English-Kannada Nighantu (University of Mysore)
University of Mysore
Ukrainian
ಗುಣವಾಚಕ
(ಸೋವಿಯೆತ್ ಒಕ್ಕೂಟಕ್ಕೆ ಸೇರಿದ) ಯೂಕ್ರೈನ್ ಪ್ರಾಂತ ಯಾ ಅದರ ಜನ ಯಾ ಭಾಷೆ ಇವುಗಳ ಯಾ ಇವುಗಳಿಗೆ ಸಂಬಂಧಿಸಿದ.
Ukrainian
ನಾಮವಾಚಕ
- ಯೂಕ್ರೇನಿಯನ್: ಯೂಕ್ರೇನ್ ಪ್ರದೇಶದ ಭಾಷೆ.
- USSR ನ ಯೂಕ್ರೇನಿನಲ್ಲಿ ಹುಟ್ಟಿದವ.
ukulele
ನಾಮವಾಚಕ
ಯೂಕಲೇಲಿ; ಹವಾಯ್ ದ್ವೀಪದ, (ಮೊದಲಿಗೆ ಪೋರ್ಚುಗಲ್ನ) ನಾಲ್ಕು ತಂತಿಯ ಒಂದು ಸಣ್ಣ ಗಿಟಾರ್.
ulcer
ನಾಮವಾಚಕ
- (ದೇಹದ ಒಳ ಯಾ ಹೊರಭಾಗದಲ್ಲಿ ಉಂಟಾಗುವ, ಕೀವು ಸ್ರವಿಸುವ) ಹುಣ್ಣು; ವ್ರಣ.
-
- ನೈತಿಕ ಕಳಂಕ, ಕಲೆ.
- ಕೆಡಿಸುವಂಥ ಪ್ರಭಾವ, ನೀತಿಭ್ರಷ್ಟಕಾರಿ ವಿಷಯ, ಮೊದಲಾದವು.
ulcerable
ಗುಣವಾಚಕ
ಹುಣ್ಣಾಗುವ; ವ್ರಣವಾಗಬಲ್ಲ.
ulcerate
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ಹುಣ್ಣುಮಾಡು; ವ್ರಣವಾಗಿಸು.
- ವ್ರಣವಾಗು; ಹುಣ್ಣಾಗು
- (ಹುಣ್ಣಿನಂತೆ) ತೀವ್ರಯಾತನೆ ಕೊಡು; ವಿಷವಾಗು; ನಂಜು ಹಿಡಿ.
ulceration
ನಾಮವಾಚಕ
ಹುಣ್ಣಾಗುವಿಕೆ; ವ್ರಣಮಯವಾಗಿರುವುದು.
ulcerative
ಗುಣವಾಚಕ
- ವ್ರಣವನ್ನು ಉಂಟುಮಾಡುವ; ಹುಣ್ಣಾಗುವ.
- ಹುಣ್ಣಿನಂಥ; ವ್ರಣಮಯವಾದ.
ulcered
ಗುಣವಾಚಕ
= ulcerous.
ulcerous
ಗುಣವಾಚಕ
- ವ್ರಣವಾದ; ಹುಣ್ಣಾದ; ವ್ರಣಗಳಿಂದ ತುಂಬಿದ.
- ವ್ರಣದಂಥ; ಹುಣ್ಣಿನಂಥ.
ulema
ನಾಮವಾಚಕ
- ಊಲೆಮಾ; ಮುಸಲ್ಮಾನ್ ಧರ್ಮಶಾಸ್ತ್ರಜ್ಞ, ದೇವತಾಶಾಸ್ತ್ರಜ್ಞ.
