भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

syphiloid

ಗುಣವಾಚಕ

ಉಪದಂಶದಂಥ; ಪರಂಗಿ ಹುಣ್ಣಿನಂಥ; ಸಿಹಿಲಿಸ್‍ನಂಥ.

syphon

ನಾಮವಾಚಕ

siphon ಎಂಬ ಪದದ ರೂಪಾಂತರ.

syren

ನಾಮವಾಚಕ

siren ಎಂಬ ಪದದ ರೂಪಾಂತರ.

Syriac

ನಾಮವಾಚಕ

ಸಿರಿಯಾಕ್‍; ಪ್ರಾಚೀನ ಸಿರಿಯದ, ಪಶ್ಚಿಮ ಆರಮೇಯಿಕ್‍ – ಭಾಷೆ.

Syriac

ಗುಣವಾಚಕ

ಸಿರಿಯಾಕ್‍ ಭಾಷೆಯ, ಪ್ರಾಚೀನ ಸಿರಿಯದ, ಪಶ್ಚಿಮ ಆರಮೇಯಿಕ್‍ ಭಾಷೆಯ ಯಾ ಅದಕ್ಕೆ ಸಂಬಂಧಿಸಿದ.

Syrian

ಗುಣವಾಚಕ

ನೈಋತ್ಯ ಏಷ್ಯದ ಸಿರಿಯಾ – ದೇಶದ, ಪ್ರದೇಶದ.

Syrian

ನಾಮವಾಚಕ

ಸಿರಿಯನ್‍:

  • (ಆಧುನಿಕ ಮಧ್ಯಪ್ರಾಚ್ಯದಲ್ಲಿರುವ) ಸಿರಿಯಾ ದೇಶದ – ನಿವಾಸಿ, ಪ್ರಜೆ.
  • ಪ್ರಾಚೀನ ಯಾ ತರುವಾಯದ ಸಿರಿಯಾ ಪ್ರದೇಶದ – ವಾಸಿ, ಸ್ಥಳೀಯ, ನಿವಾಸಿ ಯಾ ನೆಲೆಸಿಗ.

syringa

ನಾಮವಾಚಕ

  • = $^2$mock orange.
  • (ಸಸ್ಯವಿಜ್ಞಾನ) ಸಿರಿಂಗ ಕುಲದ ಯಾವುದೇ ಗಿಡ, ಮುಖ್ಯವಾಗಿ ಲಿಲ್ಯಾಕ್‍ ಗಿಡ.

syringe

ನಾಮವಾಚಕ

  • (ಶಸ್ತ್ರವೈದ್ಯ) ಪಿಚಕಾರಿ; ಜೀರ್ಕೊಳವೆ; ಜೀಕಳಿ; ಶೃಂಗಕ; ಶಸ್ತ್ರಚಿಕಿತ್ಸೆಯಲ್ಲಿ ಬಳಸುವ, ದ್ರವವನ್ನು ಒಳಕ್ಕೆ ಎಳೆದುಕೊಂಡು ತರುವಾಯ ಅದನ್ನು ಸೂಕ್ಷ ಧಾರೆಯಾಗಿ ಕೊಳವೆಯ ಮೂಲಕ ಹೊರಕ್ಕೆ ಬಿಡುವ, ಚಿಮ್ಮುಗೋವಿ.
  • = hypodermic syringe.
  • (ತೋಟಗಾರಿಕೆ, ಅಡುಗೆ, ಮೊದಲಾದವುಗಳಲ್ಲಿ ಬಳಸುವ) ಜೀರ್ಕೊಳವೆ; ಪಿಚಕಾರಿ.

syringe

ಸಕರ್ಮಕ ಕ್ರಿಯಾಪದ

(ಕಿವಿ, ಗಿಡ, ಮೊದಲಾದವಕ್ಕೆ) ಪಿಚಕಾರಿ – ಹೊಡೆ.

