भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

sable

ನಾಮವಾಚಕ

  • (ಮುಖ್ಯವಾಗಿ ಕಾವ್ಯಪ್ರಯೋಗ) ಕಪ್ಪು ಬಣ್ಣ ; ಶ್ಯಾಮ ವರ್ಣ.
  • (ಬಹುವಚನದಲ್ಲಿ) (ಕಾವ್ಯಪ್ರಯೋಗ, ಅಲಂಕಾರಶಾಸ್ತ್ರ) ಶೋಕವಸ್ತ್ರ; ಕಪ್ಪುದಿರಿಸು; ದುಃಖಸೂಚಕ ಉಡುಪು.
  • ಸೇಬಲ್‍; ಹಿಪೊಟ್ರ್ಯಾಗಸ್‍ ನಿಗರ್‍ ಕುಲಕ್ಕೆ ಸೇರಿದ, ಬಲಿಷ್ಠವಾದ ಕೊಂಬಉಳ್ಳ, ಆಫಿಕದ ಎರಳೆ, ಹುಲ್ಲೆ (ಈ ಜಾತಿಯ ಗಂಡು ಪ್ರಾಣಿಗಳು ಮುದಿಯಾದಾಗ ಸಾಮಾನ್ಯವಾಗಿ ಕಪ್ಪಗಿರುತ್ತವೆ).

sable

ಗುಣವಾಚಕ

ಪದಗುಚ್ಛ

his sable Majesty ಸೈತಾನ.

  • (ಸಾಮಾನ್ಯವಾಗಿ ನಾಮಪದದ ನಂತರ ಪ್ರಯೋಗ) (ವಂಶಲಾಂಛನ ವಿದ್ಯೆ) ಕಪ್ಪು; ಕಪ್ಪು ಬಣ್ಣದ. heraldry sable ವಂಶಲಾಂಛನದ ಕಪ್ಪು (ಬಣ್ಣ).
  • (ಮುಖ್ಯವಾಗಿ ಕಾವ್ಯಪ್ರಯೋಗ) (ನೀಗ್ರೋ, ಆಕಾಶ, ಸಮುದ್ರ, ರಾತ್ರಿ, ವಿಧಿ, ಮೊದಲಾದವುಗಳ ವಿಷಯದಲ್ಲಿ)
    1. ಕಪ್ಪಾದ; ಕಾಳ; ಮಬ್ಬಾದ.
    2. ಕರಾಳ; ಭಯಂಕರ.

sable antelope

ನಾಮವಾಚಕ

= 2sable\((3)\).

sabled

ಗುಣವಾಚಕ

ಕಪ್ಪು ಉಡುಪು ಯಾ ಬಟ್ಟೆ ಧರಿಸಿದ.

sabot

ನಾಮವಾಚಕ

  • ತೋಡು ಹಾವುಗೆ; ಒಂದೇ ಮರದ ತುಂಡನ್ನು ತೋಡಿ ಮಾಡಿದ, ಪಾದರಕ್ಷೆ.
  • ಹಾವುಗೆ; ಮರದ ಅಟ್ಟೆಯ ಪಾದರಕ್ಷೆ.
  • (ಆಸ್ಟ್ರೇಲಿಯ) ಗಿಡ್ಡ ಮೂತಿಯ, ಚಿಕ್ಕ ವಿಹಾರ ದೋಣಿ.

sabotage

ನಾಮವಾಚಕ

ಪದಗುಚ್ಛ

ಹಾನಿಗೆಲಸ; ದುಷ್ಕೃತ್ಯ; ವಿಧ್ವಂಸಕ ಕೃತ್ಯ; ಮುಖ್ಯವಾಗಿ ರಾಜಕೀಯ ಕಾರ್ಯಕ್ರಮವಾಗಿ ಉತ್ಪಾದನೆಯ ಕಾರ್ಯ, ಆಸ್ತಿಪಾಸ್ತಿ, ಯಂತ್ರೋಪಕರಣ, ಮೊದಲಾದವಕ್ಕೆ ಉದ್ದೇಶಪೂರ್ವಕವಾಗಿ ಮಾಡುವ ನಷ್ಟ ಯಾ ಹಾನಿ. acts of sabotage ದುಷ್ಕೃತ್ಯಗಳು; ವಿಧ್ವಂಸಕ ಕೃತ್ಯಗಳು.

