भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

uteritis

ನಾಮವಾಚಕ

ಗರ್ಭಕೋಶದ ಉರಿಯೂತ.

uterus

ನಾಮವಾಚಕ

ಗರ್ಭಕೋಶ; ಗರ್ಭಾಶಯ.

uti possidetis

ನಾಮವಾಚಕ

ಯುದ್ಧರಾಷ್ಟ್ರಗಳು ಯುದ್ಧದಲ್ಲಿ ಗೆದ್ದಿರುವ ದೇಶ, ಆಸ್ತಿ, ಮೊದಲಾದವುಗಳನ್ನು ತಮ್ಮ ಸ್ವಾಧೀನದಲ್ಲೇ ಉಳಿಸಿಕೊಳ್ಳುವ ತತ್ತ್ವ.

utile

ಗುಣವಾಚಕ

ಪ್ರಯೋಜನಕ್ಕೆ ಬರುವ; ಉಪಯುಕ್ತ; ಉಪಯೋಗಿಸಬಹುದಾದ.

utilise

ಸಕರ್ಮಕ ಕ್ರಿಯಾಪದ

= utilize.

utilitarian

ಗುಣವಾಚಕ

  • (ಆಕರ್ಷಕವಾಗಿರುವುದಕ್ಕಿಂತಲೂ) ಉದ್ದೇಶ ಸಾಧನೆಗೆ ಅನುಕೂಲವಾದ; ಉಪಯುಕ್ತವಾದ; ಪ್ರಯೋಜನಾತ್ಮಕ.
  • ಪ್ರಯೋಜನ ತತ್ತ್ವದ.
  • ಪ್ರಯೋಜಕತಾ ವಾದದ.

utilitarian

ನಾಮವಾಚಕ

  • ಪ್ರಯೋಜನ ವಾದಿ.
  • ಪ್ರಯೋಜಕತಾ ವಾದಿ.

utilitarianism

ನಾಮವಾಚಕ

  • ಪ್ರಯೋಜನ ತತ್ತ್ವ; ಕ್ರಿಯೆಗಳು ಪ್ರಯೋಜನಕರವಾಗಿದ್ದರೆ ಯಾ ಬಹುಜನರ ಹಿತಾರ್ಥವಾಗಿದ್ದರೆ ಮಾತ್ರ ಸರಿ ಎಂಬ ತತ್ತ್ವ; ಬಹುಜನ ಸುಖವೇ ನೈತಿಕ ಜೀವನದ ಗುರಿಯಾಗಿರಬೇಕೆಂಬ ವಾದ.
  • ಪ್ರಯೋಜಕತಾವಾದ; ಅಧಿಕಸಂಖ್ಯೆಯ ಜನರ ಅಧಿಕ ಹಿತಸಾಧನೆಯೇ ಧರ್ಮ ಎಂಬ ವಾದ.

utility

ನಾಮವಾಚಕ

  • ಪ್ರಯೋಜನಕರತೆ; ಉಪಯುಕ್ತತೆ.
  • ಪ್ರಯೋಜನ; ಉಪಯುಕ್ತವಾದುದು; ಪ್ರಯೋಜನಕಾರಿಯಾದುದು.
  • ಸಾರ್ವಜನಿಕ ಹಿತ; ಸಾರ್ವಜನಿಕ ಉಪಯೋಗ.

utility

ಗುಣವಾಚಕ

  • ಉಪಯೋಗಕ್ಕೆ ಬರುವ; ಕೆಲಸಕ್ಕೆ ಉಪಯೋಗವಾಗುವ.
  • ಜೀವನೋಪಯೋಗಿ; ನಿತ್ಯಜೀವನಕ್ಕೆ ಅತ್ಯಂತ ಅಗತ್ಯವಾದ, ಉಪಯುಕ್ತವಾದ.
  • ನಿತ್ಯೋಪಯುಕ್ತ ಮತ್ತು ಪ್ರಮಾಣಾನುಸಾರ ತಯಾರಿಸಿದ: utility cloth ಸ್ಟ್ಯಾಂಡರ್ಡ್‍ ಬಟ್ಟೆ. utility furniture ನಿತ್ಯೋಪಯುಕ್ತ ಪೀಠೋಪಸ್ಕರಗಳು.

utility man

ನಾಮವಾಚಕ

  • (ನಾಟಕ) ಚಿಲ್ಲರೆ ನಟ; ಸಣ್ಣಪಾತ್ರಗಳ ನಟ.
  • (ಕಾಲ್ಚೆಂಡಾಟ) ವಿವಿಧ ಸ್ಥಾನಗಳಲ್ಲಿ ನಿಂತು ಆಡಬಲ್ಲ ಆಟಗಾರ.
  • ಚಿಲ್ಲರೆ ಕೆಲಸಗಾರ; ಸಣ್ಣಪುಟ್ಟ ಕೆಲಸ ಮಾಡುವವನು.

utility room

ನಾಮವಾಚಕ

ಗೃಹೋಪಯೋಗಿ ಕೋಣೆ; ಬಟ್ಟೆ ಒಗೆಯುವ ಯಂತ್ರ ಮೊದಲಾದ ಮನೆಗೆಲಸದ ಸಾಧನ ಸಲಕರಣೆಗಳನ್ನು ಸಜ್ಜುಗೊಳಿಸಿದ ಕೋಣೆ.

utility truck

ನಾಮವಾಚಕ

= utility vehicle.

utility vehicle

ನಾಮವಾಚಕ

ಸರ್ವೋಪಯೋಗಿ ವಾಹನ; ನಾನಾ ಕೆಲಸಗಳಿಗೆ ಒದಗುವ ವಾಹನ.

utilizable

ಗುಣವಾಚಕ

ಉಪಯೋಗಿಸಿಕೊಳ್ಳಬಲ್ಲ; ಪ್ರಯೋಜನಕ್ಕೆ ಬರುವ; ಬಳಸಬಲ್ಲ.

utilization

ನಾಮವಾಚಕ

ಬಳಕೆ; ಉಪಯೋಗ.

utilize

ಸಕರ್ಮಕ ಕ್ರಿಯಾಪದ

ಬಳಸು; ಉಪಯೋಗಿಸು; ಪ್ರಯೋಜನಕ್ಕೆ ತರು.

utilizer

ನಾಮವಾಚಕ

ಬಳಕೆದಾರ; ಪ್ರಯೋಜನಕ್ಕೆ ತಂದುಕೊಳ್ಳುವವ; ಉಪಯೋಗಿಸಿಕೊಳ್ಳುವವ.

utmost

ಗುಣವಾಚಕ

ಅತ್ಯಂತ; ಕಟ್ಟಕಡೆಯ; ಅತ್ಯಧಿಕ; ಪರಮಾವಧಿಯ: the utmost limits ಕಟ್ಟಕಡೆಯ ಮಿತಿ. utmost reluctance ಸ್ವಲ್ಪವೂ ಇಷ್ಟವಿಲ್ಲದಿರುವಿಕೆ.

utmost

ನಾಮವಾಚಕ

ಪದಗುಚ್ಛ

ಪರಾಕಾಷ್ಠೆ; ಗರಿಷ್ಠ ಮಿತಿ; ಪರಮಾವಧಿ; ಅತ್ಯಂತ ಹೆಚ್ಚಿನ ಪ್ರಮಾಣ. do one’s utmost ಕೈಲಾದದ್ದೆಲ್ಲಾ ಮಾಡು; ಮಿತಿಮೀರಿ ಶ್ರಮಿಸು.

Search Dictionaries

Loading Results

Follow Us :   
  Download Bharatavani App
  Bharatavani Windows App