भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

tabularly

ಕ್ರಿಯಾವಿಶೇಷಣ

  • ಪದರಪದರವಾಗಿ; ತೆಳು ಫಲಕಗಳ ರೂಪದಲ್ಲಿ.
  • ಕೋಷ್ಟಕದಲ್ಲಿ.

tabulate

ಸಕರ್ಮಕ ಕ್ರಿಯಾಪದ

(ಅಂಕಿ–ಅಂಶಗಳನ್ನು) ಅಂಕಪಟ್ಟಿ ಯಾ ಕೋಷ್ಟಕದ ರೂಪದಲ್ಲಿ ಕಾಣಿಸು; ಪಟ್ಟಿ ಮಾಡು; ಪಟ್ಟಿ ಬರೆ.

tabulation

ನಾಮವಾಚಕ

ಅಂಕಪಟ್ಟಿ ರೂಪದಲ್ಲಿ ಬರೆಯುವುದು; ಪಟ್ಟಿ ಮಾಡುವುದು.

tabulator

ನಾಮವಾಚಕ

  • ಪಟ್ಟಿ–ಮಾಡುವವನು, ಮಾಡುವ ಯಂತ್ರ ಯಾ ಸಲಕರಣೆ.
  • ಅಂಕಣಕಾರಿ:
    1. (ಬೆರಳಚ್ಚು ಯಂತ್ರಗಳಲ್ಲಿರುವ) ಅಂಕಿಗಳನ್ನು ಅಂಕಣಗಳಾಗಿ ಅಚ್ಚೊತ್ತುವ ಸಲಕರಣೆ.
    2. (ಕಂಪ್ಯೂಟರ್‍) ಪಂಚ್‍ ಮಾಡಿದ ಕಾರ್ಡುಗಳೇ ಮೊದಲಾದ ದತ್ತಾಂಶ ಸಂಗ್ರಹಾಗಾರದಿಂದ ಪಟ್ಟಿಗಳನ್ನು ಯಾ ಕೋಷ್ಟಕಗಳನ್ನು ತಯಾರಿಸುವ ಯಂತ್ರ.

tac-au-tac

ನಾಮವಾಚಕ

(ಕತ್ತಿವರಸೆ) ಏಟು ತಪ್ಪಿಸಿಕೊಂಡು ಪ್ರತಿ ಏಟು ಹೊಡೆಯುವುದು; ಏಟಿಗೆ ಏಟು.

tacamahac

ನಾಮವಾಚಕ

  • (ಮುಖ್ಯವಾಗಿ ಬರ್ಸರ, ಪ್ರೋಡಿ(ಷಿ)ಯಮ್‍ ಮತ್ತು ಕ್ಯಾಹಿಲಮ್‍ ಕುಲಗಳಿಗೆ ಸೇರಿದ, ಉಷ್ಣವಲಯದ ಕೆಲವು ಮರಗಳಿಂದ ತೆಗೆಯುವ) ಅಂಟು; ರಾಳ.
    1. ಗುಗ್ಗುಳ ಮರ.
    2. ಗುಗ್ಗುಳ ಮರದ ರಾಳ ಯಾ ಅಂಟು.

tacet

ಅಕರ್ಮಕ ಕ್ರಿಯಾಪದ

(ಸಂಗೀತದಲ್ಲಿ ನಿರ್ದಿಷ್ಟ ವಾದ್ಯಕ್ಕೆ ಯಾ ಕಂಠಕ್ಕೆ ಯಾ ಮೌನ ಕೊಡುವ ಸೂಚನೆ) ‘ಮೌನ ವಹಿಸಲಿ’; ‘ನುಡಿಯದಿರಲಿ’.

tachism

ನಾಮವಾಚಕ

ಭಾವಪ್ರಚೋದಕ ಚಿತ್ರಣ; ಒಳಮನಸ್ಸಿನ ಭಾವನೆಯನ್ನು ಎಬ್ಬಿಸಲು, ಅಡ್ಡಾದಿಡ್ಡಿಯಾಗಿ ಬಣ್ಣಗಳನ್ನು ತೊಡೆದ, ಕ್ರಿಯಾ ಚಿತ್ರಣದ (action painting) ಒಂದು ಬಗೆ.