- ಮುಸಲ್ಮಾನ್ ಧರ್ಮಶಾಸ್ತ್ರಜ್ಞರ ಯಾ ದೇವತಾಶಾಸ್ತ್ರಜ್ಞರ ಮಂಡಲಿ.
uliginose
ಗುಣವಾಚಕ
(ಸಸ್ಯವಿಜ್ಞಾನ) ಕಚ್ಫಜ; ಪಂಕಜ; ಅನೂಪಜ; ಕೆಸರಿನಲ್ಲಿ, ಜೌಗಿನಲ್ಲಿ ಬೆಳೆಯುವ.
uliginous
ಗುಣವಾಚಕ
= uliginose.
ullage
ನಾಮವಾಚಕ
- ಕೊರತೆ; ಹ್ರಾಸ; ಪೀಪಾಯಿ ಮೊದಲಾದವು ಭರ್ತಿಯಾಗುವುದಕ್ಕೆ ಕೊರೆಬಿದ್ದ ಮೊತ್ತ.
- ಉಳಿಕೆ(ಯದು); ಉಳಿದದ್ದು; (ಅವ)ಶೇಷ; ಒಂದು ಪಾತ್ರೆ ಮೊದಲಾದವುಗಳಲ್ಲಿಟ್ಟ ಮದ್ಯ, ದ್ರವ, ಮೊದಲಾದವು ಆವಿಯಾಗಿ ಉಳಿದ ಮೊತ್ತ.
ulna
ನಾಮವಾಚಕ
- (ಬಹುವಚನ ulnae ಉಚ್ಚಾರಣೆ ಅಲ್ನೀ). ಪ್ರಕೋಷ್ಠಾಸ್ಥಿ; ಮುಂದೋಳಿನ, ಒಳ(ಪಾರ್ಶ್ವದ ) ಎಲುಬಉ; ಹೆಬ್ಬೆರಳಿಗೆ ವಿರುದ್ಧ ದಿಕ್ಕಿನಲ್ಲಿರುವ ಮುಂದೋಳಿನ, ಉದ್ದವೂ ತೆಳುವೂ ಆದ ಮೂಳೆ.
- (ಪ್ರಾಣಿವಿಜ್ಞಾನ) ಪ್ರಾಣಿಯ ಮುಂಗಾಲಿನ ಯಾ ಪಕ್ಷಿಯ ರೆಕ್ಕೆಯ ಅದೇ ರೀತಿಯ ಮೂಳೆ.
ulnar
ಗುಣವಾಚಕ
ಪ್ರಕೋಷ್ಠಾಸ್ಥಿಯ; ಮುಂದೋಳಿನ ಒಳ ಎಲುಬಿನ ಯಾ ಅದಕ್ಕೆ ಸಂಬಂಧಿಸಿದ ಯಾ ಅದು ಇರುವೆಡೆ ಇರುವ.
ulotrichan
ಗುಣವಾಚಕ
- (ಮುಖ್ಯವಾಗಿ ಮಾನವ ಜನವರ್ಗವನ್ನು ಸೂಚಿಸುವ) ಗುಂಗುರು ಕೇಶದ, ಕೂದಲಿನ.
- ಗುಂಗುರು ಕೇಶಿ ಜನವರ್ಗದ; ಗುಂಗುರು ಕೂದಲುಳ್ಳ ಜನಾಂಗದ.
ulotrichan
ನಾಮವಾಚಕ
ಗುಂಗುರು ಕೇಶಿ, ಕೂದಲಿನವನು; ಗುಂಗುರು ಕೂದಲಿನ ಜನವರ್ಗಕ್ಕೆ ಸೇರಿದವನು.
ulotrichous
ಗುಣವಾಚಕ
= 1ulotrichan.
ulster
ನಾಮವಾಚಕ
ಅಲ್ಸ್ಟರ್ ಮೇಲಂಗಿ; ಒರಟು ಬಟ್ಟೆಯಿಂದ ಮಾಡಿದ, ನಡುಪಟ್ಟಿಯಿರುವ, ಉದ್ದವಾದ, ಸಡಿಲ ಮೇಲಂಗಿ.