English-Kannada Nighantu (University of Mysore)
University of Mysore
saddle-bow
ನಾಮವಾಚಕ
ತಡಿ ಕಮಾನು; ತಡಿಯ ಮುಂಭಾಗದಲ್ಲಿ ಯಾ ಹಿಂಭಾಗದಲ್ಲಿ ಬಿಲ್ಲಿನಂತೆ ಬಾಗಿರುವ ಭಾಗ.
saddle-cloth
ನಾಮವಾಚಕ
ತಡಿಬಟ್ಟೆ; ಕುದುರೆಯ ಬೆನ್ನಿನ ಮೇಲೆ ತಡಿಯ ಕೆಳಗೆ ಹಾಸುವ ಬಟ್ಟೆ .
saddle-horse
ನಾಮವಾಚಕ
- ಸವಾರಿ ಕುದುರೆ.
- ತಡಿ ಚೌಕಟ್ಟು; ಜೀನುಗಳನ್ನು ಸ್ವಚ್ಛಗೊಳಿಸುವುದಕ್ಕಾಗಿ ಹರಡುವ ಚೌಕಟ್ಟು ಯಾ ನಿಲುವು.
saddle-sore
ನಾಮವಾಚಕ
ತಡಿ ಹುಣ್ಣು; ತಡಿಗಾಯ; ತಡಿಗೆ ಉಜ್ಜುವುದರಿಂದ ಕುದುರೆಗೆ ಯಾ ಸವಾರನಿಗೆ ಉಂಟಾಗುವ ಗಾಯ.
saddle-sore
ಗುಣವಾಚಕ
ತಡಿ ಉಜ್ಜಿದ; ತಡಿ ಉಜ್ಜಿ ಗಾಯವಾದ.
saddle-tree
ನಾಮವಾಚಕ
- ತಡಿ ಕಟ್ಟು; ಪೀಠಗಟ್ಟು; ತಡಿಯ ಹಂದರ ಯಾ ಮೈಕಟ್ಟು.
- ತಡಿ ಮರ; ತಡಿ ಯಾ ಜೀನಿನಾಕಾರದ ಎಲೆಗಳನ್ನು ಬಿಡುವ ಟ್ಯೂಲಿಪ್ ಮರ.
saddleback
ನಾಮವಾಚಕ
- (ವಾಸ್ತುಶಿಲ್ಪ) ಕೂಡೇಣು ಚಾವಣಿ; ಇಪ್ಪಾರು ಚಾವಣಿ; ತಡಿ ಚಾವಣಿ; ಎದುರು ಬದುರು ಗೇಬಲ್ (gable) ಗೋಡೆಗಳನ್ನು ಕೂಡಿಸಿ ಹಾಕುವ ಏಣು ಚಾವಣಿ.
- ತಡಿ ಬೆಟ್ಟ; ಕೂಡೇಣು ಬೆಟ್ಟ ; ತಡಿಯಾಕಾರದ ಏಣಿರುವ ಬೆಟ್ಟ.
- ತಡಿ ಪಟ್ಟೆ ಹಂದಿ; ಬೆನ್ನಿನ ಮೇಲೆ ಅಡ್ಡಲಾಗಿ ಬಿಳಿ ಪಟ್ಟೆಯಿರುವ ಕರಿ ಹಂದಿ.
- ತಡಿ ಹಕ್ಕಿ; ತಡಿಯಂಥ ಗುರುತುಳ್ಳ ಹಲವಾರು ಪಕ್ಷಿಗಳಲ್ಲಿ ಒಂದು, ಮುಖ್ಯವಾಗಿ ನ್ಯೂಸಿಲೆಂಡಿನ, ಫಿಲೆಸ್ಟರ್ನಸ್ ಕ್ಯಾರನ್ಕ್ಯುಲೇಟಸ್ ಕುಲದ ಪಕ್ಷಿ.
saddlebacked
ಗುಣವಾಚಕ
- ತಡಿಬೆನ್ನಿನ; ಪುಟಾಕಾರದ; ಒಳಬಆಗಿನ ಆಕಾರವುಳ್ಳ; ಜೀನಿನಂಥ ಬೆನ್ನುಳ್ಳ.
- (ವಾಸ್ತುಶಿಲ್ಪ) ತಡಿ ಚಾವಣಿಯ.
saddleless
ಗುಣವಾಚಕ
- (ಕುದುರೆಯ ವಿಷಯದಲ್ಲಿ) ತಡಿರಹಿತ; ಜೀನಿಲ್ಲದ.