tachisme

ನಾಮವಾಚಕ

= tachism.

tachistoscope

ನಾಮವಾಚಕ

(ಒಂದು ರೀತಿಯ) ದೃಷ್ಟಿಮಾಪಕ; ಮನಸ್ಸಿನ ಗ್ರಹಣ ಶಕ್ತಿಯನ್ನು ಪರೀಕ್ಷಿಸಲು ಫಕ್ಕನೆ ಕಣ್ಣ ಮುಂದೆ ಚಿತ್ರ, ಅಕ್ಷರ, ಶಬ್ದ, ಮೊದಲಾದ ಭಾವಪ್ರಚೋದಕ ವಸ್ತುಗಳನ್ನು ಕ್ಷಣಕಾಲ ಪ್ರದರ್ಶಿಸಿ ತೆಗೆದುಬಿಡುವ ಯಂತ್ರ.

tachistoscopic

ಗುಣವಾಚಕ

ದೃಷ್ಟಿಮಾಪಕದ ಯಾ ಆ ಯಂತ್ರಕ್ಕೆ ಸಂಬಂಧಿಸಿದ.

tacho

ನಾಮವಾಚಕ

(ಆಡುಮಾತು) = tachometer.

tacho-

ಸಮಾಸ ಪೂರ್ವಪದ

ಗತಿ, ವೇಗ, ಎಂಬರ್ಥದ ಸಮಾಸ ಪೂರ್ವಪದ.

tachograph

ನಾಮವಾಚಕ

ವೇಗಲೇಖಿ; ಮುಖ್ಯವಾಗಿ ಭಾರವಾದ ಸರಕುಗಳನ್ನು ಸಾಗಿಸುವ ಮೋಟಾರು ವಾಹನಗಳು, ಕೋಚುಗಳು, ಮೊದಲಾದವುಗಳಲ್ಲಿ ವೇಗ ಮತ್ತು ಚಲನೆಯ ಕಾಲವನ್ನು ಸ್ವಯಂ ದಾಖಲಿಸುವ ಸಲಕರಣೆ.

tachometer

ನಾಮವಾಚಕ

ವೇಗಮಾಪಕ; ಆವರ್ತ ದಂಡವು ಸುತ್ತುವ ವೇಗದ ಪ್ರಮಾಣವನ್ನು ಅಳೆದು, ಆ ಮೂಲಕ ವಾಹನದ ವೇಗ ಯಾ ಗತಿಯನ್ನು ಅಳೆಯುವ ಸಲಕರಣೆ, ಸಾಧನ.

tachy-

ಸಮಾಸ ಪೂರ್ವಪದ

ವೇಗ, ಶೀಘ್ರ, ತ್ವರಿತ, ಎಂಬರ್ಥಗಳ ಸಮಾಸ ಪೂರ್ವಪದ.

tachycardia

ನಾಮವಾಚಕ

(ರೋಗಶಾಸ್ತ್ರ) ಹೃದಯಸ್ಪಂದನಾಧಿಕ್ಯ; ಹೃದಯದ–ಅತಿಸ್ಪಂದನ, ಅತಿಯಾದ ಬಡಿತ, ಮಿಡಿತ.

tachygrapher

ನಾಮವಾಚಕ

ಪ್ರಾಚೀನ ಗ್ರೀಕ್‍ ಯಾ ಲ್ಯಾಟಿನ್‍–ಸಂಕ್ಷಿಪ್ತ ಯಾ ಶೀಘ್ರ ಲಿಪಿಕಾರ.

tachygraphic

ಗುಣವಾಚಕ

= tachygraphical.

tachygraphical

ಗುಣವಾಚಕ

  • ಪ್ರಾಚೀನ ಗ್ರೀಕ್‍ ಯಾ ಲ್ಯಾಟಿನ್‍ ಶೀಘ್ರಲಿಪಿಯ; ಅದಕ್ಕೆ ಸಂಬಂಧಿಸಿದ.
  • ಸಂಕ್ಷಿಪ್ತ ಲಿಪಿಯ.

Search Dictionaries

Loading Results

Follow Us :   
  Download Bharatavani App
  Bharatavani Windows App