भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

tagliatelle

ನಾಮವಾಚಕ

ಲಾಡಿಯಾಕಾರದ ಒಂದು ಬಗೆಯ ಹಿಟ್ಟಿನ ತಿಂಡಿ.

tagrag

ನಾಮವಾಚಕ

= ragtag.

Tahitian

ನಾಮವಾಚಕ

 • (ದಕ್ಷಿಣ ಪೆಸಿಹಿಕ್‍ ಸಾಗರದಲ್ಲಿರುವ)ಟಾಹಿಟಿ ದ್ವೀಪವಾಸಿ; ಆ ದ್ವೀಪದ ದೇಶೀಯ.
 • ಟಾಹಿಟಿ ಭಾಷೆ.

Tahitian

ಗುಣವಾಚಕ

 • (ದಕ್ಷಿಣ ಪೆಸಿಹಿಕ್‍ ಸಾಗರದ) ಟಾಹಿಟಿ ದ್ವೀಪವಾಸಿಯ ಯಾ ಅವನಿಗೆ ಸಂಬಂಧಿಸಿದ.
 • ಟಾಹಿಟಿ ಭಾಷೆಯ, ಅದಕ್ಕೆ ಸಂಬಂಧಿಸಿದ.
 • ಟಾಹಿಟಿ ದ್ವೀಪದ, ಅದಕ್ಕೆ ಸಂಬಂಧಿಸಿದ.

tahr

ನಾಮವಾಚಕ

(ಹೆಮಿಟ್ರಗಸ್‍, ಮುಖ್ಯವಾಗಿ ಹೆಮಿಟ್ರಗಸ್‍ ಜೆಮ್ಲಹಿಕಸ್‍ ಕುಲದ ನೇಪಾಳದ ಯಾ ಹಿಮಾಲಯದ ಒಂದು) ಕಾಡುಜಿಂಕೆ; ಮೇಕೆ(ಯಂಥ) ಜಿಂಕೆ; ಅಜಹರಿಣ.

tahsil

ನಾಮವಾಚಕ

(ಭಾರತ) ತಹಸೀಲು; ತಾಲ್ಲೂಕು; ಆಡಳಿತದ ಒಂದು ವಿಭಾಗ.

tahsildar

ನಾಮವಾಚಕ

(ಭಾರತ) ತಹಸೀಲುದಾರ; ತಾಲ್ಲೂಕಿನ ಕಂದಾಯ ವಸೂಲಿ ಮೊದಲಾದವುಗಳ ಮುಖ್ಯ ಅಧಿಕಾರಿ.

Taig

ನಾಮವಾಚಕ

(ಅಶಿಷ್ಟ) (ಉತ್ತರ ಐರ್ಲೆಂಡಿನಲ್ಲಿ) ಪ್ರಾಟೆಸ್ಟಂಟರು ಕ್ಯಾಥೊಲಿಕರನ್ನು ಕರೆಯುವ ಹೆಸರು.

taiga

ನಾಮವಾಚಕ

(ಮುಖ್ಯವಾಗಿ ಸೈಬೀರಿಯಾದಲ್ಲಿನ) ಜೌಗು ಬಯಲು ಹಾಗೂ ಬೆಂಗಾಡು ಬಯಲುಗಳ ನಡುವಣ ಶಂಕುಮರಗಳ ನಿತ್ಯಹಸುರು ಕಾಡು.

