भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

radiate

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

  • (ಬೆಳಕಿನ ಯಾ ತಾಪದ ಕಿರಣಗಳನ್ನು) ಹೊರಸೂಸು; ಹರಡು; ಪ್ರಸರಿಸು; ವಿಕಿರಣಗೊಳಿಸು.
  • (ವಿದ್ಯುತ್ಕಾಂತ ತರಂಗಗಳನ್ನು) ಸೂಸು; ಹರಡು; ವಿಕಿರಣಗೊಳಿಸು.
  • (ಬೆಳಕನ್ನು ಯಾ ತಾಪವನ್ನು) ಕೇಂದ್ರದಿಂದ ಹೊರಸೂಸು, ಹರಡು, ಪ್ರಸರಿಸು.
  • (ಚೈತನ್ಯ, ಪ್ರೇಮ, ಆನಂದ ಮೊದಲಾದವನ್ನು) ಬೀರು; ಹರಡು.

radiately

ಕ್ರಿಯಾವಿಶೇಷಣ

ತ್ರಿಜ್ಯಾತ್ಮಕವಾಗಿ; ತ್ರಿಜ್ಯಾಕಾರದ ಕಿರಣಗಳಿಂದ ಯಾ ಭಾಗಗಳಿಂದ ಕೂಡಿ.

radiation

ನಾಮವಾಚಕ

ವಿಕಿರಣ:

  • (ಭೌತವಿಜ್ಞಾನ) ವಿದ್ಯುತ್ಕಾಂತೀಯ ತರಂಗಗಳ ರೂಪದಲ್ಲಿ ಶಕ್ತಿಪ್ರಸಾರವಾಗುವುದು.
  • ಹಾಗೆ ಪ್ರಸಾರವಾಗುವ ಶಕ್ತಿ.
  • (ವೈದ್ಯಶಾಸ್ತ್ರ) ಎಕ್ಸ್‍ಕಿರಣಗಳು, ಗ್ಯಾಮಾ ಕಿರಣಗಳು ಮೊದಲಾದವುಗಳಿಂದ ಕ್ಯಾನ್ಸರ್‍ ಮೊದಲಾದ ರೋಗಗಳಿಗೆ ನೀಡುವ ಚಿಕಿತ್ಸೆ.

radiation chemistry

ನಾಮವಾಚಕ

ವಿಕಿರಣ ರಸಾಯನ ವಿಜ್ಞಾನ; ವಿಕಿರಣದಿಂದ ವಸ್ತುವಿನ ಮೇಲೆ ಆಗುವ ರಾಸಾಯನಿಕ ಪರಿಣಾಮ.

radiation sickness

ನಾಮವಾಚಕ

ವಿಕಿರಣ ಕಾಹಿಲೆ; ವಿಕಿರಣತಾಡನೆಗೆ ಒಳಗಾದ ಕಾರಣ ಉಂಟಾಗುವ ಅಸ್ವಸ್ಥತೆ.

radiation therapy

ನಾಮವಾಚಕ

= radiation (c).

radiational

ಗುಣವಾಚಕ

ವಿಕಿರಣದ ಯಾ ಅದಕ್ಕೆ ಸಂಬಂಧಿಸಿದ.

radiationally

ಕ್ರಿಯಾವಿಶೇಷಣ

ವಿಕಿರಣದಂತೆ ಯಾ ಅದಕ್ಕೆ ಸಂಬಂಧಿಸಿದಂತೆ.

radiative

ಗುಣವಾಚಕ

ವಿಕಿರಣದ ಯಾ ವಿಕಿರಣಾತ್ಮಕ ಯಾ ವಿಕಿರಣಕಾರಕ.

radiator

ನಾಮವಾಚಕ

    1. ಪ್ರಸಾರಕ; ಪ್ರಸಾರಮಾಡುವ ವ್ಯಕ್ತಿ ಯಾ ವಸ್ತು.
    2. ವಿಕಿರಣಕಾರಿ.
  • (ಕಾದ ಗಾಳಿ, ನೀರು, ಮೊದಲಾದವುಗಳಿಂದ ಕಾವು ಪಡೆದು, ಕೊಠಡಿ ಮೊದಲಾದವುಗಳಿಗೆ ಶಾಖ ಬೀರುವ) ಶಾಖಪ್ರಸಾರಕ.
  • (ಸಾಮಾನ್ಯವಾಗಿ ಒಯ್ಯಲು ಸುಲಭವಾದ) ಎಣ್ಣೆಯ ಯಾ ವಿದ್ಯುತ್ತಿನ ಒಲೆ, ಸ್ಟೌವ್‍.
  • (ಮೋಟಾರು ವಾಹನದಲ್ಲಿ) ರೇಡಿಯೇಟರು; ಎಂಜಿನನ್ನು ತಂಪಿಸುವ ಸಲಕರಣೆ.

