भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

sacrament

ನಾಮವಾಚಕ

ಪದಗುಚ್ಛ

  • (ಆಂತರಿಕ ಹಾಗೂ ಆಧ್ಯಾತ್ಮಿಕ ಅನುಗ್ರಹದ ಬಾಹ್ಯ ಮತ್ತು ಪ್ರತ್ಯಕ್ಷ ಚಿಹ್ನೆಯೆಂದು ಭಾವಿಸಿರುವ) ಧಾರ್ಮಿಕ ಕರ್ಮ; ಪವಿತ್ರ ಸಂಸ್ಕಾರ; ಮತಸಂಸ್ಕಾರ (ಪೌರಸ್ತ, ರೆಫರ್ಮೇಷನ್‍ ಪೂರ್ವದ ಪಾಶ್ಚಾತ್ಯ ಹಾಗೂ ರೋಮನ್‍ ಕ್ಯಾಥೊಲಿಕ್‍ ಚರ್ಚುಗಳು ಜ್ಞಾನಸ್ನಾನ (baptism), ಸ್ಥಿರೀಕರಣ (confirmation), ಪ್ರಭುಭೋಜನ (Eucharist), ಪ್ರಾಯಶ್ಚಿತ್ತ (penance), ಅಂತ್ಯಾಭ್ಯಂಜನ (extreme unction), ದೀಕ್ಷೆ (ordination) ಮತ್ತು ವಿವಾಹ (matrimony) ಎಂಬ ಏಳು ಸಂಸ್ಕಾರಗಳಿಗೆ ಬಳಸುವ ಪದ; ಪ್ರಾಟೆಸ್ಟೆಂಟರ ಬಹಳ ಜನರಲ್ಲಿ ಈ ಪದ ಜ್ಞಾನಸ್ನಾನ ಮತ್ತು ಪ್ರಭುಭೋಜನಗಳಿಗೆ ಸೀಮಿತವಾಗಿದೆ).
    1. ಮಾಂತ್ರಿಕ ವಸ್ತು; ರಹಸ್ಯಾರ್ಥದ ಪವಿತ್ರ ವಸ್ತು.
    2. ಪವಿತ್ರ – ಪ್ರಭಾವ, ಚಿಹ್ನೆ, ಸಂಕೇತ, ಮೊದಲಾದವು.
    3. (ಧಾರ್ಮಿಕ ಆಚರಣೆಯಿಂದ ಸಮರ್ಥಿಸಿದ) ಆಣೆ; ಶಪಥ; ಪ್ರತಿಜ್ಞೆ.
    1. ಪ್ರಭುಭೋಜನ ಕರ್ಮ ಯಾ ಸಂಸ್ಕಾರ.
    2. (ಈ ಕರ್ಮದಲ್ಲಿನ) ಪವಿತ್ರೀಕೃತ ಪದಾರ್ಥಗಳು, ಮುಖ್ಯವಾಗಿ ಬ್ರೆಡ್ಡು.

sacramental

ಗುಣವಾಚಕ

  • ಪವಿತ್ರ ಕರ್ಮದ; ಮತಸಂಸ್ಕಾರದ.
  • ಪವಿತ್ರ ಕರ್ಮರೂಪದ; ಮತಸಂಸ್ಕಾರದಂಥ.
  • ಪ್ರಭುಭೋಜನ ಸಂಸ್ಕಾರದ ಯಾ ಅದರಂಥ.
  • (ತತ್ತ, ಸಿದ್ಧಾಂತ, ಮೊದಲಾದವುಗಳ ವಿಷಯದಲ್ಲಿ) ಮತಸಂಸ್ಕಾರಗಳಿಗೆ ಬಹಳ ಪ್ರಾಧಾನ್ಯ ನೀಡುವ.

sacramental

ನಾಮವಾಚಕ

ಮತ ಸಂಸ್ಕಾರ ಸದೃಶ ಕರ್ಮ ಯಾ ಆಚರಣೆ; ಸಪ್ತ ಸಂಸ್ಕಾರಗಳಲ್ಲಿ ಸೇರಿಲ್ಲದ, ಆದರೆ ಅವುಗಳಂತೆಯೇ ಆಚರಿಸುವ (ಉದಾಹರಣೆಗೆ ಪವಿತ್ರೋದಕ ಪ್ರೋಕ್ಷಣೆ, ಶಿಲುಬೆಯ ಚಿಹ್ನೆಯ ನ್ಯಾಸ, ಮೊದಲಾದವುಗಳ) ಆಚರಣೆ.

sacramentalism

ನಾಮವಾಚಕ

  • ಮತಸಂಸ್ಕಾರಪ್ರಾಧಾನ್ಯತಾ ವಾದ; ಮತಸಂಸ್ಕಾರ ಪ್ರಾಮುಖ್ಯ(ತೆ).
  • ಸಾನ್ನಿಧ್ಯ ನಿರಾಕರಣ ವಾದ.

