English-Kannada Nighantu (University of Mysore)
University of Mysore
use
ನಾಮವಾಚಕ
ಪದಗುಚ್ಛ
- ಬಳಸುವುದು; ಉಪಯೋಗಿಸುವುದು; ಬಳಕೆ; ಉಪಯೋಗ; ಪ್ರಯೋಗ; ವಿನಿಯೋಗ: put it to good use ಅದನ್ನು ಚೆನ್ನಾಗಿ ಉಪಯೋಗಿಸು. has passed out of use ಅದು ಈಗ ಬಳಕೆಯಲ್ಲಿಲ್ಲ. is in daily use ದಿನಬಳಕೆಯಲ್ಲಿದೆ.
- ಉಪಯೋಗಿಸುವ ಹಕ್ಕು ಯಾ ಶಕ್ತಿ ಯಾ ಅಧಿಕಾರ: lost the use of his left arm ಎಡತೋಳನ್ನು ಬಳಸಲು ಅವನಿಗೆ ಸಾಧ್ಯವಿಲ್ಲ (ಎಡತೋಳನ್ನು ಬಳಸುವ ಶಕ್ತಿ ಕಳೆದುಕೊಂಡಿದ್ದಾನೆ).
- (ಬಳಸುವುದರ) ಫಲ; ಪ್ರಯೋಜನ: a blunt knife is of no use ಮೊಂಡ ಚಾಕುವಿನಿಂದ ಯಾವ ಪ್ರಯೋಜನವೂ ಇಲ್ಲ. it is no use talking ಮಾತನಾಡುವುದರಿಂದ, ಮಾತನಾಡಿ – ಪ್ರಯೋಜನವಿಲ್ಲ.
- ಪದ್ಧತಿ; ಅಭ್ಯಾಸ; ವಾಡಿಕೆ: long use has reconciled me to it ದೀರ್ಘಕಾಲದ ಅಭ್ಯಾಸದಿಂದ ನಾನು ಅದನ್ನು ಸರಿಹೊಂದಿಸಿಕೊಂಡಿದ್ದೇನೆ.
- (ಚರ್ಚಿನ, ಆರಾಧನಾ ಮಂದಿರದ) ಪೂಜಾ ಪದ್ಧತಿ; ಕರ್ಮಪದ್ಧತಿ; ಧಾರ್ಮಿಕ ಪ್ರಕ್ರಿಯೆಗಳು: Anglican use ಇಂಗ್ಲಿಷ್ ಚರ್ಚಿನ ಪದ್ಧತಿ.
- (ನ್ಯಾಯಶಾಸ್ತ್ರ) (ಚರಿತ್ರೆ) (ಬೇರೊಬ್ಬ ಫಲಾನುಭವಿಯ ಅನುಭೋಗಕ್ಕಾಗಿ ಮಾತ್ರ ಒಬ್ಬನ ವಶದಲ್ಲಿರುವ ಆಸ್ತಿಯ) ಫಲಾನುಭವ; ಅನುಭೋಗ.
use
ಸಕರ್ಮಕ ಕ್ರಿಯಾಪದ
ಪದಗುಚ್ಛ
- ಬಳಸು; ಉಪಯೋಗಿಸು; ಪ್ರಯೋಗಿಸು; ವಿನಿಯೋಗಿಸು: seldom uses a knife ಚಾಕುವನ್ನು ಬಳಸುವುದೇ ಇಲ್ಲ. use your discretion ನಿನ್ನ ವಿವೇಚನೆಯನ್ನು ಉಪಯೋಗಿಸು.
- (ಹೆಸರು ಮೊದಲಾದವನ್ನು) ಸ್ವಂತಕ್ಕಾಗಿ ಬಳಸು, ಉಪಯೋಗಿಸು. may I use your telephone? ನಿಮ್ಮ ದೂರವಾಣಿಯನ್ನು ಉಪಯೋಗಿಸಲೇ?
- ವ್ಯವಹರಿಸು; ಕಾಣು; ವರ್ತಿಸು; ನಡೆದುಕೊ; ನಡೆಸಿಕೊ: has used me shamefully ಅವನು ನನ್ನ ಬಗ್ಗೆ ಅವಮಾನಕರವಾಗಿ ವರ್ತಿಸಿದ್ದಾನೆ.
