भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

systematically

ಕ್ರಿಯಾವಿಶೇಷಣ

ಕ್ರಮಬದ್ಧವಾಗಿ; ಸುಸಂಬದ್ಧವಾಗಿ; ವ್ಯವಸ್ಥಿತವಾಗಿ.

systematics

ನಾಮವಾಚಕ

ವರ್ಗೀಕರಣ (ಶಾಸ್ತ್ರ); ವರ್ಗೀಕರಣ ವಿಧಾನ ಯಾ ಅದರ ಅಧ್ಯಯನ.

systematise

ಸಕರ್ಮಕ ಕ್ರಿಯಾಪದ

= systematize.

systematism

ನಾಮವಾಚಕ

ಕ್ರಮಬದ್ಧತೆ; ಸುಸಂಯೋಜನೆ; ಸುವ್ಯವಸ್ಥೆ.

systematist

ನಾಮವಾಚಕ

ಶಿಸ್ತುಪಾಲಕ; ಕ್ರಮಬದ್ಧವಾಗಿ, ನಿಯಮಾನುಸಾರ – ನಡೆಯು ವವನು.

systematization

ನಾಮವಾಚಕ

ಸಕ್ರಮೀಕರಣ; ಕ್ರಮಬದ್ಧ ಮಾಡುವಿಕೆ; ವ್ಯವಸ್ಥಿತಗೊಳಿಸುವಿಕೆ.

systematize

ಸಕರ್ಮಕ ಕ್ರಿಯಾಪದ

  • ಸಕ್ರಮಗೊಳಿಸು; ಕ್ರಮಬದ್ಧವಾಗಿಸು; ವ್ಯವಸ್ಥೆಗೊಳಿಸು; ಸುಸಂಗತಗೊಳಿಸು.
  • (ಯಾವುದೇ ಒಂದಕ್ಕೆ) ವ್ಯವಸ್ಥೆ ಕಲ್ಪಿಸು.

systematizer

ನಾಮವಾಚಕ

ಸಕ್ರಮಕಾರ; ವ್ಯವಸ್ಥೆ, ಕ್ರಮಬದ್ಧ – ಗೊಳಿಸುವವನು; ಯೋಜನಾಕಾರ.

systemic

ಗುಣವಾಚಕ

(ಶರೀರ ವಿಜ್ಞಾನ)

  • (ಒಂದು ಭಾಗಕ್ಕೆ ಸೀಮಿತವಾಗಿರದೆ) ಇಡೀ ದೇಹದ; ಪೂರ್ತಿ ಶರೀರದ: systemic infection (ಇಡೀ) ದೇಹದ ಸೋಂಕು.
  • (ರಕ್ತ ಪರಿಚಲನದ ವಿಷಯದಲ್ಲಿ) ಶ್ವಾಸಕೋಶವನ್ನು ಬಿಟ್ಟು ಉಳಿದ ಭಾಗದ.
  • (ತೋಟಗಾರಿಕೆ) (ಕೀಟನಾಶಕ, ಪಾಚಿನಾಶಕ, ಮೊದಲಾದವುಗಳ ವಿಷಯದಲ್ಲಿ) ಗಿಡವನ್ನು ಬೇರುಗಳ, ಮೊಳಕೆಗಳ, ಕುಡಿಗಳ – ಮೂಲಕ ಹೊಕ್ಕು ಊತಕಗಳಲ್ಲಿ ವ್ಯಾಪಿಸುವ.

systemically

ಕ್ರಿಯಾವಿಶೇಷಣ

ದೈಹಿಕವಾಗಿ; ಇಡೀ, ಪೂರ್ತಿ – ದೇಹಕ್ಕೆ, ಮೈಗೆ ಸಂಬಂಧಿಸಿದಂತೆ.

systemless

ಗುಣವಾಚಕ

ವ್ಯವಸ್ಥಾರಹಿತ; ವ್ಯವಸ್ಥೆ ಇಲ್ಲದ.

systems analysis

ನಾಮವಾಚಕ

(ಕಂಪ್ಯೂಟರ್‍) ಪ್ರಕ್ರಿಯಾ ವಿಶ್ಲೇಷಣ; ಯಾವುದೇ ಸಂಕೀರ್ಣ ಪ್ರಕ್ರಿಯೆಯ ದಕ್ಷತೆಯನ್ನು ಹೆಚ್ಚಿಸುವುದರಲ್ಲಿ ಕಂಪ್ಯೂಟರನ್ನು, ಗಣಕಯಂತ್ರವನ್ನು, ಬಳಸುವುದಕ್ಕಾಗಿ ಆ ಪ್ರಕ್ರಿಯೆಯನ್ನು ವಿಶ್ಲೇಷಿಸುವ ತಂತ್ರ.

systems analyst

ನಾಮವಾಚಕ

(ಕಂಪ್ಯೂಟರ್‍) ಪ್ರಕ್ರಿಯಾ ವಿಶ್ಲೇಷಕ; ಯಾವುದೇ ಸಂಕೀರ್ಣ ಪ್ರಕ್ರಿಯೆಯ ದಕ್ಷತೆಯನ್ನು ಹೆಚ್ಚಿಸುವಲ್ಲಿ ಕಂಪ್ಯೂಟರನ್ನು ಬಳಸಿ, ಅದರ ಪ್ರಕ್ರಿಯೆಯನ್ನು ವಿಶ್ಲೇಷಿಸುವವ.

systole

ನಾಮವಾಚಕ

(ಶರೀರ ವಿಜ್ಞಾನ) (ಹೃದಯ ಮೊದಲಾದವುಗಳ ವ್ಯಾಕೋಚನಾನಂತರ) (ಅಪಧಮನಿಗಳಿಗೆ ರಕ್ತವನ್ನು ಒತ್ತಿ ತುಂಬಿದಾಗ) ನಡೆಯುವ ಹೃದಯದ – ಸಂಕೋಚನ, ಕುಗ್ಗುವಿಕೆ.

systolic

ಗುಣವಾಚಕ

(ಹೃದಯ) ಸಂಕೋಚನದ.

syzygy

ನಾಮವಾಚಕ

  • (ಖಗೋಳ ವಿಜ್ಞಾನ) (ಮುಖ್ಯವಾಗಿ ಚಂದ್ರನು ಸೂರ್ಯನೊಡನೆ ಹೊಂದುವ) ಯೋಗ, ಯುತಿ ಯಾ ಪ್ರತಿಯೋಗ.
  • ಜೋಡಿ; ಯುಗ್ಮ; ಯುಗಳ; ಪರಸ್ಪರ ಸಂಬಂಧವುಳ್ಳ ಎರಡು ವಸ್ತುಗಳ ಜೋಡಿ.

Search Dictionaries

Loading Results

Follow Us :   
  Download Bharatavani App
  Bharatavani Windows App