भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

radically

ಕ್ರಿಯಾವಿಶೇಷಣ

  • ಸಂಪೂರ್ಣವಾಗಿ; ಮೂಲಭೂತವಾಗಿ.
  • ಆಮೂಲಾಗ್ರವಾಗಿ.

radicalness

ನಾಮವಾಚಕ

  • ಮೂಲಭೂತತೆ.
  • ಆಮೂಲಾಗ್ರವಾಗಿರುವಿಕೆ.

radicchio

ನಾಮವಾಚಕ

ಕಡು ಕೆಂಬಣ್ಣದ ಎಲೆಗಳುಳ್ಳ ಒಂದು ಬಗೆಯ ಚಿಕೊರಿ ಗಿಡ.

radices

ನಾಮವಾಚಕ

radix ಎಂಬ ಪದದ ಬಹುವಚನ.

radicle

ನಾಮವಾಚಕ

ಮೂಲಾಂಕುರ:

  • ತಾಯಿಬೇರಾಗಿ ಪರಿವರ್ತನೆಗೊಳ್ಳಲಿರುವ ಸಸ್ಯದ ಭ್ರೂಣಭಾಗ.
  • ನರದ ಯಾ ಸಿರೆಯ ಬೇರಿನಂಥ ಉಪಭಾಗ.

radicular

ಗುಣವಾಚಕ

ಮೂಲಾಂಕುರದ ಯಾ ಅದಕ್ಕೆ ಸಂಬಂಧಿಸಿದ:

  • ತಾಯಿಬೇರಾಗಿ ಪರಿವರ್ತನೆಗೊಳ್ಳಲಿರುವ ಸಸ್ಯದ ಭ್ರೂಣ ಭಾಗದ.
  • ನರದ, ಸಿರೆಯ ಬೇರಿನಂಥ ಉಪಭಾಗದ.

radii

ನಾಮವಾಚಕ

radius ಎಂಬ ಪದದ ಬಹುವಚನ.

radio

ನಾಮವಾಚಕ

ರೇಡಿಯೋ:

  • ರೇಡಿಯೋ ಅಲೆಗಳ ಆವೃತ್ತಿಯ ವಿದ್ಯುತ್ಕಾಂತ ತರಂಗಗಳನ್ನುಪಯೋಗಿಸಿಕೊಂಡು ಮಾತು, ಸಂಗೀತ ಮತ್ತಿತರ ಎಲ್ಲ ಬಗೆಯ ಶಬ್ದಗಳನ್ನೂ ಪ್ರಸಾರ ಮಾಡುವ ಮತ್ತು ಸ್ವೀಕರಿಸುವ ವ್ಯವಸ್ಥೆ.
  • ಇದಕ್ಕಾಗಿ ಬಳಸುವ ಉಪಕರಣ.
  • ರೇಡಿಯೋ ಪ್ರಸರಣ.
  • ರೇಡಿಯೋ ಮುಖಾಂತರ ದೊರೆತ, ಕಳುಹಿಸಿದ ಸಂದೇಶ.
  • ರೇಡಿಯೋ ಪ್ರಸಾರ ನಿಲಯ ಯಾ ಪ್ರಸಾರ ನಾಲೆ.

radio

ಕ್ರಿಯಾಪದ

ಅಕರ್ಮಕ ಕ್ರಿಯಾಪದ

(ವರ್ತಮಾನ ಪ್ರಥಮ ಪುರುಷ ಏಕವಚನ radioes; ಭೂತರೂಪ ಮತ್ತು ಭೂತಕೃದಂತ radioed) ಸಕರ್ಮಕ ಕ್ರಿಯಾಪದ ರೇಡಿಯೋ ಮುಖಾಂತರ ತಿಳಿಸು ಯಾ ಪ್ರಸಾರಮಾಡು.

  • (ಸಂದೇಶವನ್ನು) ರೇಡಿಯೋ ಮುಖಾಂತರ ಕಳುಹಿಸು.
  • (ವ್ಯಕ್ತಿಗೆ) ರೇಡಿಯೋ ಮುಖಾಂತರ ಸಂದೇಶ ಕಳುಹಿಸು.

radio astronomy

ನಾಮವಾಚಕ

ರೇಡಿಯೋ ಖಗೋಳವಿಜ್ಞಾನ; ವಿದ್ಯುತ್ಕಾಂತರೋಹಿತದ ರೇಡಿಯೋ ಆವರ್ತನ ವ್ಯಾಪ್ತಿಯನ್ನು ಕುರಿತ ಖಗೋಳವಿಜ್ಞಾನ ಶಾಖೆ.