radiator grille

ನಾಮವಾಚಕ

ರೇಡಿಯೇಟರ್‍ ಜಾಲರಿ; ಮೋಟಾರು ವಾಹನದ ರೇಡಿಯೇಟರಿಗೆ ಗಾಳಿಯಾಡಲು ವಾಹನದ ಮುಂದೆ ಹಾಕಿರುವ ಅಡ್ಡಕಂಬಿಗಳು, ಜಾಲರಿ.

radiatory

ಗುಣವಾಚಕ

= radiative.

radical

ಗುಣವಾಚಕ

ಪದಗುಚ್ಛ

radical heat, humour, etc., (ಮಧ್ಯಯುಗದ ತತ್ತ್ವಶಾಸ್ತ್ರ) ಜೀವದ ಸಾರಸ್ವರೂಪವೆಂದು ಭಾವಿಸಲಾಗಿದ್ದ ಉಷ್ಣ, ಪಿತ್ತ, ಮೊದಲಾದ ದ್ರವ್ಯ.

  • ಬೇರಿನ; ಮೂಲದ.
  • ಸ್ವರೂಪಭೂತ; ಮೂಲಸ್ವರೂಪದ; ಮೂಲಭೂತ: a radical error ಮೂಲಭೂತ ದೋಷ.
  • ಆಧಾರಭೂತ; ಆದ್ಯ; ಪ್ರಾಥಮಿಕ; ಪ್ರಾರಂಭಿಕ; ಮೂಲ: the radical idea or principles of a system ಒಂದು ವ್ಯವಸ್ಥೆಯ ಆಧಾರಭೂತ, ಮೂಲ ಭಾವನೆ ಯಾ ತತ್ತ್ವಗಳು.
  • ತಲಸ್ಪರ್ಶಿ; ಆಮೂಲಾಗ್ರ: radical reform ಆಮೂಲಾಗ್ರ ಸುಧಾರಣೆ.
  • (ರಾಜಕಾರಣಿಗಳ ವಿಷಯದಲ್ಲಿ)
    1. ತೀವ್ರ ಸುಧಾರಣಾವಾದಿಯಾದ; ಆಮೂಲಾಗ್ರ ಸುಧಾರಣೆಯನ್ನು ಎತ್ತಿಹಿಡಿಯುವ.
    2. (ಚರಿತ್ರೆ) ಲಿಬರಲ್‍ ಪಕ್ಷದ ತೀವ್ರಗಾಮಿ ಗುಂಪಿನ.
    3. (ಆಡಳಿತವು ಕೈಗೊಳ್ಳುವ ಕಾರ್ಯಗಳ ವಿಷಯದಲ್ಲಿ) ತೀವ್ರ ಸುಧಾರಣಾವಾದಿಗಳು ಮಂಡಿಸಿದ ಯಾ ತೀವ್ರ ಸುಧಾರಣಾ ತತ್ತ್ವಗಳಿಗೆ ಅನುಸಾರವಾದ.
  • (ಗಣಿತ) ಕರಣಿ; ಕರಣಿಗೆ ಸಂಬಂಧಿಸಿದ; ವರ್ಗಮೂಲ, ಘನಮೂಲ ಮೊದಲಾದವಕ್ಕೆ ಸಂಬಂಧಿಸಿದ.
  • (ಭಾಷಾಶಾಸ್ತ್ರ) ಪದಗಳ ಮೂಲರೂಪದ:
    1. (ನಾಮಪದದ ವಿಷಯದಲ್ಲಿ) ಪ್ರಕೃತಿಯ; ಪ್ರಾತಿಪದಿಕದ.
    2. (ಕ್ರಿಯಾಪದದ ವಿಷಯದಲ್ಲಿ) ಧಾತುವಿನ; ಧಾತುರೂಪದ.
  • (ಸಂಗೀತ) ಒಂದು ಸ್ವರಮೇಳದ ಯಾ ಸ್ವರಸಂಘಾತದ ಮೂಲಕ್ಕೆ ಸೇರಿದ.
  • (ಸಸ್ಯವಿಜ್ಞಾನ) ಮೂಲಜ; ಬೇರಿನಿಂದ ನೇರವಾಗಿ ಉದ್ಭವಿಸುವ.
  • (ಅಮೆರಿಕನ್‍ ಪ್ರಯೋಗ) (ಚರಿತ್ರೆ) ಅಂತರ್ಯುದ್ಧದ ಸಮಯದಲ್ಲಿ ದಕ್ಷಿಣ ರಾಜ್ಯಗಳ ವಿರುದ್ಧ ತೀವ್ರಕ್ರಮ ಬಯಸುವ.
  • (ಶಸ್ತ್ರವೈದ್ಯ) ರೋಗಮೂಲಹಾರಿ; ರೋಗದ ಮೂಲವನ್ನು ಯಾ ರೋಗಗ್ರಸ್ತ ಊತಕವನ್ನೆಲ್ಲ ತೆಗೆದುಹಾಕುವಂತೆ ರೂಪಿಸಿದ.