tail

ನಾಮವಾಚಕ

ಪದಗುಚ್ಛ

 • ಬಾಲ; ಲಾಂಗೂಲ; ಪುಚ್ಛ; ತೋಕೆ.
 • ಬಾಲ; ಲಾಂಗೂಲ; ಪುಚ್ಛ:
  1. ಆಕಾರದಲ್ಲಿ ಯಾ ಸ್ಥಾನದಲ್ಲಿ, ಯಾವುದೇ ವಸ್ತುವಿನ ಬಾಲದಂಥ ಭಾಗ, ಉದ್ದನೆಯ ಹಿಂಭಾಗದ ಚಾಚು; ಮುಖ್ಯವಾಗಿ ತುದಿಯಲ್ಲಿ ಕೆಳಕ್ಕೆ ಯಾ ಹೊರಕ್ಕೆ ಚಾಚಿಕೊಂಡಿರುವ ಯಾವುದೇ ವಸ್ತು: tail of the eye ಕಣ್ಣಿನ ಹೊರಮೂಲೆ; ಕಡೆಗಣ್ಣು. tail of a page ಪುಟದ ಅಡಿ, ಕೆಳಭಾಗ.
  2. ಯಾವುದೇ ಒಂದರ (ಉದಾಹರಣೆಗೆ ಮೆರವಣಿಗೆಯ) ಹಿಂತುದಿ; ಅಂತ್ಯಭಾಗ; ಕೊನೆ(ಯ) ಭಾಗ.
  3. ಜನರು, ವಾಹನಗಳು, ಮೊದಲಾದವುಗಳ ಉದ್ದಸಾಲು, ದೀರ್ಘಪಂಕ್ತಿ.
  1. (ವಾಯುಫಲಕ, ಚುಕ್ಕಾಣಿ ಹಲಗೆ, ಮೊದಲಾದವುಗಳನ್ನೊಳಗೊಂಡ) ವಿಮಾನದ ಯಾ ರಾಕೆಟ್‍ನ ಹಿಂಭಾಗ.
  2. ಮೋಟಾರು ವಾಹನದ ಹಿಂಭಾಗ, ಹಿಂತುದಿಯ ಭಾಗ.
 • ಧೂಮಕೇತುವಿನ ಬಾಲ; ಧೂಮಕೇತುವಿನ ಹಿಂಭಾಗದಲ್ಲಿರುವ ಹೊಳೆಯುವ ಕಣಗಳ ಬಾಲದಂಥ ರಾಶಿ.
  1. (ಮುಖ್ಯವಾಗಿ ಒಂದು ಶ್ರೇಣಿ ಯಾ ಸರಣಿಯಲ್ಲಿನ) ಹಿಂತುದಿ; ಕಡೆಯ, ಅಂತ್ಯ–ಭಾಗ; ಕೆಳಮಟ್ಟದ ಯಾ ದುರ್ಬಲ ಭಾಗ.
  2. (ಕ್ರಿಕೆಟ್‍) ಕೊನೆಯ ಬ್ಯಾಟುಗಾರರು; ಬ್ಯಾಟುಗಾರರ ತಂಡದಲ್ಲಿ ತೀರಾ ಕೊನೆಯಲ್ಲಿ ಆಡುವ ಸಾಮಾನ್ಯ, ದುರ್ಬಲ ಬ್ಯಾಟುಗಾರರು.
  1. ಷರ್ಟಿನ–ಬಾಲ, ಸೊಂಟದಿಂದ ಕೆಳಗಿನ ಭಾಗ.
  2. (ಬಾಲದಂತೆ ಜೋಲಾಡುವ) ಕೋಟಿನ ಹಿಂಭಾಗ.
 • (ಬಹುವಚನದಲ್ಲಿ) (ಆಡುಮಾತು)
  1. = tailcoat.
  2. ಟೇಲ್‍ಕೋಟನ್ನು ಒಳಗೊಂಡ ಸಂಜೆಯುಡುಪು.
 • (ಬಹುವಚನದಲ್ಲಿ) (ಆಯ್ಕೆ ಮೊದಲಾದವನ್ನು ನಿರ್ಧರಿಸಲು ಮೇಲಕ್ಕೆ ಚಿಮ್ಮುವ) ನಾಣ್ಯದ ಹಿಮ್ಮುಖ; ತಲೆಯ ಚಿತ್ರವಿಲ್ಲದ ಹಿಂಪಕ್ಕ.
 • (ಆಡುಮಾತು) ಹಿಂಬಾಲಕ:
  1. ಅನುಚರ; ಹಿಂದೆ ಬರುವವನು.
  2. ಗುಮಾನಿಯಿಂದ ಒಬ್ಬ ವ್ಯಕ್ತಿಯನ್ನು ಬಾಲದಂತೆ ಹಿಂಬಾಲಿಸುವ ಯಾ ಬೆನ್ನುಹತ್ತುವ ಇನ್ನೊಬ್ಬ ವ್ಯಕ್ತಿ.
 • ಗಾಳಿಪಟದ ಬಾಲಂಗೋಚಿ; ಬಾಲಂಗ(ಕ)ಚ್ಚೆ.
 • (ಸಂಗೀತ ರೇಖಾವಳಿಯಲ್ಲಿ) ಸಂಗೀತ ಸ್ವರ(ಸೂಚಕ) ಚಿಹ್ನೆಯ ಲಂಬಗೆರೆ.
 • y ಮೊದಲಾದ ಅಕ್ಷರಗಳ–ಕೆಳಗೀಟು, ತೋಕೆ.
  1. (ಚಾವಣಿಯಲ್ಲಿ ಹೊದಿಸಿರುವ) ಸ್ಲೇಟುಹಲಗೆಯ ಯಾ ಹೆಂಚಿನ ಹೊರ(ಕಾಣುವ) ತುದಿ.
  2. (ಗೋಡೆಯಲ್ಲಿ) ಒಳತುದಿ; ಇಟ್ಟಿಗೆಯ ಯಾ ಕಲ್ಲಿನ ಹೊರಕಾಣಿಸದ, ಒಳತೂರಿಸಿದ–ತುದಿ.
 • ಚಿಟ್ಟೆಯ ರೆಕ್ಕೆಯ ತೆಳು ಹಿಂಚಾಚು, ತೋಕೆ.
 • ಬಿರುಗಾಳಿಯ ಅಂತ್ಯಭಾಗ; ಕೊನೆಯಲ್ಲಿನ ತಕ್ಕಮಟ್ಟಿನ ಶಾಂತಭಾಗ.
 • ನದೀಪುಚ್ಫ; ತೊರೆಯ ಬಾಲ; ನದಿಯಲ್ಲಿ ಬಿರುಸಿನ ಪ್ರವಾಹದ, ಬಿರುಸು ಹರಿವಿನ ಹಿಂಗಡೆಯ ಶಾಂತಭಾಗ.

