ಯಾದ; ರಷ್ಯಾದೇಶದ.
  • ರಷ್ಯಾ ಭಾಷೆಯ; ರಷ್ಯಾ ಭಾಷೆಯಲ್ಲಿಯ.

Russian boot

ನಾಮವಾಚಕ

ರಷ್ಯಾದ ಬೂಟು, ಪಾದರಕ್ಷೆ; ಸಡಿಲವಾಗಿ ಮೀನಖಂಡವನ್ನು ಮುಚ್ಚುವ ಪಾದರಕ್ಷೆ.

Russian olive

ನಾಮವಾಚಕ

= oleaster.

Russian roulette

ನಾಮವಾಚಕ

  • ಒಂದು ಅರೆಯಲ್ಲಿ ಮಾತ್ರ ತೋಟಾ ಇರುವ ಸುತ್ತು ಪಿಸ್ತೂಲನ್ನು ತನ್ನ ತಲೆಗೇ ತಿರುಗಿಸಿಕೊಂಡು ಚಾಪು ಸನ್ನೆಯನ್ನು ಒತ್ತುವ ಶೌರ್ಯಾಟೋಪದ ಪ್ರದರ್ಶನ.
  • ಅಪಾಯಕಾರಿ ಉದ್ಯಮ, ಕೆಲಸ.

Russian salad

ನಾಮವಾಚಕ

ರಷ್ಯನ್‍ ಪಚ್ಚಡಿ; ಹಸಿ ತರಕಾರಿಗಳನ್ನು ಹೆಚ್ಚಿ, ಮೊಟ್ಟೆಯ ಲೋಳೆ ಮೊದಲಾದವುಗಳೊಡನೆ ತಿನ್ನುವ ಪಚ್ಚಡಿ.

Russianise

ಸಕರ್ಮಕ ಕ್ರಿಯಾಪದ

= Russianize.

Russianization

ನಾಮವಾಚಕ

  • ರಷ್ಯೀಕರಣ; ರಷ್ಯಾದ ಸ್ವರೂಪ ನೀಡುವಿಕೆ.
  • ರಷ್ಯನ್‍ ಸಂಸ್ಕೃತಿ, ತತ್ತ್ವ ಮೊದಲಾದವುಗಳಿಗೆ ಅಧೀನಪಡಿಸುವಿಕೆ.

Russianize

ಸಕರ್ಮಕ ಕ್ರಿಯಾಪದ

  • ರಷ್ಯೀಕರಿಸು:
    1. ರಷ್ಯಾದ ಸ್ವರೂಪ, ಗುಣಲಕ್ಷಣ ನೀಡು.
    2. ರಷ್ಯನ್‍ ಸಂಸ್ಕೃತಿ, ತತ್ತ್ವ ಮೊದಲಾದವುಗಳಿಗೆ ಅಧೀನಪಡಿಸು; ರಷ್ಯನ್‍ ಸಂಸ್ಕೃತಿ, ತತ್ತ್ವ ಮೊದಲಾದವುಗಳನ್ನು ಅನುಸರಿಸುವಂತೆ ಒತ್ತಾಯಪಡಿಸು.
  • ರಷ್ಯಾಚರ್ಮವನ್ನು ಸಂಸ್ಕರಿಸುವ ಕ್ರಮದಲ್ಲಿ (ಚರ್ಮವನ್ನು) ಸಂಸ್ಕರಿಸು.

Search Dictionaries

Loading Results

Follow Us :   
  Download Bharatavani App
  Bharatavani Windows App