sabotage

ಸಕರ್ಮಕ ಕ್ರಿಯಾಪದ

ಪದಗುಚ್ಛ

sabotage a scheme ಯೋಜನೆಯನ್ನು – ಕುಲಗೆಡಿಸು, ಹಾಳುಮಾಡು, ನಿಷ್ಫಲವಾಗಿಸು, ನಿರುಪಯುಕ್ತಗೊಳಿಸು.

  • ಹಾನಿಮಾಡು; ಹಾಳುಮಾಡು; ನಾಶಗೊಳಿಸು.
  • (ರೂಪಕವಾಗಿ)
    1. ನಾಶಗೊಳಿಸು; ಹಾಳುಮಾಡು.
    2. ನಿರುಪಯುಕ್ತಗೊಳಿಸು; ನಿಷ್ಪ್ರಯೋಜಕವಾಗಿಸು.

saboted

ಗುಣವಾಚಕ

ಹಾವುಗೆ – ತೊಟ್ಟ, ಧರಿಸಿದ.

saboteur

ನಾಮವಾಚಕ

ಹಾನಿಕಾರ; ದುಷ್ಕರ್ಮಿ; ವಿಧ್ವಂಸಕ.

sabra

ನಾಮವಾಚಕ

ಇಸ್ರೇಲಿ(ನಲ್ಲಿ ಹುಟ್ಟಿದ) ಯೆಹೂದ್ಯ.

sabre

ನಾಮವಾಚಕ

  • ಬಾಗುಕತ್ತಿ; ಕೊಂಕು ಕತ್ತಿ; ರಾವುತರ, ಬಾಗಿದ ಅಲಗಿನ ಕತ್ತಿ.
  • ರಾವುತ ಮತ್ತು ಕುದುರೆ: had 300 sabres ಮುನ್ನೂರು ರಾವುತರು ಮತ್ತು ಕುದುರೆಗಳನ್ನು ಪಡೆದಿತ್ತು.
  • ಕತ್ತಿವರಸೆ ಕತ್ತಿ; ಚೂಪಾದ ಅಲಗುಳ್ಳ, ಕತ್ತಿವರಿಸೆಯಲ್ಲಿ ಬಳಸುವ, ಹಗುರ ಕತ್ತಿ.
  • (ಬಹುವಚನದಲ್ಲಿ, ಚರಿತ್ರೆ) ರಾವುತದಳ; ಅಶ್ವದಳ.
  • ಗೋರು ಹಲ್ಲೆ ಯಾ ಸೌಟು; ಕರಗಿದ ಗಾಜಿನ ಮೇಲ್ಪದರುಗಳಲ್ಲಿರುವ ಕೊಳೆಯನ್ನು ಬಾಚಿ ತೆಗೆಯುವ ತಾಮ್ರದ ಸಲಕರಣೆ.

sabre

ಸಕರ್ಮಕ ಕ್ರಿಯಾಪದ

ಕೊಂಕು ಕತ್ತಿಯಿಂದ ಕಡಿ ಯಾ ಗಾಯಗೊಳಿಸು.

sabre-bill

ನಾಮವಾಚಕ

ಬಾಗು ಕೊಕ್ಕು (ಹಕ್ಕಿ); ಕ್ಯಾಂಪಲೋರ್ಯಾಂಪಸ್‍ ಕುಲದ, ಉದ್ದವಾದ ಬಾಗಿದ ಕೊಕ್ಕುಳ್ಳ, ದಕ್ಷಿಣ ಅಮೆರಿಕದ ಯಾವುದೇ ಪಕ್ಷಿ.