tail

ಸಕರ್ಮಕ ಕ್ರಿಯಾಪದ

ಪದಗುಚ್ಛ

 • ಬಾಲ–ಕಟ್ಟು, ಅಂಟಿಸು.
 • (ಹಣ್ಣಿನ) ಕೊನೆಯನ್ನು ಯಾ ತೊಟ್ಟನ್ನು–ಕೀಳು, ಕಿತ್ತುಹಾಕು, ತೆಗೆ.
 • (ಕುರಿ ಮೊದಲಾದವುಗಳ) ಬಾಲ ಕತ್ತರಿಸು.
 • (ಆಡುಮಾತು) ರಹಸ್ಯವಾಗಿ, ಗೊತ್ತಾಗದಂತೆ–ಹಿಂಬಾಲಿಸು, ಬೆನ್ನುಹತ್ತು ( ಅಕರ್ಮಕ ಕ್ರಿಯಾಪದ ಸಹ).
 • (ಒಂದಕ್ಕೆ) ಯಾವುದಾದರೂ ಇನ್ನೊಂದನ್ನು ಸೇರಿಸು, ಲಗತ್ತಿಸು, ಅಂಟಿಸು.

tail

ನಾಮವಾಚಕ

ಪದಗುಚ್ಛ

(ನ್ಯಾಯಶಾಸ್ತ್ರ) (ಮುಖ್ಯವಾಗಿ ಮೀನಿನ ವಿಷಯದಲ್ಲಿ) ಪರಿಮಿತ ಒಡೆತನ; ಸೀಮಿತ ಸ್ವಾಮ್ಯ; ಒಬ್ಬ ವ್ಯಕ್ತಿಗೂ ಅವನ ಔರಸ ಸಂತಾನಕ್ಕೂ ಮಾತ್ರ ಹಕ್ಕಿರುವ ಆಸ್ತಿ. in tail (ಆಸ್ತಿಪಾಸ್ತಿಯ ವಿಷಯದಲ್ಲಿ) ಪರಿಮಿತ ಒಡೆತನದ ಷರತ್ತಿನ ಮೇಲೆ; ಸೀಮಿತ ಸ್ವಾಮ್ಯಕ್ಕೆ ಒಳಪಟ್ಟು.