radio cab

ನಾಮವಾಚಕ

ರೇಡಿಯೋ ಕ್ಯಾಬ್‍; ರೇಡಿಯೋ ಸಂಪರ್ಕದ ವ್ಯವಸ್ಥೆಯಿಂದ ಕೂಡಿದ ವಾಹನ, ಬಂಡಿ.

radio car

ನಾಮವಾಚಕ

ರೇಡಿಯೋ ಕಾರು; ರೇಡಿಯೋ ಸಂಪರ್ಕದ ವ್ಯವಸ್ಥೆಯಿರುವ ಕಾರು.

radio fix

ನಾಮವಾಚಕ

ರೇಡಿಯೋನಿರ್ಧಾರಿತ ನೆಲೆ; ರೇಡಿಯೋ ನೆರವಿನಿಂದ ನಿರ್ಧರಿಸಲಾದ, ವಿಮಾನ, ಹಡಗು ಮೊದಲಾದವುಗಳ ಸ್ಥಾನ, ಜಾಗ.

radio galaxy

ನಾಮವಾಚಕ

ರೇಡಿಯೋ ಗೆಲ್ಯಾಕ್ಸಿ; ರೇಡಿಯೋ ಆವೃತ್ತಿಯ ವಿದ್ಯುತ್ಕಾಂತ ತರಂಗಗಳನ್ನು ಹೊರಸೂಸುವ ಗೆಲ್ಯಾಕ್ಸಿ.

radio ham

ನಾಮವಾಚಕ

= ham( ಪದಗುಚ್ಛ) ನೋಡಿ.

radio star

ನಾಮವಾಚಕ

ರೇಡಿಯೋ – ತಾರೆ, ನಕ್ಷತ್ರ; ಪ್ರಬಲ ರೇಡಿಯೋ ಅಲೆಗಳನ್ನು ಹೊರಸೂಸುವ ಸಣ್ಣ ನಕ್ಷತ್ರ.

radio telescope

ನಾಮವಾಚಕ

ರೇಡಿಯೋ ದೂರದರ್ಶಕ; ನಕ್ಷತ್ರಗಳಿಂದ ಬರುವ ರೇಡಿಯೋ ಆವೃತ್ತಿ ಅಲೆಗಳನ್ನು ಏರಿಯಲ್‍ಗಳ ನೆರವಿನಿಂದ ಸ್ವೀಕರಿಸಿ ವಿಶ್ಲೇಷಿಸುವ ಉಪಕರಣ.

radio-

ಸಮಾಸ ಪೂರ್ವಪದ

ರೇಡಿಯೋ:

  • ರೇಡಿಯೋ ಪ್ರಸಾರದ ಯಾ ಅದಕ್ಕೆ ಸಂಬಂಧಿಸಿದ.
  • ವಿಕಿರಣಪಟು ಯಾ ವಿಕಿರಣ ಪಟುತ್ವ ಸಂಬಂಧಿ.
  • ರಶ್ಮಿಗಳಿಗೆ ಸಂಬಂಧಿಸಿದ.
  • (ಅಂಗರಚನಾಶಾಸ್ತ್ರ) ರೇಡಿಯಸ್‍ (ಮೂಳೆ) ಮತ್ತು ಬೇರೊಂದಕ್ಕೆ ಸಂಬಂಧಿಸಿದ.

radio-assay

ನಾಮವಾಚಕ

ರೇಡಿಯೋ ಅಸ್ತಿ ನಿರ್ಣಯ; ಹೊರಸೂಸುವ ವಿಕಿರಣದ ಆಧಾರದ ಮೇಲೆ ಮಾಡಲಾಗುವ, ಪದಾರ್ಥದ ಪರಮಾಣಾತ್ಮಕ ವಿಶ್ಲೇಷಣೆ.

radio-controlled

ಗುಣವಾಚಕ

ರೇಡಿಯೋ ನಿಯಂತ್ರಿತ; (ವಿಮಾನ ಮೊದಲಾದವುಗಳ ವಿಷಯದಲ್ಲಿ) ದೂರದಿಂದ, ರೇಡಿಯೋ ಸಂಕೇತಗಳ ಸಹಾಯದಿಂದ ನಿಯಂತ್ರಿಸಲಾಗುವ.

Search Dictionaries

Loading Results

Follow Us :   
  Download Bharatavani App
  Bharatavani Windows App