भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

racemose

ಗುಣವಾಚಕ

  • (ಸಸ್ಯವಿಜ್ಞಾನ) ರೆಸಿಮೋಸ್‍; ಅಸೀಮಾಕ್ಷೀ; ರೆಸೀಮ್‍ ಉಳ್ಳ.
  • (ಅಂಗರಚನಾಶಾಸ್ತ್ರ) (ಗ್ರಂಥಿ ಮೊದಲಾದವುಗಳ ವಿಷಯದಲ್ಲಿ) ಗುಂಪಾಗಿರುವ; ಜೊಂಪೆಯಾಗಿರುವ; ಗುಚ್ಛವಾಗಿರುವ.

racer

ನಾಮವಾಚಕ

  • (ಪಂದ್ಯ) ಓಡುವವನು; ಓಟಗಾರ.
  • ಪಂದ್ಯದ, ಜೂಜಿನ ಕುದುರೆ.
  • ವೇಗವಾಗಿ ಓಡುವ ಯಾವುದೇ ಪ್ರಾಣಿ.
  • ಓಟದ ಪಂದ್ಯದಲ್ಲಿ ಬಳಸುವ ಸೈಕಲ್‍, ದೋಣಿ, ಮೊದಲಾದ ಯಾವುದೇ ವಸ್ತು.
  • ತೀರ ರಭಸದಿಂದ ನಡೆಯುವ ಯಾ ತಿರುಗುವ (ಯಂತ್ರ) ಭಾಗ.
  • ಭಾರಿ ಫಿರಂಗಿಯ ಪೀಠವು ಚಲಿಸುವ ವರ್ತುಲಾಕಾರದ ಹಾರಿಜ ಕಂಬಿ.

racetrack

ನಾಮವಾಚಕ

  • = racecourse.
  • ಮೋಟಾರು ಪಂದ್ಯದ ಹಾದಿ, ಪಥ.

raceway

ನಾಮವಾಚಕ

  • (ಯಾವುದಾದರೂ ಒಂದು ವಸ್ತು) ಓಡುವ ಪಥ ಯಾ ಮಾರ್ಗ ಮೊದಲಾದವು.
    1. ನೀರು ಹೋಗುವ ಕಾಲುವೆ, ಮಾರ್ಗ.
    2. ಬಾಲ್‍ಬೇರಿಂಗ್‍ಗಳು ಓಡುವ ಗಾಡಿ, ತೋಡು.
    3. ವಿದ್ಯುತ್ತಂತಿಗಳನ್ನು ಒಳಗೊಂಡಿರುವ ಪೈಪು ಯಾ ನಾಳ.
  • (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ)
    1. ಟ್ರಾಟಿಂಗ್‍, ಪೇಸಿಂಗ್‍ ಯಾ ಹಾರ್ನೆಸ್‍ ರೇಸಿಂಗ್‍ನ ಪಥ.
    2. = racecourse.

rachis

ನಾಮವಾಚಕ

  • (ಸಸ್ಯವಿಜ್ಞಾನ)
    1. ಹತ್ತಿರ ಹತ್ತಿರ ಹೂತೊಟ್ಟುಗಳನ್ನು ಬಿಡುವ, ಹುಲ್ಲು ಮೊದಲಾದವುಗಳ ಕಾಂಡ.
    2. ಸಂಯುಕ್ತ ಪರ್ಣದ ಯಾ ಪರ್ಣಾಂಗದ (frond) ಅಕ್ಷ, ನಡುಕಾಂಡ. Figure: rachis
  • (ಅಂಗರಚನಾಶಾಸ್ತ್ರ) ಬೆನ್ನುಮೂಳೆ; ಬೆನ್ನುಹುರಿ.
  • (ಸಸ್ಯವಿಜ್ಞಾನ) ಗರಿಯ ಕಾಂಡ, ಮುಖ್ಯವಾಗಿ ಅಡ್ಡ ಎಳೆಯನ್ನು ಹೊಂದಿರುವ ಭಾಗ.

rachitic

ಗುಣವಾಚಕ

ರಿಕೆಟ್ಸ್‍ ರೋಗದ ಯಾ ಅದಕ್ಕೆ ಸಂಬಂಧಿಸಿದ.

rachitis

ನಾಮವಾಚಕ

= rickets.

racial

ಗುಣವಾಚಕ

  • ಕುಲದ, ವಂಶದ ಯಾ ಜನಾಂಗದ.
  • ಕುಲ, ವಂಶ ಯಾ ಜನಾಂಗವನ್ನು ಕುರಿತ.
  • ಕುಲ, ವಂಶ, ಯಾ ಜನಾಂಗದಿಂದ, ಜನಾಂಗ ಭಾವನೆಯಿಂದ – ಹುಟ್ಟಿದ.

racialism

ನಾಮವಾಚಕ

= racism\((1)\).

racialist

ನಾಮವಾಚಕ

ವರ್ಣಭೇದ ನೀತಿವಾದಿ; ವರ್ಣಭೇದ ನೀತಿಯನ್ನು ಪ್ರತಿಪಾದಿಸುವವ, ಸಮರ್ಥಿಸುವವ.

racialist

ಗುಣವಾಚಕ

ವರ್ಣಭೇದ ನೀತಿಯ ಯಾ ಅದಕ್ಕೆ ಸಂಬಂಧಿಸಿದ.

