English-Kannada Nighantu (University of Mysore)
University of Mysore
Utopia
ನಾಮವಾಚಕ
- ಆದರ್ಶ ರಾಜ್ಯ; ರಾಮರಾಜ್ಯ.
- ಆದರ್ಶ ಸ್ಥಿತಿ.
Utopian
ಗುಣವಾಚಕ
(utopian ಸಹ).
- ಆದರ್ಶ ರಾಜ್ಯದ ಯಾ ರಾಜ್ಯಕ್ಕೆ ಸೇರಿದ.
- ಆದರ್ಶ ಸ್ಥಿತಿಯ.
Utopian
ನಾಮವಾಚಕ
(utopian ಸಹ).
- ಆದರ್ಶ ರಾಜ್ಯವಾದಿ.
- ಆದರ್ಶವಾದಿ ಸುಧಾರಕ; ಆದರ್ಶದೃಷ್ಟಿಯ ಸುಧಾರಣಾವಾದಿ.
Utopianism
ನಾಮವಾಚಕ
- ಆದರ್ಶರಾಜ್ಯ ಕಲ್ಪನೆ; ರಾಮರಾಜ್ಯ ಕಲ್ಪನೆ.
- ಆದರ್ಶ ರಾಜ್ಯದಲ್ಲಿ ಶ್ರದ್ಧೆ, ನಂಬಿಕೆ.
utricle
ನಾಮವಾಚಕ
- (ಪ್ರಾಣಿಯ ಯಾ ಸಸ್ಯದ) ಜೀವಕೋಶ ಯಾ ಜೀವಕಣ.
- (ಶರೀರದಲ್ಲಿನ, ಮುಖ್ಯವಾಗಿ ಒಳಕಿವಿಯಲ್ಲಿಯ) ಸಣ್ಣ ಚೀಲ; ಕಿರುಕೋಶ.
utricular
ಗುಣವಾಚಕ
- (ಪ್ರಾಣಿಯ ಯಾ ಸಸ್ಯದ) ಜೀವಕೋಶದ; ಜೀವಕಣಕ್ಕೆ ಸಂಬಂಧಿಸಿದ.
- (ಒಳಕಿವಿಯ) ಸಣ್ಣ ಚೀಲದ; ಕಿರುಕೋಶದ.
utter
ಗುಣವಾಚಕ
(ವಿಶೇಷಣವಾಗಿ) ಸಂಪೂರ್ಣ; ತೀರಾ; ಅತ್ಯಂತ; ಕಡು; ಪೂರ್ತಿ: utter misery ದಟ್ಟದಾರಿದ್ರ್ಯ; ಕಡುಕಷ್ಟ. an utter denial ಸಂಪೂರ್ಣ ನಿರಾಕರಣೆ.
utter
ಸಕರ್ಮಕ ಕ್ರಿಯಾಪದ
- (ಸುಖ, ದುಃಖ, ಮೊದಲಾದವನ್ನು) ಧ್ವನಿಯ ಮೂಲಕ – ಸೂಚಿಸು, ವ್ಯಕ್ತಪಡಿಸು: utter a sigh ನಿಟ್ಟುಸಿರು ಬಿಡು.
- (ಮಾತಿನಲ್ಲಿ, ಬರವಣಿಗೆಯಲ್ಲಿ) ಹೇಳು; ಉಸುರು; ನುಡಿ; ಉಚ್ಚರಿಸು: the last words he uttered ಅವನು ಹೇಳಿದ ಕೊನೆಯ ಮಾತುಗಳು.
- ಧ್ವನಿ ಮಾಡು; ಕಿರಿಚು; ಕೂಗು; ಮೊಳಗು: the engine uttered a shriek ಎಂಜಿನ್ನು ಕೀಚಲು ಧ್ವನಿಮಾಡಿತು (ಗಟ್ಟಿಯಾಗಿ ಕಿರಿಚಿತು).
- (ನ್ಯಾಯಶಾಸ್ತ್ರ) ಖೋಟಾ ನಾಣ್ಯ ಯಾ ನೋಟು ಚಲಾವಣೆ ಮಾಡು.
utter barrister
ನಾಮವಾಚಕ
(ಬ್ರಿಟಿಷ್ ಪ್ರಯೋಗ) (ನ್ಯಾಯಸ್ಥಾನದಲ್ಲಿ ರಾಜಸನ್ನದು ಪಡೆದವರ ಪೀಠಪಂಕ್ತಿಯಿಂದ ಹೊರಗಿದ್ದು ವಾದಿಸುವ) ಕಿರಿಯ ವಕೀಲ.
utterance
ನಾಮವಾಚಕ
- ಹೇಳಿಕೆ; ಮಾತಿನಲ್ಲಿ ವ್ಯಕ್ತಪಡಿಸುವುದು, ಹೇಳುವುದು.
