भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

Russianness

ನಾಮವಾಚಕ

ರಷ್ಯಾತನ; ರಷ್ಯತೆ; ರಷ್ಯಾದ ಸ್ವರೂಪ, ಗುಣಲಕ್ಷಣ, ಸಂಸ್ಕೃತಿ ಮೊದಲಾದವನ್ನು ಹೊಂದಿರುವಿಕೆ.

Russification

ನಾಮವಾಚಕ

  • ರಷ್ಯೀಕರಣ:
    1. ರಷ್ಯದ ಸ್ವರೂಪ, ಗುಣಲಕ್ಷಣ ಕೊಡುವಿಕೆ.
    2. ರಷ್ಯನ್‍ ಸಂಸ್ಕೃತಿ, ತತ್ತ್ವ, ನಂಬಿಕೆ ಮೊದಲಾದವುಗಳಿಗೆ ಅಧೀನಪಡಿಸುವಿಕೆ; ರಷ್ಯನ್‍ ಸಂಸ್ಕೃತಿ, ತತ್ತ್ವ, ನಂಬಿಕೆ, ಮೊದಲಾದವುಗಳನ್ನು ಅನುಸರಿಸುವಂತೆ ಬಲಾತ್ಕಾರ ಪಡಿಸುವಿಕೆ.
  • (ಭಾಷೆ, ಪದಪ್ರಯೋಗ ಮೊದಲಾದವುಗಳಿಗೆ) ರಷ್ಯನ್‍ ಲಕ್ಷಣ ನೀಡುವುದು; ವಿಶಿಷ್ಟ ರಷ್ಯನ್‍ ಸ್ವರೂಪ ಕೊಡುವಂತೆ ಮಾರ್ಪಾಟು ಮಾಡುವುದು.

Russify

ಸಕರ್ಮಕ ಕ್ರಿಯಾಪದ

ರಷ್ಯಾ ಸ್ವರೂಪ, ಲಕ್ಷಣ ಕೊಡು; (ಭಾಷೆ, ಪದಪ್ರಯೋಗ, ಮೊದಲಾದವನ್ನು) ರಷ್ಯನ್‍ ಭಾಷೆಯ ವಿಶಿಷ್ಟ ಲಕ್ಷಣಗಳಿಗೆ ಹೊಂದಿಕೊಳ್ಳುವಂತೆ ಮಾರ್ಪಡಿಸು, ಬದಲಾಯಿಸು.

Russki

ನಾಮವಾಚಕ

(ಅನೇಕವೇಳೆ ಹೀನಾರ್ಥಕ ಪ್ರಯೋಗ) ರಷ್ಯಾದವನು.

Russky

ನಾಮವಾಚಕ

= Russki.

Russo-

ಸಮಾಸ ಪೂರ್ವಪದ

ರಷ್ಯಾ-, ರಷ್ಯಾದ ಮತ್ತು – ಎಂಬರ್ಥಗಳ ಸಮಾಸ ಪೂರ್ವಪದ.

Russophile

ನಾಮವಾಚಕ

ರಷ್ಯಾಪ್ರೇಮಿ; ರಷ್ಯಾಭಿಮಾನಿ; ರಷ್ಯಾದೇಶವನ್ನು ಯಾ ರಷ್ಯಾದ ಆಚಾರವಿಚಾರ, ರೀತಿನೀತಿಗಳನ್ನು ಯಾ ರಷ್ಯಾದವರನ್ನು – ಮೆಚ್ಚುವವನು, ಪ್ರೀತಿಸುವವನು.

rust

ನಾಮವಾಚಕ

  • (ಕಬ್ಬಿಣಕ್ಕೆ, ಉಕ್ಕಿಗೆ ಹಿಡಿಯುವ) ತುಕ್ಕು; ಕಿಲುಬು.
  • ಇತರ ಲೋಹಗಳಿಗೆ ಹಿಡಿಯುವ ಇಂಥ ತುಕ್ಕು, ಕಿಲುಬು.
  • (ರೂಪಕವಾಗಿ)
    1. ಉಪಯೋಗಿಸದೆ ಯಾ ಕಾರ್ಯಮಾಡದೆ ಉಂಟಾಗುವ – ಹೀನಸ್ಥಿತಿ, ಮಸುಕು, ಮಷ್ಟು, ಮಾಲಿನ್ಯ.
    2. (ಹೀನಸ್ಥಿತಿಗೆ ಕಾರಣವಾಗುವ) ಜಡತೆ; ನಿಷ್ಕ್ರಿಯತೆ; ಆಲಸ್ಯ; ಸೋಮಾರಿತನ: read to keep your mind from rust ನಿನ್ನ ಮನಸ್ಸು ತುಕ್ಕುಹಿಡಿಯದಂತಿರಲು (ಜಡವಾಗದಂತೆ) ಓದು.
    1. ತುಕ್ಕು; ಬೂಷ್ಟು; ಸಸ್ಯಗಳಿಗೆ, ತುಕ್ಕುಬಣ್ಣದ ಕಲೆಗಳನ್ನುಂಟುಮಾಡುವ, ಹಲವು ಬಗೆಯ ಶಿಲೀಂಧ್ರ ರೋಗ.
    2. ಈ ಶಿಲೀಂಧ್ರ ರೋಗವುಂಟುಮಾಡುವ ಶಿಲೀಂಧ್ರ.

