भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

sacred history

ನಾಮವಾಚಕ

ಪವಿತ್ರ ಚರಿತ್ರೆ; ಬೈಬಲ್‍ನಲ್ಲಿ ನಿರೂಪಿತವಾಗಿರುವ ಚರಿತ್ರೆ.

sacred ibis

ನಾಮವಾಚಕ

(ಪುರಾತನ ಇಜಿಪ್ಷಿಯನ್ನರು ಪೂಜಿಸುತ್ತಿದ್ದ) ಪವಿತ್ರ ಐಬಿಸ್‍ ಪಕ್ಷಿ.

sacred monkey

ನಾಮವಾಚಕ

(ಭಾರತೀಯರ) ಪವಿತ್ರ ವಾನರ; ಹನುಮಂತನ ಪ್ರತೀಕವೆಂದು ಪರಿಗಣಿಸಿರುವ ಕಪಿ.

sacred music

ನಾಮವಾಚಕ

ಧಾರ್ಮಿಕ ಸಂಗೀತ; ಧಾರ್ಮಿಕ ವಿಷಯದ ಸಂಗೀತ.

sacred number

ನಾಮವಾಚಕ

ಪವಿತ್ರ ಸಂಖ್ಯೆ; ಧಾರ್ಮಿಕ ಸಂಕೇತಾರ್ಥವುಳ್ಳ ಸಂಖ್ಯೆ, ಉದಾಹರಣೆಗೆ 3, 7, ಮೊದಲಾದವು.

sacred poetry

ನಾಮವಾಚಕ

ಧಾರ್ಮಿಕ ಕಾವ್ಯ; ಧಾರ್ಮಿಕ ವಿಷಯದ ಕಾವ್ಯ.

sacred writings

ನಾಮವಾಚಕ

= sacred book.

sacredly

ಕ್ರಿಯಾವಿಶೇಷಣ

  • ಪವಿತ್ರವಾಗಿ.
  • ಧಾರ್ಮಿಕವಾಗಿ.
  • ಪೂಜ್ಯಭಾವನೆಯಿಂದ.

sacredness

ನಾಮವಾಚಕ

  • ಪಾವಿತ್ರ.
  • ಧಾರ್ಮಿಕತೆ.
  • ಪೂಜ್ಯತೆ.

sacrifice

ನಾಮವಾಚಕ

ಪದಗುಚ್ಛ

the great (or last or supreme) sacrifice ಮಹಾತ್ಯಾಗ; ಅಂತಿಮ ಯಾ ಪರಮ ತ್ಯಾಗ; ಮುಖ್ಯವಾಗಿ ಯುದ್ಧದಲ್ಲಿ ಸ್ವದೇಶಕ್ಕಾಗಿ ಪ್ರಾಣತ್ಯಾಗ.

