भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

racketeer

ನಾಮವಾಚಕ

ಮೋಸದ ವ್ಯಾಪಾರಿ; ದಗಲ್ಬಾಜಿ ವ್ಯಾಪಾರಿ; ಅಪ್ರಾಮಾಣಿಕವಾದ, ಮೋಸದ ವ್ಯವಹಾರ ನಡೆಸುವವ.

racketeering

ನಾಮವಾಚಕ

  • ಸುಲಿಗೆ; ಶಾಸನಬಾಹಿರವಾದ, ಹಲವೊಮ್ಮೆ ಹಿಂಸಾತ್ಮಕ ವಾದ ಕೃತ್ಯಗಳಿಂದ, ಹಣ ಸುಲಿದುಕೊಳ್ಳಲು ಯಾ ಬೇರೆ ದುರುದ್ದೇಶವನ್ನು ಸಾಧಿಸಲು ಯತ್ನಿಸುವಿಕೆ.
  • ಮೋಸದ ವ್ಯಾಪಾರ, ವ್ಯವಹಾರ, ಚಟುವಟಿಕೆ.

rackety

ಗುಣವಾಚಕ

  • ಗಲಭೆ ಮಾಡುವ; ಗಲಾಟೆ ಎಬ್ಬಿಸುವ; ಕೋಲಾಹಲನ್ನುಂಟುಮಾಡುವ.
  • ದುರ್ವ್ಯಸನಗಳಲ್ಲಿ ಆಸಕ್ತನಾದ; ವಿಷಯ ಲೋಲುಪತೆಯಲ್ಲೇ ಒಲವುಳ್ಳ.

racon

ನಾಮವಾಚಕ

(ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ರೇಕಾನ್‍; ರೇಡಾರ್‍ (ಸಂಜ್ಞೆಗಳನ್ನು ಸೂಸುವ) ಪ್ರೇಷಕ.

raconteur

ನಾಮವಾಚಕ

ಕಥಕ; ಕಥಾನಿರೂಪಕ; ಅನುಭವದ ಕಥೆಗಳನ್ನು ಯಾ ದಂತಕಥೆಗಳನ್ನು ಯಾ ದೃಷ್ಟಾಂತ ಕಥೆಗಳನ್ನು – ರಸವತ್ತಾಗಿ ಹೇಳಬಲ್ಲವನು: skilful raconteur ಕಥನಕುಶಲಿ; ಅನುಭವದ, ದೃಷ್ಟಾಂತದ ಕಥೆಗಳನ್ನು ಹೇಳುವುದರಲ್ಲಿ ಕುಶಲನಾದವನು.

raconteuse

ನಾಮವಾಚಕ

raconteur ಎಂಬುದರ ಸ್ತ್ರೀಲಿಂಗ ರೂಪ.

racoon

ನಾಮವಾಚಕ

ರಕೂನ್‍:

  • ಅಮೆರಿಕಾದ, ನಸುಗಂದು ಬಣ್ಣದ, ತುಪ್ಪುಳ ಮೈಯ, ಪೊದೆಬಾಲದ ನಿಶಾಚರ ಮಾಂಸಾಹಾರಿ ಪ್ರಾಣಿ.
  • ಈ ಪ್ರಾಣಿಯ ತುಪ್ಪುಳು.

racquet

ನಾಮವಾಚಕ

racket ಪದದ ರೂಪಾಂತರ.

racy

ಗುಣವಾಚಕ

  • ಸ್ವಜಾತಿಲಕ್ಷಣಸಂಪನ್ನ; ತನ್ನ ಜಾತಿಯ ಲಕ್ಷಣಗಳನ್ನು ಹೇರಳವಾಗಿ ಉಳ್ಳ.
  • (ಮುಖ್ಯವಾಗಿ ರುಚಿಯ ವಿಷಯದಲ್ಲಿ) ಸ್ವವೈಶಿಷ್ಟ್ಯವುಳ್ಳ; ತನ್ನದೇ ಆದ ವಿಶಿಷ್ಟ ರುಚಿಯುಳ್ಳ: of racy flavour ತನ್ನದೇ ಆದ ರುಚಿಯುಳ್ಳ.
  • ಸಹಜಗುಣವಿಶಿಷ್ಟ; ಮೂಲದ ಗುಣಗಳನ್ನು, ಹುಟ್ಟುಗುಣದ ಬಲವನ್ನು, ಉಳಿಸಿಕೊಂಡಿರುವ: racy of the soil ಸಹಜಗುಣಗಳಿಂದ ಕೂಡಿದ; ಸಹಜ ಸರಳತೆ, ಓಜಸ್ಸು, ಜೀವಂತಿಕೆ, ತೀಕ್ಷ್ಣತೆಗಳುಳ್ಳ.
  • (ಶೈಲಿಯಲ್ಲಿ) ಸ್ವಾರಸ್ಯವೂ ವೀರ್ಯವತ್ತೂ ಆದ.

rad

ನಾಮವಾಚಕ

= radian (ಎಂಬುದರ ಸಂಕ್ಷಿಪ್ತ).

rad

ನಾಮವಾಚಕ

(ಅಶಿಷ್ಟ) (ರಾಜಕೀಯ) ತೀವ್ರಗಾಮಿ (ಭಾವನೆಗಳುಳ್ಳವನು).

rad

ನಾಮವಾಚಕ

(ಭೌತವಿಜ್ಞಾನ) ರ್ಯಾಡ್‍; ಅಯಾನೀಕಾರಕ ವಿಕಿರಣದ ಹೀರಿಕೆಯನ್ನು ಅಳೆಯುವುದಕ್ಕೆ ಬಳಸುವ ಮಾನ (ಒಂದು ಕಿಲೋಗ್ರಾಮ್‍ ಹೀರುವ ಪದಾರ್ಥ 0.01 ಜೂಲ್‍ (joule) ಶಕ್ತಿಯನ್ನು ಹೀರಿಕೊಂಡುದಕ್ಕೆ ಸಮ).

