भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

rack

ಸಕರ್ಮಕ ಕ್ರಿಯಾಪದ

  • (ಚರಿತ್ರೆ) (ಮುಖ್ಯವಾಗಿ ಚಿತ್ರಹಿಂಸೆಗಾಗಿ ನಿರ್ಮಿಸಿದ ಚೌಕಟ್ಟು ಯಾ ಹಾಸಿಗೆಗೆ ಕಟ್ಟಿ, ವ್ಯಕ್ತಿಯ) ಕೀಲುಗಳನ್ನು ಹಿಗ್ಗಲಿಸು.
  • (ರೋಗದ ಯಾ ದೈಹಿಕ ಹಾಗೂ ಮಾನಸಿಕ ಯಾತನೆಯ ವಿಷಯದಲ್ಲಿ) ಚಿತ್ರಹಿಂಸೆ ಕೊಡು, ಮಾಡು: a racking headache ಚಿತ್ರಹಿಂಸೆ ಕೊಡುವ ತಲೆಶೂಲೆ.
    1. ಚಿತ್ರಹಿಂಸೆಯಾಗುವಂತೆ ಕುಲುಕಿಬಿಡು, ಅಲ್ಲಾಡಿಸಿಬಿಡು.
    2. ಕಾಲುಕೀಲುಗಳನ್ನೆಲ್ಲ ಎಳೆದು ಹಿಂಸಿಸು; ಹಿಗ್ಗಾಮುಗ್ಗಾ ಎಳೆದು ಯಾತನೆಯುಂಟುಮಾಡು: cough that seemed to rack his whole body ಅವನ ಮೈಯನ್ನೆಲ್ಲ ಅಲ್ಲಾಡಿಸಬಿಡುವಂತಿದ್ದ ಕೆಮ್ಮು.
    3. ಅತಿಯಾದ ಶ್ರಮ ಕೊಡು; ವೇದನೆಯಾಗುವಷ್ಟು ಶ್ರಮಪಡಿಸು: racked his brains for a plan ವುದಾದರೂ ಒಂದು ಉಪಾಯ ಹವಣಿಸಲು ತನ್ನ ಮಿದುಳಿಗೆ ಆದಷ್ಟೂ ಶ್ರಮಕೊಟ್ಟ, ತಲೆತುರುಚಿಕೊಂಡ.
    1. (ಸಾಧ್ಯವಾದಷ್ಟೂ) ಅತಿಯಾದ ಕಂದಾಯವನ್ನು ಯಾ ಮೊಬಲಗನ್ನು ಕೀಳು, ಸುಲಿದುಕೊ, ವಸೂಲು ಮಾಡು.
    2. ಅತಿ ಕಂದಾಯ ವಸೂಲು ಮಾಡಿ ರೈತರನ್ನು ಯಾ ಗುತ್ತಿಗೆದಾರನನ್ನು, ಅತಿ ಬಾಡಿಗೆಯಿಂದ ಬಾಡಿಗೆದಾರರನ್ನು – ಹಿಂಸಿಸು.
    3. ಅತಿಯಾಗಿ ಬೆಳೆ ತೆಗೆದು ಜಮೀನನ್ನು ನಿಸ್ಸಾರಗೊಳಿಸು, ಸತ್ತ್ವಹೀನವಾಗಿಸು.

rack

ನಾಮವಾಚಕ

ಪದಗುಚ್ಛ

(ಚರಿತ್ರೆ) ಚಿತ್ರಹಿಂಸೆಯ ಹಾಸಿಗೆ; ಚಿತ್ರಹಿಂಸೆಗೆ ಒಳಪಡಿಸಿದವನನ್ನು ಅಂಗಾತನಾಗಿ ಮಲಗಿಸಿ ಅವನ ಕೈಕಾಲುಗಳನ್ನು ಎಳೆದು ಕಟ್ಟಿ ಎರಡು ತುದಿಗಳಲ್ಲೂ ಇರುವ ಭಾರವಾದ ಉರುಳೆಗಳನ್ನು ಹಿಂದಕ್ಕೂ ಮುಂದಕ್ಕೂ ಉರುಳಿಸಿ ಅವನ ಕೀಲುಗಳನ್ನೆಲ್ಲ ಹಿಗ್ಗಾಮುಗ್ಗಾ ಎಳೆದು ನರಕಯಾತನೆಗೆ ಗುರಿಮಾಡಲು ಬಳಸುತ್ತಿದ್ದ ಚೌಕಟ್ಟು. on the rack

  • ಚಿತ್ರಹಿಂಸೆಯ ಹಾಸಿಗೆಯ ಮೇಲೆ.
  • ಘೋರ ಸಂಕಟಕ್ಕೆ ಸಿಕ್ಕಿ; ಚಿತ್ರಹಿಂಸೆಗೆ ಒಳಗಾಗಿ.

rack

ನಾಮವಾಚಕ

= arrack (ಮುಖ್ಯವಾಗಿ rack punch ಎಂಬಲ್ಲಿ ಬಳಕೆ).