tail

ಗುಣವಾಚಕ

(ಮೀನು, ಆಸ್ತಿ, ಮೊದಲಾದವುಗಳ ವಿಷಯದಲ್ಲಿ) ಸೋಪಾಧಿಕ; ಪರಿಮಿತ–ಸ್ವಾಮ್ಯದ, ಒಡೆತನದ: estate tail ಸೋಪಾಧಿಕ ಆಸ್ತಿ; ಪರಿಮಿತ ಹಕ್ಕಿನ ಆಸ್ತಿ.

tail covert

ನಾಮವಾಚಕ

ಬಾಲದ ಹೊದಿಕೆ; ಹಕ್ಕಿಯ ಬಾಲದ ಗರಿಗಳ ಬಉಡವನ್ನು ಆವರಿಸಿರುವ ಗರಿಗಳಲ್ಲೊಂದು.

tail wind

ನಾಮವಾಚಕ

ಅನುಚರ ವಾಯು; ಹಡಗು, ಮೋಟಾರು ವಾಹನ ಯಾ ವಿಮಾನ ಚಲಿಸುವಾಗ ಅದರ ಹಿಂದೆ, ಅದು ಚಲಿಸುವ ದಿಕ್ಕಿನಲ್ಲಿಯೇ ಬೀಸುವ ಗಾಳಿ.

tail-bay

ನಾಮವಾಚಕ

(ನೀರಿನ ಮಟ್ಟದ ಬದಲಾವಣೆ ಕಟ್ಟೆಯಲ್ಲಿ) ಕೆಳಬಾಗಿಲು ಹಾಗೂ ಕೆಳಗಿನ ಕೊಳದ ನಡುವಣ ಕಾಲುವೆಭಾಗ.

tail-end

ನಾಮವಾಚಕ

 • ತುದಿ; ಕೊನೆ; ಅಂತ್ಯಭಾಗ; ಅತ್ಯಂತ ಹಿಂದಿನ ಯಾ ಕೆಳಗಿನ ಯಾ ಕೊಟ್ಟಕೊನೆಯ ಭಾಗ.
 • (ಮುಖ್ಯವಾಗಿ ಸರಣಿಯೊಂದರಲ್ಲಿನ) ಕೊನೆಯ ಭಾಗ; ಕಡಮೆ ಗುಣದ ಯಾ ದುರ್ಬಲ ಭಾಗ.
 • (ಕ್ರಿಕೆಟ್‍) (ಆಟಗಾರರ ಸರದಿಯಲ್ಲಿ) ಕೊನೆಯ, ಕಟ್ಟಕಡೆಯ (ಸಾಮಾನ್ಯವಾಗಿ ಸಾಮಾನ್ಯ ದರ್ಜೆಯ) ಬ್ಯಾಟುಗಾರರು.
 • ಷರಟಿನ–ಬಾಲ, ಇಳಿಬಿದ್ದ ಭಾಗ.

tail-ender

ನಾಮವಾಚಕ

ಅಂತಿಮಸ್ಥ; ಅಂತಿಮಸ್ಥಾನದಲ್ಲಿ, ಕೊಟ್ಟಕೊನೆಯಲ್ಲಿ ಇರುವವನು, ಮುಖ್ಯವಾಗಿ ಕ್ರಿಕೆಟ್‍ ಮತ್ತು ಕ್ರೀಡಾ ಪಂದ್ಯಗಳಲ್ಲಿ ಕಟ್ಟಕಡೆಯ ಆಟಗಾರ.

tail-lamp

ನಾಮವಾಚಕ

(ಅಮೆರಿಕನ್‍ ಪ್ರಯೋಗ)(ರೈಲು, ಕಾರು, ಬೈಸಿಕಲ್‍, ಮೊದಲಾದವುಗಳ) ಹಿಂದೀಪ; ಹಿಂದುಗಡೆ ಅಳವಡಿಸಿರುವ ದೀಪ.

tail-light

ನಾಮವಾಚಕ

= tail-lamp.

Search Dictionaries

Loading Results

Follow Us :   
  Download Bharatavani App
  Bharatavani Windows App