भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

usual

ಗುಣವಾಚಕ

ಪದಗುಚ್ಛ

ವಾಡಿಕೆಯ; ಮಾಮೂಲಿನ; ಎಂದಿನ ಹಾಗಿರುವ; ರೂಢಿಯ; ಯಥಾಪ್ರಕಾರದ; ಸಾಮಾನ್ಯವಾದ: asked the usual questions ಮಾಮೂಲಿನ ಪ್ರಶ್ನೆಗಳನ್ನು ಕೇಳಿದ.

  • as usual ಯಥಾಪ್ರಕಾರ; ಎಂದಿನ ಹಾಗೆ.
  • as per usual (ಗ್ರಾಮ್ಯಪ್ರಯೋಗ ಮತ್ತು ಹಾಸ್ಯ ಪ್ರಯೋಗ) = ಪದಗುಚ್ಛ \((1)\).
  • the (or my) usual ಯಥಾಪ್ರಕಾರದ: the usual drink ಮಾಮೂಲಿನ ಪಾನೀಯ.

usually

ಕ್ರಿಯಾವಿಶೇಷಣ

ವಾಡಿಕೆಯಂತೆ; ಮಾಮೂಲಿನಂತೆ; ಎಂದಿನಂತೆ; ರೂಢಿಯಂತೆ; ಯಥಾಪ್ರಕಾರ.

usualness

ನಾಮವಾಚಕ

ವಾಡಿಕೆಯಂತಿರುವಿಕೆ; ಮಾಮೂಲಿನಂತಿರುವುದು; ರೂಢಿಯ ಹಾಗಿರುವಿಕೆ; ಯಥಾ ಪ್ರಕಾರದ ಸ್ಥಿತಿ.

usucapion

ನಾಮವಾಚಕ

= usucaption.

usucaption

ನಾಮವಾಚಕ

(ನ್ಯಾಯಶಾಸ್ತ್ರ) ಅನುಭವದ ಹಕ್ಕು; ನಿರಂತರವಾದ ಅನುಭೋಗದಿಂದ ಲಭಿಸುವ ಆಸ್ತಿಯ ಹಕ್ಕು.

usufruct

ನಾಮವಾಚಕ

ಫಲಾನುಭವದ ಹಕ್ಕು; ಒಬ್ಬನ ಆಸ್ತಿಯನ್ನು ಸ್ವಲ್ಪವೂ ಹಾಳುಮಾಡದೆ ಯಾ ಕರಗಿಸದೆ ಅನುಭೋಗಿಸುವ ಹಕ್ಕು.

usufruct

ಸಕರ್ಮಕ ಕ್ರಿಯಾಪದ

ಫಲಾನುಭವದ ಹಕ್ಕು ಪಡೆ.

usufructuary

ಗುಣವಾಚಕ

ಫಲಾನುಭವದ ಹಕ್ಕಿಗೆ ಸಂಬಂಧಿಸಿದ; ಫಲಾನುಭವದ ಹಕ್ಕಿನ.

usufructuary

ನಾಮವಾಚಕ

ಫಲಾನುಭವದ ಹಕ್ಕುದಾರ.

usurer

ನಾಮವಾಚಕ

ಕುಸೀದಕ; ದುಬಾರಿ ಬಡ್ಡಿ (ಹಾಕುವ) ಸಾಲದಾತ.

usurious

ಗುಣವಾಚಕ

ದುಬಾರಿ ಬಡ್ಡಿಯ; ದುಬಾರಿ ಬಡ್ಡಿಯನ್ನು ಹಾಕುವ; ದುಬಾರಿ ಬಡ್ಡಿಗೆ ಸಾಲ ಕೊಡುವ.

usuriously

ಕ್ರಿಯಾವಿಶೇಷಣ

ದುಬಾರಿ ಬಡ್ಡಿಯನ್ನು ಹಾಕಿ.

usurp

ಅಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

(ಪದವಿ, ಸಿಂಹಾಸನ, ಅಧಿಕಾರ, ಆಸ್ತಿ, ಮೊದಲಾದವನ್ನು ಹಕ್ಕಿಲ್ಲದೆ, ಅನ್ಯಾಯವಾಗಿ) ಕಿತ್ತುಕೊ; ಆಕ್ರಮಿಸಿಕೊ; ದುರಾಕ್ರಮಣ ಮಾಡು. ಅತಿಕ್ರಮಿಸು.

usurpation

ನಾಮವಾಚಕ

ದುರಾಕ್ರಮಣ.

usurper

ನಾಮವಾಚಕ

ಅಪಹಾರಕ; ದುರಾಕ್ರಮಣ ಮಾಡುವವನು.

usury

ನಾಮವಾಚಕ

  • ಕುಸೀದ ಪದ್ಧತಿ; (ಕಾನೂನಿನಲ್ಲಿ ಅವಕಾಶವಿರುವುದಕ್ಕಿಂತ) ದುಬಾರಿ ಬಡ್ಡಿಗೆ ಸಾಲ ಕೊಡುವುದು.
  • ದುಬಾರಿ ಬಡ್ಡಿ.
  • (ಸಾಮಾನ್ಯವಾಗಿ ರೂಪಕವಾಗಿ) ಚುಂಗಡಿ; ಬಡ್ಡಿ: the service was repaid with usury ಸೇವೆಯ ಪ್ರತಿಫಲವನ್ನು ಬಡ್ಡಿಸಮೇತ ಹಿಂತಿರುಗಿಸಲಾಯಿತು.

UT

ಸಂಕ್ಷಿಪ್ತ

  • universal time.
  • (ಅಮೆರಿಕನ್‍ ಪ್ರಯೋಗ) Utah (ಅಂಚೆಯಲ್ಲಿ ಬಳಕೆ).

ute

ನಾಮವಾಚಕ

(ಆಸ್ಟ್ರೇಲಿಯ ಮತ್ತು ನ್ಯೂಸಿಲಂಡ್‍) (ಅಶಿಷ್ಟ) ಸರ್ವೋಪಯೋಗಿ ವಾಹನ; ನಾನಾ ಕೆಲಸಗಳಿಗೆ ಒದಗುವ ವಾಹನ.

utensil

ನಾಮವಾಚಕ

(ಮನೆ ಕೆಲಸದ) ಪಾತ್ರೆ ಪರಡಿ; ಉಪಕರಣ: cooking utensils ಅಡಿಗೆಯ ಪಾತ್ರೆಪರಡಿ.

uterine

ಗುಣವಾಚಕ

  • ಗರ್ಭಾಶಯದ; ಗರ್ಭಾಶಯಕ್ಕೆ ಸಂಬಂಧಿಸಿದ.
  • ಏಕಮಾತೃಕ; ಸಮಾನಮಾತೃಕ; ತಂದೆ ಬೇರೆಯಾಗಿದ್ದು, ಒಂದೇ ತಾಯಲ್ಲಿ ಹುಟ್ಟಿದ: brother uterine ಸಮಾನ ಮಾತೃಕ ಸೋದರ.

Search Dictionaries

Loading Results

Follow Us :   
  Download Bharatavani App
  Bharatavani Windows App