sabre-cut

ನಾಮವಾಚಕ

  • ಕೊಂಕುಕತ್ತಿ ಏಟು.
  • ಕೊಂಕುಕತ್ತಿಯ ಗಾಯ ಯಾ ಗಾಯದ ಕಲೆ.

sabre-rattling

ನಾಮವಾಚಕ

  • ಸೈನ್ಯಬಲದ ಪ್ರದರ್ಶನ.
  • ಕತ್ತಿ ಝಳಪಿಸುವಿಕೆ; ಬಲಪ್ರಯೋಗದ ಬೆದರಿಕೆ; ಸೈನ್ಯಬಲ ಪ್ರಯೋಗಿಸುವುದಾಗಿ ಹಾಕಿದ ಬೆದರಿಕೆ.

sabre-toothed

ಗುಣವಾಚಕ

ಪದಗುಚ್ಛ

(ವಂಶನಷ್ಟವಾಗಿರುವ ವಿವಿಧ ಸಸ್ತನಿಗಳ ವಿಷಯದಲ್ಲಿ) ಕತ್ತಿಹಲ್ಲಿನ; ಕೊಂಕುಕತ್ತಿಯಾಕಾರದ, ಉದ್ದವಾದ ಮೇಲ್ಕೋರೆ ಹಲ್ಲುಗಳುಳ್ಳ. sabre-toothed lion (or tiger) ಕತ್ತಿಹಲ್ಲಿನ ಸಿಂಹ (ಯಾ ಹುಲಿ); ಕೊಂಕುಕತ್ತಿಯಾಕಾರದ ಉದ್ದವಾದ ಮೇಲ್ಕೋರೆ ಹಲ್ಲುಗಳಿದ್ದ, ಒಂದು ನಷ್ಟ ಸಸ್ತನಿ.

sabre-wing

ನಾಮವಾಚಕ

ಬಾಗುರೆಕ್ಕೆ (ಹಕ್ಕಿ); ಕ್ಯಾಂಪಲಾಪ್ಟರಸ್‍ ಹಾಲ್ಕಟಸ್‍ ಕುಲಕ್ಕೆ ಸೇರಿದ, ಬಾಗಿದ ರೆಕ್ಕೆಗಳುಳ್ಳ, ದಕ್ಷಿಣ ಅಮೆರಿಕದ ಝೇಂಕಾರದ ಹಕ್ಕಿ.

sabretache

ನಾಮವಾಚಕ

ರಾವುತ ಚೀಲ; ರಾವುತಾಧಿಕಾರಿಯ ನಡುಪಟ್ಟಿಯ ಎಡಗಡೆ ಉದ್ದವಾದ ಪಟ್ಟಿಗಳಿಂದ ತೂಗುಹಾಕಿದ, ಚರ್ಮದ ಚೀಲ.

sabreur

ನಾಮವಾಚಕ

ಖಡ್ಗಧಾರಿ ರಾವುತ; ಕೊಂಕುಕತ್ತಿ ಬಳಸುವ, ಮುಖ್ಯವಾಗಿ ರ್ಬಾಗಿ ಕಾಣುವ, ರಾವುತ.

sabulous

ಗುಣವಾಚಕ

  • (ಪಂಡಿತ ಪ್ರಯೋಗ) ಸೈಕತ; ಮರಳಿನ.
  • (ವೈದ್ಯಶಾಸ್ತ್ರ) (ಮುಖ್ಯವಾಗಿ ಮೂತ್ರಾಂಗಗಳಲ್ಲಿ ಆಗುವ ಸ್ರಾವಗಳ ವಿಷಯದಲ್ಲಿ) ಮರಳಿನಂಥ; ಹರಳುಹರಳಾದ.

Search Dictionaries

Loading Results

Follow Us :   
  Download Bharatavani App
  Bharatavani Windows App