    1. ತ್ಯಾಗ; ಒಂದನ್ನು ಅದಕ್ಕಿಂತ ಉತ್ತಮವಾದ ಮತ್ತು ಹೆಚ್ಚು ಆವಶ್ಯಕವಾದ ಮತ್ತೊಂದಕ್ಕಾಗಿ ತ್ಯಜಿಸುವುದು ಯಾ ಬಿಡುವುದು: will gain nothing by the sacrifice of your principles ನಿನ್ನ ತತ್ತ್ವಗಳ ತ್ಯಾಗದಿಂದ ಏನೂ ಲಾಭವಿಲ್ಲ.
    2. (ಹೀಗೆ) ತ್ಯಜಿಸಿದ್ದು; ತ್ಯಕ್ತವಾದುದು; ಬಿಟ್ಟದ್ದು: at some sacrifice of regularity ನಿಯತತೆಯನ್ನು ಸ್ವಲ್ಪ ತ್ಯಜಿಸಿ.
    3. (ಹೀಗೆ ಮಾಡಿದ ತ್ಯಾಗದಿಂದ ಆದ) ನಷ್ಟ : surplus stock for sale at a large sacrifice ಬಹಳ ನಷ್ಟದ ಬೆಲೆಗೆ ಮಾರಾಟಕ್ಕಿಟ್ಟ ಹೆಚ್ಚುವರಿ ದಾಸ್ತಾನು ಸರಕು.
    1. ಬಲಿ; ಯಜ್ಞ; ಯಾಗ; ಪಶುಬಲಿ; ನರಮೇಧ; ಕಾಣಿಕೆಯಾಗಿ ದೇವರಿಗೆ ಪ್ರಾಣಿ ಯಾ ವ್ಯಕ್ತಿಯನ್ನು ಬಲಿಗೊಡುವುದು ಯಾ ತ್ಯಾಗ ಮಾಡುವುದು.
    2. ಬಲಿ; ಆಹುತಿ; ಬಲಿಯಾಗಿ ಅರ್ಪಿಸಿದ ಪ್ರಾಣಿ, ವ್ಯಕ್ತಿ ಯಾ ವಸ್ತು.
  • (ರೂಪಕವಾಗಿ) (ಶಮನಾರ್ಥವಾಗಿ ಮಾಡುವ) ಪ್ರಾರ್ಥನೆ; ವಂದನಾರ್ಪಣೆ; ಪ್ರಾಯಶ್ಚಿತ್ತ; ಶಾಂತಿ.
  • (ದೇವತಾಶಾಸ್ತ್ರ)
    1. ಕ್ರಿಸ್ತನ ಕ್ರೂಶಾರೋಹಣ; ಶಿಲುಬೆಯೇರಿಕೆ.
    2. ಪ್ರಭುಭೋಜನ ಕರ್ಮ; ದೇವ ತೃಪ್ತರ್ಥವಾಗಿ ಕ್ರಿಸ್ತನ ದೇಹ ಮತ್ತು ರಕ್ತಗಳ ಸಮರ್ಪಣೆಯೆಂದೋ, ವಂದನಾಸಮರ್ಪಣ ಕರ್ಮವೆಂದೋ ಆಚರಿಸುವ ಪ್ರಭುಭೋಜನ ಸಂಸ್ಕಾರ.
  • (ಆಟಗಳಲ್ಲಿ) ತ್ಯಾಗ; ಹೆಚ್ಚಿನ ನಷ್ಟವನ್ನು ತಪ್ಪಿಸಲು ಯಾ ಪರಿಹಾರರೂಪವಾದ ಅನುಕೂಲ, ಲಾಭ ಪಡೆಯಲು ಅನುಭವಿಸಿದ ನಷ್ಟ.

sacrifice

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಯಜ್ಞ ಮಾಡು; ಬಲಿ ಕೊಡು; ಆಹುತಿ ಕೊಡು.

  • ತ್ಯಾಗ ಮಾಡು:
    1. ತೊರೆ; ತ್ಯಜಿಸು; ಬಿಟ್ಟುಕೊಡು: has sacrificed her pleasures to his interest ಅವನ ಹಿತಕ್ಕಾಗಿ ತನ್ನ ಸುಖಗಳನ್ನು ತ್ಯಜಿಸಿದಳು.
    2. ಗೌಣವಾಗಿ ಯಾ ಅಮುಖ್ಯವಾಗಿ ಪರಿಗಣಿಸು: sacrifice accuracy for vividness ಸ್ಪಷ್ಟತೆಗಾಗಿ ನಿಷ್ಕೃಷ್ಟತೆಯನ್ನು ತ್ಯಾಗಮಾಡು, ಅಮುಖ್ಯವಾಗಿ ಎಣಿಸು.
    3. ಅರ್ಪಿಸು; ಸಲ್ಲಿಸು; ಸಮರ್ಪಿಸು: has sacrificed herself to his interest ಅವನ ಹಿತಕ್ಕಾಗಿ ತನ್ನನ್ನೇ ಅರ್ಪಿಸಿಕೊಂಡಳು.
  • ಬಲಿಯಾಗಿ ಕೊಡು; ಆಹುತಿಯಾಗಿ ನೀಡು.
  • ನಷ್ಟಕ್ಕೆ ಮಾರು.

sacrificial

ಗುಣವಾಚಕ

ಯಜ್ಞದ; ಬಲಿಯ; ಯಜ್ಞಕ್ಕೆ ಸಂಬಂಧಿಸಿದ.