syringeal

ಗುಣವಾಚಕ

(ಹಕ್ಕಿಗಳ) ಹಾಡು ನಳಿಕೆಯ; ಗಾನನಾಳದ.

syrinx

ನಾಮವಾಚಕ

  • ಪಿಳ್ಳಂಗೋವಿ.
  • (ವಾಸ್ತುಶಿಲ್ಪ) ಗೋರಿ ಸುರಂಗ; ಸಮಾಧಿ ಸುರಂಗ; ಪ್ರಾಚೀನ ಈಜಿಪ್ಟಿನ ಗೋರಿಗಳಲ್ಲಿ ಬಂಡೆ ಕೊರೆದು ಮಾಡಿರುವ ಸುರಂಗ.
  • (ಹಕ್ಕಿಗಳ) ಕೆಳ ದನಿಪೆಟ್ಟಿಗೆಯ ಹಾಡು ನಳಿಕೆ; ಗಾನನಾಳ.

Syro-

ಸಮಾಸ ಪೂರ್ವಪದ

ಸಿರಿಯದ, ಸಿರಿಯನ್‍ ಮತ್ತು ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ, ಉದಾಹರಣೆಗೆ Syro-Arabian ಸಿರಿಯನ್‍ – ಅರೇಬಿಯನ್‍. Syro-Phoenician ಸಿರಿಯನ್‍ – ಹೀನೀಷಿಯನ್‍.

syrup

ನಾಮವಾಚಕ

(ಅಮೆರಿಕನ್‍ ಪ್ರಯೋಗ sirup).

  • ಸಕ್ಕರೆ – ಪಾನಕ, ಷರಬತ್ತು; ಸಕ್ಕರೆಯನ್ನು ಕುದಿ ನೀರಿನಲ್ಲಿ ಕರಗಿಸಿದ ದ್ರವ, (ಮುಖ್ಯವಾಗಿ ಹಣ್ಣು ಮೊದಲಾದವನ್ನು ಕಾಪಾಡಲು ಬಳಸುವ) ದ್ರಾವಣ.
  • ಪರಿಮಳಗೊಳಿಸಿದ ಸಕ್ಕರೆ ಪಾನಕ ಯಾ (ಸಕ್ಕರೆ ಪಾನಕಕ್ಕೆ ಔಷಧ ಬೆರಸಿ ಮಾಡಿದ) ಔಷಧ ಷರಬತ್ತು.
  • (ಸಾಂದ್ರೀಕರಿಸಿದ) ಕಬ್ಬಿನ ಹಾಲಿನ ಪಾಕ ಯಾ ಕಾಕಂಬಿ.
  • (ಸ್ಫಟಿಕಗಳಾಗಿರದ) ಕಾಕಂಬಿ; ಸಕ್ಕರೆ ಜೋನಿ; ವಿವಿಧ ಹಂತಗಳಲ್ಲಿ ಸಕ್ಕರೆಯನ್ನು ಶುದ್ಧೀಕರಿಸುವಾಗ ಹಳಕುಗಟ್ಟದೆ ಉಳಿದಿರುವ, ಮಂದವಾಗಿಸಿದ ಕಬ್ಬಿನ ಹಾಲು.
  • (ಸಾಹಿತ್ಯ ಶೈಲಿ, ನಡವಳಿಕೆ, ಮೊದಲಾದವುಗಳ) ಅತಿ ಮಾಧುರ್ಯ; ಮಿತಿಮೀರಿದ ಸ್ವಾದುತ್ವ.

syrupy

ಗುಣವಾಚಕ

  • (ಗುಣ ಮೊದಲಾದವುಗಳಲ್ಲಿ) ಪಾನಕದಂಥ; ಷರಬತ್ತಿನಂಥ.
  • (ಶೈಲಿ ಮೊದಲಾದವುಗಳ ವಿಷಯದಲ್ಲಿ) ಅತಿಮಧುರವಾದ; ವಿಪರೀತ ಸ್ವಾದುವಾದ.