- (ಬೈಸಿಕಲ್ ಮೊದಲಾದವಾಹನಗಳ ವಿಷಯದಲ್ಲಿ) ಪೀಠರಹಿತ; ಆಸನವಿಲ್ಲದ.
saddler
ನಾಮವಾಚಕ
- ತಡಿಕಾರ; ಜೀನುಗಾರ; ತಡಿ ತಯಾರಕ; ಕುದುರೆತಡಿ ಮತ್ತು ಇತರ ಸಜ್ಜುಗಳನ್ನು ಮಾಡುವವನು.
- ತಡಿ ವ್ಯಾಪಾರಿ; ತಡಿ ಮೊದಲಾದ ಸಜ್ಜನ್ನು ಮಾರುವವನು.
- (ಸೈನ್ಯ) ತಡಿ ಮಣೆಗಾರ; ಜೀನಧಿಕಾರಿ; ರಾವುತದಳದ ಕುದುರೆ ಸಜ್ಜಿನ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರಿ.
saddlery
ನಾಮವಾಚಕ
- ಅಶ್ವಸಜ್ಜು; ತಡಿ ಮೊದಲಾದ ಕುದುರೆ ಸರಂಜಾಮು.
- ಜೀನುಗಾರಿಕೆ; ತಡಿ ತಯಾರಿಸುವವನ ಕೆಲಸ, ವೃತ್ತಿ ಯಾ ವ್ಯಾಪಾರ.
- ಜೀನಂಗಡಿ; ತಡಿಕಾರನ ಅಂಗಡಿ.
saddo
ನಾಮವಾಚಕ
(ಬ್ರಿಟಿಷ್ ಪ್ರಯೋಗ) (ಅನೌಪಚಾರಿಕ) ಅಸಮರ್ಥ ವ್ಯಕ್ತಿ; ಶುದ್ಧ ಕೆಲಸಕ್ಕೆ ಬಾರದವ; ಶುದ್ಧ ನಾಲಾಯಕ್ಕು ಆಸಾಮಿ.
Sadducean
ಗುಣವಾಚಕ
Sadducee
ನಾಮವಾಚಕ
ಸ್ಯಾಡ್ಯುಸಿ; ದೇವದೂತರು, ದೆವ್ವಗಳು, ಮೊದಲಾದವುಗಳ ಅಸ್ತಿತ್ವ, ಸತ್ತವರ ಪುನರುತ್ಥಾನ, ಸಾಂಪ್ರದಾಯಿಕ ವಿಧಿನಿಯಮಗಳ ನಿರ್ಬಂಧ – ಇವನ್ನು ಒಪ್ಪದಿದ್ದ, ಕ್ರಿಸ್ತನ ಕಾಲದ ಯೆಹೂದಿ ಪಂಗಡದವನು.
Sadduceeism
ನಾಮವಾಚಕ
ಸ್ಯಾಡ್ಯುಸಿ ಮತ ಯಾ ತತ್ತ್ವ.
sadhu
ನಾಮವಾಚಕ
sadism
ನಾಮವಾಚಕ
- (ಮನೋವಿಜ್ಞಾಣ) ಪೀಡನ ರತಿ; ಕ್ರೌರ್ಯರತಿ; ಹಿಂಸಾರತಿ; ಇತರರಿಗೆ ಹಿಂಸೆ ಕೊಡುವ ಮೂಲಕ ಕಾಮತೃಪ್ತಿ ಯಾ ಆನಂದ ಪಡೆಯುವ ಒಂದು ಬಗೆಯ ಲೈಂಗಿಕ ವಿಕಾರ.
- (ಆಡುಮಾತು) ಹಿಂಸಾನಂದ; ಇನ್ನೊಬ್ಬರಿಗೆ ನೋವು, ಅವಮಾನ, ಹಿಂಸೆ ಕೊಡುವ ಮೂಲಕ ಪಡೆಯುವ ಸಂತೋಷ ಯಾ ಸುಖ.
sadist
ನಾಮವಾಚಕ
- ಪೀಡನ ಸುಖಿ; ಕ್ರೌರ್ಯರಸಿಕ.
- ಹಿಂಸಾರಸಿಕ; ಹಿಂಸಾಸಕ್ತ.
sadistic
ಗುಣವಾಚಕ
- ಪೀಡನರತಿಯ; ಪೀಡನ ರತಿಯಂಥ.
- ಹಿಂಸಾನಂದದ; ಹಿಂಸಾಸಕ್ತಿಯ.
sadistically
ಕ್ರಿಯಾವಿಶೇಷಣ
- ಕ್ರೌರ್ಯ ರಸಿಕತೆಯಿಂದ.
- ಹಿಂಸಾನಂದದಿಂದ.