radical

ನಾಮವಾಚಕ

  • (ಭಾಷಾಶಾಸ್ತ್ರ) ಮೂಲಪದ; ಪದದ ಮೂಲರೂಪ; (ನಾಮಪದದ) ಪ್ರಕೃತಿ ಯಾ ಪ್ರಾತಿಪದಿಕ, (ಕ್ರಿಯಾಪದದ) ಧಾತು.
  • ಮೂಲತತ್ತ್ವ.
  • (ಗಣಿತ) ಕರಣಿ:
    1. ವರ್ಗಮೂಲ, ಘನಮೂಲ, ಮೊದಲಾದ ರೂಪದಲ್ಲಿ ವ್ಯಕ್ತಪಡಿಸಿದ ಪರಿಮಾಣ.
    2. ಕರಣಿ ಚಿಹ್ನೆ.
  • (ರಸಾಯನವಿಜ್ಞಾನ) ರ್ಯಾಡಿಕಲ್‍:
    1. ಆಣುವೊಂದರ ಭಾಗವಾಗಿದ್ದು, ಸಾಮಾನ್ಯ ರಾಸಾಯನಿಕ ಬದಲಾವಣೆಗಳಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಅಣುವಿನಿಂದ ಅಣುವಿಗೆ ವರ್ಗಾವಣೆಯಾಗುವ ಪರಮಾಣು ಯಾ ಪರಮಾಣುಗುಚ್ಛ.
    2. ಮುಕ್ತವಾಗಿ ಗಮನಾರ್ಹ ಕಾಲ ಅಸ್ತಿತ್ವದಲ್ಲಿರುವ ಅಂಥ ರ್ಯಾಡಿಕಲ್‍.
  • (ರಾಜಕಾರಣ) ತೀವ್ರಗಾಮಿ; ತೀವ್ರಗಾಮಿ ಭಾವನೆಗಳನ್ನುಳ್ಳವನು ಯಾ ತೀವ್ರಗಾಮಿ ಪಕ್ಷದವನು.

radical sign

ನಾಮವಾಚಕ

(ಗಣಿತ) ಕರಣಿ ಚಿಹ್ನೆ; ಮುಂದೆ ಸೂಚಿಸುವ ಸಂಖ್ಯೆಯ ವರ್ಗಮೂಲ, ಘನಮೂಲ ಮೊದಲಾದವನ್ನು ಸೂಚಿಸುವ $\sqrt$, $\sqrt[3]$, ಮೊದಲಾದ ಚಿಹ್ನೆ.

radical word

ನಾಮವಾಚಕ

ಮೂಲಪದ; ಪ್ರಕೃತಿ ಪ್ರತ್ಯಯ ಎಂದಾಗಲಿ ಧಾತುಪ್ರತ್ಯಯ ಎಂದಾಗಲಿ ವಿಂಗಡಿಸಲಾಗದ ಪದ.

radicalise

ಕ್ರಿಯಾಪದ

= radicalize.

radicalism

ನಾಮವಾಚಕ

  • ತೀವ್ರಗಾಮಿತ್ವ; ತೀವ್ರ ಸುಧಾರಕ ಮನೋವೃತ್ತಿ, ಸ್ವಭಾವ.
    1. ತೀವ್ರಗಾಮಿ ರಾಜಕಾರಣಿಗಳ ಸಿದ್ಧಾಂತ, ತತ್ತ್ವಗಳು; ತೀವ್ರಗಾಮಿ ಸಿದ್ಧಾಂತ.
    2. ತೀವ್ರಗಾಮಿ ಚಳುವಳಿ, ಆಂದೋಲನ.
  • ಸದ್ಯದ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಸುಧಾರಿಸುವ ಸಂಕಲ್ಪ.

radicalization

ನಾಮವಾಚಕ

ಆಮೂಲಾಗ್ರ ಸುಧಾರಣೆ (ಮಾಡುವಿಕೆ).

radicalize

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ರಾಜಕೀಯದಲ್ಲಿ) ತೀವ್ರಗಾಮಿಯನ್ನಾಗಿ ಮಾಡು. ತೀವ್ರಗಾಮಿಯಾಗು.

Search Dictionaries

Loading Results

Follow Us :   
  Download Bharatavani App
  Bharatavani Windows App