syssarcosis

ನಾಮವಾಚಕ

(ಅಂಗರಚನಾಶಾಸ್ತ್ರ) ಅಸ್ಥಿ ಸ್ನಾಯು – ಸೇರಿಕೆ, ಸಂಯೋಜನ; ನಡುವಣ ಸ್ನಾಯುಗಳ ಮೂಲಕ ಎಲುಬಉಗಳ ಸೇರಿಕೆ.

systaltic

ಗುಣವಾಚಕ

(ಮುಖ್ಯವಾಗಿ ಹೃದಯದ ವಿಷಯದಲ್ಲಿ) (ಪರ್ಯಾಯ ಕ್ರಮದಲ್ಲಿ) (ಲಯಬದ್ಧವಾಗಿ) ಹಿಗ್ಗಿ ಕುಗ್ಗುವ; ಸಂಕೋಚನ ವ್ಯಾಕೋಚನಗಳುಳ್ಳ; ತುಡಿಯುವ; ಸ್ಪಂದನದ; ಮಿಡಿಯುವ.

system

ನಾಮವಾಚಕ

ಪದಗುಚ್ಛ

  • ವ್ಯವಸ್ಥೆ; ವ್ಯೂಹ; ಮಂಡಲ; ಪದ್ಧತಿ; ಜಾಲ; ಪರಸ್ಪರ ಸಂಬಂಧವುಳ್ಳ ಭೌತ ಯಾ ಅಭೌತ ವಸ್ತುಗಳ ಯಾ ಭಾಗಗಳ ವ್ಯವಸ್ಥಿತ ಸಮುದಾಯ.
    1. ಪದ್ಧತಿ; ಸಂಪ್ರದಾಯ; ವ್ಯವಸ್ಥೆ; ನಿರ್ದಿಷ್ಟ ರೂಪದ ಸರ್ಕಾರ, ಮತಧರ್ಮ, ಮೊದಲಾದವುಗಳಿಗೆ ಸಂಬಂಧಿಸಿದ ಯಾ ಅವುಗಳ ವಿಧಿ ನಿಷೇಧಗಳನ್ನು ನಿರೂಪಿಸುವ ಸಿದ್ಧಾಂತಗಳು, ಆಚರಣೆಗಳು, ನಿಯಮಾವಳಿಗಳು, ಮೊದಲಾದವುಗಳ ಸಂಗ್ರಹ.
    2. (ಸ್ಥಾಪಿಸಿರುವ) ರಾಜಕೀಯ ಯಾ ಸಾಮಾಜಿಕ ವ್ಯವಸ್ಥೆ:the socialist system ಸಮಾಜವಾದಿ ವ್ಯವಸ್ಥೆ. the capitalist system ಬಂಡವಾಳಶಾಹಿ ಪದ್ಧತಿ.
  • (ಭೌತವಿಜ್ಞಾನ) ವ್ಯೂಹ; ಪರಸ್ಪರ ಗುರುತ್ವಾಕರ್ಷಣೆ ಮೊದಲಾದವುಗಳಿಂದ ಒಟ್ಟಿಗೆ ಚಲಿಸುವ ಪರಸ್ಪರ ಸಂಬಂಧವುಳ್ಳ ಕಾಯಗಳ ಸಮುದಾಯ:solar system ಸೌರವ್ಯೂಹ.
  • ಪರಸ್ಪರ ಸಂಬಂಧ ಪಡೆದು ಒಟ್ಟಿಗೆ ಕೆಲಸ ಮಾಡುವಂತೆ ಅಳವಡಿಸಿದ ಸಲಕರಣೆಗಳ ತಂಡ:system of pulleys ಕಪ್ಪಿ ತಂಡ.
    1. (ಪ್ರಾಣಿ ದೇಹದಲ್ಲಿ ಸಮಾನ ರಚನೆ ಯಾ ಕ್ರಿಯೆಗಳುಳ್ಳ ಅವಯವಗಳ ಯಾ ಭಾಗಗಳ) ವ್ಯವಸ್ಥೆ; ಮಂಡಲ; ವ್ಯೂಹ:digestive system ಜೀರ್ಣಾಂಗ ವ್ಯವಸ್ಥೆ. muscular system ಸ್ನಾಯು – ವ್ಯೂಹ, ವ್ಯವಸ್ಥೆ. nervous system ನರ ಮಂಡಲ. reproductive system ಜನನಾಂಗಗಳ ವ್ಯೂಹ.
    2. (ಮನುಷ್ಯನ ಯಾ ಪ್ರಾಣಿಯ ಸಮಗ್ರವಾದ, ಇಡೀ) ದೇಹ; ಕಾಯ; ಮೈ; ಪ್ರಕೃತಿ; ಒಡಲು.
  • ಕಾರ್ಯಸೂತ್ರ; ಪ್ರಕ್ರಿಯೆಯ, ಕಾರ್ಯಾಚರಣೆಯ, ಕಾರ್ಯ ವಿಧಾನದ ಯಾ ವರ್ಗೀಕರಣದ ಸೂತ್ರಗಳು, ತತ್ತ್ವಗಳು, ವ್ಯವಸ್ಥೆ.
  • ಶಿಸ್ತು; ಕಟ್ಟುಪಾಡು; ಕ್ರಮಬದ್ಧತೆ; ಸುವ್ಯವಸ್ಥೆ.
  • (ಜೂಜಾಟ ಮೊದಲಾದವುಗಳಲ್ಲಿ) ಒಟ್ಟಿನ ಕಾರ್ಯವಿಧಾನವನ್ನು ಆರಿಸುವ ವಿಧಾನ; ಪ್ರಕ್ರಮ.
  • ಹರಳಿನ ರಚನೆಯ ಏಳು ಸಾಮಾನ್ಯ ನಮೂನೆಗಳಲ್ಲಿ ಒಂದು.
  • (ಭೂವಿಜ್ಞಾನ) ಪ್ರಧಾನ ಸ್ತರವ್ಯೂಹ; ಭೂಮಿಯ ಮುಖ್ಯ ಪದರುಗಳ ತಂಡ ಯಾ ಪದರು ವ್ಯವಸ್ಥೆ: the Devonian system ಡೆವೋನಿಯನ್‍ (ಪೆಲಿಯೊಜೋಯಿಕ್‍ ಯುಗದ ನಾಲ್ಕನೇ ಅವಧಿಗೆ ಸೇರಿದ) ಭೂಸ್ತರ.
  • (ಸಂಗೀತ) ಸ್ವರ ಪ್ರಸ್ತಾರರೇಖೆಯಿಂದ ಛೇದಿಸಲ್ಪಟ್ಟ ದಂಡಗಳು.