rack

ನಾಮವಾಚಕ

ಕುಕ್ಕೋಟಕ್ಕೂ ಮಂದಗತಿಯ ನಾಗಾಲೋಟಕ್ಕೂ ಮಧ್ಯಸ್ಥ ವೇಗದ, ಕುದುರೆಯ ನಡಗೆ, ಗತಿ.

rack

ಅಕರ್ಮಕ ಕ್ರಿಯಾಪದ

(ಕುದುರೆಯ ವಿಷಯದಲ್ಲಿ) ಕುಕ್ಕೋಟಕ್ಕೂ ಮಂದಗತಿಯ ನಾಗಾಲೋಟಕ್ಕೂ ಮಧ್ಯಸ್ಥ ವೇಗದಲ್ಲಿ ನಡೆ.

rack

ಸಕರ್ಮಕ ಕ್ರಿಯಾಪದ

(ದ್ರಾಕ್ಷಿಯ ಯಾ ಸೇಬಿನ ಗಷ್ಟನ್ನು ಯಾ ಕಸರನ್ನು ಹಿಂಡಿ) ವೈನನ್ನು ತೆಗೆ.

rack

ನಾಮವಾಚಕ

ವಿನಾಶ; ಹಾಳು; ಧ್ವಂಸ: go to rack and ruin ಧ್ವಂಸವಾಗಿ ಹೋಗು.

rack

ನಾಮವಾಚಕ

ಕುರಿಮರಿ ಮೊದಲಾದವುಗಳ, ಮುಂದಿನ ಪಕ್ಕೆಲುಬುಗಳನ್ನೊಳಗೊಂಡ ಅಂಗಭಾಗ.

rack-railway

ನಾಮವಾಚಕ

(ಕಡಿದಾದ ಮಾರ್ಗದಲ್ಲಿ ಬಂಡಿಗಳು ಹಿಂದಕ್ಕೆ ಸರಿಯದಂತೆ) ರೈಲುಹಾದಿಯಲ್ಲಿ ಸಾಧಾರಣವಾಗಿ ಇರುವ ಎರಡು ಕಂಬಿಗಳ ನಡುವೆ ಹಲ್ಲುಕಂಬಿಯೊಂದನ್ನು ಹಾಕಿರುವ ರೈಲುಮಾರ್ಗ; ಹಲ್ಲುಕಂಬಿ ರೈಲುಮಾರ್ಗ.

rack-rent

ನಾಮವಾಚಕ

  • ಆದಾಯ ಸಮಕಂದಾಯ; ಜಮೀನಿನ ಯಾ ಬೇರೆ ಆಸ್ತಿಯ ವಾರ್ಷಿಕ ಆದಾಯಕ್ಕೆ ಹೆಚ್ಚುಕಡಮೆ ಸರಿಸಮನಾದ ಕಂದಾಯ.
  • ದುಬಾರಿ ಕಂದಾಯ ಯಾ ಬಾಡಿಗೆ.

rack-rent

ಸಕರ್ಮಕ ಕ್ರಿಯಾಪದ

  • ದುಬಾರಿ ಕಂದಾಯವನ್ನು ಯಾ ಬಾಡಿಗೆಯನ್ನು ವಸೂಲು ಮಾಡು.
  • ಗುತ್ತಿಗೆದಾರನಿಂದ ದುಬಾರಿ ಕಂದಾಯವನ್ನು ಯಾ ಗುತ್ತಿಗೆಯನ್ನು ಬಾಡಿಗೆದಾರನಿಂದ ದುಬಾರಿ ಬಾಡಿಗೆಯನ್ನು ವಸೂಲು ಮಾಡಿ ಅವನನ್ನು ಹಿಂಸಿಸು, ಕಾಡು.

rack-renter

ನಾಮವಾಚಕ

  • ದುಬಾರಿ ಬಾಡಿಗೆ ಯಾ ಕಂದಾಯ ಕೊಡುವ ಬಾಡಿಗೆದಾರ.
  • ದುಬಾರಿ ಬಾಡಿಗೆ ಯಾ ಕಂದಾಯ ವಸೂಲಿಮಾಡುವವ.

rack-up

ಸಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ) ಆಟದಲ್ಲಿ ಅಂಕ, ಗೆಲ್ಲಂಕ ಮೊದಲಾದವನ್ನು ಗಳಿಸು, ಸಾಧಿಸು: racked 30 points up in the first half ಪ್ರಥಮಾರ್ಧದಲ್ಲಿ 30 ಅಂಕಗಳನ್ನು ಗಳಿಸಿದನು.

rack-wheel

ನಾಮವಾಚಕ

ಹಲ್ಲುಗಾಲಿ; ದಂತಚಕ್ರ.

racket

ನಾಮವಾಚಕ

ರ್ಯಾಕೆಟ್ಟು:

  • ಕುರಿ, ಕುದುರೆ, ಮೊದಲಾದ ಪ್ರಾಣಿಗಳ ಕರುಳಿನ ಎಳೆಯನ್ನು ಬಿಗಿಮಾಡಿ ಹೆಣೆದ, ಟೆನಿಸ್‍ ಮೊದಲಾದ ಆಟಗಳ ಬ್ಯಾಟು, ದಾಂಡು.
  • (ಬಹುವಚನದಲ್ಲಿ) ನಾಲ್ಕು ಕಡೆಯೂ ಗೋಡೆಯಿರುವ ಆವರಣದಲ್ಲಿ ಇಬ್ಬರು ಇಲ್ಲವೆ ನಾಲ್ವರು ರ್ಯಾಕೆಟ್ಟುಗಳಿಂದ ಆಡುವ ಆಟ.
  • ಘನಹಿಮದಲ್ಲಿ ನಡೆಯಲು ಬಳಸುವ ರ್ಯಾಕೆಟ್‍ ಆಕಾರದ ಮೋಜ.

racket

ನಾಮವಾಚಕ

  • ಗದ್ದಲ; ಗಲಭೆ; ಗಲಾಟೆ; ಅವಾಂತರ; ಕೋಲಾಹಲ.
  • ಗೋಷ್ಠಿಯ, ಸಂತೋಷಕೂಟದ – ಸಂಭ್ರಮ ಯಾ ಉಲ್ಲಾಸ.
  • ಲೋಲುಪತೆ; ದುರ್ವ್ಯಸನಗಳಲ್ಲಿ ಮುಳುಗಿರುವಿಕೆ.
  • (ಆಡುಮಾತು) ಉದ್ಯೋಗ; ಕಸುಬು; ಜೀವನೋಪಾಯ; ವೃತ್ತಿ; ಚಟುವಟಿಕೆ; ವ್ಯವಹಾರ: start a new racket ಹೊಸ ಉದ್ಯೋಗ, ಚಟುವಟಿಕೆ, ವ್ಯವಹಾರ ಪ್ರಾರಂಭಿಸು.
  • (ಅಶಿಷ್ಟ)
    1. ಸುಲಿಗೆ; ಬೆದರಿಸಿ ಯಾ ಹಿಂಸಾತ್ಮಕ ಕಾರ್ಯಗಳಿಂದ ಕಾನೂನು ಬಾಹಿರವಾಗಿ ಹಣ ಕೀಳುವುದು.
    2. ಮೋಸ; ವಂಚನೆ; ದಗಲ್ಬಾಜಿ; ಮೋಸದ ಯೋಜನೆ, ಉದ್ಯಮ ಯಾ ವ್ಯವಹಾರ.
    3. ಲಂಚ ಯಾ ಬೆದರಿಕೆಗಳ ಮೂಲಕ ಕಾರ್ಯಗತಗೊಳಿಸುವ (ಸಾಮಾನ್ಯವಾಗಿ) ಕಾನೂನುಬಾಹಿರ ಉದ್ಯಮ.
    4. ಸುಲಭವಾದ ಜಿವನೋಪಾಯ ಮಾರ್ಗ, ವಿಧಾನ.
  • ಉಗ್ರಪರೀಕ್ಷೆ; ಅಗ್ನಿಪರೀಕ್ಷೆ; ದುಃಸಹನೀಯ ಕಷ್ಟ: stand the racket ಅಗ್ನಿಪರೀಕ್ಷೆಯಲ್ಲಿ ಗೆಲ್ಲು; ದುರ್ಭರ ಕಷ್ಟ ಸಹಿಸಿಕೊ.

racket

ಅಕರ್ಮಕ ಕ್ರಿಯಾಪದ

  • ಲಫಂಗನಾಗಿ ಬದುಕು; ಲಂಪಟ ಜೀವನವನ್ನು ನಡೆಸು.
  • ಗದ್ದಲ ಮಾಡುತ್ತ ಓಡಾಡು.

racket-ball

ನಾಮವಾಚಕ

(ಕಾರ್ಕಿನ ಮೇಲೆ ದಾರ ಸುತ್ತಿ ಮಾಡಿದ ಚೆಂಡಿಗೆ ಆಡಿನ ಮರಿಯ ತೊಗಲನ್ನು ಮುಚ್ಚಿ ಹೊಲಿದ, ಸಣ್ಣ, ಗಟ್ಟಿ) ರ್ಯಾಕೆಟ್‍ ಚೆಂಡು.

racket-press

ನಾಮವಾಚಕ

(ರ್ಯಾಕೆಟ್ಟುಗಳನ್ನು ಆಕಾರ ಕೆಡದಂತೆ ಮಾಡಲು ಒತ್ತಿಡುವ) ರ್ಯಾಕೆಟ್‍ ಪ್ರೆಸ್ಸು, ಒತ್ತಿಗೆ.

racket-tail

ನಾಮವಾಚಕ

ರ್ಯಾಕೆಟ್‍ ಆಕಾರದ ತೋಕೆಯುಳ್ಳ ಹಲವು ಸಣ್ಣ ಪಕ್ಷಿಜಾತಿ.

Search Dictionaries

Loading Results

Follow Us :   
  Download Bharatavani App
  Bharatavani Windows App