rust

ಅಕರ್ಮಕ ಕ್ರಿಯಾಪದ

ಸಕರ್ಮಕ ಕ್ರಿಯಾಪದ

ತುಕ್ಕುಹಿಡಿಸು; ಕಿಲುಬುಗಟ್ಟಿಸು; ಬೂಷ್ಟ ಹಿಡಿಸು.

  • ತುಕ್ಕುಹಿಡಿ; ಕಿಲಿಬುಗಟ್ಟು; ಬೂಷ್ಟುಹಿಡಿ; ಮಷ್ಟುಹಿಡಿ.
  • (ಸಸ್ಯಕ್ಕೆ) ತುಕ್ಕು, ಬೂಷ್ಟು – ರೋಗ ತಗುಲು; ಶಿಲೀಂಧ್ರರೋಗ ತಗುಲು.
  • (ಜರೀಗಿಡ ಮೊದಲಾದವು) ತುಕ್ಕು ಬಣ್ಣಕ್ಕೆ ತಿರುಗು; ತುಕ್ಕು ಬಣ್ಣವಾಗು.
  • (ಉಪಯೋಗಮಾಡದ್ದರಿಂದ, ಜಡತೆಯಿಂದ) ಗುಣ ಕುಂದು; ಸಾಮರ್ಥ್ಯ ತಗ್ಗು; ತುಕ್ಕು ಹಿಡಿದು ಹೋಗು: better wear out than rust ಕೆಲಸಮಾಡದೆ ತುಕ್ಕು ಹಿಡಿಯುವುದಕ್ಕಿಂತ ದುಡಿದು ಸವೆಯುವುದು ಲೇಸು.

rustic

ಗುಣವಾಚಕ

  • (ಪ್ರಾಚೀನ ಪ್ರಯೋಗ) ಹಳ್ಳಿಯ; ಹಳ್ಳಿಗಾಡಿನ; ಗ್ರಾಮ್ಯ.
  • ಹಳ್ಳಿಯವರಂತಿರುವ; ಹಳ್ಳಿ ಜನರ ನಡೆ ನುಡಿಯುಳ್ಳ; ರೈತರ ಲಕ್ಷಣವುಳ್ಳ; ಗ್ರಾಮೀಣ.
  • ನಯನಾಜೂಕಿಲ್ಲದ; ಒಡ್ಡೊಡ್ಡಾದ; ಒರಟೊರಟಾದ; ಅಸಂಸ್ಕೃತ; ಅಪರಿಷ್ಕೃತ.
  • ಒರಟು ತಯಾರಿಕೆಯ; ಒಡ್ಡು ಕೆಲಸಗಾರಿಕೆಯ; ಕಂತ್ರಿ: rustic bridge (ಸಮರಿರದ ಕೊಂಬೆ, ಕೊರಡು ಮೊದಲಾದವುಗಳಿಂದ ಮಾಡಿದ) ಒರಟು ಸೇತುವೆ; ಕಂತ್ರಿ ಸೇತುವೆ.
  • (ಲಿಪಿ) ಕೋಚುಕೋಚಾದ; ಸಮರೂಪವಿಲ್ಲದ; ವಕ್ರವಕ್ರವಾದ.
  • (ವಾಸ್ತುಶಿಲ್ಪ) ಒರಟು; ತಕವಾಗಿ ಒರಟುಮಾಡಿದ ಯಾ ಒರಟೊರಟಾಗಿಯೇ ಬಿಟ್ಟ ಯಾ ಸಂದುಗಳನ್ನು (ಸೇರುವೆಗಳನ್ನು) ಆಳವಾಗಿ ಕುಗ್ಗಿಸಿರುವ ಯಾ ಸಂದುಗಳು ವಾಲಿರುವಂಥ ಮೇಲ್ಮೈಯುಳ್ಳ.