systematic

ಗುಣವಾಚಕ

  • ಕ್ರಮಬದ್ಧ(ವಾದ); ಸಂಯೋಜಿತ; (ಸು)ವ್ಯವಸ್ಥಿತ; ಸುಸಂಬದ್ಧ:systematic worker ಕ್ರಮಬದ್ಧವಾಗಿ ಕೆಲಸ ಮಾಡುವವನು: systematic nomenclature ವ್ಯವಸ್ಥಿತವಾದ ನಾಮಾವಳಿ.
  • ಶಿಸ್ತಿನ; ಕಟ್ಟುಪಾಡಿನ; ನಿಯಮಬದ್ಧ.
  • ಯೋಚಿಸಿದ; ಉದ್ದೇಶಪೂರ್ವಕವಾದ: systematic liar ಉದ್ದೇಶಪೂರ್ವಕ ಸುಳ್ಳು ಹೇಳುವವನು. systematic insolence ಉದ್ದೇಶಪೂರ್ವಕವಾದ ಸೊಕ್ಕು.

systematic theology

ನಾಮವಾಚಕ

ಸುಸಂಗತವಾದ ದೇವತಾಶಾಸ್ತ್ರ.

Search Dictionaries

Loading Results

Follow Us :   
  Download Bharatavani App
  Bharatavani Windows App