English-Kannada Nighantu (University of Mysore)
University of Mysore
R
ನಾಮವಾಚಕ
ಪದಗುಚ್ಛ
(r ಸಹ) ಇಂಗ್ಲಿಷ್ ವರ್ಣಮಾಲೆಯ ಹದಿನೆಂಟನೆಯ ಅಕ್ಷರ.
- the r months ಆಯ್ಸ್ಟರ್ ಜಾತಿಯ ಸಿಂಪಿಯ ಬೆಳೆಗೆ ತಕ್ಕ ಋತುವಾದ r ಅಕ್ಷರವನ್ನೊಳಗೊಂಡ ತಿಂಗಳುಗಳು (ಸೆಪ್ಟೆಂಬರ್ನಿಂದ ಏಪ್ರಿಲ್).
- the three R’s: reading, (w)riting and (a)rithmetic (ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ತಳಹದಿಯಾದ) ಓದು, ಬರಹ ಮತ್ತು ಅಂಕಗಣಿತ; ವಾಚನ, ಲೇಖನ ಮತ್ತು ಗಣಿತ.
R
ಸಂಕ್ಷಿಪ್ತ
(R. ಸಹ)
- Regina(Elizabeth R).
- Rex.
- River.
- (® ಸಹ) registered as a trade mark.
- (ಸೊಸೈಟಿಗಳು ಮೊದಲಾದವುಗಳ ಹೆಸರುಗಳಲ್ಲಿ) Royal.
- (ಚದುರಂಗ) rook.
- Railway.
- rand.
- Regiment.
- Reaumur.
- radius
- roentgen.
R & B
ಸಂಕ್ಷಿಪ್ತ
(R. & B. ಸಹ) rhythm and blues.
R & D
ಸಂಕ್ಷಿಪ್ತ
(R. & D. ಸಹ) research and development.
R and R
ಸಂಕ್ಷಿಪ್ತ
(R. and R.ಸಹ)
- rescue and resuscitation.
- rest and recreation.
- rock and roll.
r.
ಸಂಕ್ಷಿಪ್ತ
(r ಸಹ).
- right.
- recto.
- run(s).
- radius.
r.f.
ಸಂಕ್ಷಿಪ್ತ
radio frequency.
r.h.
ಸಂಕ್ಷಿಪ್ತ
right hand.
r.m.s.
ಸಂಕ್ಷಿಪ್ತ
(ಗಣಿತ) root-mean-square.
r.p.m
ಸಂಕ್ಷಿಪ್ತ
- ಎರೆವೊಲುತಿಒ ಪೆ ಮಿನುತೆ.
- ರೆಸಲೆ ರಿಚೆ ಮಇತೆನಚೆ.
RA
ಸಂಕ್ಷಿಪ್ತ
- (United Kingdomನಲ್ಲಿ)
- Royal Academy.
- Royal Academician.
- Royal Artillery.
- right ascension.
Ra
ಸಂಕೇತ
(ರಸಾಯನವಿಜ್ಞಾನ) radium (ಧಾತು).
RAAF
ಸಂಕ್ಷಿಪ್ತ
Royal Australian Air Force.
rabbet
ನಾಮವಾಚಕ
- (ಎರಡು ಮರದ ಏಣುಗಳಲ್ಲಿ ಒಂದರ ಚಾಚು ಇನ್ನೊಂದರ ಗಾಡಿಯಲ್ಲಿ ಕೂಡುವಂತೆ ಮೆಟ್ಟಲಿನ ಆಕಾರದಲ್ಲಿ ಮಾಡಿದ) ಕೂರುಗಾಲುವೆ; ಮೆಟ್ಟಿಲುವೆಜ್ಜ.