sacramentalist

ನಾಮವಾಚಕ

  • ಮತಸಂಸ್ಕಾರವಾದಿ;ಮತಸಂಸ್ಕಾರ ಪ್ರಾಮುಖ್ಯತಾ ವಾದಿ.
  • = 2sacramentarian\((1)\).

sacramentality

ನಾಮವಾಚಕ

ಮತಸಂಸ್ಕಾರತ್ವ; ಪವಿತ್ರ ಕರ್ಮತೆ.

sacramentally

ಕ್ರಿಯಾವಿಶೇಷಣ

ಮತಸಂಸ್ಕಾರ ರೀತಿಯಲ್ಲಿ; ಮತಸಂಸ್ಕಾರದಂತೆ.

sacramentarian

ಗುಣವಾಚಕ

  • (ಚರಿತ್ರೆ) ಸಾನ್ನಿಧ್ಯ ನಿರಾಕರಣ ವಾದದ ಯಾ ವಾದಿಯ; ಪ್ರತ್ಯಕ್ಷತಾ ನಿರಾಕರಣ ವಾದದ ಯಾ ವಾದಿಯ; ಕ್ರೈಸ್ತ ಪ್ರಭುಭೋಜನದಲ್ಲಿ ಕ್ರಿಸ್ತನ ದೇಹ ಮತ್ತು ರಕ್ತ ವಾಸ್ತವಿಕವಾಗಿರುವುದಿಲ್ಲವೆಂದೂ, ಅವು ಸಂಕೇತ ಮಾತ್ರವೆಂದೂ ನಂಬಉವ ಯಾ ನಂಬಉವವನ.
  • = 1sacramental (1 & 3).

sacramentarian

ನಾಮವಾಚಕ

  • (ಚರಿತ್ರೆ) ಸಾನ್ನಿಧ್ಯ ನಿರಾಕರಣವಾದಿ.
  • = sacramentalist\((1)\).

sacramentarianism

ನಾಮವಾಚಕ

ಸಾನ್ನಿಧ್ಯ ನಿರಾಕರಣ ವಾದ.

sacramentary

ಗುಣವಾಚಕ

= 1sacramentarian\((1)\).

sacramentary

ನಾಮವಾಚಕ

  • = 2sacramentarian\((1)\).
  • ಮತಸಂಸ್ಕಾರ (ಆಚಾರ ವಿಧಿಗಳನ್ನೊಳಗೊಂಡ) ಗ್ರಂಥ.

sacrarium

ನಾಮವಾಚಕ

  • (ಚರ್ಚಿನ) ಗರ್ಭಗೃಹ; ಗರ್ಭಗುಡಿ.
  • (ರೋಮನ್‍ ಕ್ಯಾಥೊಲಿಕ್‍ಚರ್ಚು) ಜಾಲರಿ ತೊಟ್ಟಿ; ಕಂಡಿ ತೊಟ್ಟಿ; ಪ್ರಭುಭೋಜನ ಸಂಸ್ಕಾರದಲ್ಲಿ ಉಪಯೋಗಿಸಿದ ಪಾತ್ರೆ ಮೊದಲಾದವನ್ನು ತೊಳೆದ ನೀರನ್ನು ಹೊರಕ್ಕೆ ಸಾಗಿಸುವ ಚರ್ಚಿನ ಬಲಿಪೀಠದ ಬಳಿಯ ಕಲ್ಲಿನ ಕಂಡಿತೊಟ್ಟಿ.
  • (ರೋಮನ್‍ ಪ್ರಾಚೀನ ಚರಿತ್ರೆ)
    1. (ದೇವಾಲಯದ) ಗರ್ಭಗೃಹ; ಗರ್ಭಗುಡಿ.
    2. (ಮನೆಯಲ್ಲಿ) ದೇವರ ಕೋಣೆ ಯಾ ಮನೆ.
  • (ಚರ್ಚಿನ) ಬಲಿಪೀಠದ ಆವರಣ; ಬಲಿಪೀಠದ ಕಟಕಟೆಯ ಒಳಭಾಗ.

