भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

saburra

ನಾಮವಾಚಕ

(ವೈದ್ಯಶಾಸ್ತ್ರ) (ಜಠರದಲ್ಲಿ ಶೇಖರವಾಗುವ) ಮರಳು; ಸಿಕತ; ಮರಳಿನಂಥ ಕೆಟ್ಟ ಪದಾರ್ಥ.

SAC

ಸಂಕ್ಷಿಪ್ತ

(United Kingdom ನಲ್ಲಿ) Senior Air-craftman.

sac

ನಾಮವಾಚಕ

  • ಕೋಶ; ಚೀಲ; ಪ್ರಾಣಿ ಯಾ ಸಸ್ಯದಲ್ಲಿ, ಪೊರೆಯಿಂದ ಆವೃತವಾದ ಚೀಲದಂಥ ಟೊಳ್ಳು, ಕುಹರ.
  • ಚೀಲ; ಹರ್ನಿಯ, ಸಿಸ್ಟ್‍ ಯಾ ಗಡ್ಡೆ, ಮೊದಲಾದವುಗಳ ಸುತ್ತಲೂ ಇರುವ ಜೋತುಬಿದ್ದ ಪೊರೆ.
  • (ಉಡುಪಿನ ವಿಷಯದಲ್ಲಿ) = 1sack\((6)\).

saccade

ನಾಮವಾಚಕ

ಕಣ್ಣೋಟ; ಕಣ್ಣಿನ ಶೀಘ್ರ ಚಲನೆ; ಓದುವುದು ಮೊದಲಾದವನ್ನು ಮಾಡುವಾಗ ಒಂದು ಸ್ಥಾನದಿಂದ ಇನ್ನೊಂದಕ್ಕೆ ಕಣ್ಣಿನ ವೇಗವಾದ ಚಲನೆ.

saccadic

ಗುಣವಾಚಕ

ಕಣ್ಣಿನ ಶೀಘ್ರ ಚಲನೆಯ ಯಾ ಅದಕ್ಕೆ ಸಂಬಂಧಿಸಿದ.

saccate

ಗುಣವಾಚಕ

(ಸಸ್ಯವಿಜ್ಞಾನ)

  • ಚೀಲವಾದ; ಕೋಶವಾದ; ಹಿಗ್ಗಿ ಚೀಲದಂತಾದ; ಹಿಗ್ಗಿ ಕೋಶದಂತೆ ದೊಡ್ಡದಾದ, ಅಗಲವಾದ.
  • ಕೋಶಸ್ಥ; ಚೀಲದಲ್ಲಿರುವ; ಕೋಶದಲ್ಲಿರುವ.

saccharide

ನಾಮವಾಚಕ

(ರಸಾಯನವಿಜ್ಞಾನ) = sugar\((2)\).

saccharimeter

ನಾಮವಾಚಕ

ಶರ್ಕರಮಾಪಕ; ದ್ರಾವಣದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಅಳೆಯುವ ಯಾವುದೇ ಉಪಕರಣ, ಮುಖ್ಯವಾಗಿ ದ್ರವೀಯತಾಮಾಪಕ.

saccharin

ನಾಮವಾಚಕ

ಸಕ್ಕರೆಗೆ ಬದಲಾಗಿ ಬಳಸುವ, ಕೊಬ್ಬನ್ನುಂಟುಮಾಡದ, ಸಿಹಿಯಾದ ವಸ್ತು.

saccharine

ಗುಣವಾಚಕ

  • ಬಹಳ ಸಿಹಿಯಾದ.
  • ಸಕ್ಕರೆಯ; ಸಕ್ಕರೆಯಂಥ; ಸಕ್ಕರೆಯುಳ್ಳ.
  • ಅತಿವಿನಯ, ಭಾವಾತಿರೇಕ, ಮೊದಲಾದವನ್ನು ಅಸಹ್ಯಕರವಾಗಿ ಪ್ರದರ್ಶಿಸುವ.

saccharo-

ಸಮಾಸ ಪೂರ್ವಪದ

ಸಕ್ಕರೆ, ಶರ್ಕರ, ಸಕ್ಕರೆ ಮತ್ತು – ಎಂಬ ಅರ್ಥಗಳ ಸಮಾಸ ಪೂರ್ವಪದ.

saccharogenic

ಗುಣವಾಚಕ

ಶರ್ಕರ ಜನಕ; ಸಕ್ಕರೆಯನ್ನು ತಯಾರಿಸುವ, ಉತ್ಪಾದಿಸುವ.

saccharometer

ನಾಮವಾಚಕ

ಶರ್ಕರಮಾಪಕ; ಸಕ್ಕರೆಮಾಪಕ; ದ್ರಾವಣದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಅಳೆಯಲು ಬಳಸುವ, ಯಾವುದೇ ಸಲಕರಣೆ, ಮುಖ್ಯವಾಗಿ ದ್ರವಮಾಪಕ.

saccharose

ನಾಮವಾಚಕ

= sucrose.

sacciform

ಗುಣವಾಚಕ

ಕೋಶಾಕಾರದ; ಸಂಚಿಯ ಆಕಾರದ; ಚೀಲದ ರೂಪದ.

saccular

ಗುಣವಾಚಕ

ಕೋಶರೂಪದ; ಸಣ್ಣ ಚೀಲದಾಕಾರದ.

saccule

ನಾಮವಾಚಕ

ಕೋಶಕ; ಸಣ್ಣಚೀಲ.

sacerdotage

ನಾಮವಾಚಕ

  • (ಹಾಸ್ಯ ಪ್ರಯೋಗ) ಪುರೋಹಿತ ಪದ್ಧತಿ ಯಾ ವ್ಯವಸ್ಥೆ.
  • ಪುರೋಹಿತಶಾಹಿ ಯಾ ಪುರೋಹಿತ ಪ್ರಾಬಲ್ಯದ ರಾಜ್ಯ.

sacerdotal

ಗುಣವಾಚಕ

    1. ಪುರೋಹಿತನ ಯಾ ಪುರೋಹಿತರ.
    2. ಪೌರೋಹಿತ್ಯದ.
  • (ತತ್ತಗಳು, ಸಿದ್ಧಾಂತ, ಮೊದಲಾದವುಗಳ ವಿಷಯದಲ್ಲಿ) ಪೌರೋಹಿತ; ಪುರೋಹಿತ ಅಧಿಕಾರದ; ದೀಕ್ಷೆ ಪಡೆದ ಪುರೋಹಿತರಿಗೆ ಯಾಜ್ಞಿಕ ಕರ್ತವ್ಯಗಳು ಮತ್ತು ಅತಿಮಾನುಷ ಶಕ್ತಿಗಳು ಉಂಟೆನ್ನುವ.
  • ಪೌರೋಹಿತಶಾಹಿಯ; ಪುರೋಹಿತ ವರ್ಗಕ್ಕೆ ಅತಿಯಾದ ಅಧಿಕಾರವನ್ನು ಕೇಳುವ.

sacerdotalism

ನಾಮವಾಚಕ

  • ಪುರೋಹಿತತೆ; ಪುರೋಹಿತ ಮನೋಭಾವ ಪದ್ಧತಿ ಯಾ ತತ್ತ್ವ.
  • ಪೌರೋಹಿತ್ಯ; ಪುರೋಹಿತ ಆಚರಣೆ.
  • ಪುರೋಹಿತಶಾಹಿ.
  • ಪುರೋಹಿತನ ಮಿತಿಮೀರಿದ ಅಧಿಕಾರ.

Search Dictionaries

Loading Results

Follow Us :   
  Download Bharatavani App
  Bharatavani Windows App