- (ಈಗ ಸಾಮಾನ್ಯವಾಗಿ ಭೂತರೂಪ ಮಾತ್ರ, ಉಚ್ಚಾರಣೆ ಯೂಸ್ಟ್). ಪದ್ಧತಿಯಾಗಿರು; ರೂಢಿಯಾಗಿರು; ವಾಡಿಕೆಯಾಗಿರು; ಅಭ್ಯಾಸವಾಗಿರು: I used to take the bus ನಾನು ಬಸ್ಸಿನಲ್ಲಿ ಹೋಗುವ ರೂಢಿ ಇತ್ತು. there used to be a law against it ಅದರ ವಿರುದ್ಧವಾಗಿ ಒಂದು ಕಾನೂನು ವಾಡಿಕೆಯಲ್ಲಿತ್ತು.
used
ಗುಣವಾಚಕ
ಪದಗುಚ್ಛ
used to ಪದ್ಧತಿಯಾದ; ವಾಡಿಕೆಯಾದ; ಅಭ್ಯಾಸವಾದ: I am not used to being called a liar ಸುಳ್ಳುಗಾರ ಎನಿಸಿಕೊಳ್ಳುವುದು ನನಗೆ ಅಭ್ಯಾಸವಿಲ್ಲ (ನನ್ನನ್ನು ಈವರೆಗೆ ಯಾರೂ ‘ಸುಳ್ಳ’ ಎಂದಿಲ್ಲ). not used to hardwork ಕಷ್ಟಪಟ್ಟು ಕೆಲಸ ಮಾಡಿ ರೂಢಿಯಿಲ್ಲ.
- ಬಳಸಿದ; ಉಪಯೋಗಿಸಿದ.
- ಖರ್ಚುಮಾಡಿದ; ವಿನಿಯೋಗಿಸಿದ.
- (ಬಟ್ಟೆಬರೆ, ವಾಹನ, ಮೊದಲಾದವುಗಳ ವಿಷಯದಲ್ಲಿ) ಹಳೆಯ; ಇನ್ನೊಬ್ಬರು ಉಪಯೋಗಿಸಿ ಬಿಟ್ಟ; ಹಳತಾದ; ಸಮೆದ; ಎರಡನೆಯ ಮಾಲೀಕನ ಕೈಗೆ ಬಂದ.
useful
ಗುಣವಾಚಕ
ಪದಗುಚ್ಛ
- ಉಪಯೋಗಕರವಾದ; ಪ್ರಯೋಜನಕಾರಿಯಾದ.
- ಫಲದಾಯಕವಾದ; ಲಾಭಕರವಾದ; ಉಪಯುಕ್ತ: gave me some useful hints ನನಗೆ ಕೆಲವು ಉಪಯುಕ್ತ ಸೂಚನೆಗಳನ್ನು ಕೊಟ್ಟ.
- (ಆಡುಮಾತು) ಅತ್ಯುತ್ತಮ; ಭರ್ಜರಿ; ಸಮರ್ಥ: a useful performance ಭರ್ಜರಿ ಆಟ; ಸೊಗಸಾದ ಪ್ರದರ್ಶನ.
usefully
ಕ್ರಿಯಾವಿಶೇಷಣ
- ಉಪಯುಕ್ತವಾಗಿ; ಪ್ರಯೋಜನಕಾರಿಯಾಗಿ.
- ಫಲಪ್ರದವಾಗಿ; ಲಾಭಕರವಾಗಿ.
usefulness
ನಾಮವಾಚಕ
- ಉಪಯುಕ್ತತೆ; ಪ್ರಯೋಜನಕಾರಿಯಾಗಿರುವುದು.
- ಲಾಭದಾಯಕತೆ; ಫಲದಾಯಕವಾಗಿರುವಿಕೆ.
useless
ಗುಣವಾಚಕ
- ನಿಷ್ಪ್ರಯೋಜಕ; ವ್ಯರ್ಥ; ನಿಷ್ಫಲ; ಕೆಲಸಕ್ಕೆ ಬಾರದ: useless erudition ವ್ಯರ್ಥ ಪಾಂಡಿತ್ಯ.
- (ಆಡುಮಾತು) ಅಸಮರ್ಥ; ದುರ್ಬಲ: useless in swimming ಈಜಿನಲ್ಲಿ ದುರ್ಬಲ.
uselessly
ಕ್ರಿಯಾವಿಶೇಷಣ
ನಿಷ್ಪ್ರಯೋಜಕವಾಗಿ; ವ್ಯರ್ಥವಾಗಿ; ನಿಷ್ಫಲವಾಗಿ; ಕೆಲಸಕ್ಕೆ ಬಾರದ ಹಾಗೆ.
uselessness
ನಾಮವಾಚಕ
ನಿಷ್ಪ್ರಯೋಜಕತೆ; ನಿರುಪಯುಕ್ತತೆ; ವ್ಯರ್ಥವಾಗುವುದು; ನಿಷ್ಫಲತೆ.
user
ನಾಮವಾಚಕ
ಪದಗುಚ್ಛ
right of user
- ಬಳಕೆದಾರ; ಉಪಯೋಗಿಸುವವನು; ಬಳಸುವವನು.