rustic

ನಾಮವಾಚಕ

  • ಹಳ್ಳಿಗ; ಗಾವಿಲ; ಹಳ್ಳಿಗಾಡಿನವನು; ಗ್ರಾಮವಾಸಿ.
  • ರೈತ; ಬೇಸಾಯಗಾರ.
  • ನಯನಾಜೂಕಿಲ್ಲದವ; ಅನಾಗರಿಕ.

rustically

ಕ್ರಿಯಾವಿಶೇಷಣ

  • (ಮಾತು, ಪದಪ್ರಯೋಗದ ವಿಷಯದಲ್ಲಿ) ಒರಟು ಶೈಲಿಯಲ್ಲಿ; ಅಸಂಸ್ಕೃತವಾಗಿ.
  • ಹಳ್ಳಿಗಾಡಿನವರ ರೀತಿಯಲ್ಲಿ; ಗ್ರಾಮೀಣ ರೀತಿಯಲ್ಲಿ.
  • ನಯನಾಜೂಕಿಲ್ಲದೆ; ಒಡ್ಡೊಡ್ಡಾಗಿ; ಒರಟೊರಟಾಗಿ.

rusticate

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

  • (ವಿದ್ಯಾರ್ಥಿಯನ್ನು ಶಿಕ್ಷೆಯಾಗಿ ವಿಶ್ವವಿದ್ಯಾನಿಲಯದಿಂದ) ತಾತ್ಕಾಲಿಕವಾಗಿ – ಹೊರದೂಡು, ಅಟ್ಟಿಬಿಡು, ಕಳಿಸಿಬಿಡು, ಹೊರಹಾಕು.
  • ಗ್ರಾಮೀಣವಾಗಿಸು:
    1. ಹಳ್ಳಿಗಾಡಿನದರಂತೆ ಮಾಡು.
    2. ಹಳ್ಳಿಜನರ ನಡೆನುಡಿಯುಳ್ಳಂತೆ ಮಾಡು.
  • ನಯನಾಜೂಕಿಲ್ಲದಂತೆ, ಒಡ್ಡೊಡ್ಡಾಗಿ ಇರುವಂತೆ ಮಾಡು.
  • (ಕಲ್ಲುಕಟ್ಟಡದ ವಿಷಯದಲ್ಲಿ) ಒರಟುಮೈ ಕೊಡು; ಸೇರುವೆಗಳು ಎದ್ದು ಕಾಣುವಂತೆ ಮಾಡು.

rustication

ನಾಮವಾಚಕ

  • ಹಳ್ಳಿ ಸೇರಿಕೊಳ್ಳುವುದು; ಹಳ್ಳಿಗಾಡಿನಲ್ಲಿ ತಂಗುವುದು.
  • ಹಳ್ಳಿಬದುಕು; ಹಳ್ಳಿಗಾಡಿನ ವಾಸ.
  • (ವಿದ್ಯಾರ್ಥಿಯನ್ನು ಕಾಲೇಜಿನಿಂದ, ವಿಶ್ವವಿದ್ಯಾನಿಲಯದಿಂದ ಯಾ ತ್ತಿಗೆ ಸಂಬಂಧಪಟ್ಟ ಸಂಸ್ಥೆಯಿಂದ)
    1. ತಾತ್ಕಾಲಿಕ ಹೊರದೂಡಿಕೆ, ಹೊರಹಾಕುವಿಕೆ.
    2. (ಹಾಗೆ) ತಾತ್ಕಾಲಿಕವಾಗಿ ಹೊರದೂಡಲ್ಪಟ್ಟ ಸ್ಥಿತಿ.
  • (ಕಲ್ಲುಕಟ್ಟಡಕ್ಕೆ) ಒರಟುಮೈ ಕೊಡುವುದು; ಸೇರುವೆಗಳು ಎದ್ದು ಕಾಣುವಂತೆ ಮಾಡುವುದು.

rusticity

ನಾಮವಾಚಕ

  • ಹಳ್ಳಿಗತನ; ಗಮಾರತನ; ಗ್ರಾಮ್ಯತೆ.
    1. ಒರಟುತನ; ಒಡ್ಡುತನ; ನಯನಾಜೂಕಿನ, ಸಂಸ್ಕೃತಿಯ ಅಭಾವ.
    2. ಇದರ ನಿದರ್ಶನ.
  • ಬುದ್ಧಿ ವಿಕಾಸದ ಕೊರತೆ; ಬೌದ್ಧಿಕ ಸಂಸ್ಕೃತಿಯ ಅಭಾವ.
  • (ಭಾಷೆ, ವಾಕ್ಯರಚನೆ ಮೊದಲಾದವುಗಳ)
    1. ಒಡ್ಡುತನ; ಒರಟುತನ.
    2. ಒಡ್ಡುಪ್ರಯೋಗ; ಹಳ್ಳಿಗಾಡಿನ ಪ್ರಯೋಗ.
  • ಹಳ್ಳಿಗಾಡಿನ – ಲಕ್ಷಣ, ಜೀವನ, ಗುಣ ಯಾ ಸ್ವಭಾವ.
  • ಹಳ್ಳಿಯ ವಸ್ತು.