sacred

ಗುಣವಾಚಕ

ಪದಗುಚ್ಛ

  • (ಯಾವುದಾದರೂ ದೇವತೆಗೆ ಯಾ ವ್ಯಕ್ತಿಗೆ ಯಾ ಉದ್ದೇಶಕ್ಕೆ) ಅರ್ಪಿಸಿದ; ಸಮರ್ಪಿತ; ನಿವೇದಿತ; ಮೀಸಲಾದ; ವಿನಿಯೋಗಿಸಿದ.
  • (ಮತ, ಧರ್ಮಸಂಬಂಧ ದಿಂದ) ಪೂಜ್ಯವಾದ; ಪವಿತ್ರ; ಪುಣ್ಯ; ಪಾವನ.
  • ಧಾರ್ಮಿಕ; ಧರ್ಮಕ್ಕೆ ಸಂಬಂಧಿಸಿದ; ಧಾರ್ಮಿಕ ಉದ್ದೇಶಕ್ಕೆ ಬಳಸುವ: sacred music ಧಾರ್ಮಿಕ (ಆಚರಣೆಗೆ ಬಳಸುವ) ಸಂಗೀತ.
  • ಧಾರ್ಮಿಕ; ಮತ, ಧರ್ಮ, ಗೌರವ, ನ್ಯಾಯದೃಷ್ಟಿ ಯಾ ಸಂಪ್ರದಾಯದಿಂದ – ಸಂರಕ್ಷಿತ, ರಕ್ಷಿಸಲ್ಪಟ್ಟ ಯಾ ಅಪೇಕ್ಷಿತವಾದ.
  • (ವ್ಯಕ್ತಿ, ಸ್ಥಳ, ಕಾನೂನು, ಮೊದಲಾದವುಗಳ ವಿಷಯದಲ್ಲಿ) ಗೌರವಾರ್ಹ; ಪೂಜ್ಯ; ಪವಿತ್ರ: the cow is a sacred animal in India ಭಾರತದಲ್ಲಿ ಗೋವು ಒಂದು ಪೂಜ್ಯ ಪ್ರಾಣಿ.
  • (ಬರೆಹ ಮೊದಲಾದವುಗಳ ವಿಷಯದಲ್ಲಿ) ಧಾರ್ಮಿಕ; ಧರ್ಮಶಾಸ್ತ್ರದ; ಮತದ ವಿಧಿಗಳು ಯಾ ತತ್ತ್ವಗಳನ್ನು ಒಳಗೊಂಡ.
  • (ವ್ಯಕ್ತಿ, ಅಧಿಕಾರ, ಮೊದಲಾದವುಗಳ ವಿಷಯದಲ್ಲಿ) ಪವಿತ್ರ; ಅನುಲ್ಲಂಘನೀಯ; ಅನತಿಕ್ರಮ್ಯ: regards it as a sacred duty ಅದನ್ನೊಂದು ಪವಿತ್ರ ಕರ್ತವ್ಯವನ್ನಾಗಿ ಭಾವಿಸುತ್ತಾನೆ.

sacred beetle

ನಾಮವಾಚಕ

(ಇಜಿಪ್ಷಿಯನ್ನರ) ಪವಿತ್ರ ಜೀರುಂಡೆ.

sacred book

ನಾಮವಾಚಕ

ಧರ್ಮಗ್ರಂಥ; ಮತಗ್ರಂಥ; ಮತವೊಂದರ ತತ್ತ್ವ, ನೀತಿನಿಯಮ, ಇತ್ಯಾದಿಗಳನ್ನು ಒಳಗೊಂಡ ಗ್ರಂಥ, ಉದಾಹರಣೆಗೆ ವೇದ, ಕುರಾನು, ಬೈಬಲ್‍, ಮೊದಲಾದವು.

Sacred College

ನಾಮವಾಚಕ

(ರೋಮನ್‍ ಕ್ಯಾಥೊಲಿಕ್‍ ಚರ್ಚ್‍) ಪವಿತ್ರ ಮಂಡಲಿ; ಪೋಪ್‍ ಗುರುವಿನ 70 ಮಂದಿ ಕಾರ್ಡಿನಲ್‍ಗಳ ಸಮೂಹ, ಮಂಡಲಿ.

sacred concert

ನಾಮವಾಚಕ

ಧಾರ್ಮಿಕ ಸಂಗೀತ ಮೇಳ; ಧಾರ್ಮಿಕ ಗಾಯನ ಗೋಷ್ಠಿ.

sacred cow

ನಾಮವಾಚಕ

ಪವಿತ್ರ ವ್ಯಕ್ತಿ, ವಿಷಯ, ವಸ್ತು; ವಿಚಾರಾತೀತವೆಂದು, ವಿಚಾರ, ವಿಮರ್ಶೆ, ಪರೀಕ್ಷೆ, ಟೀಕೆ, ಮೊದಲಾದವುಗಳಿಂದ ಹೊರತಾದುವೆಂದು ಪರಿಗಣಿಸಿರುವ ವ್ಯಕ್ತಿ, ಅಭಿಪ್ರಾಯ, ಸಂಸ್ಥೆ, ವ್ಯವಸ್ಥೆ, ವಿಷಯ, ಮೊದಲಾದವು (ಹಿಂದೂಗಳು ಹಸುವನ್ನು ಪವಿತ್ರ ಪ್ರಾಣಿಯೆಂದು ಗೌರವಿಸುವುದರಿಂದ ಬಂದಿದೆ).

Sacred Heart

ನಾಮವಾಚಕ

ಪವಿತ್ರ ಹೃದಯ; ಉಪಾಸನೆಗೆ ವಿಷಯವಾಗಿ ಯೇಸುವಿನ ಹೃದಯ.

Search Dictionaries

Loading Results

Follow Us :   
  Download Bharatavani App
  Bharatavani Windows App