RADA

ಸಂಕ್ಷಿಪ್ತ

(United Kingdom ನಲ್ಲಿ) Royal Academy of Dramatic Art.

radar

ನಾಮವಾಚಕ

ರೇಡಾರ್‍:

  • ಅಧಿಕ ಆವೃತ್ತಿಯ ವಿದ್ಯುತ್ಕಾಂತ ತರಂಗಗಳನ್ನು ಕಳುಹಿಸಿ, ಪ್ರತಿಫಲಿತ ತರಂಗಗಳನ್ನು ಗುರುತಿಸುವ ಮೂಲಕ ಹಡಗು, ವಿಮಾನ, ಮತ್ತಿತರ ಚಲಿಸುವ ಕಾಯಗಳನ್ನು ಪತ್ತೆಹಚ್ಚುವ ವ್ಯವಸ್ಥೆ.
  • ಇದಕ್ಕೆ ಬಳಸುವ ಉಪಕರಣ.

radar trap

ನಾಮವಾಚಕ

ರೇಡಾರ್‍ ಬೋನು; ಒಂದು ನಿರ್ದಿಷ್ಟ ವೇಗಮಿತಿಯನ್ನು ಮೀರುವ ವಾಹನಗಳನ್ನು ಕಂಡುಹಿಡಿಯಲು ರೇಡಾರನ್ನು ಬಳಸುವುದು.

RADC

ಸಂಕ್ಷಿಪ್ತ

(United Kingdom ನಲ್ಲಿ) Royal Army Dental Corps.

raddle

ನಾಮವಾಚಕ

(ಅನೇಕವೇಳೆ ಕುರಿಗಳ ಮೇಲೆ ಗುರುತು ಮಾಡಲು ಬಳಸುವ) ಕೆಂಗಾವಿ (ಬಣ್ಣ).

raddle

ಸಕರ್ಮಕ ಕ್ರಿಯಾಪದ

  • ಕೆಂಗಾವಿ ಬಣ್ಣ ಹಚ್ಚು, ತೊಡೆ.
  • ಕುಸುಂಬಿಬಣ್ಣ ಮೆತ್ತು, ಬಳಿ.

raddled

ಗುಣವಾಚಕ

ಕೊಳಕಾದ; ಶುಭ್ರವಲ್ಲದ.

radial

ಗುಣವಾಚಕ

  • ಕಿರಣಗಳ ಯಾ ಕಿರಣಗಳಲ್ಲಿಯ.
  • ರೇಡಿಯಲ್‍:
    1. ಕಿರಣಗಳಂತೆ ಯಾ ತ್ರಿಜ್ಯಗಳಂತೆ – ಜೋಡಿಸಿದ.
    2. ತ್ರಿಜ್ಯದ ಸ್ಥಾನ ಯಾ ಮುಖವುಳ್ಳ; ತ್ರಿಜ್ಯದ ದಿಕ್ಕಿನಲ್ಲಿರುವ: radial axle (ರೈಲು, ಟ್ರ್ಯಾಂ, ಮೊದಲಾದ ಮಾರ್ಗದ ಒಂದು ಬಾಗಿನಲ್ಲಿ ರೈಲುಗಾಡಿ ಮೊದಲಾದ ವಾಹನವು ತಿರುಗುವಾಗ) ಬಾಗಿನ ವರ್ತುಲಕ್ಕೆ ತ್ರಿಜ್ಯವಾಗಿ ವರ್ತಿಸುವ ಆ ವಾಹನದ ಗಾಲಿಯ ಅಚ್ಚು.
  • ಅರಗಳುಳ್ಳ; ಅರೆಕಾಲುಗಳುಳ್ಳ.
  • ಕೇಂದ್ರದಿಂದ ಹೊರಟು ಹರಡುತ್ತಾ ಹೋಗುವ ರೇಖೆಗಳುಳ್ಳ; ಕೇಂದ್ರಾಪಸರಣ ರೇಖೆಗಳುಳ್ಳ.
  • ಕೇಂದ್ರಾಪಸರಣ ಗತಿಯ ಯಾ ವರ್ತನೆಯ; ಕೇಂದ್ರದಿಂದ ಹೊರಟು ಅಪಸರಣ ಹೊಂದಿ ನಾನಾ ದಿಕ್ಕಿನಲ್ಲಿ ಹರಿಯುವ ರೇಖೆಗಳಲ್ಲಿ ಚಲಿಸುವ ಯಾ ವರ್ತಿಸುವ.
  • (ಅಂಗರಚನಾಶಾಸ್ತ್ರ) ಮುಂದೋಳಿನ ‘ರೇಡಿಯಸ್‍’ಮೂಳೆಯ.
  • (ವಾಹನದ ಟೈರಿನ ವಿಷಯದಲ್ಲಿ) ತ್ರಿಜ್ಯೀಯ; ರೇಡಿಯಲ್‍; ರಚನಾ ಸ್ತರಗಳನ್ನು ಪರಿಧಿಗೆ ಲಂಭವಾಗಿ, ತ್ರಿಜ್ಯೀಯವಾಗಿ ಅಳವಡಿಸಲಾಗಿರುವ.

Search Dictionaries

Loading Results

Follow Us :   
  Download Bharatavani App
  Bharatavani Windows App