- (ಚಮ್ಮಟಿಗೆಯಿಂದ ದಿಮ್ಮಿಯನ್ನು ಬಡಿದು ಆ ಚಮ್ಮಟಿಗೆಯನ್ನು ಮೇಲಕ್ಕೆತ್ತಿದಾಗ ದಿಮ್ಮಿಯು ಪುಟ ನೆಗೆಯುವಂತೆ ಅಳವಡಿಸಿರುವ) ನಮ್ಯ ದಿಮ್ಮಿ.
rabbet
ಸಕರ್ಮಕ ಕ್ರಿಯಾಪದ
- ಕೂರುಗಾಲುವೆ ಸೇರಿಕೆಯಿಂದ ಜೋಡಿಸು.
- ಕೂರುಗಾಲುವೆಯನ್ನು ಮಾಡು.
rabbi
ನಾಮವಾಚಕ
ಪದಗುಚ್ಛ
ರ್ಯಾಬೈ: Chief Rabbi (ಬ್ರಿಟಿಷ್ ಪ್ರಯೋಗ) ಪ್ರಧಾನ ರ್ಯಾಬೈ; ಗ್ರೇಟ್ ಬ್ರಿಟನ್ನಿನಲ್ಲಿರುವ ಯುನೈಟೆಡ್ ಸಿನಗಾಗ್ ಎಂಬ ಸಂಯುಕ್ತ ಯೆಹೂದ್ಯ ಮಂಡಳಿಯ ಪ್ರಧಾನ ಗುರು.
- (ಮುಖ್ಯವಾಗಿ ದೀಕ್ಷೆ ಪಡೆದು ಧರ್ಮಶಾಸ್ತ್ರ ಮತ್ತು ಮತದ ಪ್ರಕ್ರಿಯೆಗಳು ಮೊದಲಾದವುಗಳಲ್ಲಿ ವ್ಯವಹರಿಸುವುದಕ್ಕೂ ಕೆಲವು ಸಂಸ್ಕಾರಗಳನ್ನು ನಡೆಸುವುದಕ್ಕೂ ಅಧಿಕಾರ ಪಡೆದ) ಯೆಹೂದ್ಯ ಧರ್ಮಶಾಸ್ತ್ರ – ವೇತ್ತ, ಪಂಡಿತ, ಬೋಧಕ.
- (ಸಂಬೋಧನೆಯಲ್ಲಿ ಯಾ ಹೆಸರಿನ ಹಿಂದೆ) ಯೆಹೂದ್ಯ ಧರ್ಮಶಾಸ್ತ್ರಜ್ಞನ ಬಿರುದಾಗಿ ಬಳಸುವ ಉಪಾಧಿ.
- ಯೆಹೂದ್ಯ ಧಾರ್ಮಿಕ ಮುಖಂಡನಾಗಿ ನೇಮಕಗೊಂಡವನು.
rabbin
ನಾಮವಾಚಕ
ಪದಗುಚ್ಛ
= rabbi. the rabbins ಯೆಹೂದ್ಯಧರ್ಮ ಮತ್ತು ಸಿದ್ಧಾಂತಗಳ ಪ್ರಾಚೀನ (ಬಹುಪಾಲು 2ರಿಂದ 13ನೇ ಶತಮಾನಗಳಿಗೆ ಸೇರಿದ) ಪ್ರಧಾನ ಗುರುಗಳು.
rabbinate
ನಾಮವಾಚಕ
ರ್ಯಾಬೈಯ – ಅಧಿಕಾರ, ಅಧಿಕಾರವಧಿ ಯಾ ಪದವಿ.
rabbinic
ಗುಣವಾಚಕ
= rabbinical.
rabbinical
ಗುಣವಾಚಕ
- ರ್ಯಾಬೈಗಳ ಯಾ ಅವರ ಲಿಖಿತಗ್ರಂಥಗಳಿಗೆ ಸಂಬಂಧಿಸಿದ.
- ಅತಿಸೂಕ್ಷ್ಮ ತರ್ಕ ಯಾ ವಿಶ್ಲೇಷಣೆ ಮಾಡುವುದೇ ವೈಶಿಷ್ಟ್ಯವಾದ, ಮುಖ್ಯ ಗುಣವಾದ.