racially

ಕ್ರಿಯಾವಿಶೇಷಣ

ಜನಾಂಗೀಯವಾಗಿ; ಕುಲವಂಶ ಯಾ ಜನಾಂಗದ – ದೃಷ್ಟಿಯಿಂದ ಆಧಾರದಿಂದ; ವಂಶ ಯಾ ಜನಾಂಗವನ್ನು ಅನುಸರಿಸಿ.

racily

ಕ್ರಿಯಾವಿಶೇಷಣ

ಸಹಜಗುಣವಿಶಿಷ್ಟವಾಗಿ; ಸಹಜ ಸರಳತೆ, ಓಜಸ್ಸು, ಜೀವಂತಿಕೆ ಮತ್ತು ತೀಕ್ಷ್ಣತೆಗಳಿಂದ ಕೂಡಿ.

raciness

ನಾಮವಾಚಕ

ಸಹಜಗುಣವಿಶಿಷ್ಟತೆ; ಸಹಜ ಸರಳತೆ, ಓಜಸ್ಸು, ಜೀವಂತಿಕೆ, ತೀಕ್ಷ್ಣತೆಗಳಿಂದ ಕೂಡಿರುವಿಕೆ.

racing car

ನಾಮವಾಚಕ

ರೇಸಿಂಗ್‍ ಕಾರು; ಸಿದ್ಧಪಡಿಸಿದ ಜಾಡಿನಲ್ಲಿ ಪಂದ್ಯಕ್ಕಾಗಿ ಓಡಲು ನಿರ್ಮಿಸಿದ ಮೋಟಾರು ಕಾರು.

racism

ನಾಮವಾಚಕ

  • ವರ್ಣಭೇದ ನೀತಿ; ಜನಾಂಗಭೇದ ನೀತಿ; ಶ್ವೇತವರ್ಣೀಯರೇ ಶ್ರೇಷ್ಠ, ಇತರ ವರ್ಣೀಯರೆಲ್ಲ ಕೀಳು ಎಂದು ಪ್ರತಿಪಾದಿಸುವ ವಾದ, ಅನುಸರಿಸುವ ನೀತಿ.
  • ಜನಾಂಗೀಯವಾದ; ಮಾನವನ ಬುದ್ಧಿಶಕ್ತಿ ಮೊದಲಾದವು ಅವನ ಕುಲ, ವಂಶ ಯಾ ಜನಾಂಗವನ್ನವಲಂಬಿಸಿದೆಯೆಂಬ ವಾದ.

rack

ನಾಮವಾಚಕ

ಚೆದುರು ಮೋಡಗಳು; ಬಿರುಗಾಳಿಯು ರಭಸದಿಂದ ಹೊಡೆದುಕೊಂಡು ಹೋಗುತ್ತಿರುವ, ಚೆಲ್ಲಾಪಿಲ್ಲಿಯಾದ ಮೇಘ ರಾಶಿಗಳು.

rack

ಅಕರ್ಮಕ ಕ್ರಿಯಾಪದ

(ಮೋಡಗಳ ವಿಷಯದಲ್ಲಿ, ಗಾಳಿಯ ರಭಸದಿಂದ) ಹೊಡೆದುಕೊಂಡು ಹೋಗು.

rack

ನಾಮವಾಚಕ

ಪದಗುಚ್ಛ

hat-rack ಹ್ಯಾಟುಗಳ ಪತ್ತಿಗೆ.

  • ಮೇವು ತುಂಬಿಡಲು ಮಾಡಿದ, ಮರದ ಯಾ ಲೋಹದ ಕಂಬಿಗಳ ಚೌಕಟ್ಟು; ಮೇವು ಬಡು, ಪತ್ತಿಗೆ; ಗೋದಣಿಗೆ.
  • (ಸಾಮಾನುಗಳು, ಪುಸ್ತಕಗಳು ಮೊದಲಾದವುಗಳನ್ನಿಡಲು ಮಾಡಿದ ಅಡ್ಡಪಟ್ಟಿಗಳು, ಗೂಟಗಳು ಯಾ ಗೂಡುಗಳ ) ಬಡು; ಪತ್ತಿಗೆ; ರ್ಯಾಕು.
  • ಹಲ್ಲುಗಾಲಿಗೆ ಯಾ ತಿರುವು ಸುತ್ತಿಗೆ ಹೊಂದಿಕೆಯಾಗುವಂತೆ ಮಾಡಿದ ಹಲ್ಲುಗಳನ್ನಾಗಲಿ ಕಚ್ಚುಗಳನ್ನಾಗಲಿ ಉಳ್ಳ ಸರಳು ಯಾ (ರೈಲು)ಕಂಬಿ.

rack

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಲಾಯದ ಮೇವುಕಟ್ಟನ್ನು (ಒಣ) ಹುಲ್ಲಿನಿಂದ ತುಂಬು, ಭರ್ತಿಮಾಡು.

  • (ಮೇವು ಕಟ್ಟಿನಲ್ಲಿ ಹುಲ್ಲು ತುಂಬಿ) ಕುದುರೆಯನ್ನು ಮೇಯಿಸು; ಕುದುರೆಗೆ ಮೇವಿಡು.
  • (ಕುದುರೆ ಮೊದಲಾದವನ್ನು) ಮೇವು ಕಟ್ಟಿಗೆ ಕಟ್ಟು.
  • ಪತ್ತಿಗೆಯ, ಬಡುವಿನ ಮೇಲೆ ಯಾ ಒಳಗೆ (ಯಾವುದೇ ಸಾಮಾನನ್ನು) ಇಡು.

Search Dictionaries

Loading Results

Follow Us :   
  Download Bharatavani App
  Bharatavani Windows App