English-Kannada Nighantu (University of Mysore)
University of Mysore
S
ನಾಮವಾಚಕ
(s ಸಹ).
- ಇಂಗ್ಲಿಷ್ ವರ್ಣಮಾಲೆಯ 19ನೆಯ ಅಕ್ಷರ.
-
- S ಆಕಾರದ ವಸ್ತು: collar of S ಎಸ್ (S) ಆಕಾರದ ಕೊರಳಪಟ್ಟಿ.
- S ಆಕಾರದ ತಿರುವು, ಬಾಗು: S-bend S (ಆಕಾರದ) ತಿರುವು. river makes a great S ನದಿ ಒಂದು ದೊಡ್ಡ S ತಿರುವು ರಚಿಸುತ್ತದೆ.
S
ಸಂಕ್ಷಿಪ್ತ
(S ಎಂದೂ ಪ್ರಯೋಗ).
- Saint.
- siemens.
- Society.
- South, Southern.
S
ಸಂಕೇತ
(ರಸಾಯನವಿಜ್ಞಾನ) sulphur ಧಾತು.
s
ಸಂಕ್ಷಿಪ್ತ
- second(s).
- shilling(s).
- singular.
- son
- succeeded.
S & L
ಸಂಕ್ಷಿಪ್ತ
savings and loan.
s.a.e.
ಸಂಕ್ಷಿಪ್ತ
stamped addressed envelope.
s.a.s.e.
ಸಂಕ್ಷಿಪ್ತ
(ಉತ್ತರ ಅಮೆರಿಕನ್ ಪ್ರಯೋಗ) self-addressed stamped envelope.
S.by E.
ಸಂಕ್ಷಿಪ್ತ
South by East (ಆಗ್ನೇಯ).
S.by W.
ಸಂಕ್ಷಿಪ್ತ
South by West (ನೈಋತ್ಯ).
s.c.
ಸಂಕ್ಷಿಪ್ತ
small capitals.
S.Dak
ಸಂಕ್ಷಿಪ್ತ
South Dakota.
s.h.p.
ಸಂಕ್ಷಿಪ್ತ
shaft horsepower.
S.of S.
ಸಂಕ್ಷಿಪ್ತ
Song of Songs (ಬೈಬಲ್ಲಿನ ಹಳೆಯ ಒಡಂಬಡಿಕೆ).
s.v.
ಸಂಕ್ಷಿಪ್ತ
- = side valve.
- (ಉಲ್ಲೇಖ ಕೊಡುವಾಗ) ಪದದಡಿಯಲ್ಲಿ ಯಾ ಶೀರ್ಷಿಕೆಯಡಿಯಲ್ಲಿ, ಉದಾಹರಣೆಗೆ, for ‘span’ see s.v. ‘spick’. ‘span’ ಎಂಬ ಶಬ್ದಕ್ಕೆ ‘spick’ ಎಂಬ ಪದದಡಿಯಲ್ಲಿ ಅರ್ಥ ವಿವರಣೆ ನೋಡಿ.
s/he
ಸರ್ವನಾಮ
ಎರಡು ಲಿಂಗಗಳನ್ನೂ ಸೂಚಿಸಲು ಬಳಸುವ, ‘he’ ಯಾ ‘she’ ಗಳ ಲಿಖಿತ ಸಂಕೇತ.
SA
ಸಂಕ್ಷಿಪ್ತ
- Salvation Army.
- sex appeal.
-
- South Africa.
- South America.
- South Australia.
- (ಚರಿತ್ರೆ) Sturmabteilung (ನಾಜಿ ಪಕ್ಷದ ಅರೆ ಸೈನಿಕ ದಳ).
sabadilla
ನಾಮವಾಚಕ
ಸ್ಯಾಬಡಿಲ:
- ಸ್ಕಾನೋಕಾಲನ್ ಅಫಿಸಿನೇಲ್ ಕುಲಕ್ಕೆ ಸೇರಿದ, ಬೀಜಗಳು ವೆರಟ್ರೀನ್ ಸಂಯುಕ್ತವನ್ನು ಕೊಡುವ, ಮೆಕ್ಸಿಕೋದ ಒಂದು ಗಿಡ.
- ಔಷಧಿ ಮತ್ತು ಕೃಷಿಯಲ್ಲಿ ಬಳಸುವ ಈ ಬೀಜಗಳ ಒಂದು ಉತ್ಪನ್ನ.
Sabaoth
ನಾಮವಾಚಕ
ಪದಗುಚ್ಛ
(ಬಹುವಚನ) (ಬೈಬ್ಲ್, ಬೈಬಲ್ಲಿನ ಹೊಸ ಒಡಂಬಡಿಕೆಯಲ್ಲಿ) ದೇವಸೇನೆಗಳು; ಭಗವಂತನ ಸೈನ್ಯಗಳು. Lord of sabaoth = Sabaoth.
Sabbatarian
ನಾಮವಾಚಕ
ಸಬ್ಬತು ಪಾಲಕ:
- ಸಬ್ಬತು (ದಿನವನ್ನು) ಪಾಲಿಸುವ ಯೆಹೂದಿ.
- ಭಾನುವಾರವನ್ನು ಕಡ್ಡಾಯ ಸಬ್ಬತು ದಿನವನ್ನಾಗಿ ಯಾ ವಿಶ್ರಾಂತಿ ದಿನವನ್ನಾಗಿ ಆಚರಿಸಲು ಸಮ್ಮತಿಸುವ ಕ್ರೈಸ್ತ.
- ಶನಿವಾರವನ್ನು ಸಬ್ಬತನ್ನಾಗಿ ಆಚರಿಸುವ ಕ್ರೆ ಸ್ತ .
sabbatarian
ಗುಣವಾಚಕ
ಸಬ್ಬತುಪಾಲಕನ; ಸಬ್ಬತು ತತ್ತ ಗಳನ್ನು ಅಂಗೀಕರಿಸಿರುವ ಯಾ ಅವುಗಳಿಗೆ ಸಂಬಂಧಿಸಿದ.