- (ಆಡುಮಾತು) (ಅಪೀಮು, ಗಾಂಜಾ, ಮೊದಲಾದ) ಮಾದಕವಸ್ತುಗಳನ್ನು ಬಳಸುವವನು; ಅಪೀಮು -ಕೋರ, ವ್ಯಸನಿ.
- (ನ್ಯಾಯಶಾಸ್ತ್ರ) (ಹಕ್ಕು ಮೊದಲಾದವುಗಳ) ನಿರಂತರ ಅನುಭೋಗ; ಮಾಮೂಲು.
user-friendly
ಗುಣವಾಚಕ
(ಮುಖ್ಯವಾಗಿ ಕಂಪ್ಯೂಟರಿನ ವಿಷಯದಲ್ಲಿ) ಬಳಕೆದಾರ ಮಿತ್ರನಾಗಿರುವ; ಬಳಸಲು ಅನುಕೂಲವಾಗಿರುವಂತೆ, ಸುಲಭವಾಗಿರುವಂತೆ ರೂಪಿಸಿದ.
usher
ನಾಮವಾಚಕ
- ದ್ವಾರಾಧಿಕಾರಿ; (ನ್ಯಾಯಾಲಯ, ಆಸ್ಥಾನ, ಮೊದಲಾದ ಕಡೆ) ದ್ವಾರಪಾಲಕನ ಕೆಲಸ ಮಾಡುವ ಯಾ ಜನರನ್ನು ಅವರವರ ಸ್ಥಾನಗಳಿಗೆ ಕೊಂಡೊಯ್ಯುವ ವ್ಯಕ್ತಿ.
- (ಬ್ರಿಟಿಷ್ ಪ್ರಯೋಗ) ಪ್ರತೀಹಾರಿ; ದೌವಾರಿಕ; ಮೇಲುಪದವಿಯವನ ಮುಂದುಗಡೆ ಗೌರವಾರ್ಥವಾಗಿ ನಡೆದುಹೋಗುವ ಅಧಿಕಾರಿ ಯಾ ಸೇವಕ (= Black Rod.)
- (ಪ್ರಾಚೀನ ಪ್ರಯೋಗ ಯಾ ಹಾಸ್ಯ ಪ್ರಯೋಗ) ಅಧೀನ ಉಪಾಧ್ಯಾಯ, ಸಹೋಪಾಧ್ಯಾಯ.
usher
ಸಕರ್ಮಕ ಕ್ರಿಯಾಪದ
- ದ್ವಾರಪಾಲಕನಾಗು; (ದ್ವಾರಪಾಲಕನಾಗಿ ಜನರನ್ನು) ಸ್ವಾಗತಿಸು, ಅವರವರ ಪೀಠಗಳಿಗೆ ಕೊಂಡೊಯ್ಯಿ; ದಾರಿ ತೋರಿಸು; ನಿರ್ದೇಶಿಸು.
- (ರೂಪಕವಾಗಿ) ಆಗಮನವನ್ನು – ಸೂಚಿಸು, ಸಾರು, ಘೋಷಿಸು: the change of government ushered in a period of prosperity ಹೊಸ ಸರ್ಕಾರವು ಆಡಳಿತಕ್ಕೆ ಬಂದು ಶುಭೋದಯ ಕಾಲವನ್ನು ಸಾರಿತು.
usherette
ನಾಮವಾಚಕ
(ಮುಖ್ಯವಾಗಿ ಸಿನಿಮಾ ಮಂದಿರಗಳಲ್ಲಿ) ಕಿರಿಯ ದ್ವಾರಸೇವಕಿ; ದ್ವಾರಪಾಲಕಿ.
ushership
ನಾಮವಾಚಕ
ದ್ವಾರಾಧಿಕಾರಿ ಕೆಲಸ; ಪ್ರತೀಹಾರಿ ಪದವಿ; ದ್ವಾರಪಾಲಕತ್ವ.
USM
ಸಂಕ್ಷಿಪ್ತ
(ಸ್ಟಾಕ್ ಎಕ್ಸ್ಚೇಂಜ್) Unlisted Securities Market.
USN
ಸಂಕ್ಷಿಪ್ತ
United States Navy.
usquebaugh
ನಾಮವಾಚಕ
(ಐರ್ಲಂಡ್ ಮತ್ತು ಸ್ಕಾಟ್ಲಂಡ್) ವಿಸ್ಕಿ.
USS
ಸಂಕ್ಷಿಪ್ತ
United States Ship.
USSR
ಸಂಕ್ಷಿಪ್ತ
Union of Soviet Socialist Republics.