English-Kannada Nighantu (University of Mysore)
University of Mysore
urban renewal
ನಾಮವಾಚಕ
(ಕೊಳಚೆ ಪ್ರದೇಶ ನಿರ್ಮೂಲನ ಮಾಡಿ) ನಗರಾಭಿವೃದ್ಧಿ(ಗೊಳಿಸುವುದು).
urban sprawl
ನಾಮವಾಚಕ
ನಗರ – ವ್ಯಾಪನೆ; ನಿಯಂತ್ರಣವಿಲ್ಲದೆ, ಸ್ವೇಚ್ಫೆಯಾಗಿ ಬೆಳೆಯುವ (ಬಡಾಯಿಸುವ) ನಗರ ಪ್ರದೇಶಗಳು; ನಗರದ ಅನಿಯಂತ್ರಿತ ಹರಡಿಕೆ, ಹಬ್ಬಿಕೆ.
urbane
ಗುಣವಾಚಕ
ನಯವುಳ್ಳ; ಸಭ್ಯ; ಸುಸಂಸ್ಕೃತ; ನಾಗರಿಕ: urbane manners ನಾಗರಿಕ ನಡವಳಿಕೆ.
urbanely
ಕ್ರಿಯಾವಿಶೇಷಣ
ನಯವಾಗಿ; ಸಭ್ಯವಾಗಿ; ಸುಸಂಸ್ಕೃತ, ನಾಗರಿಕ ರೀತಿಯಲ್ಲಿ.
urbanise
ಸಕರ್ಮಕ ಕ್ರಿಯಾಪದ
= urbanize.
urbanism
ನಾಮವಾಚಕ
- ನಾಗರತೆ:
- ನಗರದ ಗುಣಲಕ್ಷಣಗಳು.
- ನಗರಜೀವನದ ರೀತಿನೀತಿಗಳು.
- ನಗರಾಧ್ಯಯನ; ಪುರಾಧ್ಯಯನ; ನಗರ ಜೀವನದ ಅಧ್ಯಯನ.
urbanist
ನಾಮವಾಚಕ
ನಗರಶಾಸ್ತ್ರಜ್ಞ; ನಗರ ಯಾ ನಗರಜೀವನ ಕುರಿತು ಅಧ್ಯಯನ ಮಾಡುವವ.
urbanite
ನಾಮವಾಚಕ
ಪಟ್ಟಣವಾಸಿ; ನಗರವಾಸಿ; ಪುರವಾಸಿ.
urbanity
ನಾಮವಾಚಕ
- ನಯ; ನಾಜೂಕು; ಸಭ್ಯತೆ; ಸುಸಂಸ್ಕೃತಿ; ನಾಗರಿಕ ನಡವಳಿಕೆ.
- ನಗರ ಜೀವನ.
urbanization
ನಾಮವಾಚಕ
ನಗರೀಕರಣ.
urbanize
ಸಕರ್ಮಕ ಕ್ರಿಯಾಪದ
- ಪಟ್ಟಣವಾಗಿಸು; ನಗರೀಕರಿಸು.
- (ಜಿಲ್ಲೆ ಮೊದಲಾದವುಗಳ) ಗ್ರಾಮೀಣ ಲಕ್ಷಣ ಕಳೆ.
urceolate
ಗುಣವಾಚಕ
(ಸಸ್ಯವಿಜ್ಞಾನ) ಕುಂಭಾಕಾರದ; ದೊಡ್ಡ ಕಾಯ ಮತ್ತು ಚಿಕ್ಕ ಬಾಯಿಯ; ಗಡಿಗೆಯಂಥ.
urchin
ನಾಮವಾಚಕ
ಪದಗುಚ್ಛ
- ತುಂಟ ಹುಡುಗ; ಚೇಷ್ಟೆ ಹುಡುಗ.
- ಪೋರ; ಚಿಳ್ಳೆ ಹುಡುಗ; ಸಣ್ಣ ಹುಡುಗ; ಪಿಳ್ಳೆ; ಚಿಲ್ಟಾರಿ.
- = sea urchin.
- (ಪ್ರಾಚೀನ ಪ್ರಯೋಗ)
- ಮುಳ್ಳುಹಂದಿ.
- ತುಂಟ ಪಿಶಾಚಿ.
Urdu
ನಾಮವಾಚಕ
ಉರ್ದು (ಭಾಷೆ).
urea
ನಾಮವಾಚಕ
(ಜೀವರಸಾಯನ ವಿಜ್ಞಾನ) ಯೂರಿಯ; ಸಸ್ತನಿಗಳ ದೇಹದಲ್ಲಿ ನೈಟ್ರೊಜನ್ ಉಪಾವಚಯದ, ಅಂತಿಮ ಉತ್ಪನ್ನವಾಗಿದ್ದು, ಸಸ್ತನಿಗಳ ಮೂತ್ರದಲ್ಲಿ ಕಂಡುಬರುವ, ವರ್ಣರಹಿತ ಸ್ಫಟಿಕೀಯ, ದ್ರಾವ್ಯಸಂಯುಕ್ತ, ${\rm CN}_2{\rm H}_4{\rm O}$.
ureal
ಗುಣವಾಚಕ
ಯೂರಿಯದ ಯಾ ಅದಕ್ಕೆ ಸಂಬಂಧಿಸಿದ.
uremia
ನಾಮವಾಚಕ
(ಅಮೆರಿಕನ್ ಪ್ರಯೋಗ) uraemia ಎಂಬಉದರ ರೂಪಾಂತರ.
ureter
ನಾಮವಾಚಕ
ಮೂತ್ರನಾಳ; ಮೂತ್ರಪಿಂಡಗಳಿಂದ ಮೂತ್ರವನ್ನು ಮೂತ್ರಕೋಶಕ್ಕೆ ಸಾಗಿಸುವ ನಾಳ.
ureteral
ಗುಣವಾಚಕ
ಮೂತ್ರನಾಳದ; ಮೂತ್ರನಾಳಕ್ಕೆ ಸಂಬಂಧಿಸಿದ.
ureteric
ಗುಣವಾಚಕ
= ureteral.