sacrificially

ಕ್ರಿಯಾವಿಶೇಷಣ

ಯಜ್ಞದಂತೆ.

sacrilege

ನಾಮವಾಚಕ

  • ಅಪಚಾರ; ಪವಿತ್ರವೆಂದು ಭಾವಿಸಿರುವುದಕ್ಕೆ ಮಾಡುವ ಹಾನಿ ಯಾ ಅವುಗಳ ದುರುಪಯೋಗ, ಉದಾಹರಣೆಗೆ ದೇವಸ್ವಾಪಹರಣ, ದೇವರಿಗೆ ಸೇರಿದ ವಸ್ತುಗಳನ್ನು ಕದಿಯುವುದು, ಹಾಳು ಮಾಡುವುದು ಯಾ ದುರುಪಯೋಗ ಮಾಡುವುದು.
  • (ಪೂಜ್ಯ ವ್ಯಕ್ತಿ ಯಾ ವಸ್ತುವಿಗೆ ಮಾಡುವ) ಅಪಚಾರ; ಅವಮರ್ಯಾದೆ; (ಅವರಿಗೆ, ಅವಕ್ಕೆ ತೋರುವ) ಅಗೌರವ.

sacrilegious

ಗುಣವಾಚಕ

ಅಪಚಾರದ; ದೇವರಿಗೆ, ಪವಿತ್ರ ವಸ್ತುಗಳಿಗೆ ಯಾ ಪೂಜ್ಯ ವ್ಯಕ್ತಿಗಳಿಗೆ ಮಾಡುವ ಅವಮರ್ಯಾದೆಯ, ತೋರುವ ಅಗೌರವದ.

sacrilegiously

ಕ್ರಿಯಾವಿಶೇಷಣ

  • ಅಪಚಾರದಿಂದ; ಅಪಚಾರದ ರೀತಿಯಲ್ಲಿ.
  • ಅಗೌರವದಿಂದ; ಅವಮರ್ಯಾದೆಯಿಂದ.

sacring

ನಾಮವಾಚಕ

(ಪ್ರಾಚೀನ ಪ್ರಯೋಗ)

  • ಸಂಸ್ಕರಣ; ಸಂಶುದ್ಧಿ; ಪ್ರಭುಭೋಜನ ಕರ್ಮದ ವಸ್ತುಗಳನ್ನು ಪವಿತ್ರಗೊಳಿಸುವುದು .
  • (ಬಿಷಪ್‍, ರಾಜ, ಮೊದಲಾದವರ) ದೀಕ್ಷಾಭಿಷೇಕ; ಪಟ್ಟಾಭಿಷೇಕ.

sacring bell

ನಾಮವಾಚಕ

ಸೇಕ್ರಿಂಗ್‍ ಬೆಲ್‍; ಸಂಸ್ಕಾರ ಗಂಟೆ; ಪ್ರಭುಭೋಜನ ಕರ್ಮದಲ್ಲಿ ರೊಟ್ಟಿಯನ್ನು ಸಂಸ್ಕರಿಸುವಾಗ ಬಾರಿಸುವ ಗಂಟೆ.

sacrist

ನಾಮವಾಚಕ

(ಚರ್ಚಿನ ಯಾ ಕ್ರೈಸ್ತ ಮಠದ) ಮಣೆಗಾರ; ಚರ್ಚಿನ ಯಾ ಮಠದ ಪೂಜಾಪಾತ್ರೆಗಳು ಮೊದಲಾದವನ್ನು ವಶದಲ್ಲಿಟ್ಟುಕೊಂಡಿರುವ ಅಧಿಕಾರಿ.

sacristan

ನಾಮವಾಚಕ

  • (ಪ್ರಾಚೀನ ಪ್ರಯೋಗ) ಪ್ಯಾರಿಷ್‍ ಚರ್ಚಿನ ಪಾರುಪತ್ಯಗಾರ.
  • = sacrist.

Search Dictionaries

Loading Results

Follow Us :   
  Download Bharatavani App
  Bharatavani Windows App