rustily

ಕ್ರಿಯಾವಿಶೇಷಣ

  • ತುಕ್ಕುಹಿಡಿದಂತೆ; ಕಿಲುಬುಗಟ್ಟಿದ ಹಾಗೆ; ಬೂಷ್ಟು ಹಿಡಿದಂತೆ.
  • ಓಬೀರಾಯನ ಕಾಲದ ತೋರಿಕೆಯಂತೆ; ನೋಡುವುದಕ್ಕೆ ಹಳೆಯ ಕಂದಾಚಾರದಂತೆ.
  • ವಟಗುಟ್ಟುವಂತೆ; ಕಿರುಕುಲು ದನಿಯಲ್ಲಿ; ಕಿರುಗುಟ್ಟುವಂತೆ.
  • ಬಳಸದೆ ಕುಂದಿಹೋಗಿ; ಅಲಕ್ಷ್ಯದಿಂದ – ಶಿಥಿಲವಾಗಿ, ಮಸುಕಾಗಿ.

rustiness

ನಾಮವಾಚಕ

  • ತುಕ್ಕುಹಿಡಿದಿರುವಿಕೆ; ಕಿಲುಬುಗಟ್ಟಿರುವುದು; ಬೂಷ್ಟುಹಿಡಿದಿರುವುದು.
  • ಹಳಸು ಮಾಸಲು; ಓಬೀರಾಯನ ಕಾಲದ ತೋರ್ಕೆ; ಹಳೆಯ ಕಂದಾಚಾರದಂತಿರುವುದು.
  • (ದನಿಯ) ವಟಗುಟ್ಟುವಿಕೆ; ಕಿರುಕುಲು,
  • ಬಳಸದೆ ಕುಂದಿಹೋಗಿರುವುದು; ಶಿಥಿಲತೆ; ಮಸಕುತನ.
  • (ಬಣ್ಣದ ಬಟ್ಟೆಗಳ ವಿಷಯದಲ್ಲಿ) ಬಣ್ಣಗೆಟ್ಟಿರುವುದು; ಮಾಸಲುತನ.
  • ತುಕ್ಕು ಬಣ್ಣವಾಗಿರುವುದು; ಕೆಂಗಂದಾಗಿರುವುದು.

rustle

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಪದಗುಚ್ಛ

rustle up (ಆಡುಮಾತು)

  • (ಅಲುಗಿಸಿ, ಅಳ್ಳಾಡಿಸಿ ತರಗೆಲೆಗಳಂತೆ) ಮರ್ಮರಗುಟ್ಟಿಸು.
  • (ಆಡುಮಾತು) ಶ್ರಮಪಟ್ಟು ಗಳಿಸು ಯಾ ವ್ಯವಹರಿಸು.
  • (ದನಕರುಗಳನ್ನು, ಕುದುರೆಗಳನ್ನು) ಕದಿ; ಕಳವುಮಾಡು ( ಅಕರ್ಮಕ ಕ್ರಿಯಾಪದ ಸಹ).

rustler

ನಾಮವಾಚಕ

  • ಮರ್ಮರ ಶಬ್ದ ಮಾಡುವ ವ್ಯಕ್ತಿ ಯಾ ವಸ್ತು.
  • (ಅಮೆರಿಕನ್‍ ಪ್ರಯೋಗ, ಆಡುಮಾತು) ಚುರುಕು ಆಸಾಮಿ; ಬಹಳ ಚಟುವಟಿಕೆಯ ವ್ಯಕ್ತಿ.
  • (ಅಮೆರಿಕನ್‍ ಪ್ರಯೋಗ) (ಆಡುಮಾತು) ಜಾನುವಾರುಗಳ್ಳ; ದನಗಳ್ಳ; ದನಕರುಗಳನ್ನು ಕದಿಯುವವನು.

rustless

ಗುಣವಾಚಕ

(ಮುಖ್ಯವಾಗಿ ಕ್ರೋಮಿಯಂ ಉಕ್ಕಿನ ವಿಷಯದಲ್ಲಿ) ತುಕ್ಕಿಲ್ಲದ; ತುಕ್ಕುಹಿಡಿಯದ; ಕಿಲುಬದ.

Search Dictionaries

Loading Results

Follow Us :   
  Download Bharatavani App
  Bharatavani Windows App