- ವಾಕ್ಶಕ್ತಿ; ಉಚ್ಚಾರಣೆ; ಮಾತಾಡುವ ಶಕ್ತಿ.
- ನುಡಿ; ವಚನ; ಉಕ್ತಿ; ಭಾಷಣ: his pulpit utterances ವೇದಿಕೆಯ ಮೇಲಿನ (ಅವನ) ಮಾತುಗಳು, ಭಾಷಣ.
- ಮಾತಿನ ರೀತಿ: his very utterance was spell- binding ಅವನ ಮಾತಿನ ರೀತಿಯೇ ಮೋಡಿಹಾಕಿತ್ತು.
- (ಭಾಷಾಶಾಸ್ತ್ರ) ಶಬ್ದಸಂತಾನ ಯಾ ಪದಸಂತಾನ; ವ್ಯಾಕರಬದ್ಧವಾದ ಯಾವುದೇ ಒಂದು ಆಂಶಿಕ ಯಾ ಪೂರ್ಣ ಘಟಕವಾಗಿರಬೇಕಾಗಿರದ, ಉಚ್ಚರಿತ ಯಾ ಲಿಖಿತ ಪದಗಳ ಅವಿಚ್ಫಿನ್ನ ಸರಣಿ.
utterly
ಕ್ರಿಯಾವಿಶೇಷಣ
ಸಂಪೂರ್ಣವಾಗಿ; ಅತ್ಯಂತ; ತೀರಾ; ಪೂರ್ತಾ; ಕೊನೆಯದಾಗಿ.
uttermost
ಗುಣವಾಚಕ
ಅತ್ಯಂತ ದೂರದ ಯಾ ದೂರದಲ್ಲಿಯ: the uttermost stars of the galaxy ಕ್ಷೀರಪಥದಲ್ಲಿನ ಅತ್ಯಂತ ದೂರದ ನಕ್ಷತ್ರಗಳು.
utterness
ನಾಮವಾಚಕ
ಪೂರ್ತಿಯಾಗಿರುವಿಕೆ; ಅತ್ಯಂತವಾಗಿರುವಿಕೆ.
UV
ಸಂಕ್ಷಿಪ್ತ
ultraviolet.
uvea
ನಾಮವಾಚಕ
(ಅಂಗರಚನಾಶಾಸ್ತ್ರ) ಯೂವಿಯ; ಕಣ್ಣುಪಾಪೆಯ ಮುಂಭಾಗದಲ್ಲಿರುವ ವರ್ಣದ್ರವ್ಯ ಪೂರಿತ ಸ್ತರ.
uvula
ನಾಮವಾಚಕ
- ಕಿರುನಾಲಗೆ; ಅಲಿಜಿಹ್ವೆ.
- ಮೂತ್ರಕೋಶದಲ್ಲಿಯ ಯಾ ಉಪಮಸ್ತಿಷ್ಕದಲ್ಲಿಯ ತೊಂಗಲು.
uvular
ಗುಣವಾಚಕ
- ಕಿರುನಾಲಗೆಯ; ಅಲಿಜಿಹ್ವೆಯ.
- ನಾಲಗೆಯ ಹಿಂಭಾಗದಿಂದ ಮತ್ತು ಕಿರುನಾಲಗೆಯಿಂದ ಉಚ್ಚರಿಸಿದ, ಉದಾಹರಣೆಗೆ ಹ್ರೆಂಚ್ನ r.
uvular
ನಾಮವಾಚಕ
ಅಲಿಜಿಹ್ವೀಯ ವ್ಯಂಜನ.
uxorial
ಗುಣವಾಚಕ
ಹೆಂಡತಿಯ; ಹೆಂಡತಿಗೆ ಸಹಜವಾದ; ಪತ್ನೀಯೋಗ್ಯವಾದ; ಹೆಂಡತಿಗೆ ಒಪ್ಪುವಂಥ; ಮಡದಿಗೆ ತಕ್ಕ.
uxoricidal
ಗುಣವಾಚಕ
ಹೆಂಡತಿಯನ್ನು ಕೊಲ್ಲುವ ಪ್ರವೃತ್ತಿಯ ಯಾ ಕೊಲ್ಲುವುದಕ್ಕೆ ಸಂಬಂಧಿಸಿದ; ಹೆಂಡತಿ ಹಂತಕ; ಪತ್ನೀಹಂತಕ.